Life style

ಮನುಷ್ಯನ ನಾಲ್ಕು ಹಂತದ ಬದುಕು ಆ ನಾಲ್ಕು ಪ್ರಾಣಿಗಳಂತೆಯೇ… ಯಾವುದು ಆ ಪ್ರಾಣಿಗಳು?

ಬುದ್ಧಿವಂತ ಮತ್ತು ಚಿಂತನಾಶೀಲನಾಗಿರುವ ಮನುಷ್ಯ ತನ್ನ ಬದುಕಿನುದ್ದಕ್ಕೂ ಆ ನಾಲ್ಕು ಪ್ರಾಣಿಗಳ ಸಾಮ್ಯತೆ ಅಥವಾ ಆ ಪ್ರಾಣಿಗಳ ಹೆಸರಿನಲ್ಲಿ  ಬೈಯ್ಯಿಸಿಕೊಳ್ಳುವುದಾಗಿರಬಹುದು…  ಹೀಗೆ ಆ ಪ್ರಾಣಿಗಳಾಚೆಗೆ ಬೇರೆ ಪ್ರಾಣಿಗಳು ಬದುಕಿಗೆ ಇಷ್ಟೊಂದು ಹತ್ತಿರವಿಲ್ಲವೇನೋ..? ಹಾಗಾದರೆ ಆ ನಾಲ್ಕು ಪ್ರಾಣಿಗಳು ಯಾವುದು ಮತ್ತು ಮನುಷ್ಯನ ಬದುಕಿನಲ್ಲಿ ಅವುಗಳ ಸಂಗಮ ಏಕೆ? ಈ  ಎಲ್ಲ ಪ್ರಶ್ನೆಗಳಿಗೂ ಈ ಲೇಖನ ಉತ್ತರ ಹೇಳಲಿದೆ.. ಚಿಂತನಶೀಲ ಪ್ರಾಣಿ ಎನಿಸಿದ ಮನುಷ್ಯನು 4 ಬೇರೆ, ಬೇರೆ ಪ್ರಾಣಿಗಳ ಒಂದು ಸಂಗಮ. ಇಂಥ ಸಹಜಕ್ರಿಯೆ ಸತ್ಯದ ಪರಿಚಯವೇ ಈ ಲೇಖನ ಎನ್ನುತ್ತಾರೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್….

ಪಂಚ ಭೂತಗಳಿಂದಾದ ಮಾನವನು ವೈಯಕ್ತಿಕ ಶರೀರ ಮತ್ತು ಹೆಸರಿನಿಂದ ಪರಿಚಯಿಸಿಕೊಂಡು ತನ್ನ ಗುಣ ಸ್ವಭಾವ ವರ್ತನೆ ಹಾಗೂ ಕಾರ್ಯಗಳಿಂದ ಒಳ್ಳೆಯವ ಅಥವ ಕೆಟ್ಟವ ಎಂದು ಗುರ್ತಿಸಲ್ಪಡುತ್ತಾನೆ. ಶ್ರೀಸಾಮಾನ್ಯ, ಮಹಾಪುರುಷ, ಪವಾಡಪುರುಷ, ಪಂಡಿತ, ಪಾಮರ, ಮಹಾರಾಜ, ಚಕ್ರವರ್ತಿ, ಸೇನಾಪತಿ ಕುಲಪತಿ ಮಠಪೀಠಾಧಿಪತಿ ಕವಿ ರಾಷ್ಟ್ರಕವಿ ರೈತ ಯೋಧ ಮೊದಲ್ಗೊಂಡು ಯಾರೇ ಆಗಿರಲಿ ಪ್ರತಿಯೊಬ್ಬರೂ ಅವರವರ ಪೂರ್ಣ ಆಯುಷ್ಯದಲ್ಲಿ ಸಾಗಲೇಬೇಕಾದ 4 ಹಂತಗಳು ದ್ದೇ ಇರುತ್ತದೆ.

1 ಹಂದಿ 2 ಕುದುರೆ 3 ಕತ್ತೆ 4 ಗೂಬೆ ಈ ನಾಲ್ಕೂ ಪ್ರಾಣಿಗಳಂತೆ ಪ್ರತಿ ಮನುಷ್ಯಪ್ರಾಣಿ ತನ್ನ  ವಯೋಧರ್ಮಕ್ಕೆ ಅನುಗುಣವಾಗಿ ಆಯಾ ಪ್ರಾಣಿಯ ಜೀವನ ಹೊರೆಯಬೇಕಾಗುತ್ತದೆ!? ಹೇಗೆಂದರೆ…. ಸರಾಸರಿ ಹಂದಿ ಆಯುಷ್ಯ 7 ವರ್ಷ,  ಕುದುರೆ ಆಯುಷ್ಯ 18 ವರ್ಷ, ಕತ್ತೆ ಆಯುಷ್ಯ 35 ವರ್ಷ,  ಗೂಬೆ ಆಯುಷ್ಯ 40 ವರ್ಷ… ಈ ನಾಲ್ಕೂ ಪ್ರಾಣಿಗಳ ಒಟ್ಟು ಆಯುಷ್ಯ ಸೇರಿಸಿದಾಗ ಮನುಷ್ಯ ಪ್ರಾಣಿಯ 100ವರ್ಷ ಆಯುಷ್ಯಕ್ಕೆ ಸರಿಹೊಂದುತ್ತದೆ!ಆದ್ದರಿಂದ ಪ್ರತಿಯೊಬ್ಬ ಮಾನವನೂ…. ಈ ಪ್ರಾಣಿಗಳಿಗೆ ಹತ್ತಿರವಾಗಿದ್ದಾನೆ ಅದು ಹೇಗೆಂದರೆ…

