ArticlesLatest

ದೇವರುಗಳ ಮೇಲಿನ ನಂಬಿಕೆಗಳನ್ನು ಕಡಿಮೆ ಮಾಡುತ್ತಿರುವ ಮಹಾ ದುರಂತಗಳು…!!.

ಆಗಸ್ಟ್ 26…. ಬುಧುವಾರ… ಓಣಂ ಹಬ್ಬ ಇದ್ದ ಕಾರಣ,, ನನ್ನ ಸರ್ವ ಕೆಲಸ ಚಟುವಟಿಕೆಗಳಿಗೆ ‘ಬ್ರೇಕ್ ‘ ನೀಡಿ ಹೆಚ್ಚಿನ ಸಮಯವನ್ನು ಕೈಯಲ್ಲಿ ‘ಮೊಬೈಲ್  ‘ಹಿಡಿದುಕೊಂಡೇ ಕುಳಿತು ಬಿಟ್ಟೆ…! ಈ ವೇಳೆ ಸಾಮಾಜಿಕ ಜಾಲತಾಣವೊಂದರಲ್ಲಿ ಭೂಕುಸಿತ… ಜಲಪ್ರಳಯದಿಂದ ಬೃಹತ್ ಕಟ್ಟಡಗಳು ಉರುಳಿ ಬೀಳುತ್ತಿದ್ದ ದೃಶ್ಯಗಳನ್ನು ಕಂಡಾಗ, ಇದೊಂದು AI ವೀಡಿಯೋದ ಕೈ ಚಳಕ ಎಂದು ಮೊದಲು ಭಾವಿಸಿ, ಯಾವುದೇ ತಲೆಬಿಸಿ ಮಾಡಿಕೊಳ್ಳದೇ ಮತ್ತೊಂದು ವೀಡಿಯೋವನ್ನು ನೋಡುತ್ತಾ ಕುಳಿತುಬಿಟ್ಟೆ..! ಆದರೆ ನಂತರದ ‘ಬ್ರೇಕಿಂಗ್ ನ್ಯೂಸ್‌’ ಚಾನೆಲ್ ಗಳ ಸದ್ದು ಶುರುವಾದಾಗ, ನನಗೆ ಸತ್ಯ ಸಂಗತಿ ತಿಳಿಯಲು ಪ್ರಾರಂಭಿಸಿತ್ತು…!

ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ  ಭೀಕರವಾದ ‘ಹಿಮ ‘ ಜಾರುವಿಕೆಯಿಂದ ಉಂಟಾದ ಪ್ರಕೃತಿ ವಿಕೋಪಕ್ಕೆ, ದುರಂತ ‘ಕಣ್ಣೀರುಕಥೆ ‘ಗಳು ಆ ಜಲಪ್ರಳಯದಲ್ಲಿ ಕೊಚ್ಚಿ ಹೋಗುತ್ತಿತ್ತು…! ಈ ದುರಂತವನ್ನು ಭೂ ಕುಸಿತ.. ಸುನಾಮಿ.. ಜಲ ಪ್ರಳಯ… ಭೂಕಂಪ….. ಹೀಗೆ ಯಾವ ಹೆಸರಿನಿಂದ ಕರೆಯಬೇಕೆಂದು ತಿಳಿಯಲಿಲ್ಲ…! ಆದರೆ ಸುಂದರವಾದ ಆ ಪ್ರದೇಶ ಒಂದೇ ಕ್ಷಣದಲ್ಲಿ ಪ್ರಳಯಭೂಮಿಯಾಗಿ ಬದಲಾಯಿತ್ತು…!

