ಕನ್ನಡ ಚಿತ್ರರಂಗ ಕಂಡ ನಟರ ಪೈಕಿ ಕಾಶೀನಾಥ್ ಹಥ್ವಾರ ಒಬ್ಬರು ಅವತ್ತಿನ ಕಾಲಕ್ಕೆ ತನ್ನದೇ ಆದ ಟ್ರೆಂಡ್ ಹುಟ್ಟು ಹಾಕಿದವರು.. ಸಿನಿಮಾದಲ್ಲಿ ಎಲ್ಲವನ್ನು ಹೇಳಹೊರಟವರು ಕೂಡ ಹೌದು… ಇಂತಹ ನಟನನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಬರವಣಿಗೆಯ ಮೂಲಕ ನೆನಪು ಮಾಡಿಕೊಂಡಿದ್ದಾರೆ… ಓದಿ ಅಭಿಪ್ರಾಯ ತಿಳಿಸಿ..
ಕಾಶೀನಾಥ ಹಥ್ವಾರ ಎಂಬ ಓರ್ವ ವಿಶೇಷ ವ್ಯಕ್ತಿಯು 1951ನೇ ಇಸವಿ ಮೇ ತಿಂಗಳ 8ನೇ ತಾರೀಕಿನಂದು ಮಲೆನಾಡಿನ ಐಸಿರಿ ಕುಂದಾಪುರದಲ್ಲಿ ಜನಿಸಿದರು. ಉದ್ದೇಶ ಪೂರ್ವಕವಾಗೇ ಸಿನಿಮಾರಂಗ ಪ್ರವೇಶ ಮಾಡಿದ ಅಸಾಧಾರಣ ಕಲಾಕಾರ1963ರಲ್ಲಿ ತೆರೆಕಂಡ ರಾಜ್‌ಕುಮಾರ್ ಮತ್ತು ಸಾಹುಕಾರ್ ಜಾನಕಿ ಅಭಿನಯದ “ಗೌರಿ” ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ. ಹಾಗೂ ಹೀಗೂ ಏಗುತ್ತಲೇ ತಮ್ಮ 40ನೇ ವಯಸ್ಸು ದಾಟಿದ ನಂತರ ಹೀರೋ ಆದರು! ಇದೂ ಸಹ ಚಂದನವನ ಚರಿತ್ರೆಯ ಹೊಸ ದಾಖಲೆ.

ಅತ್ಯಂತ ಶ್ರಮಪಟ್ಟು ಸಕಲಕಲಾವಲ್ಲಭನಾಗಿ ತಳಮಟ್ಟದಿಂದ ಉನ್ನತಮಟ್ಟ ತಲುಪಿದ ಸರಳ ಸಜ್ಜನಿಕೆಯ ನಟ. ಇದ್ದುದರಲ್ಲೆ ತೃಪ್ತಿಪಟ್ಟು ಎಲ್ಲದರಲ್ಲು ಹೊಂದಾಣಿಕೆ ಮಾಡಿಕೊಂಡು ಚೀಪ್ ಅಂಡ್ ಬೆಸ್ಟ್ ಪ್ರೊಡಕ್ಷನ್ ಯುನಿಟ್ ಸ್ಥಾಪಿಸಿದ ಸಾಧಕ. ಇವರಂಥ ಚಿತ್ರ್ಯೋದ್ಯಮಿ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ದೊರಕುವುದು ವಿರಳ. ಏಕೆಂದರೆ ಇವರ ಪ್ರತಿಯೊಂದು ಸಿನಿಮ, ಅಲ್ಲಿನ ವಿವಿಧ ಪಾತ್ರಗಳು, ಅದರೊಳಗಿನ ಇವರ ಚಿತ್ರವಿಚಿತ್ರ ವೈಶಿಷ್ಟ್ಯ ಅಭಿನಯ, ಎಲ್ಲವೂ ಶ್ಲಾಘನೀಯ. ಇದಕ್ಕೆ ಉತ್ತಮ ನಿದರ್ಶನ ಸುಧಾರಾಣಿ ನಟಿಸಿದ “ಹಸಿರುಗಾಜಿನಬಳೆಗಳೆ..” ಹಾಡಿನ “ಅವನೇನನ್ನಗಂಡ” ಚಿರಸ್ಮರಣೀಯ.