ಮೊದಲ 7 ವರ್ಷಕಾಲ ಹಂದಿಜೀವನದ ಹಂತವಂತೆ… ಹೇಗೆ ಗೊತ್ತಾ? ಹುಟ್ಟಿದ ದಿನದಿಂದ ಹಲ್ಲು ಬೀಳುವವರೆಗೆ (ಕತ್ತೆ) ಹಾಲು ಕುಡಿದು ಹೆಚ್ಚು ಕಾಲ ನಿದ್ದೆ ಹೊಡೆದು ಮಲಗಿದ್ದ (ಮಗ್ಗಲ)ಲ್ಲೆ ಒಂದಾ ಎರಡಾ ಮಾಡಿಕೊಂಡು ಮಲಮೂತ್ರ ಧೂಳು ಕೆಸರು ಕಲ್ಲುಮಣ್ಣಲ್ಲಿ ಬಿದ್ದು ಒದ್ದಾಡಿ ಮೈ ಕೈ ಬಾಯ್ಗೆ ಮೆತ್ತಿಸಿಕೊಂಡು ಉಗಿ(ದು)ಸಿ ಕೊಂಡು, ಹೊಡೆ(ದು)ಸಿಕೊಂಡು, ಬೈ(ದು)ಸಿಕೊಂಡು ಕಚ್ಚಿ(ಸಿ)ಕೊಂಡು ಕಣ್ಣೀರು-ಗೊಣ್ಣೆ ಬಾಯ್ಗೆ ಬರಿಸಿಕೊಂಡು ಅಜ್ಜೀಗುಜ್ಜಿ, ಕೂಸುಮರಿ, ಅವಲಕ್ಕಿಪವಲಕ್ಕಿ, ಕಣ್ಣಾಮುಚ್ಚಾಲೆ, ಕುಂಟಾಬಿಲ್ಲೆ, ಜೂಟಾಟ, ಚೆಂಡಾಟ ಇತ್ಯಾದಿ ಆಡುತ್ತಾ..

ಪೆಪ್ಪರ್‌ಮೆಂಟ್ ಬಿಸ್ಕತ್ ಲಾಲಿಪಾಪ್ ಬೊಂಬೆ ಮಿಠಾಯಿ ಕಂಡಿ(ಸಿಕ್ಕಿ)ದ್ದೆಲ್ಲಾ ಕದ್ದುಮುಚ್ಚಿ (ಕಾಗೆ) ಎಂಜಲು ತಿನ್ನುತ್ತ; ಕೆಳಗೆಬಿದ್ದುದನ್ನು ಒರೆ(ಸಿ)ಸದೆ ತಿಂದು ಹಂದಿಯಂತೆ ಕೊಳಕು ಜೀವನ ಹೊರೀತಾನೆ! ಇಷ್ಟಾದರೂ ಅಂಬೆಗಾಲು ಮೂರು ಚಕ್ರದ ನಡೆಗಾಲಿ ಹಿಡಿದು ಅರ್ಧಪೆಡಲ್ ಸೈಕಲ್‌ಹೊಡೆದು ಕೆಳಗೆ ಬಿದ್ದುಎದ್ದು ಗಾಯಕ್ಕೆ ಮಣ್ಣು-ಎಂಜಲು ಸವರಿ ಚಿಕಿತ್ಸೆ ಮಾಡಿಕೊಂಡು, ಯಾವುದನ್ನು ತಿನ್ನ[ಬೇಕು] ಬಾರದು, ಶುದ್ಧಾಶುದ್ಧದ, ವಿಷಾಮೃತದ, ಶುಚಿರುಚಿಯ, ಪರಿವೆಯಿಲ್ಲದೆ, ಕಪಟ, ಮೋಸ, ವಂಚನೆ, ಸುಳ್ಳು, ಕಳ್ಳತನ, ಹಾದರ, ಮುಂತಾದ ಒಳ್ಳೆಯದು ಕೆಟ್ಟದ್ದು ಅರಿವಿಲ್ಲದೆ, ಕಮಲದಂಥ ಮನಸ್ಸಿನ  ಕೋಮಲ ಹೃದಯದ ಮಗುಜೀವನದ ಪವಿತ್ರ ಹಂತವಿದು!

