ArticlesLatest

ಅವಲೋಕನ-105.. ಇದು ಸ್ಥಿರಶೀರ್ಷಿಕೆಅಡಿಯಲ್ಲಿ  ಪುಸ್ತಕ ವಿಮರ್ಶೆ ಮತ್ತು ಪರಿಚಯ

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದಕೃತಿಗಳನ್ನುಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನುಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕವಿಮರ್ಶೆ)ವಾಗಿದೆ. ಇದನ್ನು ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಸಂಗ್ರಹಿಸಿ ಜನಮನ ಕನ್ನಡಕ್ಕೆ ನೀಡಿದ್ದಾರೆ.

ಕೃತಿ : ಸಮಕಾಲೀನ ಸ್ಪಂದನ

ಕರ್ತೃ : ವಿ.ಹೆಚ್.ಗೌಡ

ಪ್ರಕಾಶಕ: ಸಮನ್ವಯ ಪ್ರಕಾಶನ ಮೈಸೂರು

ಮುದ್ರಕ:ಶ್ರೀಶಕ್ತಿಎಲೆಕ್ಟ್ರಿಕ್ ಪ್ರೆಸ್ ಮೈಸೂರು

ಪುಟಗಳು : 564,  ಬೆಲೆ : ರೂ.100/-, ಮೊದಲ ಹಾಗೂ 2ನೇ ಮುದ್ರಣ 1990

1975 ರಲ್ಲಿ ಶ್ರೀ ಭುವನೇಶ್ವರಿ ಕನ್ನಡ ಸಂಘದ ಪದಾಧಿಕಾರಿಯಾಗಿದ್ದ ನಾನು, ಅ.ನ.ಕೃ.(ಇರ್ವಿನ್) ರಸ್ತೆಯಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಶ್ರೀ ವಿ.ಹೆಚ್.ಗೌಡರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದ ಸಂದರ್ಭವನ್ನು ನಾನೆಂದೂ ಮರೆಯಲಾರೆ. ಆಗ ಪರಿಚಯವಾದ ಗೌಡರ ಮತ್ತು ನನ್ನ ಸ್ನೇಹವು 1.1.2009ರಂದು ಗೌಡರು ದೈವಾಧೀನ ಆಗುವವರೆಗೆ ಅಸ್ತಿತ್ವ ದಲ್ಲಿತ್ತು. ನಾನು ಕಂಡಂತೆ ವಿ.ಹೆಚ್.ಗೌಡರು ಎಂದರೆ ಗ್ರಾಮೀಣ ನೆಲೆಯ ರೈತ ಕುಟುಂಬದ ಬಹುದೊಡ್ಡ ವ್ಯಕ್ತಿಶಕ್ತಿ. ಓರ್ವ ಖ್ಯಾತವಕೀಲ ಲೇಖಕ ಅಂಕಣಕಾರ ವಾಗ್ಮಿ ಪತ್ರಕರ್ತ(‘ಸಮನ್ವಯ’ ಪಾಕ್ಷಿಕದ ಸಂಸ್ಥಾಪಕ ಸಂಪಾದಕ ಪ್ರಕಾಶಕ) ಟ್ರಸ್ಟೀ, ಅಧ್ಯಾಪಕ, ಸಂಘ-ಸಂಸ್ಥೆಗಳ ಪದಾಧಿಕಾರಿ, ಮೈ.ವಿ.ವಿ.ಸೆನೆಟ್ ಸದಸ್ಯ, ವಿಧಾನಪರಿಷತ್  ಸದಸ್ಯ, ಸಮಾಜಸೇವಕ, ಬಹುಮುಖ ಪ್ರತಿಭೆಯ ಪರ್ವತ, ಇತ್ಯಾದಿ…..!!

ಇಂಗ್ಲಿಷ್ ಕನ್ನಡ ಎರಡೂ ಭಾಷೆಗಳ ಪ್ರಖರ ಪಂಡಿತ. ಸಿವಿಲ್-ಕ್ರಿಮಿನಲ್ ದಾವಾಗಳಲ್ಲಿ ಕಕ್ಷಿದಾರರ ಪರವಾಗಿ ಗೆಲುವು ತಂದುಕೊಡುತ್ತಿದ್ದ ಯಶಸ್ವಿ ಅಡ್ವೊಕೇಟ್. ಯಾವುದೇ ಸಮಸ್ಯೆಯನ್ನು ಸುಲಭವಾಗಿ ತಮ್ಮದೇ ಚಾಣಾಕ್ಷತನದಿಂದ ನಿರ್ವಹಿಸಿ ಶೇ.೯೦ರಷ್ಟು ವಿಜಯ ಸಾಧಿಸಿದ ಮಹಾನ್ ಸಾಧಕ. ವೈಯಕ್ತಿಕ ಜೀವನ ವೃತ್ತಿ ಜೀವನ ಎರಡರಲ್ಲು ಒರಟು ಮಾತಿನ ಮೃದು ಹೃದಯದ ಶಿಸ್ತಿನ ಸಿಪಾಯಿ. ಆದರೆ ಯಾವುದೇ ಅರ್ಹ ವ್ಯಕ್ತಿಗೆ ಸಹಾಯ ಸಹಕಾರ ನೀಡುವ ಧೀರ. ಕನ್ನಡ ನಾಡು-ನುಡಿ-ಜನ-ಸಾಹಿತ್ಯದ ಜತೆಗೆ, ಭಾರತ ದೇಶದ ಸಂಸ್ಕೃತಿ ನಾಗರಿಕತೆ ವಿಜ್ಞಾನ ತಂತ್ರಜ್ಞಾನ ಇವುಗಳ ಬಗ್ಗೆ ಕಳಕಳಿಯಿದ್ದ ಹಾಗೂ ಜಗತ್ತಿನ ಪ್ರತಿದಿನದ ಆಗುಹೋಗು ಬಗ್ಗೆ ಅತ್ಯಂತ ಆಸಕ್ತಿ ವಹಿಸುತ್ತಿದ್ದ ಓರ್ವ ವಿಶ್ವಮಾನವ! ಎಲ್ಲಾದರೂ ಸೈ, ಯಾವುದೇ ವಿಷಯದ ಬಗ್ಗೆ ಗಂಟೆಗಟ್ಟಲೆ ಮಾತನಾಡಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸುವ ದಿವ್ಯಶಕ್ತಿ ಉಳ್ಳವರು.

ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಗೌಡರ ಚಾಟಿಯೇಟಿನ ಗಾಂಭೀರ್ಯ, ಸತ್ವಪೂರ್ಣ ಮಾಹಿತಿ, ತತ್ವಾಧಾರ ಸಿದ್ಧಾಂತ, ಸಮಾಜೋದ್ಧಾರ ಕುರಿತು ಆಧಾರಸಹಿತ ಅಂಕಿಅಂಶ, ಮುಂತಾದ ಉಪಯುಕ್ತ ವಿಷಯದ ಸಂಪೂರ್ಣ ಚರ್ಚೆಗೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣಹೆಗ್ಗಡೆ ಮತ್ತು ಮಂತ್ರಿಮಂಡಲ ಸೇರಿದಂತೆ ಇಡೀ ಶಾಸಕಾಂಗದ ಸದಸ್ಯರು ತುಟಿಕ್-ಪಿಟಿಕ್ ಎನ್ನದೆ ನಿಶ್ಯಬ್ಧವಾಗಿ ಕುಳಿತು ಗೌಡರ ಚರ್ಚೆಗೆ ಪ್ರಾಧಾನ್ಯತೆ ನೀಡುತ್ತಿದ್ದುದು ಇತಿಹಾಸ!

ಇವರ ಬಹುತೇಕ ಮನವಿ, ಮಾರ್ಗದರ್ಶನ, ಆಗ್ರಹ, ಅಂಶಗಳನ್ನು ಆಲಿಸಿ ಅವುಗಳು ಕಾರ್ಯಗತವಾಗಲು ಹೊಸಾ ಶಾಸನಗಳನ್ನು ಮಾಡಿ, ಅವುಗಳನ್ನು ಸಾಧ್ಯವಾದಷ್ಟು ಬೇಗ ಅನುಷ್ಠಾನ ಗೊಳಿಸಲಾಗುತ್ತಿತ್ತು. ಹೆಗ್ಗಡೆ, ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ (೧೯೮೮-೯೪) ಅವಧಿಯಲ್ಲಿ ಎಂ.ಎಲ್.ಸಿ. ಆಗಿದ್ದ ಗೌಡರು ತಾವಾಗಿಯೇ ಏನನ್ನೂ ಕೇಳದೇಇದ್ದರು ಮುಖ್ಯಮಂತ್ರಿಯೇ ಖುದ್ದು ಸ್ವಇಚ್ಚೆಯಿಂದ ಗೌಡರಿಗೆ ಒತ್ತಾಯಪೂರ್ವಕ ದೊರಕಿಸಿ ಕೊಡಬಹುದಾಗಿದ್ದ ರಾಜ್ಯ ನ್ಯಾಯಾಂಗ ಇಲಾಖೆಯ ಅಥವ ಉಚ್ಛ ನ್ಯಾಯಾಲಯದ ಉನ್ನತ ಪದವಿಯನ್ನೇ ಗೌಡರು ‘ನೋ’ ಎಂದು ನಯವಾಗಿ ತಿರಸ್ಕರಿಸಿದ್ದರು. ತಮ್ಮ ಕೈ, ಬಾಯಿ, ಕಚ್ಚೆ, ಶುದ್ಧವಾಗಿರಿಸಿಕೊಂಡಿದ್ದ ತ್ರಿಗುಣ ಶ್ರೀಮಂತ, ಮೌಲ್ಯ ಧೀಮಂತ! ಇದಕ್ಕಿಂತ ಆಶ್ಚರ್ಯ ಘಟನೆ, ಅದ್ಭುತ ಉದಾಹರಣೆ ಇರಲು ಸಾಧ್ಯವೇ..?!

೬೦೦ಪುಟದ ೧೫೫ಲೇಖನಗಳ ಈ ಸಂಪುಟ ಕೇವಲ 1 ತಿಂಗಳ ಅವಧಿಯಲ್ಲಿ ದ್ವಿತೀಯ ಮುದ್ರಣ ಕಂಡು ನೂತನ ದಾಖಲೆ ನಿರ್ಮಿಸಿದ ಗ್ರಂಥ. ಪುಸ್ತಕದ ಗಾತ್ರ, ಲೇಖಕರ ತೂಕ, ಎಷ್ಟೇ ಇದ್ದರು ಅವೆರಡೂ ನಗಣ್ಯ ಆಗುವಂತಿದೆ, ಈ ಪುಸ್ತಕವನ್ನು ಕುರಿತು ಬರೆದಿರುವ ಬಲಾಢ್ಯರ ಬರಹಗಳು!

ಒಂದು ಪದವನ್ನೂ ಬಿಡದಂತೆ ಗಮನವಿಟ್ಟು ಓದುವಾಗ ಮಾತ್ರ ನಾಡಿನ ಮಹಾ ಮಹೋಪಾಧ್ಯಾಯರೂ ಮೇರು ಸಾಹಿತಿಗಳೂ ಮಹಾನ್ ನ್ಯಾಯಾಧೀಶ ನ್ಯಾಯವಾದಿಗಳೂ ಮೌಲ್ಯಾಧಾರಿತ ರಾಜಕಾರಣಿಗಳೂ ಮಂತ್ರಿ ಮಹೋದಯರೂ ಬರೆದುಕೊಟ್ಟಂಥ ಪ್ರೋತ್ಸಾಹ ಲೇಖನಗಳು ಮನಮುಟ್ಟುತ್ತವೆ, ತನುತಟ್ಟುತ್ತವೆ. ಇವೆಲ್ಲಕ್ಕಿಂತ ಮಿಗಿಲಾಗಿ ಈ ಪುಸ್ತಕದಲ್ಲಿರುವ ಹೆಚ್ಚುತೂಕ ಮತ್ತು ಮೌಲ್ಯದ: ಆಶೀರ್ವಚನ, ಮುನ್ನುಡಿ, ಹಿನ್ನುಡಿ, ಬೆನ್ನುಡಿ, ಚೆನ್ನುಡಿ, ಮೆಚ್ಚುಗೆ, ಹಾರೈಕೆ, ಮುಂತಾದ ಬೆಂಬಲಪೂರ್ಣ ಬರವಣಿಗೆಗೆ ಎಂಥವರೂ ಗಪ್ ಚುಪ್!

