LatestMysore

ಮೈಸೂರಿನ ‌ಅಧ್ಯಯನ ಶಾಲೆಯಲ್ಲಿ ರಾಜ್ಯೋತ್ಸವ ಆಚರಣೆ… ಮೊಳಗಿದ ಕನ್ನಡ ಡಿಂಡಿಮ…

ಮೈಸೂರು: ಮೈಸೂರಿನ ‌ಅಧ್ಯಯನ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಬಸವರಾಜು ಮತ್ತಿತರ ಗಣ್ಯರು ರಾಷ್ಟ್ರಧ್ವಜಾರೋಹಣ, ನಾಡ ಧ್ವಜಾರೋಹಣ  ನೆರವೇರಿಸಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಕರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಕೆಆರ್  ಬ್ಯಾಂಕ್ ಅಧ್ಯಕ್ಷರಾದ ಬಸವರಾಜು ಅವರು, ಕನ್ನಡ ರಾಜ್ಯೋತ್ಸವದ ಕುರಿತು ಮಾತನಾಡಿ ಮಕ್ಕಳಿಗೆ ಶುಭ ಕೋರಿದರು.

ಮಿಸ್ಸೆಸ್ ಇಂಡಿಯಾ‌ ರನ್ನರ್ ಅಪ್ ಖುಷಿ ವಿನು ಅವರು ಕನ್ನಡ ಎಲ್ಲಾ ಕಡೆ ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯಲಿ, ಕನ್ನಡ ಇತಿಹಾಸ ಪುಟಗಳಲ್ಲಿ ಸೇರುವಂತೆ ಮಾಡಬೇಕು ಎಂದು ಕರೆ ನೀಡಿದರು.

ಶಾಲೆಯ ಕಾರ್ಯದರ್ಶಿ ಎಂ ಪಾರ್ವತಿ ದೇವಿ ಅವರು ಕನ್ನಡ ಕಲಿಸಿ, ಕನ್ನಡ ಮಾತನಾಡೋಣ ಕನ್ನಡವನ್ನು ಬೆಳೆಸೋಣ ಕನ್ನಡ ನಾಡಿನಲ್ಲಿ ಹುಟ್ಟಿರುವುದು ಹೆಮ್ಮೆ ಎಂದು ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಹೆಚ್.ಎಂ. ಪುಟ್ಟಸ್ವಾಮಿಗೌಡರು ಕನ್ನಡವನ್ನು ಕಡ್ಡಾಯವಾಗಿ ಮಾತನಾಡೋಣ ಎಂದು ಹೇಳಿ, ಕನ್ನಡ ನಾಡಿನ ಮತ್ತು ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿಕೊಟ್ಟರು.  ಆನಂದ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಶುಭ ಕೋರಿದರು .

ಈ ಸಂದರ್ಭದಲ್ಲಿ ಮಕ್ಕಳಿಗೆ ವೇಷಭೂಷಣ, ಚಿತ್ರಕಲಾ, ಪ್ರಬಂಧ ಸ್ಪರ್ಧೆ ಆಯೋಜಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

admin
the authoradmin

Leave a Reply

Translate to any language you want