ಎರಡನೇ ಹಂತದಲ್ಲಿ 18ವರ್ಷ ಕಾಲದ ಕುದುರೆಜೀವನ… 8ರಿಂದ 25ನೇ ಹರೆಯದ/ಮದುವೆಯಾಗೊ ವರೆಗೆ 18ವರ್ಷ ಲಗಾಮಿಲ್ಲದ ಕುದುರೆಯಂತೆ ಇರುತ್ತಾನೆ. ಪಡ್ಡೆಹುಡ್ಗ ರೇಸ್ ಕುದುರೆಯಂತೆ ಓಡ್ತಾನೆ, ಪಡ್ಡೆಹುಡ್ಗಿ ಪಟ್ಟದ ಕುದುರೆಯಂತೆ ನಡಿಗೆ ಹಾಕ್ತಾಳೆ. ಯಾವಾಗ್ಲು ಹುಡುಗಾಟ, ಚೆಲ್ಲಾಟ, ಹುಡುಗ್ ಮುಂಡೇದಕ್ಕೆ ಚೂರು ಜವಾಬ್ಧಾರಿಯಿಲ್ಲ ಮುಂತಾದ ನಾಣ್ಣುಡಿ ಇವತ್ತಿಗೂ ಅನ್ವಯ? ಹಮ್ಮು ಬಿಮ್ಮು ಉಡಾಫ಼ೆ ಹುಮ್ಮಸ್ಸು ಹೆಚ್ಚುಇದ್ದು ಯಾ[ರ]ವ ಕಾಟವು ಇಲ್ಲದ ಯಾವ ಚಿಂತೆಯು ಒಲ್ಲದ ಯುವಶಕ್ತಿ ವಯಸ್ಸು[ಯಂಗ್‌ ಏಜ್]! 3ಹೊತ್ತು ಓದು ಬರಹ ಪರೀಕ್ಷೆ ಪಾಠ ಊಟ ಆಟ ಗೋಲಿ ಬುಗುರಿ ಚಿನ್ನಿ ದಾಂಡು ಫ಼ುಟ್ಬಾಲ್ ಕ್ರಿಕೆಟ್ ಚೆಸ್ ಕೇರಮ್ ಕೋಕೋ ಮರಕೋತಿ ಕುಂಟಾಟ ಆಟೋಟ ಅಳ್ಳಿಗುಳಿಮನೆ ಚೌಕಾಬಾರ ಗಟ್ಟಾಮನೆ ಸೈಕಲ್-ಬೈಕ್-ಕಾರ್ ರೈಡ್/ರೇಸ್ ಇವುಗಳದ್ದೆ ದರ್ಬಾರ್!

ಯೂತ್ ಸ್ಟೇಜಲ್ಲಿ ಪಾಕೆಟ್‌ ಮನಿಗಾಗಿ ಏನನ್ನಾದರು ಸಾಧಿಸುವ ಯಾರನ್ನಾದರು ಎದುರಿಸುವ ಹೇಗಾ[ಎಷ್ಟಾ]ದರು ಸಂಪಾದಿಸುವ ಸುಮಾನ-ಶೋಕಿ ಹೆಚ್ಚಾಗೆ ಇರುತ್ತದೆ. ಸವಾಲ್‌ ಹಾಕುವ ಕ್ರೇಜ಼್ ಸ್ಪರ್ಧೆ ಗೆಲ್ಲುವ ಜೋಶ್ ಇದ್ದೇ ಇರುತ್ತದೆ. ವಿತಂಡ [ವಿ]ವಾದ ಡೋಂಟ್‌ ಕೇರ್ ಆದ್ರೆ ಆಯ್ತು ಹೋದ್ರೆ ಹೋಯ್ತು ರಫ್ ಯೂಸ್ ರೆಫ಼್ಯೂಸ್ ಹೆವಿ ಸ್ಪೀಡ್ ಲಸ್ಟ್ ಲವ್ ಇನ್‌ಫ಼್ಯಾಚುಯೇಶನ್ ಪ್ಯಾಶನ್ ಅಲ್ಟ್ರಾಮಾಡ್ರನ್ ಫ಼್ಯಾಶನ್ ಸ್ಟೈಲ್ ಡಿಸೈನ್  ದಿಢೀರ್‌ಸಾಧನೆ, ಇನ್‌ಸ್ಟೆಂಟ್‌ ಅಚೀವ್‌ಮೆಂಟ್ ರಾರಾಜಿಸುತ್ತದೆ!

ಫ಼ೇಲ್ಯೂರ್ ಟಾರ್ಚರ್ ಹೇಸ್ಟಿ-ಡಿಸಿಶನ್ ಜುಗುಪ್ಸೆ ಆತ್ಮಹತ್ಯೆ-ಹೇಡಿತನ ಇತರೆ ಬಿಸಿರಕ್ತದ  ಅಹಂ ಮುಂತಾದವೂ ಸಹ ಅತಿಯಾಗಿ ಅದ್ದೂರಿಯಾಗಿ ಇರುತ್ತದೆ. ಆಗಾಗ ತಾಯಿತಂದೆ  ಅಲ್ಲಲ್ಲೇ ಗುರುಹಿರಿಯರು ನೀಡುವ ಅನುಭವದ ಹಿತನುಡಿಗೆ ಮತ್ತು ಬಂಧುವರ್ಗದವರ ಮಾರ್ಗದರ್ಶನಕ್ಕೆ, ಕವಡೆಯಷ್ಟು ಕಿಮ್ಮತ್ತಿಲ್ಲದಂಥ ಉಕ್ಕುತ್ತಿರುವ ಯೌವ್ವನದ  ಈಗೋ ಯಥೇಚ್ಛ ಇರುವ ಕುದುರೆ ಜೀವನ ಹಂತ!