ಇವುಗಳ ಪೈಕಿ ಕೆಲವು ಉದಾಹರಣೆ:-

ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬರೆದ ‘ಮುನ್ನುಡಿ’ :-….

“ವಿ.ಹೆಚ್.ಗೌಡ, 1937ರಲ್ಲಿ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲೂಕು ಹೊಸಹೊಳಲು ಗ್ರಾಮದಲ್ಲಿ ಜನಿಸಿ ಕಾನೂನು ಪದವೀಧರನಾದ ತರುವಾಯ ಲಾ ಪ್ರಾಕ್ಟೀಸ್ ಪ್ರಾರಂಭಿಸಿದ ನಂತರ ಕಡಿಮೆ ಅವಧಿಯಲ್ಲಿ ಜಿಲ್ಲಾ-ರಾಜ್ಯ ಮಟ್ಟದ ಹೆಸರಾಂತ ವಕೀಲ ಎನಿಸಿದರು. ಸುಮಾರು ಒಂದು ದಶಕಕ್ಕೂ ಹೆಚ್ಚುಕಾಲ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ

ಸಮರ್ಥಕಾರ್ಯ ನಿರ್ವಹಿಸಿದರು. ಮೈಸೂರು ನಗರದ ವಿದ್ಯಾವರ್ಧಕ ಕಾನೂನು ಕಾಲೇಜಲ್ಲಿ 13ವರ್ಷ ‘ಭಾರತ ಸಂವಿಧಾನ’ ವಿಷಯ ಬೋಧಿಸುವ ಕಾನೂನು ಅಧ್ಯಾಪಕ. ೬ ವರ್ಷ ಕಾಲ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ. ಕಳೆದ 12 ವರ್ಷಗಳಿಂದ ‘ಸಮನ್ವಯ’ ನಿಯತಕಾಲಿಕದ ಸಂಪಾದಕ. 1988ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆ..! ಸಮಯಾಸಮಯಕ್ಕೆ ನಡೆದ ರಾಷ್ಟ್ರದ ಸಾಮಾಜಿಕ ರಾಜಕೀಯ ಆಡಳಿತಾತ್ಮಕ ಹಾಗೂ ಅಂತರರಾಷ್ಟ್ರೀಯ ಘಟನೆಗಳನ್ನು ಆಧಾರವಾಗಿಸಿಕೊಂಡು; ಏನಾಯಿತು? ಏನಾಗಬೇಕಿತ್ತು? ಮುಂದೇನಾಗಬೇಕು? ಎಂಬುದರ ಬಗ್ಗೆ ತಮ್ಮ “ಸಮನ್ವಯ” ಪಾಕ್ಷಿಕ

ಪತ್ರಿಕೆಯಲ್ಲಿ ಗೌಡರು ವ್ಯಕ್ತಪಡಿಸಿರುವ ವಿಚಾರಗಳು ಅಮೂಲ್ಯ ಮತ್ತು ದಿಗ್ದರ್ಶಕ..! ವಿಚಾರಶಕ್ತಿ ದೂರದೃಷ್ಟಿ ನಿಷ್ಪಕ್ಷಪಾತ ಪ್ರವೃತ್ತಿಯ ಧ್ಯೇಯಕ್ಕಾಗಿ ಹೋರಾಡುವ ಛಲ ಸಾಹಸ ಮೇಲಾಗಿ ಅದಮ್ಯ ಉತ್ಸಾಹ ಇವುಗಳನ್ನು ಸಹ ಪರಮಾತ್ಮನು ಇವರಿಗೆ ಕರುಣಿಸಿದ್ದಾನೆ. ಧ್ಯೇಯ ಸಾಧನೆಯಲ್ಲಿ ಇವುಗಳೇ ಅವರ ಯಶಸ್ಸಿನ ಕಾರಣಗಳು.”

–ಮ.ರಾಮಾಜೋಯಿಸ್ ಚೀಫ್ ಜಸ್ಟೀಸ್         

ಗಣ್ಯರು ಬಣ್ಣಿಸಿದ ಬರಹ ಕನ್ನಡಿ:-

(1).ವಿಧಾನ ಪರಿಷತ್ ಸದಸ್ಯರೂ ‘ಕನ್ನಡಪ್ರಭ’ ದಿನಪತ್ರಿಕೆಯ ಪ್ರಧಾನ ಸಂಪಾದಕರೂ ಬರೆದಿರುವುದೆಂದರೆ…..