ಇದನ್ನೂ ಓದಿ: ಚಂದನವನದಲ್ಲಿ ಮಿಂಚಿ ಮರೆಯಾದ ಹಿರಿಯ ನಟಿ ಕಮಲಾಬಾಯಿರವರ ಬಗ್ಗೆ ನಿಮಗೆಷ್ಟು ಗೊತ್ತು?
1976 ರಲ್ಲಿ ಬಿಡುಗಡೆಯಾದ “ಅಪರೂಪದ ಅತಿಥಿಗಳು” ಚಿತ್ರದ ಮೂಲಕ 2ನೇ ಬಾರಿ ಪೂರ್ಣ ಪ್ರಮಾಣದಲ್ಲಿ ಎಂಟ್ರಿ ಕೊಟ್ಟರು. ಅಪರಿಚಿತ, ಅನುಭವ, ಅನಂತನ ಅವಾಂತರ (ಅಜ್ಜಿಲೇಹ್ಯ) ಚಿತ್ರಗಳ ಮೂಲಕ ಸಂಚಲನ ಉಂಟುಮಾಡಿದ ಅಸಾಮಾನ್ಯ ನಟ. ಇವರು ನಟಿಸಿದ ಬಹುತೇಕ ಚಿತ್ರಗಳ ನಿರ್ಮಾಣ ನಿರ್ದೇಶನ ಕಥೆ ಚಿತ್ರಕಥೆ ಸಂಭಾಷಣೆ ಹಾಡು, ಇವುಗಳ ಜತೆಜತೆಗೇ ಚಿತ್ರೀಕರಿಸುತ್ತಿದ್ದ ಸ್ಥಳ, ಸನ್ನಿವೇಷ, ದೃಶ್ಯ, ಮುಂತಾದ ಎಲ್ಲವೂ ಇವರ ಪಾಲಿನ ಹೆಚ್ಚು ಹೊಣೆಗಾರಿಕೆಯಿಂದ ಚೀಪ್-ಅಂಡ್-ಬೆಸ್ಟ್ ಆಗುತ್ತಿತ್ತು.

ಪ್ರತಿಯೊಂದು ಚಿತ್ರವು ಮಧ್ಯಮ ವರ್ಗದವರ ಜೀವನಕ್ಕೆ ಒತ್ತುಕೊಟ್ಟು ಸಹಜತೆಗೆ ಹತ್ತಿರವಾಗಿತ್ತು. ಕ್ಲಾಸ್-ಮಾಸ್ ಎರಡೂ ಪ್ರೇಕ್ಷಕರಿಗೆ ಅರ್ಥವಾಗುವಂತೆ ಇರುತ್ತಿದ್ದ ಕಾರಣ ಕಾಶಿನಾಥ್ ಡಬ್ಬಲ್ ಮೀನಿಂಗ್, ಸ್ಟೈಲ್, ಟ್ರೆಂಡ್, ಪರ್ವ ಆರಂಭವಾಗಿ ಓರ್ವ ಮೆಘಾಸ್ಟಾರ್ ಲೆವೆಲ್ಗೆ ಹೋಗದಿದ್ದರು “ಕಾಶಿನಾಥ್ ಅಭಿಮಾನಿ ಬಳಗ” ಹುಟ್ಟಿಕೊಂಡಿದ್ದಂತು ಅದ್ಭುತ-ಆಶ್ಚರ್ಯ?
ಇದನ್ನೂ ಓದಿ: ಬಂಗ್ಲೆ ಶಾಮಾರಾವ್ ದ್ವಾರಕಾನಾಥ ಚಂದನವನದ ‘ದ್ವಾರಕೀಶ್’ ಆಗಿ ಮೆರೆದಿದ್ದು ಹೇಗೆ?
