LatestMysore

ಯುವಜನತೆಯಲ್ಲಿ ಮಾನವೀಯ ಮೌಲ್ಯ ತುಂಬುವ ರೆಡ್ ಕ್ರಾಸ್ : ಪ್ರೊ. ಕೆ. ಎಸ್. ಗೋವಿಂದರಾಜು

ಮೈಸೂರು: ಜಾಗತಿಕ ಮಟ್ಟದ ಸಂಘಟನೆಯಾಗಿ ಸೇವೆ ಸಲ್ಲಿಸುತ್ತಿರುವ ರೆಡ್ ಕ್ರಾಸ್ ಯುವಜನರಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಮಹತ್ವದ ಕಾರ್ಯ ನಿರ್ವಹಿಸುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಎಸ್. ಗೋವಿಂದರಾಜು ಅಭಿಪ್ರಾಯಪಟ್ಟರು.

ನಗರದ ಮಹಾರಾಜ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಆಯೋಜಿಸಿದ್ದ ಅಭಿಶಿಕ್ಷಣ ಹಾಗೂ ಜಿನೀವಾ ಸಮಾವೇಶ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿತ್ವ ವಿಕಸನ,  ಸೇವಾ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿ ರೂಪಿಸುವಲ್ಲಿ ರೆಡ್ ಕ್ರಾಸ್  ಮಹತ್ತರ ಪಾತ್ರ ವಹಿಸುತ್ತಿದೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ನ ನೋಡಲ್ ಅಧಿಕಾರಿ ಪ್ರೊ. ದಿವಾಕರ್ ಚಾಂಡಿ, ಯುವ ರೆಡ್ ಕ್ರಾಸ್ ನ ಹುಟ್ಟು, ಬೆಳವಣಿಗೆ ಹಾಗೂ ಅದರ ಧ್ಯೇಯೋದ್ದೇಶಗಳ ಕುರಿತು ಸವಿವರ ಮಾಹಿತಿ ನೀಡಿದರು.

ಅಧ್ಯಕ್ಷೀಯ ಭಾಷಣ ಮಾಡಿದ  ಪ್ರಾಂಶುಪಾಲರಾದ, ಪ್ರೊ. ವಿ. ಷಣ್ಮುಗಂ ಶಿಸ್ತುಬದ್ಧ ಜೀವನಕ್ಕೆ, ಸಂಕಷ್ಟದಲ್ಲಿರುವ ವರಿಗೆ ಮತ್ತು ಸಹಬಾಳ್ವೆಗೆ ರೆಡ್ ಕ್ರಾಸ್ ಪೂರಕ ಎಂದು ಹೇಳಿದರು.

ವಿದ್ಯಾರ್ಥಿಗಳಾದ ಯೋಗ ಶ್ರೀ ಹಾಗೂ ಚಂದ್ರಲ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮಾಧಿಕಾರಿ ಪ್ರೊ. ರೇಖಾ ಕೆ. ಜಾಧವ್ ಸ್ವಾಗತಿಸಿದರು, ಡಾ. ದಿನ ಮಣಿ ಬಿ. ಎಸ್ ನಿರೂಪಿಸಿದರು, ಡಾ. ಕಲ್ಯಾಣ ಕುಮಾರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಡಾ. ಎಮ್. ಮಂಜುಳ, ಘಟಕದ ಸದಸ್ಯರಾದ ಡಾ ಶ್ವೇತಾ ಎಮ್.ಹನ್ಸ್, ಡಾ. ಸುವರ್ಣಾದೇವಿ ಬಿ. ಕೆ, ಡಾ. ರೋಹಿಣಿ ಸಂಗಪ್ಪ ದಳವಾಯಿ, ಪುನೀತ್ ಕುಮಾರ್ ಸಿ. ಎಮ್, ಅಭಿಷೇಕ್, ಡಾ ನಾಗೇಶ್ ಆರ್, ಡಾ. ದಿನೇಶ್ ರಾವ್ ಎಸ್ ಮತ್ತು ಸ್ವಯಂ ಸೇವಕರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

admin
the authoradmin

Leave a Reply