“ಸಕ್ರಿಯ ರಾಜಕಾರಣದಲ್ಲಿರುವವರು ಕ್ರಿಯಾಶೀಲ ಬರಹಗಾರರಾಗಿ ಪ್ರಚಲಿತ ಸಮಸ್ಯೆಗಳನ್ನು ಚರ್ಚಿಸುವುದು ಒಂದು ಸ್ವಾಗತಾರ್ಹ ಮನೋಧರ್ಮ. ಈ ಲೇಖನಗಳ ಸಂಕಲನದಲ್ಲಿ ವಿಸ್ತಾರವಾದ ವೈವಿಧ್ಯವುಂಟು. ಓದುಗರಿಗೆ ಆಕರ್ಷಕವಾದ ರೀತಿಯಲ್ಲಿ ಅವುಗಳ ಪ್ರತಿಪಾದನೆಯೂ ಈ ಸಂಕಲನದಲ್ಲಿ ಉಂಟು. ವಿಷಯಗಳನ್ನು ಯಾವ ಪೂರ್ವಾಗ್ರಹವೂ ಇಲ್ಲದೆ ಬಿಚ್ಚು ಮನಸ್ಸಿನಿಂದ ಚರ್ಚಿಸುವ ನಿರ್ವಿಕಾರ ಬುದ್ಧಿ ಸಾರ್ವಜನಿಕ ಜೀವನದ ಮುಂದಾಳುಗಳಲ್ಲಿ ಬರಬೇಕು. ಅಂಥ ಬೆಳವಣಿಗೆಯ ಕುರುಹು ಈ ಸಂಕಲನದಲ್ಲಿದೆ.

 –ಖಾದ್ರಿ ಶಾಮಣ್ಣ

(2)ಗುಲ್ಬರ್ಗ ವಿ.ವಿ.ಕುಲಪತಿಯೂ ಮೈವಿವಿ ಕ.ಅ.ಸಂಸ್ಥೆ ಪ್ರಾಧ್ಯಾಪಕ-ನಿರ್ದೇಶಕರೂ ಖ್ಯಾತಸಾಹಿತಿಯೂ ನುಡಿದುದು….

“ಕರ್ನಾಟಕ ಮತ್ತು ಭಾರತದ ಈ ಹತ್ತು ವರ್ಷ ಅವಧಿಯ ಹಲವಾರು ಘಟನೆಗಳನ್ನು, ಸಮಸ್ಯೆಗಳನ್ನು ಕುರಿತಂತೆ ಕಾಲಕಾಲಕ್ಕೆ ತಾವು ವ್ಯಕ್ತಪಡಿಸುತ್ತಾ ಬಂದ ವಿಚಾರಗಳನ್ನು ವಿ.ಹೆಚ್.ಗೌಡರು ಈ ಸಮೃದ್ಧ ಸಂಪುಟದಲ್ಲಿ ಸಂಕಲಿಸಿದ್ದಾರೆ. ಇಲ್ಲಿನ ಬರಹಗಳಲ್ಲಿ ಗೌಡರ ಆಳವಾದ ತಿಳುವಳಿಕೆ, ದೇಶ ಮತ್ತು ಸಮಾಜಗಳ ಬಗೆಗಿನ ಕಾಳಜಿ, ಅಭ್ಯುದಯದಲ್ಲಿನ ಆಸಕ್ತಿ, ಪ್ರಗತಿಯ ಪರವಾದ ಉತ್ಸಾಹ, ಜನಜೀವನದ ಹಿತ ಚಿಂತನೆ – ಮೊದಲಾದ ಗುಣಗಳು ಮೇಳವಿಸಿವೆ. ಇಲ್ಲಿನ ಚಿಂತನೆಗೆ ಅಧ್ಯಯನದ ಅಡಿಪಾಯವಿದೆ, ಅನುಭವದ ಆಧಾರವಿದೆ. ಎಷ್ಟೊಂದು ವಿಷಯಗಳ ಬಗ್ಗೆ ಗೌಡರು ಬರೆದಿದ್ದಾರೆ ಎಂದು ಯೋಚಿಸಿದರೇ ಆಶ್ಚರ್ಯವಾಗುತ್ತದೆ. ಸರ್ವಕುತೂಹಲಿಯಾದ ಸುಸಂಸ್ಕೃತ ಮನಸ್ಸೊಂದು ಇಲ್ಲಿ ಕೆಲಸ ಮಾಡಿದೆ. ತನ್ನ ನಾಡಿನ ಮತ್ತು ಜನರ ಸುಖ ದುಃಖಗಳಲ್ಲಿ ಪಾಲುಗೊಂಡವರು ಮಾತ್ರ ಇಂಥ ಕೆಲಸ ಮಾಡಬಲ್ಲರು. ಇದೊಂದು ವೈವಿಧ್ಯ ಮಾಯವಾದ ಅಪರೂಪದ ವೈಚಾರಿಕ ಗ್ರಂಥ. ಸಮಕಾಲೀನ ತುಡಿತದಿಂದ ಇದರ ಮಹತ್ವ ಹೆಚ್ಚಿದೆ.”  –ಡಾ.ಹಾ.ಮಾ.ನಾಯಕ.

(3)ತತ್ವಶಾಸ್ತ್ರ ಪ್ರಾಧ್ಯಾಪಕ, ವಿಶಿಷ್ಟ ವಿಚಾರವಂತ, ಖ್ಯಾತ ಕಾದಂಬರಿಕಾರ, ಬರೆದಿರುವುದು ಹೀಗೆ…..

“ಘಟನೆಗಳು ಸಂದು ಹಲವು ವರ್ಷ ಅಥವಾ ದಶಕಗಳು ಕಳೆದರೂ ಅವುಗಳನ್ನು ಗಂಭೀರ ವಿಚಾರದ ಆಲೋಚಕರು ಹೇಗೆ ಭಾವಿಸಿದ ರೆಂಬುದು ಮಹತ್ವದ್ದಾಗಿ ಮತ್ತು ಕುತೂಹಲಕಾರಿಯಾಗಿ ಉಳಿಯುತ್ತದೆ. ‘ಸಮನ್ವಯ’ ಪತ್ರಿಕೆ ಪ್ರಕಟವಾಗುತ್ತಿದ್ದಂತೆ ಓದುವವರಲ್ಲಿ ನಾನೂಒಬ್ಬ. ಇದರಲ್ಲಿನ ಲೇಖನಗಳು ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗುವ ಮುನ್ನ ಮುದ್ರಿತ ಹಾಳೆಗಳನ್ನು ಓದುವಾಗ ಅವುಗಳ ಮಹತ್ವ ಇನ್ನು ಹೆಚ್ಚಿನದಾಗಿ ತೋರುತ್ತಿದೆ. ಹೌದು, ಇವೆಲ್ಲವೂ ಪುಸ್ತಕ ರೂಪದಲ್ಲಿ ಉಳಿಯಬೇಕು, ಭವಿಷ್ಯದಲ್ಲು ಉಪಯುಕ್ತ ಆಗಬೇಕು, ಎನಿಸುತ್ತದೆ. – ಎಸ್.ಎಲ್.ಭೈರಪ್ಪ.

