DasaraLatest

ಮೈಸೂರು ದಸರಾ ಸುಸೂತ್ರವಾಗಿ ನಡೆಸಲು 19 ಉಪಸಮಿತಿ ರಚನೆ… ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ?

ದಿನಗಳು ಕಳೆಯುತ್ತಿವೆ ಇನ್ನೇನು ನೋಡು ನೋಡುತ್ತಿದ್ದಂತಿಯೇ ದಸರಾ ಹತ್ತಿರ ಬರುತ್ತಿದೆ. ಹೀಗಾಗಿ ಸಿದ್ಧತೆಗಳು ಆರಂಭವಾಗಿವೆ. ಒಂದೆಡೆ ಗಜಪಯಣಕ್ಕೆ ಅರ್ಹವಾದ ಆನೆಗಳ ತಲಾಷೆ ನಡೆಯುತ್ತಿದೆ. ಆನೆಗಳ ಆಯ್ಕೆ ಪ್ರಕ್ರಿಯೆ ಬಳಿಕ ಗಜಪಯಣದೊಂದಿಗೆ ಮೈಸೂರು ನಗರವನ್ನು ಗಜಪಡೆ ಪ್ರವೇಶಿಸಲಿವೆ. ನಂತರ ಮೈಸೂರಿಗೆ ದಸರಾ ಕಳೆ ಬರಲಿದೆ… ಇದೆಲ್ಲದರ ನಡುವೆ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದ್ದು, ಕಾರ್ಯಕ್ರಮಗಳನ್ನು ವೈಭವಯುತವಾಗಿ ಆಯೋಜಿಸಲು 19 ಉಪ ಸಮಿತಿಗಳನ್ನು ಜಿಲ್ಲಾಡಳಿತ ರಚಿಸಿದೆ.

ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಉಪ ಸಮಿತಿಗಳನ್ನು ರಚಿಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಉಪ ವಿಶೇಷಾಧಿಕಾರಿ, ಕಾರ್ಯಾಧ್ಯಕ್ಷ ಹಾಗೂ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

ಸ್ವಾಗತ ಆಮಂತ್ರಣ ಮತ್ತು ಸ್ಥಳಾವಕಾಶ: ಎಡಿಸಿ ಪಿ.ಶಿವರಾಜು, ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪಾ, ಕಾರ್ಯಪಾಲಕ ಅಭಿಯಂತರ ಮಹಾನಗರ ಪಾಲಿಕೆಯ ಮಧುಸೂಧನ್, ಕಾರ್ಯಾಧ್ಯಕ್ಷ ಅಧೀಕ್ಷಕ ಅಭಿಯಂತರೆ ಸಿಂಧು. ಸ್ಥಳಾವಕಾಶ: ಮೈಸೂರು ಉಪ ವಿಭಾಗಾಧಿಕಾರಿ ರಕ್ಷಿತ್.ಕೆ.ಆರ್., ಮೈಸೂರು ತಾಲ್ಲೂಕು ತಹಸೀಲ್ದಾರ್ ಮಹೇಶ್ ಕುಮಾರ್. ಮೆರವಣಿಗೆ: ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಆರ್.ಎನ್.ಬಿಂದುಮಣಿ, ಎಸಿಪಿ ಕೆ.ರಾಜೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ (ಸಮನ್ವಯಾಧಿಕಾರಿ).

ಪಂಜಿನ ಕವಾಯತು: ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಕೆ.ಎಸ್.ಸುಂದರ್ ರಾಜ್, ಎಸಿಪಿ ಸಿ.ಕೆ.ಅಶ್ವತ್ಥ ನಾರಾಯಣ್, ಸಿಎಆರ್ ಡಿಸಿಪಿ ಸಿದ್ದಣ್ಣ ಗೌಡ ಪಾಟೀಲ್, ಕೆಪಿಟಿಸಿಎಲ್, ಕಾರ್ಯಪಾಲಕ ಇಂಜಿನಿಯರ್ ಪೂರ್ಣಚಂದ್ರತೇಜಶ್ವಿ. ಸ್ತಬ್ಧಚಿತ್ರ: ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ (ಪ್ರಭಾರ) ಪ್ರಭುಸ್ವಾಮಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಇಇ ರಂಜಿತ್‌ಕುಮಾರ್, ವಲಯ ಆಯುಕ್ತ ಸತ್ಯಮೂರ್ತಿ, ದೀಪಕ್(ಕಾರ್ಯಧ್ಯಕ್ಷ), ಸಹಾಯಕ ಕಾರ್ಯಪಾಲಕ ಅಭಿಯಂತರ ಮೃತ್ಯುಂಜಯ.

