ಕೊಡಗು…. ಕೂಗ್‌೯…. ಕನಾ೯ಟಕದ ಕಾಶ್ಮೀರ…ಕಾವೇರಿ ಮಾತೆಯ ಪುಣ್ಯಭೂಮಿ…. ! ಇಲ್ಲಿ ಬೀಸುವ ಗಾಳಿ… ಸುರಿಯುವ ಮಳೆ… ಮೈ ನಡುಗಿಸುವ ಚಳಿ… ಬೇಸಿಗೆಯ ಬಿಸಿಲು ಎಲ್ಲಾವು ಸುಂದರ ಮತ್ತು ಭಿನ್ನ…! ಈ ಭೂಮಿಯಲ್ಲಿ ಹುಟ್ಟಿ ಬದುಕು ಸಾಗಿಸಲು ಪುಣ್ಯ ಮಾಡಿರಬೇಕು…! ಈ ಭೂಮಿಗೆ ಭಗವಂತನ ಕೃಪೆ ಚೆನ್ನಾಗಿ ಕರುಣಿಸಿರುವ ಕಾರಣ, ಉತ್ತಮ ಮಳೆ-ಬೆಳೆಯಿಂದಾಗಿ ಮನುಜ ಕುಲ ಸುಖ-ಶಾಂತಿ – ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆ.
ಈ ಹಿಂದೆ ಮಳೆಗಾಲದಲ್ಲಿ ಮಳೆಯೂ ಹೆಚ್ಚಿನ ಪ್ರಮಾಣದಲ್ಲಿ ಸುರಿದು, ಸಣ್ಣ-ಪುಟ್ಟ ಪ್ರಕೃತಿ ವಿಕೋಪಗಳು ಮತ್ತು ವಿದ್ಯುತ್ ಕಡಿತದಿಂದ ಜನತೆ ಕತ್ತಲೆಯಲ್ಲಿ ಬದುಕು ಸಾಗಿಸುತ್ತಿದ್ದರೂ, ಸುರಿಯುತ್ತಿದ್ದ ಮಳೆಯ ಸೊಬಗನ್ನು ನೋಡಿ ಆನಂದಿಸುತ್ತಿದ್ದರು…!ಏಕೆಂದರೆ ಕೊಡಗಿನಲ್ಲಿ ಸುರಿಯುತ್ತಿದ್ದ ಮಳೆಯ ‘ರುಚಿ’ಯೇ ಬಹಳ’ಸೂಪರ್’ವಾಗಿತ್ತು…!

ಆದರೆ ಈ ವಷ೯ ಜೂನ್ – ಜುಲೈ ತಿಂಗಳ ಮಳೆಯೇ ಜಿಲ್ಲೆಯಿಂದ ಕಾಣೆಯಾಗಿ, ಕಾವೇರಿ ಮಾತೆಯ ಮಡಿಲು ಸಹ ‘ಬರ ಪೀಡಿತ’ ಪ್ರದೇಶವಾಗಿ ಬಿಟ್ಟಿತ್ತು..! ಮಳೆಯೂ ಈ ವಷ೯ ಸುರಿಯುವುದೇ ಇಲ್ಲ…! ಮುಂದಿನ ವಷ೯ ಕುಡಿಯಲು ಸಹ ಕೊಡಗಿನ ಜನತೆಗೂ ನೀರು ದೊರೆಯುವುದಿಲ್ಲ ಎಂಬ ಮಾತುಗಳು ಜನಸಾಮಾನ್ಯರ ಬಾಯಿಯಲ್ಲಿ ಕೇಳಲು ಪ್ರಾರಂಭಿಸಿದಾಗ, ಹೆಚ್ಚಿನ ಮಂದಿಗೂ ನೋವು ಮತ್ತು ಚಿಂತೆ ಪ್ರಾರಂಭವಾಯಿತ್ತು…!!
ಇದನ್ನೂ ಓದಿ… ಗ್ಯಾರಂಟಿಗಳಿಂದ ರಾಜಕೀಯ ಪಕ್ಷಗಳು ದೂರ ಹೋಗಬೇಕು…. ಏಕೆ ಗೊತ್ತಾ?