(4)ಕನ್ನಡ ಪ್ರಾಧ್ಯಾಪಕರೂ ಸಾಮಾಜಿಕ ಚಿಂತಕರೂ ಖ್ಯಾತ ವಿಮರ್ಶಕರೂ ಅಭಿವ್ಯಕ್ತ ಪಡಿಸಿರುವ ರೀತಿ….:- ಶ್ರೀ ವಿ.ಹೆಚ್.ಗೌಡರ  ಸಮಕಾಲೀನ ಸ್ಪಂದನ ಪುಸ್ತಕದಲ್ಲಿ ಮಹತ್ವ ಮತ್ತು ವೈವಿಧ್ಯ ಪೂರ್ಣವಾದ ಅನೇಕ ವಿಚಾರ ಸಂಗತಿ ಸಮಸ್ಯೆ ವಿದ್ಯಾಮಾನಗಳಿಗೆ ಇವರು ಸ್ಪಂದಿಸಿದ ಬಗೆ ಸ್ವೋಪಜ್ಞವಾದ ರೀತಿಯಲ್ಲಿ ದಾಖಲಾಗಿದೆ. ಗಂಭೀರ ಚಿಂತನೆ, ಸೂಕ್ಷ್ಮ ವಿಶ್ಲೇಷಣೆ, ಸಂವಿಧಾನ ಮತ್ತು ನ್ಯಾಯ ಶಾಸ್ತ್ರಗಳ ವ್ಯಾಪಕ ವಿದ್ವತ್ತು, ನಿರೂಪಣಾ ಶೈಲಿಯ ಶಿಷ್ಟಶಿಸ್ತು ಮತ್ತು ಧೀರವಿನಯದ ಧಾಟಿ…..ಇವುಗಳ ಹದವರಿತ ಸಮನ್ವಯ ಈ ಕೃತಿಯಲ್ಲಿ ಕಾಣುತ್ತದೆ. ೧೯೭೮-೮೮ ರ ಕಾಲಮಾನದ ಭಾರತದ ಸಮಾಜೋ-ರಾಜಕೀಯ ಚರಿತ್ರೆ ಬರೆಯುವವರಿಗೆ ಇದೊಂದು ಮೌಲಿಕ ಪರಾಮರ್ಶನ ಗ್ರಂಥವಾಗಲಿದೆ.  –ಡಾ.ಜಿ.ಹೆಚ್.ನಾಯಕ.

(5)ಮೈ.ವಿ.ವಿ. ಕುಲಪತಿ ಹೇಳಿದ್ದು:

“ಕರ್ನಾಟಕದ ಮತ್ತು ರಾಷ್ಟ್ರದ ಸಮಕಾಲೀನ ಪ್ರಸಂಗಗಳಿಗೆ ಸಂಬಂಧಿಸಿದಂತೆ…..ಅವು ಸಂಸದೀಯ ಸಂಸ್ಥೆಗಳಿಗೆ ಸಂಬಂಧಿಸಿರಲಿ ಭಾಷಾ ಸಮಸ್ಯೆಗಳನ್ನು ಕುರಿತಿರಲಿ, ಶಿಕ್ಷಣ ರಾಜಕೀಯ ಮೀಸಲಾತಿ ಮುಂತಾದ ವಿಷಯಗಳ ಬಗೆಗಾಗಿರಲಿ….. ನಿಯತಕಾಲಿಕ ವ್ಯಾಖ್ಯಾನಗಳ ಸಂಪುಟವೊಂದನ್ನು ಪ್ರಕಟಿಸುತ್ತಿರುವ ಲೇಖಕ ‘ಸಮನ್ವಯ’ ಸಂಪಾದಕ ಶ್ರೀ ವಿ.ಹೆಚ್.ಗೌಡರನ್ನು ಅಭಿನಂದಿಸುತ್ತೇನೆ. ಈ ಸಂಪಾದಕೀಯ  ಬರಹಗಳು ತುಂಬ ವಾಚನೀಯವಾಗಿವೆ ಅಧಿಕೃತವಾಗಿವೆ. ಈ ಕಾಲದ ವ್ಯಾಖ್ಯಾನಕ್ಕಾಗಿ ಮುಂದಿನ ಇತಿಹಾಸಕಾರರು ಪ್ರಸ್ತುತ ಸಂಪುಟವನ್ನು ಅಧ್ಯಯನ ಮಾಡಲೇಬೇಕಾಗುತ್ತದೆ.” –ಡಿ.ವಿ.ಅರಸ್. ಕುಲಪತಿ, ಮೈವಿವಿ

