LatestMysore

ಬಿಳಿಕೆರೆಯಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ಸಮಸ್ಯೆಗಳ ಸುರಿಮಳೆ

ಹುಣಸೂರು(ನಂಜಾಪುರ ಮನುಕುಮಾರ್): ತಾಲೂಕಿನ ಹುಣಸೂರು ವಿಧಾನಸಭಾ ಕ್ಷೇತ್ರದ ಬಿಳಿಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ – ಸಾಗುವಳಿ ಚೀಟಿ, ವಸತಿ ಸಮಸ್ಯೆ ಹಾಗೂ ಜಮೀನು – ಒತ್ತುವರಿ, ಇ-ಸ್ವತ್ತು ಸಮಸ್ಯೆಗಳ ಕುರಿತ ಅರ್ಜಿಗಳು -ಹೆಚ್ಚಾಗಿ ಸಲ್ಲಿಕೆಯಾದವು.

ಬಿಳಿಕೆರೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯನ್ನು ಶಾಸಕ ಜಿ.ಡಿ.ಹರೀಶಗೌಡ  ಉದ್ಘಾಟಿಸಿದರು. ಮಧ್ಯಾಹ್ನ ಸುಮಾರು ಒಂದು ಗಂಟೆ ಮೇಲೆ  ಆರಂಭವಾದ ಸಭೆ ಗಂಟೆಗಟ್ಟಲೇ ನಡೆಯಿತು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಶಾಸಕರಿಗೆ ಅಗತ್ಯ ಮಾಹಿತಿ ನೀಡಿದರು.

ಬಿಳಿಕೆರೆ, ಶ್ಯಾನಬೋಗನಹಳ್ಳಿ, ವಡೆಯರ ಹೋಸಹಳ್ಳಿ,   ಅಕ್ಕಪಕ್ಕದ ಗ್ರಾಮಗಳಿಂದ ಮುಖಂಡರು, ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು. ತಮ್ಮ ವಿವಿಧ ಸಮಸ್ಯೆಗಳನ್ನು ಶಾಸಕರ ಮುಂದೆ ತೋಡಿ ಕೊಂಡರು. ಹಲವು ವರ್ಷಗಳಿಂದ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದರೂ ಸಾಗುವಳಿ ಪತ್ರ ದೊರೆಯದೆ ಸರ್ಕಾರದ ಯಾವುದೇ ಅನುದಾನ ದೊರೆಯತ್ತಿಲ್ಲ ಎಂದು ಕೆಲ ರೈತರು ಮನವಿ ಸಲ್ಲಿಸಿದರು. ಅಲ್ಲದೆ ಜಮಿನು ಒತ್ತುವರಿ, ಪೋಡಿ ಖಾತೆ, ಮೂಲಸೌಕರ್ಯ ಸೇರಿದಂತೆ ಇನ್ನು ಅನೇಕ ರೀತಿಯ ದೂರುಗಳನ್ನು ಜನರು ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ 190 ಅರ್ಜಿಗಳು ಸಲ್ಲಿಕೆಯಾಗಿದ್ದು, ಬಹುತೇಕ ಅರ್ಜಿಗಳು ಕಂದಾಯ ಇಲಾಖೆ,  ಅರೋಗ್ಯ, ಕೆ.ಎಸ್.ಆರ್.ಟಿ.ಸಿ., ನೀರಾವರಿ ಇಲಾಖೆ ಅರ್ಜಿಗಳು ಸಲ್ಲಿಕೆಯಾಗಿರುವುದು ಕಂಡು ಬಂತು.  ಹೋಬಳಿ ಕೇಂದ್ರವಾದ   ಬಿಳಿಕೆರೆ ಗ್ರಾಮದಲ್ಲಿ ಸ್ಮಶಾನಕ್ಕೆ ಶವ ತೆಗೆದುಕೊಂಡು ಹೋಗಲು ರಸ್ತೆ ಇಲ್ಲ, ಅಂಬೇಡ್ಕರ್ ಭವನವಿಲ್ಲ, ನಾಡ ಕಛೇರಿಯಲ್ಲಿ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ, ಆದಾರ್ ಕೇಂದ್ರ ತೆಗೆದುಹಾಕಿದ್ದಾರೆ.