ಇವರನ್ನು ಕರ್ನಾಟಕದ ಭಾಗ್ಯರಾಜ್ ಎಂದೂಸಹ ಕರೆಯಲಾಗುತ್ತಿತ್ತು, ಇದು ವಿಚಿತ್ರ ಆದರೂ ಸತ್ಯ! ಇವರಿಗೆ ರೀಮೇಕ್ ರಾಜ ಎಂಬ ಬಿರುದು ಅಂಟಿಕೊಳ್ಳಲು ಕಾರಣವಿತ್ತು. ತಮಿಳು ಚಿತ್ರರಂಗದ ಭಾಗ್ಯರಾಜ್ ಚಿತ್ರಗಳನ್ನು ಕನ್ನಡಕ್ಕೆ ರೀಮೇಕ್ ಮಾಡುವುದರಲ್ಲಿ ನಿಸ್ಸೀಮ. ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್, ಸುದೀಪ್ ನಂತರ ಹೆಚ್ಚಿನ ರೀಮೇಕ್ ಚಿತ್ರಗಳು ಕಾಶೀನಾಥ್ ಅವರದ್ದೆ. ಇದೇವೇಳೆ ಇವರ ಕನ್ನಡ ಒರಿಜಿನಲ್ ಕಥಾವಸ್ತು ಚಿತ್ರಗಳೂ ಬೇರೆ ಭಾಷೆಗೆ ರೀಮೇಕ್/ಡಬ್ ಆಗಿದ್ದು ಹಿರಿಮೆ!

ಕಾಶೀನಾಥ್ ನಟಿಸಿದ ಕಟ್ಟಕಡೇ ಫ಼ಿಲಂ ದ್ವಾರಕೀಶ್ ನಿರ್ಮಾಣದ “ಚೌಕ”! ಈ ಚಿತ್ರದಲ್ಲಿನ ಅಭಿನಯ ಇವರ ಜೀವಿತ ಅವಧಿಯಲ್ಲೆ ಅತ್ಯುತ್ತಮವಾದ್ದು ಎಂದು ಸ್ವಯಂ ಕಾಶೀನಾಥ್ ಹೇಳಿಕೊಂಡಿದ್ದರು. “ಅಲ್ಲಾಡ್ಸಲ್ಲಾಡ್ಸು….” ಹಾಡಿನ ಗೂಢಾರ್ಥ, ವೈರಾಗ್ಯ ದರ್ಶನ, ವಾಸ್ತವ ಪ್ರದರ್ಶನ. ಇದಕ್ಕೆ ತಕ್ಕಂತೆ ಇವರ ನಟನೆಯೂ ಅಮೋಘವಾಗಿತ್ತು.
ಇದನ್ನೂ ಓದಿ: ಮೈಸೂರಿನ ಸಂಪತ್ ಕುಮಾರ್ ಕನ್ನಡಿಗರ ವಿಷ್ಣುವರ್ಧನ್ ಆಗಿದ್ದೇಗೆ…? ಸಿನಿ ಬದುಕಿನ ಜರ್ನಿ ಇಲ್ಲಿದೆ…!
ಇಡೀ ಚಂದನವನದ ಪ್ರತಿಯೊಬ್ಬರೂ ಸೇರಿದಂತೆ ಕನ್ನಡ ಕುಲಕೋಟಿ ಪ್ರೇಕ್ಷಕರು ಹಾಡಿಹೊಗಳುವಷ್ಟು ಮನೋಜ್ಞವಾಗಿ, ಹೃದಯಸ್ಮರ್ಶಿಯಾಗಿ ನಟಿಸಿದ್ದರು. 50ವರ್ಷಕಾಲ 25ಚಿತ್ರಗಳ ನಿರ್ಮಾಣ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ. ಈ ಪೈಕಿ ಕೆಲವು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ, ಫ಼ಿಲಂಫ಼ೇರ್ ಪ್ರಶಸ್ತಿ ಲಭಿಸಿದೆ, ಹಲವು ಚಿತ್ರಗಳು ಜ್ಯುಬಿಲಿ ಪ್ರದರ್ಶನ ಕಂಡಿವೆ!