“ಸಮಕಾಲೀನ ಸ್ಪಂದನ” ಕೃತಿಯ ಪರಿವಿಡಿ

೧.ಸಮನ್ವಯ

೨.ಪಕ್ಷಾಂತರ ಮತ್ತು ಕಾನೂನು

೩.ದೆಹಲಿ ದುರಂತ

೪.ಜನತಾ ಸೋಲು

೫.ಚಿಕ್ಕಮಗಳೂರು ಉಪಚುನಾವಣೆ

೬.ಕಾಂಗ್ರೆಸ್ ಪತನ

೭.ಇಂದಿರಾ ಗೆಲುವು

೮.ಗೆದ್ದು ಸೋತವರು

೯.ವಿಶೇಷ ನ್ಯಾಯಾಲಯಗಳು

೧೦.ಹಿಂಸಾ ರಾಜಕೀಯ

೧೧.ಜನತಾಪಕ್ಷದ ಚುನಾವಣೆಗಳು

೧೨.ಚರಣ್ ಸಿಂಗ್ ಪುನರ್ ಸೇರ್ಪಡೆ

೧೩.ಮಾನವೀಯತೆಯ ಕಗ್ಗೊಲೆ

೧೪.ಅದೂರ ದೃಷ್ಟಿ

೧೫.ಸ್ನೇಹ ಸಂವರ್ಧನೆ

೧೬.ಭುಟ್ಟೋ ಮರಣದಂಡನೆ

೧೭.ಅರಸು ಅಧಿಕಾರ ತ್ಯಜಿಸಲಿ

೧೮.ರೈಲ್ವೆ ನೌಕರರ ಬೋನಸ್

೧೯.ಡಾ.ಟಿ.ಎಂ.ಎ.ಪೈ

೨೦.ಇಂದಿರಾ-ಅರಸು ಹಗರಣ

೨೧.’ಸಮನ್ವಯ’ವಾರ್ಷಿಕ ಸಂಚಿಕೆ-೧೯೭೯

೨೨.ಲೋಕಸಭೆಯ ವಿಸರ್ಜನೆ

೨೩.ಕಾಂಗ್ರೆಸ್ ಗಾದಿಗೆ ಅರಸು

೨೪.ಅಧಿಕಾರ ದುರುಪಯೋಗದ ಪರಮಾವಧಿ

೨೫.ಜೆ.ಪಿ.

೨೬.ಸರ್ವಮಾಧ್ಯಮ ಭಾಷೆಯಾಗಿ ಕನ್ನಡ

೨೭.ಅಂತರ ರಾಷ್ಟ್ರೀಯ ಮಕ್ಕಳವರ್ಷ

೨೮.ಸಮಯಸಾಧಕ ರಾಜಕಾರಣ

೨೯.ಜನತೆ ನೀಡಿದ ತೀರ್ಪು

೩೦.ವಿಸರ್ಜಿಸಬೇಕಾಗಿದೆ!

೩೧.ಜಗಜೀವನ್ ರಾಮ್ ರಾಜಕೀಯ

೩೨.ಅಂಧರ ಮೇಲೆ ಲಾಠಿ ಪ್ರಹಾರ

೩೩.ಒಡೆದ ಮಡಕೆ

೩೪.ಜನಸಂಘದ ನಿರ್ಗಮನ

೩೫.ಅಸಾಮಾನ್ಯ ಚಳುವಳಿ

೩೬.ಕೇಂದ್ರ ಬಜೆಟ್

೩೭.ಹಕ್ಕುಗಳು ಮತ್ತು ನಿರ್ದೇಶಕಗಳು

೩೮.’ಸಮನ್ವಯ’ವಾರ್ಷಿಕ ಸಂಚಿಕೆ-೧೯೮೦

೩೯.ರೈತ ಚಳುವಳಿ

೪೦.ರಾಷ್ಟ್ರೀಯ ಭದ್ರತಾ ಸುಗ್ರೀವಾಜ್ಞೆ : ಯಾರ ಭದ್ರತೆಗಾಗಿ?

೪೧.ಅಧಿಕಾರ ಕೇಂದ್ರೀಕರಣದ ಹೊಸ ಸೋಗು

೪೨.ನ್ಯಾಯಾಧೀಶರ ನೇಮಕ

೪೩.ಕಲಿಯಬೇಕಾದಪಾಠ

೪೪.ಭಾಗಲ್ಪುರದ ಅಮಾನುಷ ಕೃತ್ಯ

೪೫.ವಿದ್ವಾಂಸ ತ್ರಯರ ಶತಮಾನೋತ್ಸವ

೪೬.ನ್ಯಾಯಾಧೀಶರುಗಳ ವರ್ಗಾವಣೆ

೪೭.ಎಂ.ಸಿ.ಛಾಗಲಾ

೪೮.ನಿಮಗಾರುಬೇಕು: ಅಧ್ಯಕ್ಷರೋ? ಸಂಸತ್ತೋ?

೪೯.ಮೀಸಲಾತಿ

೫೦.ಕನ್ನಡದ ಗೋಸುಂಬೆ ಸಾಹಿತಿಗಳು

೫೧.ಅಧ್ಯಾಪಕರು ಮತ್ತು ಚಳುವಳಿ

೫೨.ರೈತರ ರಕ್ತದ ಕೋಡಿ

೫೩.ಅವಿವೇಕದ ಆಲೋಚನೆ

೫೪.ಜಾತಿ ದ್ವೇಷ

೫೫.ಬಾಲ್ಯ ವಿವಾಹ

೫೬.ಸರ್ವಾಧಿಕಾರದ ಮುನ್ಸೂಚನೆ

೫೭.ಇಬ್ರಾಹಿಂ ಪ್ರಕರಣ

೫೮.’ಸಮನ್ವಯ’ ದ ವಾರ್ಷಿಕ  ವಿಶೇಷಾಂಕ ೧೯೮೧

೫೯.ಮೀಸಲಾತಿ – ಸಂವಿಧಾನ

೬೦.ಮತಾಂತರದ ಅವಾಂತರ

೬೧.ಭೂಪೇಶ್ ಗುಪ್ತ

೬೨.ಅಂತುಳೆ ಹಗರಣ

೬೩.ಶಿವಕಾಶಿ ದುರಂತ

೬೪.ಅಟ್ಟ ಹತ್ತದವನು ಬೆಟ್ಟ ಹತ್ತಿಯಾನೇ..?