ಅಗ್ನಿಶಾಮಕ ಠಾಣೆಗೆ ಮಂಜೂರು ಮಾಡಲಾಗಿದ್ದ ಜಾಗವನ್ನು ಪುನಃ ರದ್ದು ಮಾಡಲಾಗಿದೆ ಶಾಸಕರೇ ಗಮನಹರಿಸಿ ಸರಿಪಡಿಸಿ ಇಲ್ಕದಿದ್ದರೇ ಗ್ರಾಮದವರೇಲ್ಲ ಇಲ್ಲಾಖೆ ಹಾಗೂ ನಿಮ್ಮ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಮಾಜಿ ಯುವ ಕಾಂಗ್ರೆಸ್ ಅದ್ಯಕ್ಷ ಬಿಳಿಕೆರೆ ಸ್ವಾಮಿ ಹಾಗೂ ಚೌಡಪ್ಪ ಸಭೆಯಲ್ಲಿ ತಿಳಿಸಿದರು.

ನಂಜಾಪುರ ಗ್ರಾಮಕ್ಕೆ ಬಸ್ ನೀಡಲು ಒತ್ತಾಯ..

70 ವರ್ಷಗಳಿಂದ ತಾಲೂಕಿನಲ್ಲಿಯೇ ಹೆಚ್ಚು ವಿದ್ಯಾವಂತರನ್ನು ಹೊಂದಿರುವ ನಂಜಾಪುರ ಗ್ರಾಮದಲ್ಲಿ ವಿದ್ಯಾರ್ಥಿಗಳು ಹುಣಸೂರಿಗೆ, ಬಿಳಿಕೆರೆ, ರತ್ನಪುರಿ ಗ್ರಾಮಕ್ಕೆ ಶಾಲಾ- ಕಾಲೇಜುಗೆ ತೆರಳಲು, ಮಹಿಳೆಯರು ಕೆಲಸಕ್ಕೆ ತೆರಳಲು, ಹಿರಿಯರು, ಬಡವರು ತೆರಳಲು  ಸರಿಯಾದ ಬಸ್ ವ್ಯವಸ್ಥೆಯೇ ಇಲ್ಲ, ಎಂದು ಗ್ರಾ.ಪಂ.ಮಾಜಿ ಸದಸ್ಯ ಮನುಕುಮಾರ್ ಸಭೆಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಕೆ.ಎಸ್.ಆರ್.ಟಿ.ಸಿ ಅಧಿಕಾರಿ ನಾಳೆನೇ ಗ್ರಾಮಕ್ಕೆ ಭೇಟಿ ನೀಡಿ ಬಸ್ ವ್ಯವಸ್ಥೆ ಕಲ್ಪಿಸುತ್ತೇನೆಂದರು.

ಈ ಸಂದರ್ಭದಲ್ಲಿ  ತಹಸೀಲ್ದಾ‌ರ್ ಮಂಜುನಾಥ್, ಇಓ ಕೆ.ಹೊಂಗಯ್ಯ, ಬಿಇಓ   ಎಡಿಎಆರ್ ಸಿದ್ದೇಗೌಡ,  ಪೋಲಿಸ್ ಉಪನಿರೀಕ್ಷಕ ಪುನೀತ್, ಬಿಳಿಕೆರೆ ಉಪ ತಹಸಿಲ್ದಾರ್ ಸುಬ್ರಮಣ್ಯ, ಆರ್.ಐ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ   ಇತರರು ಇದ್ದರು.

 

admin
the authoradmin

Leave a Reply