ಮಡಿಕೇರಿ ಸುತ್ತಮುತ್ತ “ಮೋನಿ ಎಸ್ಟೇಟ್” ಚಿತ್ರೀಕರಣ… ಶ್ರೀವೀರಭದ್ರೇಶ್ವರ ದೇಗುಲದಲ್ಲಿ ಮುಹೂರ್ತ..

ಮಡಿಕೇರಿ: ಮೋನಿನ ಸಿನಿ ಕ್ರಿಯೇಶನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಮೋನಿ ಎಸ್ಟೇಟ್” ಕನ್ನಡ ಚಲನಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಕಣ್ಣಳ್ಳಿಯ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಮುಹೂರ್ತದೊಂದಿಗೆ ಆರಂಭಿಸಿ ಮಡಿಕೇರಿ ಸುತ್ತಮುತ್ತ ಮತ್ತು ಭಗವತಿ ಕಾರ್ಟೇಜ್ನಲ್ಲಿ ಹಲವರು ದೃಶ್ಯಗಳನ್ನು ಚಿತ್ರೀಕರಿಸಲಾಯಿತು.

ಚಿತ್ರದ ನಿರ್ಮಾಣ ಮತ್ತು ನಿರ್ವಹಣೆಯನ್ನು “ಮೋಹನ್ ಬಿ” ಸಹನಿರ್ಮಾಪಕರಾಗಿ ಸಂಜು ಶ್ರೀ ಮಹಾದೇವ್ ವಹಿಸಿಕೊಂಡಿದ್ದು ಮೊದಲ ಬಾರಿಗೆ ನಾಯಕರಾಗಿ ಬಣ್ಣ ಹಚ್ಚುತ್ತಿದ್ದಾರೆ. ಕಲಾವಿದರಾಗಿ ನಾಯಕ ನಟ ಮೋಹನ್, ನಾಯಕಿಯಾಗಿ ಸ್ನೇಹ ಜಾದವ್, ಹರೀಶ್ ಎ ವಿ, ಮೇಘನಾ, ಷಣ್ಮುಖ ವೈಭವಿ, ರಾಗನ, ರಾಮನ್ ಮೈಸೂರು, ಅಜಯ್ ರಾಯಚೂರ್, ಲಕ್ಷ್ಮಿ, ಬಸು ಆಚಾರ್ಯ, ನಾನ್ ಸಿಂಕ್ ಬಸು, ಚಂದ್ರಪ್ರಭ, ಗೋವಿಂದ್ ಗೌಡ ಮೊದಲಾದ ಕಲಾವಿದರು ಅಭಿನಯಿಸುತ್ತಿದ್ದಾರೆ.
ತಾಂತ್ರಿಕ ವರ್ಗದಲ್ಲಿ ರಘು ರೂಗಿ (ಹುಬ್ಬಳ್ಳಿ) ಛಾಯಾಗ್ರಹಣ- ಕಥೆ-ಚಿತ್ರಕಥೆ-ಸಾಹಿತ್ಯದ ಜೊತೆಗೆ ನಿರ್ದೇಶನವನ್ನು ಮಾಡುತ್ತಿದ್ದಾರೆ. ಸಾಹಿತ್ಯ ನಿರಂತರ ವೀರಂತ್ ಕೆರೂರ, ಎಟಿ ರವೀಶ್ ಪ್ರೊಡಕ್ಷನ್ ಬಾಂಧ್ಶ್ (ಗದಗ್), ಎನ್ ಬಿ ನಾಗೇಶ್ (ಗದಗ್), ಸಂಗೀತ ಏ ಟಿ ರವೀಶ್, ಸಂಕಲನ ಕೃಷ್ಣ ಎಂ ಚೆನಕೆರೆ, ಸ್ಥಿರಚಿತ್ರಣ ಅಜೆಯ್ ಲಿಂಗಸೂರ, ಸಾಗರ್ ಲಿಂಗಸೂರ, ಡ್ರೋನ್ ಆಪರೇಟ್ ರಂಜಿತ್ ಲಿಂಗಸೂರ.

ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಕಲಾವಿಭಾಗದಲ್ಲಿ ಫ್ರೆಂಡ್ಶಿಪ್ ವೆಂಕಟೇಶ್ ಯಾದವ್, ನಿರ್ದೇಶನ ತಂಡದಲ್ಲಿ ಭರತ್ ಕುಮಾರ್ ಎಂ, ಶ್ರೀಧರ್ ಡಿ ನಡುಗೇರಿ, ವಿನಯ್ ಡಿಯರ್, ಶಾಂತಕುಮಾರ್, ವೆಂಕಟೇಶ್ ಯಾದವ್, ವೇದ ವಜ್ರಮುನಿ, ನಿರ್ಮಾಣ ಮೋಹನ್, ಸಹ ನಿರ್ಮಾಪಕರು ಸಂಜು ಶ್ರೀ ಮಹಾದೇವ್, ಧನರಾಜ್ ಕೆಆರ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.