೬೫.ಪ್ರಶಂಸಾರ್ಹ ತೀರ್ಮಾನ

೬೬.ದೇವೊಲಿಯ ಹತ್ಯಾಕಾಂಡ

೬೭.ಗಢವಾಲ : ಸಂವಿಧಾನಕ್ಕೆಸಗಿದ ಅಪಚಾರ

೬೮.ಅಂತರರಾಷ್ಟ್ರೀಯ ಅಸಹಾಯಕರ ವರ್ಷ

೬೯.ಭ್ರಷ್ಟಾಚಾರದ ಶಿಖರ ಉರುಳಿಬಿತ್ತು

೭೦.ಅಲ್ಪಸಂಖ್ಯಾತರ ಹಿಂಸೆ

೭೧.ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಗೋಕಾಕ್ ವರದಿಯ ಪರಿಣಾಮ

೭೨.ಕೇರಳದ ಕೆಟ್ಟ ಸಂಪ್ರದಾಯ

೭೩.ಗುಂಡೂರಾಯರ ಸಿಮೆಂಟ್ ಪ್ರಕರಣ

೭೪.ಕೇಂದ್ರ ಗೃಹ ಸಚಿವರ ‘ಪಕ್ಷಪಾತ’ ಧೋರಣೆ!

೭೫.ರಾಜೀನಾಮೆ ಕೊಟ್ಟು ತೊಲಗಿ

೭೬.ಕನ್ನಡಕ್ಕೆ ಸೋಲು? ಸಂಸ್ಕೃತದ ಸಂಚು!

೭೭.ಕರ್ನಾಟಕ ಕ್ರಾಂತಿರಂಗ

೭೮.ಹರಿಯಾಣದ ಹಗರಣ

೭೯.ಕರ್ನಾಟಕದ ಅರಸು

೮೦.ನ್ಯಾಯಾಂಗದಿಂದ ಪ್ರಜಾಪ್ರಭುತ್ವದ ರಕ್ಷಣೆ

೮೧.ಸಮನ್ವಯದ ವಾರ್ಷಿಕ ವಿಶೇಷಾಂಕ ೧೯೮೨

೮೨.ಕರ್ನಾಟಕ ಕ್ರಾಂತಿರಂಗ – ಮುಂದೇನು?

೮೩.ಷೇಕ್ ಇನ್ನಿಲ್ಲ….ಕಾಶ್ಮೀರ..?

೮೪.ನೆಹರು ಟೀಕಾತೀತರೇ?

೮೫.ಇದೆಂಥ ಪಕ್ಷಾತೀತತೆ!

೮೬.ಮೂರ್ಖರ ಕೂಟವಲ್ಲ, ಆದರೆ…?

೮೭.ಕಾನೂನು ನೆರವು

೮೮.ಗೋವೆ ದೌರ್ಜನ್ಯ

೮೯.ದಿಢೀರ್ ಪ್ರಕಟಣೆ

೯೦.ಮಿನಿ ಚುನಾವಣೆ

೯೧.ಶ್ರೀಮತಿ ಇಂದಿರಾ ಪ್ರಭಾವ ಇಳಿಮುಖ

೯೨.ಜನತೆಯ ತೀರ್ಪು

೯೩.ಸೋಲಿನಿಂದ ಕಲಿತಿದ್ದೇನು…..?

೯೪.ಅಸ್ಸಾ೦ ಚುನಾವಣೆ : ವ್ಯರ್ಥ ಕಲಾಪ !

೯೫.ಅಲಿಪ್ತ ಚಳವಳಿ

೯೬.ದಕ್ಷಿಣ ಭಾರತ ಮುಖ್ಯ ಮಂತ್ರಿಗಳ ಮಂಡಳಿ

೯೭.ಸನ್ಯಾಸಿಯ ವೇಷದಲ್ಲಿ ಮುಖ್ಯ ಮಂತ್ರಿ

೯೮.ನ್ಯಾಯಾಧೀಶರ ಮೇಲೆ ಕಣ್ಗಾವಲು

೯೯.ವಿಜಯವಾಡ ಸಮಾವೇಶ

೧೦೦.ಕ.ಸಾ.ಪ. ಅಂಗರಚನೆ ಮತ್ತು ಸೂಚಿತ ತಿದ್ದುಪಡಿಗಳು

೧೦೧.ಲೋಕದಳ-ಬಿ.ಜೆ.ಪಿ.ಮೈತ್ರಿ

೧೦೨.ಕಿರಾತ ವರ್ತನೆ

೧೦೩.ಸ್ಥಳೀಯ ಸಂಸ್ಥೆಗಳ ಚುನಾವಣೆಗಳು

೧೦೪.ರೈತರ ರೈಲು ಮತ್ತು ರಸ್ತೆ ಚಳುವಳಿ

೧೦೫.ಹಕ್ಕುಚ್ಯುತಿ

೧೦೬.ವಿವೇಕದ ತೀರ್ಮಾನ

೧೦೭.ಶಾಸಕಾಂಗ-ನ್ಯಾಯಾಂಗ ಯಾವುದು ಹೆಚ್ಚು?

೧೦೮.೧೯೮೪ರ ಮಿನಿ ಚುನಾವಣೆ: ಕಾಂಗೈಗೆ ಭಾರಿ ಹೊಡೆತ

೧೦೯.ಅಜೀಜರ ಅವಾಂತರ

೧೧೦.ಸಮಾನತಾಂದೋಲನ ಮತ್ತು ರೈತ

೧೧೧.ಇಂದಿರಾ ಕಗ್ಗೊಲೆ

೧೧೨.ಆಂಧ್ರ:ಸಂವಿಧಾನಕ್ಕೆದ್ರೋಹ

೧೧೩.ಆಂಧ್ರ: ಪ್ರಜಾತಂತ್ರದ ಕಪಟ ನಾಟಕ

೧೧೪.ಕವಲುದಾರಿ:ಅಧ್ಯಕ್ಷೀಯ ಸಂಸದೀಯ

೧೧೫.ಪ್ರಚಂಡದಿಗ್ವಿಜಯ

೧೧೬.ರಾಜೀವ್ ಶೈಲಿ

೧೧೭.ಮಿನಿ ಚುನಾವಣೆ

೧೧೮.ಪಕ್ಷಾಂತರ ಕಾನೂನು

೧೧೯.ಸ್ವಾತಂತ್ರ್ಯಯೋಧ ಎ.ಶಿವಣ್ಣ

೧೨೦.ಕಾಂಗ್ರೆಸ್ ಶತಮಾನೋತ್ಸವ

೧೨೧.ಮೇಲ್ಮನೆ: ರದ್ದುಪಡಿಸಬೇಕೇ? ಸುಧಾರಿಸಬೇಕೇ?