ಮೂರನೇ ಹಂತದಲ್ಲಿ 35 ವರ್ಷಕಾಲದ ಕತ್ತೆಜೀವನ… ಕತ್ತೆ ವಯಸ್ಸಾದ್ರು ಬುದ್ಧಿಬರಲಿಲ್ಲ, ದುಡಿಮೆಇಲ್ಲ ಸಂಪಾದನೆಇಲ್ಲ, ಮದುವೆಯೂ ಆಗಿಲ್ಲ, ಉದ್ಯೋಗಂ ಪುರುಷಲಕ್ಷಣಂ ಮುಂತಾದ ಸಹಸ್ರನಾಮ ಕೇಳಬೇಕಾಗುತ್ತದೆ. 26ರಿಂದ 60ವಯಸ್ಸಿನ(ನಿವೃತ್ತಿಯಾಗೊ) ವರೆಗೆ 35ವರ್ಷಕಾಲ ಪ್ರತಿಫ಼ಲಾಪೇಕ್ಷೆ ಇಲ್ಲದೆ ದುಡಿವ ಕತ್ತೆಯಂತೆ! ಇದಕ್ಕೇನೇ ಕತ್ತೆಯನ್ನ ಯಾರೂ ಸಾಕುವುದಿಲ್ಲ ಆದರೆ 1 ಕತ್ತೆಯು 10 ಮಂದಿಯನ್ನ ಸಾಕಬಲ್ಲದು ಎಂಬುದೇ ಸತ್ಯ!

ಸ್ವಯಂ ಸುಖಕ್ಕಾಗಿ ಅಲ್ಲದಿದ್ದರೂ ತನ್ನ ಕುಟುಂಬದ ಅಂದರೆ ಹೆಂಡ್ತಿ, ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು, ಖರ್ಚು-ವೆಚ್ಚ ಉಳಿತಾಯ-ಹಣ ಆಸ್ತಿ-ಅಂತಸ್ತು ನಗದು-ಚಿನ್ನ ಮನೆ-ಜಮೀನು ಜಾತ್ರೆ-ಜಾನುವಾರು ಮನೆ ಕಟ್ಟುವುದು ಮದುವೆ ಮಾಡುವುದು ವರದಕ್ಷಿಣೆ ವರೋಪಚಾರ ಮುಯ್ಯಿ-ದೇಣಿಗೆ ಬಸುರಿ-ಬಾಣಂತನ ನಾಮಕರಣ-ಹರಕೆ ಹಬ್ಬ ಹರಿದಿನ ದಾನಧರ್ಮ ಕರ್ಮಮರ್ಮ ಮಾನಾಭಿಮಾನ, ಮರ್ಯಾದೆ ಅವಮರ್ಯಾದೆ ಭಂಡಾಟ ಕಾದಾಟ ಶಾಂತಿ ಸಹನೆ ಮಿತ್ರ[ಶತ್ರು]ತ್ವ ದಂಡ ಶುಲ್ಕ ಸಸ್ಪೆಂಡ್ ಪ್ರಮೋಶನ್, ಟೆನ್ಶನ್ ಪೆನ್ಷನ್, ರೋಗರುಜಿನ ಕಷ್ಟನಷ್ಟ ಸಾವುನೋವು ಮುಂತಾದ ಹೊಣೆಗಾರಿಕೆ ಹೊರಲೇಬೇಕು. ಮಾಡುವ ಉದ್ಯೋಗ ಯಾವುದೆ ಇರಲಿ ಸರಿದಾರಿಯಲ್ಲಿ ಜೀವನ ಸಾಗಿಸಲು 1 ಕತ್ತೆಯಷ್ಟು ಅವಧಿವರೆಗೆ ದುಡಿಯಲೇಬೇಕು. ಆಗಮಾತ್ರ ಯಜಮಾನ ಅಥವ ಹೆಡ್‌ ಆಫ಼್‌ ದಿ ಫ಼್ಯಾಮಿಲಿ ಎಂಬ ಗೌರವ ಸಿಗಬಹುದು?!

ಕತ್ತೆಜೀವನದ ಅವಿಭಾಜ್ಯಅಂಗ ಏನೆಂದರೆ? ಸಂಸಾರ, ಗೃಹಸ್ಥ, ರೈತ, ಯೋಧ, ಅಧಿಕಾರಿ, ಪರಿಚಾರಕ, ಟೆಕ್ಕಿ, ಚಿತ್ರ್ಯೋದ್ಯಮಿ, ಪತ್ರಿಕೋದ್ಯಮಿ, ವ್ಯಾಪಾರಿ, ಕೂಲಿ, ಪುಢಾರಿ, ಅವರು ಯಾರೇ ಆಗಿರಲಿ ತಂತಮ್ಮ ಕೆಲಸದಲ್ಲಿ ಸೈ ಅನಿಸಿ[ಕೊಂಡರು]ಕೊಳ್ಳದಿದ್ದರು ಥ್ಯಾಂಕ್‌ ಲೆಸ್ ಜಾಬ್ ಸ್ಯಾಟಿಸ್‌ ಫ಼್ಯಾಕ್ಷನ್ ಇಲ್ಲ ಎಂದು ನಿರಾಶೆಗೊಂಡರೂ ನ್ಯಾಯ ಪಂಚಾಯ್ತಿ, ಪೊಲೀಸ್, ಕೋರ್ಟ್, ರಾಜಿ, ತೀರ್ಮಾನ, ಬೀಜ, ಗೊಬ್ಬರ, ಬೆಳೆ, ಸಕ್ಕರೆ ಕಾರ್ಖಾನೆ, ಲೇವಾದೇವಿ, ಬ್ಯಾಂಕ್‌ಸಾಲ, ಆತ್ಮಹತ್ಯೆ, ಬರ[ನೆರೆ] ಪರಿಹಾರ, ಪಾಲಿಟಿ[ಟ್ರಿ]ಕ್ಸ್, ಟೆರರಿಸ್ಟ್, ಸರ್ಜಿಕಲ್‌ಸ್ಟ್ರೈಕ್, ವಾರ್, ಸೀಸ್‌ಫ಼ೈರ್, ಹುತಾತ್ಮ, ಫ಼್ಲೆಕ್ಸ್‌ಬೋರ್ಡ್, ಪಾಪಪುಣ್ಯ ಮುಂತಾದ ಸಾಮಾಜಿಕ ಜವಾಬ್ಧಾರಿಯಿಂದ ತೊಡಗಿಸಿಕೊಂಡರೂ ಭೇಷ್ ಎನಿಸಿ ಕೊಳ್ಳಲು ಕತ್ತೆ ದುಡಿಮೆಯ ಕರ್ತವ್ಯವು ಮಾತ್ರ ಬಹು ಮುಖ್ಯ ಪಾತ್ರ ವಹಿಸುತ್ತದೆ.  ಕಡೆಗೊಮ್ಮೆ ಗು[ಬ್ಯಾ]ಡ್ ಬೈ ಹೇಳುವ ಕತ್ತೆ ಜೀವನದ ಹಂತವೂ ಶ್ಲಾಘನೀಯವೆ…..?!