ಪ್ರಕೃತಿಯಲ್ಲಿ ಉಂಟಾದ ಬದಲಾವಣೆ ಮತ್ತು ಭಗವಂತನ ‘ಆಟ’ಕ್ಕೆ ಹತ್ತಾರು ಗ್ರಾಮಗಳು ಸರ್ವ ನಾಶವಾಗಿದೆ.ಹಲವು ಸಾವು -ನೋವುಗಳ ಸರಮಾಲೆ… ಎಲ್ಲಾಡೆ ಹೆಣಗಳ ರಾಶಿ….ಕನಸಿನಿಂದ ಕಟ್ಟಿದ್ದ ಮನೆಗಳು ಕಾಗದದ ದೋಣಿಗಳಂತೆ ಜಲಪ್ರಳಯಕ್ಕೆ ಸಿಲುಕಿ ತೇಲಾಡುತ್ತಾ ಸಾಗುತ್ತಿತ್ತು.. ಜೀವ ಭಯದಿಂದ ಎಲ್ಲಾಡೆ ಕೂಗು-ಚೀರಾಟ ಕೇಳಿ ಬರುತ್ತಿತ್ತು… ಕಣ್ಣು ಮುಚ್ಚಿ ತೆರೆಯುವ ವೇಳೆಗೆ, ಮನುಜ ಕುಲದ ಎಲ್ಲಾ ಕನಸು -ಬೆವರಿನ ಫಲವನ್ನು ಭಗವಂತ ಕಿತ್ತು ಬಿಟ್ಟಿದ್ದ..! ಇನ್ನೂ ಆ ಭೂಮಿಯಲ್ಲಿ ಕಣ್ಣೀರಿನ ಕಥೆ ಮಾತ್ರ ಇದೆ…! ನಗು- ಸಂತೋಷ ಗೋಚರಿಸುವ ಸಾಧ್ಯತೆಯೇ ಇಲ್ಲ…!!

ಈ ಭೂಮಿಯಲ್ಲಿ ಜನಿಸಿದ ಮೇಲೆ ಯಾವುದೇ ಜೀವಿಗೂ, ಸುಖವಾಗಿ ಬದುಕು ಸಾಗಿಸಲು ಸಾಧ್ಯವಿಲ್ಲ… ಅದರಲ್ಲಿಯೂ ಹೆಚ್ಚಿನ ಕನಸು – ಹೊಲಸು ಮನಸ್ಸು ಹೊಂದಿರುವ ಮನುಜ ಕುಲಕ್ಕೆ ‘ಹುಟ್ಟು-ಸಾವು’ಗಳ ನಡುವಿನ ‘ಜೀವನ’ ಸುಲುಭದ ಮಾತುವಲ್ಲ…! ಪ್ರತಿ ದಿನ ಹೊಸ ಹೊಸ ಪರೀಕ್ಷೆಗಳು..!ಒಂದು ಕಷ್ಟ-ಸಮಸ್ಯೆಯಿಂದ ಹೊರ ಬರುತ್ತಿದ್ದಂತೆ ಮತ್ತೊಂದು ಹೊಸ ಪ್ರಾಬ್ಲಂ ರೆಡಿಯಾಗಿ ನಿಂತಿರುತ್ತದೆ..! ಆಗ ನೆರವಿಗೆ ಬರುವುದು ಕಣ್ಣಿಗೆ ಕಾಣದ ದೇವರು – ಭಗವಂತ ಮಾತ್ರ…!

ಯಾವುದೇ ಧಮ೯-ಜಾತಿಯ ಮಂದಿಗೂ, ಯಾವುದಾದರೂ ಒಂದು ‘ದೇವರು’ ಮೇಲೆ ನಂಬಿಕೆ – ವಿಶ್ವಾಸ ಇರುತ್ತದೆ…! ಆದರೆ ನೇಪಾಳದಲ್ಲಿ ಸೃಷ್ಟಿಯಾದ ದುರಂತವನ್ನು ಕಂಡಾಗ, ದೇವರ ಮೇಲಿನ ನಂಬಿಕೆ ಸಹ ಕಡಿಮೆಯಾಗುತ್ತಿದೆ…! ದೇವರ ಫೋಟೋದ ಎದುರು ಕಣ್ಣು ಮುಚ್ಚಿ ಪ್ರಾಥಿ೯ಸುತ್ತಾ, ಒಂದೇರಡು ಅಗರಬತ್ತಿ… ದೀಪವನ್ನು ಉರಿಸಲು ಸಹ ಮನಸ್ಸು ಒಪ್ಪುದಿಲ್ಲ..!ಭಗವಂತ ‘ತಪ್ಪು’ ಮಾಡಿದ್ದಾನೆ ಎಂದು ನುಡಿಯುತ್ತಾ ಮನಸ್ಸು ರೋಧಿಸುತ್ತಿದೆ…!!

