ಕೊಡಗಿನಲ್ಲಿ ಧಾನ್ಯ ಲಕ್ಷ್ಮಿಯನ್ನು ಮನೆಗೆ ಕೊಂಡೊಯ್ದು ಸಂಭ್ರಮಿಸುವ ಹುತ್ತರಿ ಹಬ್ಬ.. ಏನಿದರ ವಿಶೇಷ?

ಕೊಡಗಿನಲ್ಲಿ ಒಂದೆಡೆ ಮಳೆ ಕಡಿಮೆಯಾಗಿ ಸಣ್ಣಗೆ ನಡುಕ ಹುಟ್ಟಿಸುವ ಚಳಿ ಆರಂಭವಾಗಿದೆ. ಮತ್ತೊಂದೆಡೆ ಹಚ್ಚಹಸಿರಾಗಿದ್ದ ಭತ್ತದಗದ್ದೆಯ ಬಯಲುಗಳು ತೆನೆಬಿಟ್ಟು ಹೊಂಬಣ್ಣಕ್ಕೆ ತಿರುಗಿವೆ. ಮನೆ, ಮನಗಳಲ್ಲಿ ಹುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಡಿಸೆಂಬರ್ 4ರಂದು ಕೊಡಗಿನಾದ್ಯಂತ ಹುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೊಡಗಿನವರಿಗೆ ಹುತ್ತರಿ ಹಬ್ಬ ಸುಗ್ಗಿ ಹಬ್ಬವಾದರೂ ಇದರಲ್ಲಿ ಇಲ್ಲಿನ ಸಂಸ್ಕೃತಿ, ಸಂಪ್ರದಾಯದ ಲೇಪನ, ಜಾನಪದ ಮಿಳಿತವಾಗಿದೆ. ಗದ್ದೆಯಿಂದ ತೆನೆಯೊಡೆದ ಧಾನ್ಯ(ಭತ್ತ)ವನ್ನು ತಂದು ಅದನ್ನು ಪೂಜಿಸಿ, ಹೊಸ ಅಕ್ಕಿಯ ಪಾಯಸ ಮಾಡಿ ಮನೆಮಂದಿಯೆಲ್ಲಾ ಸೇವಿಸುವ … Continue reading ಕೊಡಗಿನಲ್ಲಿ ಧಾನ್ಯ ಲಕ್ಷ್ಮಿಯನ್ನು ಮನೆಗೆ ಕೊಂಡೊಯ್ದು ಸಂಭ್ರಮಿಸುವ ಹುತ್ತರಿ ಹಬ್ಬ.. ಏನಿದರ ವಿಶೇಷ?