ನಾಲ್ಕನೆ ಹಂತದಲ್ಲಿ 40 ವರ್ಷಕಾಲದ ಗೂಬೆಜೀವನವಾಗುತ್ತದೆ.. 60ವಯಸ್ಸು [ನಿವೃತ್ತಿ] ನಂತರದ ವೃದ್ಧಾಪ್ಯ ಜೀವನವು 360 ಡಿಗ್ರಿ ಸುತ್ತಲೂ ಕತ್ತು ತಿರುಗಿಸುವ ಗೂಬೆಯಂತೆ! ಪಿಂಚಣಿ ರ[ಸ]ಹಿತದ ’ಬೋನಸ್ ಲೈಫ಼್’ನ ಬಿರುದುಗಳೆಂದರೆ: ಹಳೇಮಿಶಿನ್, ವೇಸ್ಟ್‌ ಬಾಡಿ, ಮುದಿಗೂಬೆ, ದಂಡಪಿಂಡ, ಭೂಮಿಗೆಭಾರ ಅನ್ನಕ್ಕೆದಂಡ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಇತ್ಯಾದಿ. ಪ್ರತಿದಿನ ಮನೆಯಲ್ಲಿ ಮೊದಲು ಎಲ್ಲರದ್ದು  ಮುಗಿದು ಆದ ಮೇಲೆ ಕಟ್ಟಕಡೆಗೆ ಕರೆಂಟ್/ಗೀಜ಼ರ್/ಸೌದೆ ಅವಲಂಬಿಸಿದ ಬಿಸಿನೀರು ಅಥವ ತಣ್ಣೀರು ಸ್ನಾನದ ನಂತರ ಪೂಜೆ, ಕಾಫ಼ಿ, ತಿಂಡಿ!  ಸೊಸೆಯು ಹೌಸ್ ಮೇಕರ್ ಆಗಿದ್ರೆ ಮಾತ್ರ ಎಲ್ಲವು ಬಿಸಿಬಿಸಿ! ಒಂದುವೇಳೆ ಆಕೆ ಏನಾದ್ರೂ ಉದ್ಯೋಗಿಯಾದಲ್ಲಿ ಎಲ್ಲವೂ ತಣ್ಣಗೆ…!

ಈ ಹಿಂದೆ ತಾನು ದುಡಿಯುವ ಕಾಲದಲ್ಲಿ ಸಾಲಸೋಲ ಮಾಡಿ ಅವರಿವರ ಕೈ ಕಾಲು ಹಿಡಿದು ಅಥವ ಹೌಸ್ ಬಿಲ್ಡಿಂಗ್ ಲೋನ್ ಪಡೆದು ಸ್ವಯಂ ತಾನೇ ಕಟ್ಟಿಸಿದ ಮನೆಯ ಮಹಡಿಯ ಹಂತದ ಕೆಳಗಿನ [ಹಳೆ] ದಿವಾನ್‌ ಕಾಟ್‌ನ ಹರುಕು ಹಾಸಿಗೆ ಮೇಲೆ ’ಕುಳಿತು-ಮಲಗಿ-ಮತ್ತೆ ಎದ್ದು ಕುಳಿತು’ ತೆಪ್ಪಗಿರಬೇಕು. ಒಂದುವೇಳೆ ಸೊಳ್ಳೆ/ನೊಣ/ತಿಗಣೆ ಇದ್ದರೆ ಅವುಗಳ ಮರ್ಡರ್ ಮಾಡಬೇಕು. ನಮಗೆ ಇಷ್ಟವಾಗದ ಆದರೆ ಅವರಿಗೆ ಇಷ್ಟವಾದ ಕಾರ್ಯಕ್ರಮದ ರೇಡಿಯೋ ಕೇಳಿಸಿಕೊಳ್ಳಲೇಬೇಕಾದ, ಟಿ.ವಿ.ನೋಡಲೇ ಬೇಕಾದ ಫಜೀತಿ ಪರಿಸ್ಥಿತಿ ಅಥವ ಅಪರೂಪಕ್ಕೆ ನಮ್ಮಿಷ್ಟಕ್ಕೆ ಬೆಲೆ ಇ(ದ್ದಾಗ)ಲ್ಲದಾಗ ನಮಗೆ ಮೌನ ಅನಿವಾರ್ಯವಾಗುತ್ತದೆ!