ರೈತದಸರಾ (ಗ್ರಾಮೀಣ ದಸರಾ): ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಂರಾಜು, ಜಂಟಿ ಕೃಷಿ ನಿರ್ದೇಶಕ ಎಚ್.ವಿ.ರವಿ, (ಕಾರ್ಯಾಧ್ಯಕ್ಷ), ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್(ಸಹಕಾರ್ಯಾಧ್ಯಕ್ಷ) ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ನಾಗರಾಜ (ಕಾರ್ಯದರ್ಶಿ). ಕ್ರೀಡಾ ದಸರಾ: ಮೈಸೂರು ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಕೆ.ಜಾನಸನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಡಾ ಜಿತೇಂದ್ರ ಶೆಟ್ಟಿ, ಸಹಾಯಕ ನಿರ್ದೇಶಕ ಯುವ ಜನ ಸೇವಾಕ್ರೀಡಾ ಇಲಾಖೆಭಾಸ್ಕರ್ ನಾಯಕ್.

ಸಾಂಸ್ಕ ತಿಕ ದಸರಾ: ಅರಮನೆ ವೇದಿಕೆಗೆ ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮರ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್. ಇತರ ವೇದಿಕೆಗೆ ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್, (ಕಾರ್ಯಾಧ್ಯಕ್ಷ). ಲಲಿತ ಕಲೆ: ಪ್ರಾಚ್ಯವಸ್ತು ಸಂಗ್ರಹಾಲಯದ ಆಯುಕ್ತ ದೇವರಾಜು.ಎ, ಕಾವಾದ ರೀಡರ್ ಬಿಂದುರಾಯ ಆರ್.ಬಿರಾದಾರ್, ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ಎಚ್.ಬಿ.ಜಯಶಂಕರ್. ದೀಪಾಲಂಕಾರ: ಸೆಸ್ಕ್ ಎಂ.ಡಿ.ಮುನಿಗೋಪಾಲ್ ರಾಜು, ಅದಿಧೀಕ್ಷಕ ಇಂಜಿನಿಯರ್ ಸುನೀಲ್, ಕಾರ್ಯಪಾಲಕ ಇಂಜಿನಿಯರ್ ಅನಿತಾ. ಕವಿಗೋಷ್ಠಿ: ಮೈಸೂರು ನಗರ ಪಾಲಿಕೆ ಕಂದಾಯ ಉಪಯುಕ್ತ ಜಿ.ಸೋಮಶೇಖರ್,ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಎನ್.ಕೆ. ಲೋಲಾಕ್ಷಿ, ನಗರ ಪಾಲಿಕೆ ಅಭಿವೃದ್ದಿ ಅಧಿಕಾರಿ ಚೇತನ್ ಬಾಬು, ಯೋಗ ದಸರಾ: ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕಿ ರಮ್ಯಾ, ಜಿಲ್ಲಾ ಆಯುಷ್ ಅಧಿಕಾರಿ ಡಾ ರೇಣುಕಾ ದೇವಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿಲ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ನಿರುಪಮಾ

