ಡಾ.ಸರ್ತಾಜ್ ಪಿ.ಹೆಚ್ ಗೆ ಡಾ. ಎಸ್ ಪ್ರಭಾವತಿ ನಂಜಯ್ಯ ಉತ್ತಮ ಅಧ್ಯಾಪಕಿ ಪ್ರಶಸ್ತಿ ಪುರಸ್ಕಾರ

ಮೈಸೂರು: ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರು ಮತ್ತು ಲೇಖಕಿಯೂ ಆಗಿರುವ ಡಾ.ಸರ್ತಾಜ್ ಪಿ.ಹೆಚ್ ಅವರು ಡಾ. ಎಸ್ ಪ್ರಭಾವತಿ ನಂಜಯ್ಯ ಉತ್ತಮ ಅಧ್ಯಾಪಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತೀ ಎಜುಕೇಷನ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಕಾರ್ಯಕ್ರಮವು ಸೆ.5ರಂದು ಬೆಳಿಗ್ಗೆ 10ಗಂಟೆಯಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರದ ಕುವೆಂಪು ಸಭಾಂಗಣದಲ್ಲಿ ನಡೆಯಲಿದ್ದು, ವಿಧಾನಪರಿಷತ್ ಸದಸ್ಯರು, ಭಾರತೀ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಮಧು ಜಿ ಮಾದೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಟ್ರಸ್ಟ್ ನ ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆಶಯ್ ಜಿ. ಮಧು, ಬಿ ಬಸವರಾಜು, ಸಿದ್ದೇಗೌಡ, ಎಸ್ ಜಯರಾಮು, ಮುದ್ದಯ್ಯ ಎಸ್ ಬಸವಗೌಡ ಅವರು ಉಪಸ್ಥಿತರಿರುವರು.
ಡಾ. ಸರ್ತಾಜ್ ಪಿ.ಹೆಚ್…. ಸಾಧನೆಯ ಶಿಖರದ ಕಡೆಗೆ ಚಾರಣ…
ಡಾ. ಸರ್ತಾಜ್ ಪಿ.ಹೆಚ್…. ಸಾಧನೆಯ ಶಿಖರದ ಕಡೆಗೆ ಚಾರಣ… ಇಲ್ಲಿವೆ ದಾಖಲೆಯ ಹೆಜ್ಜೆಗುರುತುಗಳು!