ಚಂದನವನ ಚರಿತ್ರೆಯಲ್ಲಿ “ಡಬ್ಬಲ್ ಮೀನಿಂಗ್ ಡೈಲಾಗ್” ಪರಿಚಯಿಸಿದ ಮೊಟ್ಟಮೊದಲ ಕೀರ್ತಿ ಇವರದು. ಶಕ್ತಿಗಿಂತ ಯುಕ್ತಿ ಗೆಲ್ಲುತ್ತದೆ ಮತ್ತು ಯುಕ್ತಿಗಿಂತ ಕುಯುಕ್ತಿ ಗೆಲ್ಲುತ್ತದೆ ಎಂಬ ಹೊಸದನ್ನು ಪ್ರತಿಪಾದಿಸುವ ಚಿತ್ರಗಳ ಕೊಡುಗೆ ನೀಡಿದ ಸಹಜ ಕಲಾವಿದ. ಸಮಾಜದ ನೈಜ ಘಟನೆ ಆಧಾರಿತದ ಶ್ರೀಸಾಮಾನ್ಯನ ಜೀವನಕ್ಕೆ ಹತ್ತಿರವಾದ ವಾಸ್ತವತೆಗೆ ಒತ್ತುನೀಡುವಂಥ ಸಿನಿಮಾಗಳನ್ನು ಯಾರ ದಾಕ್ಷಿಣ್ಯಕ್ಕು ಒಳಗಾಗದೆ ಎಂಥ ಕಾಂಪ್ರಮೈಸ್ಗು ಶರಣಾಗದೆ ಯಾವುದೆ ಮುಲಾಜಿಲ್ಲದೆ ಕನ್ನಡ ಬೆಳ್ಳಿತೆರೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಮಹಾನ್ ವ್ಯಕ್ತಿಶಕ್ತಿ?!
ಇದನ್ನೂ ಓದಿ: ಬಣ್ಣ ಹಚ್ಚೋದು ಕಲಿತೆ, ಬದುಕೋದು ಕಲಿಯಲಿಲ್ಲ… ಇದು ಕಣ್ಮರೆಯಾದ ನಟ ಉಮೇಶ್ ರವರ ಸ್ವಗತ..
ಅಂತೂಇಂತೂ 2012ರಲ್ಲಿ ತೆರೆಕಂಡ “12ಎ.ಎಂ.ಮಧ್ಯರಾತ್ರಿ” ಚಿತ್ರದ ಮೂಲಕ ತಮ್ಮಪುತ್ರ ಅಭಿಮನ್ಯು ಕಾಶಿನಾಥನನ್ನು ಹೀರೋ ಪಾತ್ರದಲ್ಲಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಅಪರೂಪದ ಕನ್ನಡದ ಕಟ್ಟಾಳು ತಾನು ಬೆಳೆಯುವುದರ ಜತೆಗೇ ತನ್ನನ್ನ ನಂಬಿದವರನ್ನೂ ಬೆಳೆಸಿದರು. ತಮ್ಮಲ್ಲಿದ್ದ ಪ್ರತಿಭೆಯನ್ನ ಶಿಷ್ಯವೃಂದಕ್ಕೆ ಧಾರೆ ಎರೆದರು. ಇದಕ್ಕೆ ಸಾಕ್ಷಿಯಾಗಿ ಇವರ ಶಿಷ್ಯರಲ್ಲಿ ಒಬ್ಬರಾದ ರಿಯಲ್‌ಸ್ಟಾರ್ ಉಪ್ಪಿ @ಸೂಪರ್‌ಸ್ಟಾರ್ ಉಪೇಂದ್ರ ಉತ್ತಮ ಉದಾಹರಣೆ. ಈ ಪಟ್ಟಾಶಿಷ್ಯನ ನವಯುಗ ಚಾಲ್ತಿಯಲ್ಲಿದ್ದು ಗುರುಗಳನ್ನು ಬಹುಕಾಲ ನೆನಪಿಸಿಕೊಳ್ವಂತೆ ಮಾಡಬಹುದೇನೋ..?!

ಕಡೆಗೂ ಜವರಾಯನ ಕರೆಯಂತೆ ಪತ್ನಿ ಶ್ರೀಮತಿ ಚಂದ್ರಪ್ರಭ ಮತ್ತು ಇಬ್ಬರು ಮಕ್ಕಳನ್ನು ತೊರೆದು ೧೮.೧.೨೦೧೮ರಂದು ಬೆಂಗಳೂರಲ್ಲಿ ನಿಧನರಾದಾಗ “ಕಾಶೀನಾಥ್ ಯುಗ” ಅಂತ್ಯವಾಯ್ತು. ರಸಿಕತೆಯನ್ನು ಶೃಂಗಾರ ಸಿನಿಮಾಗಳ ಮೂಲಕ ಸಾಮಾಜಿಕ ಸಂದೇಶವನ್ನಾಗಿ ಸಾರಬಹುದು ಎಂಬುದನ್ನ ರುಜುವಾತು ಪಡಿಸಿದ ಆಧುನಿಕ ಮನ್ಮಥ. ತನ್ನದೇ ವಿಶೇಷ ಕಲೆಯ ಮೂಲಕ ಜನ ಯಶಸ್ಸು ಕೀರ್ತಿ ಎಲ್ಲವನ್ನು ಸಂಪಾದಿಸಿದ್ದ ನಟ ನಿರ್ಮಾಪಕ ನಿರ್ದೇಶಕ ಸಾಹಿತಿ ಗಾಯಕ ಸಂಗೀತನಿರ್ದೇಶಕ ಛಾಯಾಗ್ರಾಹಕ…., ಆಚಂದ್ರಾರ್ಕ ಅಜರಾಮರ!