ಇವೆಲ್ಲ ನಿರಾಶೆಗಳ ಮಧ್ಯೆ ತಾತಾ ಎಂದು ಕರೆಯುವ ಮುದ್ದಾದ ಮೊಮ್ಮಕ್ಕಳ ತೊದಲುನುಡಿ ಸ್ಪರ್ಶಸುಖ ಆಟಪಾಠ ಆಶ್ಚರ್ಯಕರ ಮತ್ತು ನಿರುತ್ತರ ಪ್ರಶ್ನೆಯಾಗಿದ್ದು ಒಂಥರ ನೆಮ್ಮದಿ-ಸಂತಸ ಸಿಗುತ್ತದೆ. ಇನ್ನಷ್ಟು ಕಾಲ ಬದುಕಬೇಕೆಂಬ ಆಶಾಕಿರಣ ಮರಳಿ ಬಂದು ವೈರಾಗ್ಯ ಓಡಿ ಹೋಗುತ್ತದೆ?! ಮನೆಯ ಒಳಗೆ-ಹೊರಗೆ ’ಏನ್ ಯಜಮಾನ್ರೆ ಹೇಗಿದ್ದೀರಾ..’ ಎಂಬ ಪ್ರಶ್ನೆ ಕೇಳಿದವರಿಗೆಲ್ಲ ಒಂದೇ ಉತ್ತರ ಊರು ಹೋಗು, ಕಾಡು ಬಾ ಎನ್ನುತ್ತಿದೆ ಎಂದು ಹೇಳಿ ಹೇಳಿ ಸಾಕಾಗುತ್ತದೆ.

ಗೂಬೆ ಜೀವನದ ಆಸ್ತಿಯೆಂದರೆ… ಬೊಚ್ಚುಬಾಯ್, ಬಾಡಿದಮೈ, ಬಾಂಡ್ಲಿತಲೆ, ಹಳೇಸೋಡಗ್ಲಾಸ್‌ ಕನ್ನಡಕ, ಊರುಗೋಲು ಮಂಕಿಟೋಪಿ, ಸ್ವೆಟರ್, ಚತ್ರಿ-ಚಪ್ಪಲಿ?  ಹೀಗಾಗಿ ಪುಕ್ಸಟ್ಟೆ ಸಿಕ್ಕ ಸೀನಿಯರ್ ಸಿಟಿಝನ್ ಬಿರುದಾಂಕಿತರಾದ ಇವರಿಗೆ ಯಾವುದೆ ಟೈಮ್-‌ಟೇಬಲ್ ಇರುವುದಿಲ್ಲ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಹರಟೆ-ಭಜನೆ.  ಮಧ್ಯಾಹ್ನದ ಗೊರಕೆ,  ಮಧ್ಯರಾತ್ರಿ ಕೆ[ದ]ಮ್ಮು ಬಿ.ಪಿ., ಶುಗರ್(ಡಯಾಬಿಟೀಸ್) ಕಾಮನ್!  ಔಷಧ ಮಾತ್ರೆ [ಅ]ಲಭ್ಯವಾದಾಗಲಂತೂ ಪೀಕಲಾಟ, ನರಳಾಟ, ಅರಳು-ಮರಳು ಎಡವಟ್ಟು! ಯಾವಾಗ ಯಾರೊಡನೆ ಎಲ್ಲಿ ಹೇಗೆ ಏನು ಮಾತಾಡ (ಬಾರದು)ಬೇಕು, ಎಷ್ಟು ತಿನ್ನಬೇಕು, ಯಾವುದು ತಿನ್ನ [ಬೇಕು]ಬಾರದು, ತಿಳಿಯದಂಥ  ಅರಳು-ಮರಳು!  ತತ್ಪರಿಣಾಮ, ಅವಮಾನ ತಿರಸ್ಕಾರ ಕಣ್ಣೀರು ಬದುಕಿಯೂ ಸತ್ತಂತೆ ಇರಬೇಕಾದ ದಯನೀಯಸ್ಥಿತಿ ವೈರಾಗ್ಯದ ಗತಿ!

ಇಷ್ಟಾದರೂ ಮರಿಮಕ್ಕಳನ್ನ ಕಾಣುವಾ[ದುರಾ]ಸೆ ಮತ್ತು ತೀರ್ಥಯಾತ್ರೆ ಮಾಡುವ ಮಹದಾಸೆ ಇದ್ದೇಇರುತ್ತೆ? ಬಂದೇ, ಬರುತ್ತೆ..!?ಕಾಲಾಯ ತಸ್ಮೈನಮಃ  ಕೊನೆಉಸಿರಿನ, ಗುಟುಕಿನ, ತುತ್ತಿನ ಸಮಯವು ಬರುವವರೆಗೆ ಹೊ[ರ]ಗೆ ಹಾಕಿಸಿಕೊಳ್ಳೊವರೆಗೆ ತೆಪ್ಪಗಿರಬೇಕಾದ 61-100ವರ್ಷದವರೆಗಿನ ಮುತ್ಸದ್ದಿಜೀವನದ ಕೊನೇಹಂತವೆ (ಮುದಿ)ಗೂಬೆ ಜೀವನ! ಜೈ ಮಾನವಪ್ರಾಣಿ…

