LatestMysore

ಪ್ರತಾಪ್‌ ಸಿಂಹ ವಿರುದ್ದ ದಾಖಲಾದ ಎಫ್‌ಐಆರ್‌ ರದ್ದುಗೆ ಮಿರ್ಲೆ ಶ್ರೀನಿವಾಸಗೌಡ ಆಗ್ರಹ

ಕೆ.ಆರ್.ನಗರ(ಸಂಘಟನೆ ಮಂಜುನಾಥ್):   ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ದ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದುಗೊಳಿಸಿ ಟಿ.ನರಸೀಪುರ ಪೊಲೀಸ್‌ ಠಾಣೆ ಸರ್ಕಲ್‌ ಇನ್ಸ್ ಪೆಕ್ಟರ್ ಧನಂಜಯ ಕುಮಾರ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಒಕ್ಕಲಿಗ ಸಮಾಜದ ಮುಖಂಡ ಮಿರ್ಲೆ ಶ್ರೀನಿವಾಸಗೌಡ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಟಿ.ನರಸೀಪುರದ ಪೊಲೀಸ್ ಇನ್ಸ್ ಪೆಕ್ಟರ್ ಧನಂಜಯಕುಮಾರ್ ಯಾವುದೇ ಒಂದು ಜನಾಂಗ ಎಂದು ಹೇಳದೆ ಇಡೀ ಹಿಂದೂ ಸಮಾಜಕ್ಕೆ ಹುಷಾರ್ ಗ್ರಹಚಾರ ಬಿಡಿಸುತ್ತೇನೆ ಎಂದು ಧಮಕಿ ಹಾಕಿದರು ಇದರಿಂದ ಹಿಂದೂ ಸಮಾಜ ಗಣಪತಿ ವಿಸರ್ಜನೆ ಮಾಡಲೇಬೇಕೆಂದು ನಿರ್ಧರಿಸಬೇಕಾಯಿತು.

ಇದಕ್ಕೂ ಮುನ್ನ ಧನಂಜಯರವರನ್ನು ಸಸ್ಪೆಂಡ್ ಮಾಡಿ ಎಂದು ಪ್ರತಾಪ್‌ಸಿಂಹ ಪ್ರತಿಭಟನೆ ನಡೆಸಿದರು. ಇಲ್ಲಿಯ ತನಕ ಟಿ.ನರಸೀಪುರದಲ್ಲಿ ಗಣಪತಿ ವಿಚಾರದಲ್ಲಿ ಕೋಮುಗಲಭೆಯಾಗಿಲ್ಲ ಆದರೂ  ಇನ್ಸ್ ಪೆಕ್ಟರ್ ರವರ ಮಾತು ಹಿಂದೂಗಳನ್ನು ಪ್ರಚೋದಿಸುವ ಕೆಲಸ ಮಾಡಿದರು. ಇದನ್ನು ವಿರೋಧಿಸಿದ್ದು ತಪ್ಪೇ ಎಂದು ಪ್ರಶ್ನಿಸಿದರು.

ಧನಂಜಯಕುಮಾರ್ ಮಾಡಿದ್ದು ಪ್ರಚೋದನೆಯಲ್ಲವೆ ಎಂದು ಪ್ರಶ್ನಿಸಿದ ಶ್ರೀನಿವಾಸಗೌಡ ಶಾಸಕ ಪ್ರದೀಪ್‌ ಈಶ್ವರ್ ಪ್ರತಾಪ್‌  ಸಿಂಹರ ಬಗ್ಗೆ ಕೇವಲವಾಗಿ ಮಾತನಾಡಿದ್ಧಾರೆ ಅವರ ವಿರುದ್ದ ಏಕೆ ಎಫ್‌ಐಆರ್ ದಾಖಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜಾತಿ ವಿಚಾರವನ್ನು ಮಾತನಾಡದಿದ್ದರೂ ಪ್ರತಾಪ್‌ ಸಿಂಹರ ಮೇಲೆ ಜಾತಿ ನಿಂದನೆ ದೂರು ದಾಖಲಿಸಿರುವುದು ಸರಿಯಲ್ಲ ಅವರ ಮಾತಲ್ಲಿ ಎಲ್ಲಿ ಜಾತಿನಿಂದನೆಯಾಗಿದೆ ಎಂದು ತೋರಿಸಿ ಎಂದು ಪ್ರಶ್ನಿಸಿದರು.

ಇದೇ ಧೋರಣೆ ಮುಂದುವರೆದಲ್ಲಿ ಇಡೀ ಹಿಂದೂ ಸಮಾಜ ಹಾಗೂ ಒಕ್ಕಲಿಗ ಸಮಾಜ ಸೇರಿದಂತೆ ಹಿಂದೂ ಸಮಾಜದ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿ ಪ್ರತಾಪ್‌ ಸಿಂಹ ಪರ ಬೆಂಬಲ ವ್ಯಕ್ತಪಡಿಸಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದ ಕಾಂಗ್ರೇಸ್ ಸರಕಾರ ಪ್ರಜಾಪ್ರಭುತ್ವವನ್ನು ಧಮನ ಮಾಡುವ ಕೆಲಸಕ್ಕೆ ಮುಂದಾಗಿದ್ದು ಮುಖ್ಯಮಂತ್ರಿಗಳಿರಬಹುದು, ಗೃಹಸಚಿವರಿರಬಹುದು ಸಮಾಜವನ್ನು ಕದಡುವ ಕೆಲಸ ಕೆರಳಿಸುವ ಕೆಲಸ ಮಾಡುವುದು ಬೇಡ ತಪ್ಪಿದಲ್ಲಿ ಹಿಂದೂ ಸಮಾಜ ಉಗ್ರಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಹೊಸೂರು ಅನಿಲ್, ಮಾರ್ಕಂಡೇಯ ಸ್ವಾಮಿ ಹಾಜರಿದ್ದರು.

admin
the authoradmin

Leave a Reply