ಇದನ್ನೂ ಓದಿ: ಡಾ.ಶಿವರಾಮಕಾರಂತರ ಸಿನಿಮಾ ಬದುಕು ಹೇಗಿತ್ತು?
ಕಾಶೀನಾಥ್ ನಟಿಸಿದ ಚಿತ್ರಗಳು… ಗೌರಿ, ಅಪರೂಪದಅತಿಥಿಗಳು, ಅಪರಿಚಿತ, ಅಮರ ಮಧುರ ಪ್ರೇಮ, ಅನಾಮಿಕ, ನೋಡಿ ಸ್ವಾಮಿ ನಾವಿರೋದುಹೀಗೆ, ಅನುಭವ, ಅವಳೇನನ್ನಹೆಂಡ್ತಿ, ಮಿಥಿಲೆಯ ಸೀತೆಯರು, ಅವನೇನನ್ನಗಂಡ, ಅನಂತನ ಅವಾಂತರ, ಪ್ರೇಯಸಿ ಪ್ರೀತಿಸು, ತಾಯಿಗೊಬ್ಬ ತರ್ಲೆಮಗ, ಸುರಸುಂದರಾಂಗ, ಮನ್ಮಥರಾಜ, ಅದೃಷ್ಟರೇಖೆ, ಸಿಂಗಾರಿಬಂಗಾರಿ, ಲವ್ ಮಾಡಿನೋಡು, ಚಪಲ ಚೆನ್ನಿಗರಾಯ, ಕಲಿಯುಗಕೃಷ್ಣ, ಪೋಲಿಕಿಟ್ಟಿ, ಆತಂಕ, ಕೆಂಪುಸೂರ್ಯ, ಅಜಗಜಾಂತರ, ಶ್..! ನಕ್ಕಳಾ ರಾಜಕುಮಾರಿ, ಒಂದು ಸಿನಿಮಾ ಕಥೆ, ಅತಿ ಮಧುರ ಅನುರಾಗ,

ಲವ್ ಟ್ರೈನಿಂಗ್, ಹಾಲುಂಡ ತವರು, ಬಂಗಾರದಮನೆ, ಹೆಂಡ್ತಿಎಂದ್ರೆ ಹೀಗಿರಬೇಕು, ಹಲೋಯಮ, ಶ್ರೀಮತಿ ಕಲ್ಯಾಣ, ಬದುಕು ಜಟಕಾ ಬಂಡಿ, ಚೋರ ಗುರು ಚಂಡಾಲಶಿಷ್ಯ, ಕಚಗುಳಿ, ರಂಭೆ ಊರ್ವಶಿ ಮೇನಕೆ, ಸೂಪರ್ ಅಳಿಯ, ಬಿಟ್ಟಿತಾಳಿ ಗಟ್ಟಿಮೇಳ, ಜೀವ, ಮಾವಮಾವ ಮದ್ವೆ ಮಾಡೋ, ಮೂರ್ಖ, ಮೀಸೆ ಹೊತ್ತಗಂಡ್ಸಿಗೆ ಡಿಮಾಂಡಪ್ಪೋ…., ಸುಂದರ ನೀನು ಸುಂದರಿ ನಾನು, ನಾರಿಮುನಿದರೆ ಗಂಡು ಪರಾರಿ, ಅಪ್ಪಚ್ಚಿ, ಆಹಾ ನನ್ನ ತಂಗಿ ಮದುವೆ, 12 ಎ.ಎಂ. ಮಧ್ಯರಾತ್ರಿ, ಜೂಮ್, ಓಳ್ ಮುನಿಸ್ವಾಮಿ ಹಾಗೂ ಚೌಕ.









