LatestMysore

‘ಕೈ’ಗೆ ದಕ್ಕಿದ ಸರಗೂರು ಪ.ಪಂ ಆಡಳಿತ… ಅಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯೆ ಚೈತ್ರಾಸ್ವಾಮಿ ಅವಿರೋಧ ಆಯ್ಕೆ

ಸರಗೂರು: ಮೈಸೂರು ಜಿಲ್ಲೆಯ ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಎರಡನೇ ವಾರ್ಡ್ ಸದಸ್ಯೆ ಚೈತ್ರಾಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ಹಿಂದೆ ಅಧ್ಯಕ್ಷರಾಗಿದ್ದ ರಾಧಿಕಾ ಶ್ರೀನಾಥ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚೈತ್ರಾ ಸ್ವಾಮಿ ಒಬ್ಬರೇ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಸಂಬಂಧ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಮೋಹನಕುಮಾರಿರವರು ಒಂದೇ ನಾಮಪತ್ರ ಇರುವುದರಿಂದ ಇವರನ್ನು ಅಧ್ಯಕ್ಷರಾಗಿದ್ದಾರೆ ಎಂದು ಘೋಷಿಸಿದರು.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶ್ರೀನಿವಾಸ್, ಚೆಲುವ ಕೃಷ್ಣ, ಚಂದ್ರಕಲಾ ರಾಜಣ್ಣ, ಪಕ್ಷೇತರ ಅಭ್ಯರ್ಥಿ (ಕಾಂಗ್ರೆಸ್ ಬೆಂಬಲಿತ) ಹೇಮಾವತಿ ರಮೇಶ್, ಜೆಡಿಎಸ್ ನ ಸಣ್ಣತಾಯಮ್ಮ ಚುನಾವಣೆ ಪ್ರಕ್ರಿಯೆ ವೇಳೆ ಉಪಸ್ಥಿತರಿದ್ದರು. ಬಿಜೆಪಿಯಿಂದ ಆಯ್ಕೆಯಾಗಿರುವ ಆರು ಮಂದಿ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. ಚೈತ್ರಾ ಸ್ವಾಮಿ ಅವರು ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದು ಇತ್ತೀಚೆಗೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾಗಿದ್ದರು.

ಪಟ್ಟಣ ಪಂಚಾಯತಿಯಲ್ಲಿ 12 ಮಂದಿ ಸದಸ್ಯರಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 4, ಜೆಡಿಎಸ್ 1, ಪಕ್ಷೇತರ 1 ಸೇರಿ ಒಟ್ಟು 6 ಮಂದಿ ಬೆಂಬಲದಿಂದ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಬಿಜೆಪಿ ಪಟ್ಟಣ ಪಂಚಾಯಿತಿಯಲ್ಲಿ 49 ತಿಂಗಳು ಅಧಿಕಾರ ನಡೆಸಿತ್ತು. ಉಳಿದ 11 ತಿಂಗಳು ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಲಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಸ್ವಾಮಿ ಮತ್ತು ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ ಮಾತನಾಡಿ, ಸಂಸದ ಸುನಿಲ್ ಭೋಸ್ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಅವರ ಸಹಕಾರ ಪಡೆದು ಪಟ್ಟಣ ಅಭಿವೃದ್ಧಿ ಮಾಡುತ್ತೇವೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಅಭಿವೃದ್ಧಿ ಪಡಿಸಲು ಸಹಕಾರಿ ಆಗುತ್ತದೆ ಎಂದರು.

ಇದನ್ನು ಓದಿ: ಮೈಸೂರಿಂದ ಸರಗೂರಿಗೆ ಕೆಎಸ್ ಆರ್ ಟಿಸಿ ಬಸ್ ಸೇವೆ ಕಡಿತ.. ಕೇಳೋರಿಲ್ಲ ಪ್ರಯಾಣಿಕರ ಗೋಳು..

ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆಯಾಗಿ ಚೈತ್ರಾಸ್ವಾಮಿ ಅವಿರೋಧವಾಗಿ ಆಯ್ಕೆಯಾದ ಇವರನ್ನು ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಸನ್ಮಾನಿಸಿದರು. ಚುನಾವಣಾಧಿಕಾರಿ ತಹಶೀಲ್ದಾರ್ ಮೋಹನಕುಮಾರಿ, ಉಪ ತಹಶೀಲ್ದಾರ್ ಸುನಿಲ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಕೆ ಸಂತೋಷ್ ಕುಮಾರ್ ಚುನಾವಣೆ ಪ್ರಕ್ರಿಯೆಯನ್ನು ಕಛೇರಿಯ ಆವರಣದಲ್ಲಿ ನಡೆಸಿಕೊಟ್ಟರು.