admin
the authoradmin

14 Comments

  • ನನ್ನ ಗೆಳೆಯ ಕುಮಾರಕವಿ ನಿಶ್ಚಯವಾಗಿ ಒಬ್ಬ ಉತ್ತಮ ಲೇಖಕ. ಮನುಷ್ಯ ಪ್ರಾಣಿಯ ಜೀವನಚಿತ್ರಣ ಎಷ್ಟೊಂದು ಅರ್ಥಪೂರ್ಣ?ಎಂಬುದನ್ನು ಬಲುಚಂದದೆ ಬಣ್ಣಿಸಿದ್ದಾರೆ. “ನಾಲ್ಕುಪ್ರಾಣಿಗಳಸಂಗಮ” ಲೇಖನವು ನನ್ನ ಮಾತ್ರವಲ್ಲ ನನ್ನಂಥ ಅನೇಕ ಓದುಗರ ಪರವಾಗಿ ಇಲ್ಲಿ ಹೀಗೆ ಅಭಿನಂದನೆ ಸಲ್ಲಿಸುವಂತೆ ಮಾಡಿತು ನನ್ನನ್ನು. ಈ ಲೇಖನದ ಮೂಲಕ ನಟರಾಜರವರು ಗದ್ಯಪದ್ಯ ಎರಡೂ ಪ್ರಾಕಾರಗಳಲ್ಲಿ ಅತ್ಯುತ್ತಮವಾಗಿ ವಿಶ್ಲೇಷಿಸಬಲ್ಲ ಶ್ರೇಷ್ಠ ಬರಹಗಾರ ಎಂಬುದನ್ನು ಮತ್ತೊಮ್ಮೆ ರುಜುವಾತು ಪಡಿಸಿದ್ದಾರೆ. ಇವತ್ತಿಗೂ ನಮ್ಮ ಕನ್ನಡನಾಡಲ್ಲಿ ಕನ್ನಡಭಾಷೆಯ ಇಂಥ ಲೇಖಕರು ಇರುವುದು ಕನ್ನಡ ಕುಲಕೋಟಿಗೆ ಹೆಮ್ಮೆಯ ಸಂಗತಿ, ಎಂಬುದನ್ನು ಮುಚ್ಚುಮರೆ ಇಲ್ಲದೆ ಈ ಮೂಲಕ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನಷ್ಟೆ. ಜನಮನ ಪತ್ರಿಕೆಯ ಎಲ್ಲರಿಗೂ ಸಹ ಧಾರಾಳವಾದ ಧನ್ಯವಾದ. ಅಂದಹಾಗೆ ಮರೆತಿದ್ದೆ, ತಮಗೆ ಸಾಧ್ಯವಾದರೆ ಈ ಪುಟ್ಟ ಟಿಪ್ಪಣಿ ವಿಷಯವನ್ನು ನನ್ನ ಹಳೇಮಿತ್ರ ಕುಮಾರಕವಿಯವರಿಗೂ ತಲುಪಿಸುವ ಪ್ರಯತ್ನಮಾಡಿ ಮತ್ತೊಮ್ಮೆ ಧನ್ಯವಾದ, ನಮಸ್ಕಾರ.*ಡಾ.ದೊಡ್ಡರಂಗೇಗೌಡ, ಕನ್ನಡ ಪ್ರಾಧ್ಯಾಪಕ (ನಿವೃತ್ತ) ಬೆಂಗಳೂರು

    • ನಮಸ್ಕಾರ ಸರ್,
      ನನ್ನ ಜನ್ಮ ಪಾವನ ಆಯ್ತು ಸರ್, ಅನಂತಾನಂತ ಧನ್ಯವಾದಗಳು ಸರ್. ನಿಮ್ಮ ಆರೋಗ್ಯ ಈಗ ಹೇಗಿದೆ, ದಯವಿಟ್ಟು ನಿಮ್ಮ ಆರೋಗ್ಯದ ಕಡೆ ಸದಾ ನಿಗಾ ವಹಿಸಿರಿ, ನಮಸ್ಕಾರ

    • ನಮಸ್ಕಾರ ಸರ್,
      ನನ್ನ ಜನ್ಮ ಪಾವನ ಆಯ್ತು ಸರ್, ಅನಂತಾನಂತ ಧನ್ಯವಾದಗಳು ಸರ್. ನಿಮ್ಮ ಆರೋಗ್ಯ ಈಗ ಹೇಗಿದೆ, ದಯವಿಟ್ಟು ನಿಮ್ಮ ಆರೋಗ್ಯದ ಕಡೆ ಸದಾ ನಿಗಾ ವಹಿಸಿರಿ, ನಮಸ್ಕಾರ
      ಕುಮಾರಕವಿ ಬೋ.ನಾ.ನಟರಾಜ, ಬೆಂಗಳೂರು

  • “4 ಪ್ರಾಣಿಗಳ ಸಂಗಮ ಮನುಷ್ಯ ಪ್ರಾಣಿ” ಎಂಬ ಅಸಾಮಾನ್ಯ ಲೇಖನ ಬರೆದ ನಟರಾಜ ಕವಿಗೆ ಮನದಾಳದ ನಮಸ್ಕಾರ. ಇಂಥದ್ದೊಂದು ಜೀವನಮಾರ್ಗ ತೋರಿಸುವ ಸತ್ಯಲೇಖನ ನನ್ನ ಇಡೀ 62 ವರ್ಷದ ಜೀವಮಾನದಲ್ಲಿ ಇದುವರೆಗೆ ಓದಿರಲೇ ಇಲ್ಲ. ಈ ಸತ್ಯವನ್ನು ಎದೆ ಎತ್ತರಿಸಿ ಹೇಳಬಲ್ಲೆ. ಪ್ರಕಟಿಸಿದ ಎಲ್ಲರಿಗೂ ಧನ್ಯವಾದ
    -ಸತ್ಯನಾರಾಯಣ, ನಿವೃತ್ತ ಅಧಿಕಾರಿ, ಮೈವಿವಿ, ಮೈಸೂರು 570009