ಈ ವೇಳೆ ಆಕಾಶದತ್ತ ಕನಾ೯ಟಕ ಜನತೆ ಕುಡಿಯುವ ನೀರಿಗಾಗಿ ಪ್ರಾಥಿ೯ಸುತ್ತಾ ಕುಳಿತುಕೊಂಡಿರುವಾಗ, ನೆರೆಯ ತಮಿಳುನಾಡಿನ ರಾಜಕಾರಣಿಗಳು ಎರಡನೇ ಕೃಷಿ ಬೆಳೆಯಲು ‘ತಣ್ಣೀ… ನೀರು…ವಾಟರ್….” ಎಂದು ಎಂದಿನಂತೆ ರಾಗ ಎಳೆಯಲು ಪ್ರಾರಂಭಿಸಿದ್ದರು….! ಆಗ ರಾಜ್ಯದ ಎಲ್ಲಾ ಜಲಾಶಯಗಳು ನೀರು ತುಂಬದೇ ಖಾಲಿ.. ಖಾಲಿ..! ಆದರೆ ಹಿಂದಿನ ಒಪ್ಪಂದ ಪ್ರಕಾರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲೇಬೇಕಿತ್ತು…! ಆಗ ದೇವರ ಪುಣ್ಯದಿಂದ ಆಗಸ್ಟ್ ತಿಂಗಳ ಮೊದಲ ದಿನಗಳಲ್ಲಿ ಮೆಲ್ಲನೆ ಒಂದೇರಡು ಮಳೆಗಳು ಸುರಿದು, ನದಿಗಳಲ್ಲಿ ನೀರು ತುಂಬಿ ಹರಿಯಲು ಪ್ರಾರಂಭಿಸಿತ್ತು…! ಆದರೂ ಕೊಡಗಿನ ಜೊತೆಗೆ ಹಿಂದಿನ ಕಾಲದ ಮಳೆಯ ಸವಿಯನ್ನು’ ಎಂಜಾಯ್’ ಮಾಡಲು ಸಾಧ್ಯವಾಗಲಿಲ್ಲ….!

ಕೊಡಗು ಸಹ ‘ಬರ ಪೀಡಿತ’ ಪ್ರದೇಶವಾಗಿ ಘೋಷಣೆಯಾಗುವ ಸಾಧ್ಯತೆ ಇರುವ ದಿನಗಳಲ್ಲಿ ಮತ್ತು ಕೆಲ ಜ್ಯೋತಿಷಿಗಳು ಮಳೆ ಕುರಿತು ನುಡಿದ ‘ನುಡಿಮುತ್ತು’ಗಳು ಸತ್ಯವಾಗುತ್ತದೆ ಎಂಬ ಸಮಯದಲ್ಲಿ ‘ಮೋಡಬಿತ್ತನೆ’ಯ ಬಿರುಗಾಳಿ ಬೀಸ ತೊಡಗಿತ್ತು…! ಜೊತೆಗೆ ಮಳೆಯೂ ಧಾರಾಕಾರವಾಗಿ ಸುರಿದು, ಹಿಂದಿನ ಕಾಲದ ಮಳೆಯ ಭಯದ ವಾತಾವರಣವೂ ಕೊಡಗಿನಲ್ಲಿ ಸೃಷ್ಟಿಯಾಯಿತ್ತು..!
