Videos

ಚಾಮುಂಡಿಬೆಟ್ಟದ ಚಾಮುಂಡೇಶ್ವರಿಗೆ ನಮೋ ಎನ್ನಿ…

ಸದಾ ಜಂಜಾಟದಲ್ಲಿರುವ ನಮಗೆ ಇದ್ದಷ್ಟು ಹೊತ್ತು ನೆಮ್ಮದಿಯನ್ನು ನೀಡುವ ಸ್ಥಳವೇನಾದರೂ ಇದ್ದರೆ ಅದು ದೇವಾಲಯಗಳು ಮಾತ್ರ ಎನ್ನುವುದು ಎಲ್ಲರಿಗೂ ಅನುಭವಕ್ಕೆ ಬಂದಿರುವ ವಿಚಾರ..  ಹೀಗಿರುವಾಗ ನಿಸರ್ಗ ಸುಂದರ ಚಾಮುಂಡಿಬೆಟ್ಟದ ಮೇಲೆ ನೆಲೆನಿಂತಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಮೇಲಂತೂ ಮನಸ್ಸು ಹಗುರವಾಗದೆ ಇರಲಾರದು…

ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬೆಟ್ಟದ ತಾಯಿಯಾಗಿ ನೆಲೆನಿಂತಿರುವ ತಾಯಿ ಚಾಮುಂಡೇಶ್ವರಿಗೆ ನಮೋ ಎಂದರೆ ಸಂಕಷ್ಟಗಳು ಪರಿಹಾರವಾದಂತೆಯೇ… ಮೈಸೂರು ಅರಸರ ಕುಲದೇವಿ, ಮೈಸೂರಿನ ನಾಡದೇವತೆಯಾಗಿರುವ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಹಾತೊರೆಯುವ ಭಕ್ತರ ದೊಡ್ಡ ಸಮೂಹವೇ ಇದೆ. ಸಮಯ ಸಿಕ್ಕಾಗಲೆಲ್ಲ ಇಲ್ಲಿಗೆ ಬಂದು ತಾಯಿಯ ದರ್ಶನ ಮಾಡಿಕೊಂಡು ಹೋಗುತ್ತಾರೆ.

admin
the authoradmin

Leave a Reply

Translate to any language you want