೧೨೨.ರಾಷ್ಟ್ರದ ಏಕತೆ ಹಾಗೂ ಸಮಗ್ರತೆ ಮತ್ತು ಭಾಷಾ ಸಮಸ್ಯೆ?

೧೨೩.ಕೇಂದ್ರದ ಮಾದರಿ ಶಾಲೆಗಳು?

೧೨೪.ಸಮಾನತಾ ಆಂದೋಲನ ಮತ್ತು ಹಿಂದುಳಿದ ವರ್ಗ

೧೨೫.ಜಗಮೋಹನ್ ಗೆ ಛೀಮಾರಿ

೧೨೬.ಕನ್ನಡಕ್ಕೆ ಕುತ್ತು

೧೨೭.ಗಾಂಧಿ ಮತ್ತು ಶಿಕ್ಷಣ

೧೨೮.ಪರಭಾಷೆಯ ಚಪ್ಪಡಿ

೧೨೯.ಸ್ವಾಗತಾರ್ಹ ನಿಲುವು

೧೩೦.ಬೀದಿಗಿಳಿವುದು ಸಲ್ಲ

೧೩೧.ಸಮಾನತಾ ಆಂದೋಲನ ಮತ್ತು ಸಮಕಾಲೀನ ರಾಜಕೀಯ

೧೩೨.ಭಾರತ ಸಂವಿಧಾನದಲ್ಲಿ ರಾಜ್ಯನೀತಿಯ ನಿರ್ದೇಶಕ ತತ್ವಗಳು

೧೩೩.ಮುಖ್ಯ ಮಂತ್ರಿಗೊಂದು ಪತ್ರ

೧೩೪.ಜಿಲ್ಲಾ ಪರಿಷತ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ: ಶಾಸಕರ ಮತದಾನದ ಹಕ್ಕು

೧೩೫.ಶಾಸನ ಸಭಾಧ್ಯಕ್ಷರ ಇತಿ-ಮಿತಿ

೧೩೬.ರಾಷ್ಟ್ರಪತಿ-ಪ್ರಧಾನಿ ವಿರಸ

೧೩೭.”ಆನಂದ ವಿಕಟನ್” ಪತ್ರಿಕೆಯ ವ್ಯಂಗ್ಯಚಿತ್ರ ಪ್ರಕರಣ

೧೩೮.ರಾಷ್ಟ್ರಗೀತೆ ಪ್ರಕರಣ

೧೩೯.ರಾಷ್ಟ್ರಪತಿ ಮತ್ತು ಪ್ರಧಾನಿಯ ಸಂಬಂಧಗಳು

೧೪೦.ಚಾರಿತ್ರಿಕ ಜಯ

೧೪೧.ಎಂ.ಜಿ.ಆರ್.

೧೪೨.’ಸಮನ್ವಯ’ ವಾರ್ಷಿಕ ವಿಶೇಷಾಂಕ ೧೯೮೭

೧೪೩.ತಮಿಳುನಾಡು: ರಾಜಕೀಯ ಸಿನಿಮಾ

೧೪೪.ಕರ್ನಾಟಕದ ವಿಧೇಯಕ ವಿವಾದಾತ್ಮಕವೇ…?

೧೪೫.ಕುವೆಂಪು:ವ್ಯಕ್ತಿತ್ವ ಭವ್ಯತೆ! (ಇದು ೩.೪.೧೯೮೮ ರಂದು ಶಿವಮೊಗ್ಗೆಯ ಒಕ್ಕಲಿಗರ ಸಂಘದಲ್ಲಿ ಕುವೆಂಪು ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ದೊರಕಿದ ಸಂದರ್ಭದಲ್ಲಿ ವಿ.ಹೆಚ್.ಗೌಡರು ಮಾಡಿದ ಭಾಷಣ) ಈ ಎಲ್ಲವೂ ಓದುಗರನ್ನು ಮಾತ್ರವಲ್ಲ ಟೀಕೆ ಟಿಪ್ಪಣಿ ಅಥವ ವಿಮರ್ಶೆ ಮಾಡುವವರನ್ನೂ ಏಕ್ದಂ ತೆಪ್ಪಗಾಗುವಂತೆ ಮಾಡುತ್ತವೆ. ಅದೇನೇ ಇರಲಿ ಕನ್ನಡ ಸಾರಸ್ವತ ಲೋಕದ ಪ್ರತಿಷ್ಠಿತ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇಂಥದ್ದೊಂದು “ಕ್ರಾಂತಿಕಾರಕ ಸಂಪುಟ” ಲೋಕಾರ್ಪಣೆ ಆಗಿರುವುದು ಕನ್ನಡಿಗರು ಮಾತ್ರವಲ್ಲ ಇಡೀ ರಾಜ್ಯ-ದೇಶ-ಪ್ರಪಂಚದ ಪತ್ರಕರ್ತರೆಲ್ಲ ಹೆಮ್ಮೆ ಪಡುವಂತದ್ದು ಎಂದು ಧಾರಾಳವಾಗಿ ಹೇಳಬಹುದು!

– ಕುಮಾರಕವಿ ಬಿ.ಎನ್.ನಟರಾಜ್

ಮಾನಸಗಂಗೋತ್ರಿ, ಮೈಸೂರು-6, 15.6.1998

ಅವಲೋಕನ ಕುರಿತ ಹೆಚ್ಚಿನ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

admin
the authoradmin

1 Comment

  • Extraordinary exceptional review criticize from Kumarakavi B.N.NATARAJ about book written by LEGENDARY PERSON LATE V.H.GOWDA. I am impressed by all contents. I feel 👏
    CHANDRASHEKAR ARADHYA, JAYANAGARA BENGALURU

Leave a Reply