LatestMysore

ಹೆಬ್ಬಾಳು ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಎಚ್ ಕೆ ಧನಂಜಯ್ ಅವಿರೋಧವಾಗಿ ಆಯ್ಕೆ

ಕೆ.ಆರ್ ನಗರ(ಜಿಟೆಕ್ ಶಂಕರ್): ಹೆಬ್ಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್ ಕೆ ಧನಂಜಯ್ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಹೆಚ್ ಕೆ  ಧನಂಜಯ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವರ ಅವಿರೋಧ ಆಯ್ಕೆಯನ್ನು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಇಲಾಖೆಯ ನಿರೀಕ್ಷಕರಾದ ಭಾಗೀರಥಿ ಅವರು ಆಯ್ಕೆ ಪ್ರಕಟಿಸಿದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಹೆಚ್ ಹೆಚ್ ನಾಗೇಂದ್ರರವರ ವಿರುದ್ದ ಅವಿಶ್ವಾಸ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದರು.   ಖಾಲಿ ಉಳಿದಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು ಚುನಾವಣಾ ಸಭೆಯಲ್ಲಿ  ಮಾಜಿ ಅಧ್ಯಕ್ಷ ಹೆಚ್ ಹೆಚ್ ನಾಗೇಂದ್ರ, ಎನ್‌ಪಿ ಪ್ರಸನ್ನ ಹೊರತುಪಡಿಸಿ ಉಳಿದೆಲ್ಲ ನಿರ್ದೇಶಕರು  ಹಾಜರಿದ್ದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರವಿ, ನಿರ್ದೇಶಕರಾದ ಹೆಚ್ಆರ್ ಬಾಲಕೃಷ್ಣ, ಸಿ ಆರ್ ಶಿವಪ್ರಕಾಶ್, ರಾಮಚಂದ್ರ ನಾಯಕ, ಎಚ್ ಕೆ ಮಂಜುನಾಥ್, ಎಚ್ಎಸ್ ರವಿಕುಮಾರ್,  ಸಿಎಂ ರಾಜೇಶ್, ಶಶಿಕಲಾ, ರೂಪ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹೆಚ್ ಕೆ ಧನಂಜಯ್ ಮಾತನಾಡಿ  ನನ್ನ ಮೇಲೆ ವಿಶ್ವಾಸ ಇಟ್ಟು ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ ಎಲ್ಲಾ ಆಡಳಿತ ಮಂಡಳಿಯ ನಿರ್ದೇಶಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ನನಗೆ ಪರೋಕ್ಷವಾಗಿ ಸಹಕಾರ ನೀಡಿದ ಮಾಜಿ ಸಚಿವ ಸಾ ರಾ ಮಹೇಶ್ ಮತ್ತು  ಜೆಡಿಎಸ್ ಮುಖಂಡರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನನ್ನ ಆಡಳಿತ ಅವಧಿಯಲ್ಲಿ ಯಾವುದೇ ತಾರತಮ್ಯ ಪಕ್ಷಭೇದ ಮಾಡದೆ ಎಲ್ಲಾ ನಿರ್ದೇಶಕರನ್ನು ಒಟ್ಟುಗೂಡಿಸಿಕೊಂಡು ರೈತ ಸಹಕಾರ ಸಂಘವನ್ನು ಅಭಿವೃದ್ಧಿಪಡಿಸುವುದರ ಜತೆಗೆ ಸಕಾಲದಲ್ಲಿ ರೈತರಿಗೆ ಸಾಲ  ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಅಧ್ಯಕ್ಷರ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಜೆಡಿಎಸ್ ಮುಖಂಡರಾದ ಹೆಬ್ಬಾಳ್ ಸುಜಯ್ ಕುಮಾರ್. ಜಿ ದಾಮೋದರ್. ಪರಶುರಾಮ್. ಮಂಚನಹಳ್ಳಿ ರಾಘು. ದೀಪಕ್. ರಮೇಶ್. ದಿನೇಶ್. ದೊರೆ. ಅರವಿಂದ. ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.

admin
the authoradmin

Leave a Reply