  • “4 ಪ್ರಾಣಿಗಳ ಸಂಗಮ ಮನುಷ್ಯ ಪ್ರಾಣಿ” ಎಂಬ ಅಸಾಮಾನ್ಯ ಲೇಖನ ಬರೆದ ನಟರಾಜ ಕವಿಗೆ ಮನದಾಳದ ನಮಸ್ಕಾರ. ಇಂಥದ್ದೊಂದು ಜೀವನಮಾರ್ಗ ತೋರಿಸುವ ಸತ್ಯಲೇಖನ ನನ್ನ ಇಡೀ 62 ವರ್ಷದ ಜೀವಮಾನದಲ್ಲಿ ಇದುವರೆಗೆ ಓದಿರಲೇ ಇಲ್ಲ. ಈ ಸತ್ಯವನ್ನು ಎದೆ ಎತ್ತರಿಸಿ ಹೇಳಬಲ್ಲೆ. ಪ್ರಕಟಿಸಿದ ಎಲ್ಲರಿಗೂ ಧನ್ಯವಾದ. -ಸತ್ಯನಾರಾಯಣ, ನಿವೃತ್ತ ಅಧಿಕಾರಿ, ಮೈವಿವಿ, ಮೈಸೂರು-9

  • ಇದೊಂದು ಅಪರೂಪದ ಅತ್ಯಂತ ಉಪಯುಕ್ತ ಲೇಖನ, ಧನ್ಯವಾದ ಸರ್

  • ನಾಲ್ಕು ಪ್ರಾಣಿಗಳ ಸಂಗಮ ಎಂಬ ಲೇಖನದಲ್ಲಿ ಮನುಷ್ಯನ ಜೀವನ ನಾಟಕದ ನಾಲ್ಕು ಅಂಕದ ನೈಜ ಚಿತ್ರಣ ಮಾಡಿದ್ದಾರೆ ಕುಮಾರಕವಿಯವರು. ಧನ್ಯವಾದ

  • “4 pranigala …… ” is really very nice article written on thinking animal man. Salute to the JANAMANA KANNADA e-newsletter as well as the author nataraj bn sir 👍 🙏 👏 😀

  • 4 ಪ್ರಾಣಿಗಳ ಸಂಗಮ ಮನುಷ್ಯ ಪ್ರಾಣಿಯ ಲೇಖನ ಬೊಂಬಾಟ್…
    ನನ್ನ ಮೆಚ್ಚಿನ ಲೇಖನ

  • 4 ಪ್ರಾಣಿಗಳ ಸಂಗಮ ಮನುಷ್ಯ ಪ್ರಾಣಿಯ ಲೇಖನ ಬೊಂಬಾಟ್…
    ನನ್ನ ಮೆಚ್ಚಿನ ಲೇಖನ ಇದು. ನಾನು ಓದಿದ ನಂತರ ನನ್ನ ಗೆಳೆಯರ ಬಳಗಕ್ಕು ಶೇರ್ ಮಾಡಿದ್ದೇನೆ, ಧನ್ಯವಾದ, ನಮಸ್ಕಾರ

  • ಮನುಷ್ಯ ಪ್ರಾಣಿಯ ಜೀವನ 4 ಬೇರೆ ಬೇರೆ ಪ್ರಾಣಿಗಳ ಗುಣಗಳಿಂದ ಕೂಡಿದೆ ಎಂಬುದನ್ನು ತುಂಬ ಅಚ್ಚುಕಟ್ಟಾದ ಉದಾಹರಣೆ ಸಹಿತ ಬರೆದಿದ್ದಾರೆ ನಟರಾಜ ಕವಿಯವರು. ಇಂಥವರ ಸ್ನೇಹ ಪಡೆದ ನಮ್ಮಂಥವರು ಸತ್ಯವಾಗಲೂ ಭಾಗ್ಯವಂತರು. ಇವರಿಗೆ ಮತ್ತು ಜನಮನ ಕನ್ನಡ ಪತ್ರಿಕೆಗೆ ಹಾರ್ದಿಕ ಅಭಿನಂದನೆ ಮತ್ತು ಧನ್ಯವಾದ

  • ಮನುಷ್ಯ ಪ್ರಾಣಿಯ ಜೀವನ 4 ಬೇರೆ ಬೇರೆ ಪ್ರಾಣಿಗಳ ಗುಣಗಳಿಂದ ಕೂಡಿದೆ ಎಂಬುದನ್ನು ತುಂಬ ಅಚ್ಚುಕಟ್ಟಾದ ಉದಾಹರಣೆ ಸಹಿತ ಬರೆದಿದ್ದಾರೆ ನಟರಾಜ ಕವಿಯವರು. ಇಂಥವರ ಸ್ನೇಹ ಪಡೆದ ನಮ್ಮಂಥವರು ಸತ್ಯವಾಗಲೂ ಭಾಗ್ಯವಂತರು. ಇವರಿಗೆ ಮತ್ತು ಜನಮನ ಕನ್ನಡ ಪತ್ರಿಕೆಗೆ ಹಾರ್ದಿಕ ಅಭಿನಂದನೆ ಮತ್ತು ಧನ್ಯವಾದ, ಮಂಡಕಳ್ಳಿ ಶಾಂತಕುಮಾರ್ ರೈತ

Leave a Reply

Translate to any language you want