LatestMysore

ಸಹಕಾರ ಸಂಘಗಳನ್ನು ರೈತರು ಸದ್ಭಳಕೆ ಮಾಡಿಕೊಳ್ಳಬೇಕು: ತೆರಣಿಮುಂಟಿ ಎಂ.ಮಲ್ಲೇಶ್

ಸರಗೂರು(ಆರ್ ಆರ್): ಸಹಕಾರ ಸಂಘಗಳಿಂದ ರೈತರಿಗೆ ತುಂಬಾ ಅನುಕೂಲವಿದ್ದು, ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತೆರಣಿಮುಂಟಿ ಎಂ.ಮಲ್ಲೇಶ್ ತಿಳಿಸಿದರು.

ತಾಲೂಕಿನ ಕಿತ್ತೂರು (ಬಸಾಪುರ) ಗ್ರಾಮದಲ್ಲಿರುವ ಕಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ 2025-26ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಸಹಕಾರ ಸಂಘಗಳಿಂದ ಸಾಲ ಪಡೆದು ರೈತರು ಅಭಿವೃದ್ಧಿ ಹೊಂದಿದ್ದಾರೆ. ಕೃಷಿಯೊಂದಿಗೆ ಉಪ ಕಸುಬುಗಳನ್ನು ಮಾಡಿಕೊಂಡು ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಿದ್ದಾರೆ. ಇದಲ್ಲದೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿ ರೈತರು ಸಹಕಾರ ಸಂಘದಲ್ಲಿ ಸಾಲ ಪಡೆದು, ಮತ್ತೆ ಮರುಪಾವತಿ ಮಾಡಬೇಕು. ಆ ಮೂಲಕ ಸಂಘದ ಏಳಿಗೆಗೂ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.

ಸಂಘದ ನಿರ್ದೇಶಕರು ಸಹಕಾರ ಸಂಘಗಳ ಬೆಳವಣಿಗೆಗೆ ಸಹಕಾರ ನೀಡಬೇಕು. ಸಂಘದಿಂದ ಪಡೆದ ಸಾಲವನ್ನು ರೈತರು ಸಕಾಲದಲ್ಲಿ ಕಟ್ಟುವಂತೆ ಮಾಹಿತಿ ನೀಡಬೇಕು. ಇದರೊಂದಿಗೆ ಕಾರ್ಯದರ್ಶಿಯವರು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದು, ಮುಂದುವರಿದುಕೊಂಡು ಹೋಗಬೇಕು. ಸಂಘದ ಏಳಿಗೆಗೆ ಮುಂದಾಗಬೇಕು. ತುಂಬಾ ಹಳೆಯ ಸಂಘವಾಗಿದ್ದರಿಂದ ಸಂಘವು ಸಾಕಷ್ಟು ಮಂದಿಗೆ ಕೋಟ್ಯಾಂತರ ರೂ. ಸಾಲ ನೀಡಿದೆ. ಮುಂದಿನ ದಿನಗಳಲ್ಲಿಯೂ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎಂ.ಸುರೇಶ್ ಅವರು ವಾರ್ಷಿಕ ವರದಿ ಓದಿದರು. ನಂತರ ಸಂಘವು 8.38 ಲಕ್ಷ ರೂ. ಲಾಭ ಪಡೆದಿದ್ದು, ಸಂಘದಲ್ಲಿ 1600 ಸದಸ್ಯರಿದ್ದು ಈ ಪೈಕಿ 248 ಸದಸ್ಯರಿಗೆ 3.91 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಸ್ವಾಮಿಗೌಡ, ನಿರ್ದೇಶಕರಾದ ಕಮಲಮ್ಮ, ಟಿ.ಕಾಳಸ್ವಾಮಿ, ತಿಮ್ಮಮ್ಮ, ಕೆ.ಎಸ್.ನಾಗಣ್ಣಸ್ವಾಮಿ, ನಾಗರಾಜು, ಪುಟ್ಟನಾಯಕ, ಬಿ.ಎಸ್.ರುದ್ರೇಶ್, ವೆಂಕಟಮ್ಮ, ಸಿದ್ದಯ್ಯ, ಸಣ್ಣ ಸ್ವಾಮಯ್ಯ, ಗುಮಾಸ್ತರಾದ ಎನ್.ಶಂಕರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

admin
the authoradmin

Leave a Reply