ಈ ಭೂಮಿಯಲ್ಲಿ ಮನುಜ ಕುಲ ಸಹ ಬದಲಾಗಿದೆ..! ಅವರಿಗೂ ಹಿಂದಿನ ತಲೆಮಾರಿನ ಜನತೆ ರೀತಿ ಪ್ರೀತಿ-ವಿಶ್ವಾಸ – ನಂಬಿಕೆ ಇಲ್ಲಾದೇ ಇರುವುದು ನಿಜ….! ಮೋಜಿನ ಬದುಕು….! ಆದರೆ ಯಾವುದೇ ಒಂದು ಪ್ರದೇಶದ ಎಲ್ಲಾ ಜನತೆಯನ್ನು ಒಂದೇ ಕ್ಷಣದಲ್ಲಿ ನಾಶ ಮಾಡುವುದು ಮಾತ್ರ ಸರಿಯಲ್ಲ.. ಏಕೆಂದರೆ ಅಲ್ಲಿ ಸಹ ನೂರಾರು ಒಳ್ಳೆಯ ಮನಸ್ಸು – ಹೃದಯ ಇದ್ದ ಜೀವಗಳು ಇತ್ತು…! ನಂಬಿರುವ ಭಗವಂತನಿಗೆ ಕ್ಷಮಿಸುವ ಗುಣ ಇರಬೇಕು…! ಮನುಷ್ಯ ಬದಲಾಗುವಂತಹ ಮನಸ್ಸು ನ್ನುಕರುಣಿಸಬೇಕು…!

ಈ ಭೂಮಿಯನ್ನು ಭೂಕಂಪ… ಭೂ ಕುಸಿತ… ಜಲಪ್ರಳಯ… ಅಥವಾ ಕಂಡು ಕೇಳದಂತಹ ದುರಂತಗಳನ್ನು ಸೃಷ್ಟಿಸಿ ಪೂಣ೯ವಾಗಿ ನಾಶ ಮಾಡಬಾರದು…! ಈ ಭೂಮಿಯಲ್ಲಿ ಮನುಜ ಕುಲ ಸುಖ-ಶಾಂತಿ – ನೆಮ್ಮದಿಯಿಂದ ಬದುಕು ಸಾಗಿಸಬೇಕು….! ಆಗ ಮಾತ್ರ ಈ ಭೂಮಿಯಲ್ಲಿ ಭಗವಂತನ ಮೇಲೆ ‘ನಂಬಿಕೆ’ ಇಟ್ಟಿರುವ ಮಂದಿಗೂ, ಹೆಚ್ಚು ಕಾಲ ಬದುಕುವ ಆಸೆ ಮೂಡುತ್ತದೆ…!

ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಮಹಾ ‘ದುರಂತ’ಗಳು ಸಂಭವಿಸಿರಬಹುದು….! ಆದರೆ ಈ ನೋವಿನ ಕಣ್ಣೀರಿನ ಮಳೆ ಸದಾ ಸಮಯ ಸುರಿಯದೇ, ದುರಂತಗಳಿಂದ ಜೀವ ಉಳಿಸಿಕೊಂಡಿರುವ ಪುಣ್ಯ ಜನ್ಮಗಳ ಬಾಳಿನಲ್ಲಿ ಹೊಸ ಬೆಳಕು ಬೇಗಾನೆ ಮೂಡಲಿ… ಮುಂದಿನ ದಿನಗಳಲ್ಲಿ ಪ್ರಕೃತಿ ಮಾತೆ ಮುನಿಸದೇ, ಮನುಜ ಕುಲವನ್ನು ಸದಾ ರಕ್ಷಿಸಲಿ ಎಂದು ಮಾತ್ರ ಪ್ರಾಥಿ೯ಸೋಣ….!!!

admin
the authoradmin

Leave a Reply