ಯುವ ಸಂಭ್ರಮ: ಎಸ್ಪಿ ಎನ್.ವಿಷ್ಣುವರ್ಧನ, ಉಪವಿಭಾಗಾಧಿಕಾರಿ ಆಶಪ್ಪ, ಮೈಸೂರು ವಿಶ್ವವಿದ್ಯಾನಿಲಯ ಕಾರ್ಯಪಾಲಕ ಇಂಜಿನಿಯರ್ ಅಶ್ವಥ ಪ್ರಸಾದ್, (ಸಹ ಕಾರ್ಯಾಧ್ಯಕ್ಷ) ನಂಜನಗೂಡು ತಹಸೀಲ್ದಾರ್ ಶಿವಕುಮಾರ್ ಕಾಸನೂರು (ಸಹಕಾರ್ಯದರ್ಶಿ), ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕುಮಾರ್, ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಪಕ ಡಾ.ಆರ್.ನಿಂಗರಾಜು. ಯುವ ದಸರಾ: ಎಸ್ಪಿ ಎನ್. ವಿಷ್ಣುವರ್ಧನ, ಉಪ ವಿಭಾಗಾಧಿಕಾರಿ ರಕ್ಷಿತ್ ಕೆ.ಆರ್., ಎಂಡಿಎ ವಿಶೇಷ ಭೂಸ್ವಾಧಿನಾಧಿಕಾರಿ ಮಂಜುನಾಥ್, ಪಿರಿಯಾಪಟ್ಟಣ ತಹಸೀಲ್ದಾರ್ ನಿಸರ್ಗಪ್ರಿಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರುಣ್.

ಮಹಿಳಾ ಮತ್ತು ಮಕ್ಕಳ ದಸರಾ: ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸವಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಬಸವರಾಜು (ಕಾರ್ಯಾಧ್ಯಕ್ಷ), ಡಿಡಿಪಿಐ ಎಸ್.ಟಿ.ಜವರೇಗೌಡ. ಆಹಾರ ಮೇಳ: ಪೌರಾಯುಕ್ತ ನಗರಸಭೆ ಚಂದ್ರಶೇಖರ್, ಮೈಸೂರು ಅಭಿವೃದ್ದಿ ಪ್ರಾಧಿಕಾರ ಕಾರ್ಯಪಾಲಕ ಇಂಜಿನಿಯರ್ ಮಹೇಶ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ. ಸ್ವಚ್ಚತೆ ಮತ್ತು ವ್ಯವಸ್ಥೆ: ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸೀಫ್, ಉಪ ಆಯುಕ್ತ ಡಾ.ಎಂ.ದಾಸೇಗೌಡ ಹಾಗೂ ಮುಖ್ಯ ಆರೋಗ್ಯಾಧಿಕಾರಿ ಡಾ.ವೆಂಕಟೇಶ್.

ಚಲನಚಿತ್ರ: ಹುಣಸೂರು ಉಪವಿಭಾಗಾಧಿಕಾರಿ ವಿಜಯ್ ಕುಮಾರ್, ಕಾರ್ಯಪಾಲಕ ಅಭಿಯಂತರ ತಿಪ್ಪಾರೆಡ್ಡಿ, ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೆಶಕ ಟಿ.ಕೆ.ಹರೀಶ್. ಕುಸ್ತಿ: ಅಪರ ಪೊಲೀಸ್ ಅಽಕ್ಷಕ ಎಲ್ ನಾಗೇಶ್,ಕಬಿನಿ ಜಲಾಶಯ ಯೋಜನೆ ಅಽಕ್ಷಕ ಅಭಿಯಂತರ ಮಹೇಶ್, ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ರಘು. ಗಜಪಯಣ: ಸಿಎಫ್ ಮಾಲತಿಪ್ರಿಯಾ, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಐ.ಬಿ., ವನ್ಯಜೀವಿ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಸೈಯದ್ ನದೀಮ್, ಪಿರಿಯಾಪಟ್ಟಣ ಪಿ.ಆರ್.ಇ.ಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಮಲ್ಲಿಕಾರ್ಜುನ.

ಇನ್ನೊಂದೆಡೆ ದಸರಾ ಸಮಯದಲ್ಲಿ ಏರ್ ಶೋ ನಡೆಸಲು ಈಗಾಗಲೇ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಅನುಮತಿಯನ್ನು ಸರ್ಕಾರ ಕೇಳಿದೆ. ಕೇಂದ್ರ ಅನುಮತಿ ನೀಡಿದರೆ ಈ ಬಾರಿಯ ದಸರಾದಲ್ಲಿ ಲೋಹದ ಹಕ್ಕಿಗಳು ಮೈಸೂರಿನ ಬಾನಿನಲ್ಲಿ ಚಿತ್ತಾರ ನಡೆಸಲಿವೆ.

admin
the authoradmin

Leave a Reply

Translate to any language you want