ಈ ವೇಳೆ ರಾಜ್ಯದ ಆಡಳಿತ ಪಕ್ಷದ ನಾಯಕರುಗಳು ನಾವು ಯಾವುದೇ ಮೋಡ ಬಿತ್ತನೆ ಮಾಡಲಿಲ್ಲ ಎಂದು ಹೇಳಲು ಪ್ರಾರಂಭಿಸಿದ್ದರೇ, ವಿರೋಧ ಪಕ್ಷದ ನಾಯಕರುಗಳು ಮೋಡ ಬಿತ್ತನೆ ಮಾಡಿಯೇ, ಈ ಮಳೆ ಸುರಿಯುತ್ತಿದೆ ಎಂದು ಹೇಳುತ್ತಾ, ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ಪ್ರಾರಂಭಿಸಿದ್ದರು….! ಆದರೆ ಜಿಲ್ಲೆಯ ಜನತೆ ಮಾತ್ರ ಸುರಿಯುತ್ತಿರುವ ಮಳೆಯನ್ನು ಸಹ “ಅನುಮಾನ “ದಿಂದ ನೋಡುತ್ತಾ ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿಮಾ೯ಣವಾಯಿತ್ತು…!

ಈಗ ಜನಸಾಮಾನ್ಯರು ನಿತ್ಯ ಉಪಯೋಗಿಸುವ ಎಲ್ಲಾ ವಸ್ತುಗಳು ” ಕಲಬೆರಕೆ “ಯಿಂದ ಕೂಡಿದ್ದು, ನಂಬುವಂತೆ ಇಲ್ಲ…!ಈಗ ಈ ಸಾಲಿಗೆ ಕೊಡಗಿನ ಮಳೆಯೂ ಸೇರಿರುವುದು ಒಂದು ಮಹಾ ‘ದುರಂತ’ ಎಂದು ಹೇಳ ಬಹುದಾಗಿದೆ…!!. ಮೋಡ ಬಿತ್ತನೆಯೋ ಅಥವಾ ಭಗವಂತನ ಕೃಪೆಯೋ ಗೊತ್ತಿಲ್ಲ….! ಮಳೆ ಮಾತ್ರ ಜಿಲ್ಲೆಯಲ್ಲಿ ಸುರಿಯುತ್ತಿದೆ…! ಆದರೆ ಈಗ ಈ ಮಳೆಯ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗಿ, ಸೆಪ್ಟೆಂಬರ್ ತಿಂಗಳಿನಲ್ಲಿಯೂ ಬಿಡುವು ನೀಡದೇ ಸುರಿದ್ದರೇ, ಕೊಡಗಿನ ಕಾಫಿ – ಕರಿಮೆಣಸು – ಭತ್ತದ ಫಸಲಿಗೆ ಹೆಚ್ಚಿನ ಹಾನಿಯಾಗುತ್ತದೆ… ಕೊಡಗಿನ ಜನತೆಯನ್ನು ‘ ನರಕ’ಕ್ಕೆ ಕಳಿಸಿ, ತಮಿಳುನಾಡಿನ ರೈತರನ್ನು ‘ಸ್ವಗ೯’ಕ್ಕೆ ಕಳಿಸುವ ‘ಪುಣ್ಯ’ ಕಾರ್ಯವನ್ನು ಯಾವುದೇ ಮಂದಿ ಮಾಡಬಾರದು…!
ಇದನ್ನೂ ಓದಿ… ನೂರಾರು ಸಮಸ್ಯೆಗಳ ನಡುವೆ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ…!
ನಿಜ…, ಈಗ ಸುರಿಯುತ್ತಿರುವ ಮಳೆಯ ಕುರಿತು ಜನತೆಗೆ ಅನುಮಾನ – ಸಂಶಯ ಇದೆ…! ಆದರೆ ‘ಸತ್ಯ’ ಸಂಗತಿ ಕೊಡಗಿನ ‘ಕಾವೇರಿ ಮಾತೆ’ಗೆ ಚೆನ್ನಾಗಿ ಗೊತ್ತು….! ಸುರಿಯುತ್ತಿರುವ ಮಳೆಯೂ ಯಾವುದೇ ಅನಾಹುತ-ಸಾವು -ನೋವು-ನಷ್ಟಗಳನ್ನು ಸೃಷ್ಟಿಸದೇ, ಸುಂದರವಾದ ‘ ಕವಿತೆ’ಗಳಂತೆ ಸುರಿಯಲ್ಲಿ ಎಂದು ಮಾತ್ರ ಪ್ರಾರ್ಥಿಸೋಣ…!!