ಕಾಂಗ್ರೆಸ್ ಮುಖಂಡರುಗಳು, ಹಾಗೂ ಕಾರ್ಯಕರ್ತರು ಪಟ್ಟಣ ಪಂಚಾಯತಿ ಮುಂಭಾಗ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಸರಗೂರು ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಎಸ್.ಎನ್. ನಾಗರಾಜು, ಬ್ಲಾಕ್ ಅಧ್ಯಕ್ಷರಾದ ಮನುಗನಹಳ್ಳಿ ಮಾದಪ್ಪ, ಏಜಾಜ್ ಪಾಷಾ, ಮೈಮುಲ್ ಅಧ್ಯಕ್ಷ ಕೆ ಈರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ. ರವಿ, ಗ್ಯಾರಂಟಿ ಸಮಿತಿ ತಾಲ್ಲೂಕಿನ ಅಧ್ಯಕ್ಷರಾದ ಚೆಲುವರಾಜು, ಚಾಮರಾಜು, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ಮಂಜುನಾಥ್,ಕಂದೇಗಾಲ    ವಕೀಲ ಶಿವರಾಜ್, ಮುಖಂಡ ಶಂಭುಲಿಂಗನಾಯಕ, ಡಿ.ಸಿ.ಸಿ ಸದಸ್ಯ ಕೋಟೆ ಪರಶಿವಮೂರ್ತಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರನ್, ಗ್ರಾಮ ಪಂಚಾಯಿತಿ ಸದಸ್ಯ ಕುರಣೆಗಾಲ ಬೆಟ್ಟಸ್ವಾಮಿ, ಗುತ್ತಿಗೆದಾರ ಎಸ್ ಎಸ್ ಬಸವರಾಜು, ರಮೇಶ್, ಮಹೇಶ್ ಆರ್ಯ, ರಂಗನಾಥ್, ರವಿಕುಮಾರ್

ಎಸ್.ಎನ್ ನಾಗರಾಜು, ಮಂಜುನಾಥ್, ಬಿಲ್ಲಯ್ಯ, ಹೆಚ್.ಡಿ. ಕೋಟೆ ಪುರಸಭಾ ಮಾಜಿ ಸದಸ್ಯ ಮಧು, ಚಾಮರಾಜು, ಚಿನ್ನಯ್ಯ, ಸೋಮಣ್ಣ, ತ್ರಿಶಂಬು, ವಕ್ ಬೋರ್ಡ್ ಸುಭಾನ್, ಪ್ರಭಾಕರ್, ಮುಳ್ಳೂರು ಮಂಜು, ಕಳಸೂರು ಬಸವರಾಜು,ರವಿಗೌಡ, ಮಹೇಶ್, ನವೀನ್, ಸೂಹೆಲ್,ಯಾಸಿನ್, ಆಯೂಬ್, ಜಲೀಲ್, ಸರ್ಪುದ್ದೀನ್, ಮಫಿಉಲ್ಲಾ,ಗೋಪಾಲ್ ಹಾಗೂ ಇನ್ನಿತರ ಕಾರ್ಯ ಕರ್ತರು ಹೆಚ್ಚಿನ ಸಂಖ್ಯೆಯಲ್ಲಿ  ಹಾಜರಿದ್ದರು.

ಸರಗೂರಿನ ಆರಕ್ಷಕ ವೃತ್ತ ನೀರೀಕ್ಷಕ ಪ್ರಸನ್ನ ಕುಮಾರ್, ಆರಕ್ಷಕ ಉಪ ನೀರಿಕ್ಷಕರಾದ ಕಿರಣ್, ಗೋಪಾಲ್ ಸಿಬ್ಬಂದಿಗಳಾದ ಇಮ್ರಾನ್, ಆನಂದ್,ಜಗದೀಶ್, ಚಂದ್ರು, ಶೋಭಾ ಇನ್ನಿತರರಿದ್ದು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವ ಮೂಲಕ ಆಯ್ಕೆ ಪ್ರಕ್ರಿಯೆ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು.

admin
the authoradmin

Leave a Reply

Translate to any language you want