CinemaLatest

ನಿಸ್ಸಂಕರ ಸಾವಿತ್ರಿ… ಇವರು ನಟಿ, ಹಿನ್ನೆಲೆಗಾಯಕಿ, ನಿರ್ಮಾಪಕಿ, ನಿರ್ದೇಶಕಿಯಾಗಿ ಮಿಂಚಿದ ಬಹುಮುಖ ಪ್ರತಿಭೆ

ನಟಿಯಾಗಿ ಮಾತ್ರವಲ್ಲದೆ, ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದರಲ್ಲಿ ಸೈ ಎನಿಸಿಕೊಂಡು ಸಾರ್ಥಕ ಜೀವನ ನಡೆಸಿದ ನೂರಾರು ನಟಿಯರು ಸಿನಿಮಾ ರಂಗದಲ್ಲಿದ್ದಾರೆ. ಅವರ ಪೈಕಿ ನಿಸ್ಸಂಕರ ಸಾವಿತ್ರಿ ಒಬ್ಬರಾಗಿದ್ದಾರೆ. ಬಹುಮುಖ ಪ್ರತಿಭೆಯಾಗಿ ಮಿನುಗಿದ ಇವರ ಬಗ್ಗೆ ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ತಮ್ಮ ಬರವಣಿಗೆಯ ಮೂಲಕ ಹೇಳಿದ್ದಾರೆ..

ಇದನ್ನೂ ಓದಿಚಂದನವನದಿಂದ ಮರೆಯಾದ ಅಭಿನಯ ಸರಸ್ವತಿ ಡಾ.ಬಿ.ಸರೋಜಾದೇವಿ

ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರಾವಿನ್ಸ್ (ಇಂದಿನ ಆಂಧ್ರ ಪ್ರದೇಶದ) ಪುಟ್ಟಗ್ರಾಮ ಚಿರ್ರವೂರು ಎಂಬಲ್ಲಿ ನಿಸ್ಸಂಕರ ಸಾವಿತ್ರಿ 6.12.1935 ರಂದು ಜನಿಸಿದರು. ನಿಸ್ಸಂಕರರಾವ್ ಗುರುವಯ್ಯ ಮತ್ತು ಸುಭದ್ರಮ್ಮ ಎಂಬ ರೈತ ಕುಟುಂಬ ದಂಪತಿಗೆ ಜನಿಸಿದ ಒಟ್ಟು 3 ಗಂಡು 3ಹೆಣ್ಣು, 6ಮಕ್ಕಳಲ್ಲಿ ಇವರೂ ಒಬ್ಬರು. ಉನ್ನತ ಶಿಕ್ಷಣ ಪಡೆಯಬೇಕೆಂದಿದ್ದ ಇವರ ಆಕಾಂಕ್ಷೆ ಈಡೇರಲಿಲ್ಲ. ಆದರೆ ಸಾಕಷ್ಟು ವಿದ್ಯಾಭ್ಯಾಸ ಪಡೆದು ಬಾಲ್ಯದಲ್ಲಿ ತೋರಿದ ಪಠ್ಯೇತರ ಚಟುವಟಿಕೆ ಕಾರ್ಯಕ್ರಮಗಳಲ್ಲಿ ಗಂಡು ಪಾತ್ರದಲ್ಲೂ ಸೈ ಎನ್ನುವ ಟ್ಯಾಲೆಂಟ್ ತೋರಿಸಿ ಎಲ್ಲರ ಮೆಚ್ಚುಗೆ ಪಡೆದು ಪ್ರೀತಿ ವಿಶ್ವಾಸ ಗಳಿಸಿದರು.

ಒಮ್ಮೆ, ಸಾವಿತ್ರಿಗೆ ಅನಿರೀಕ್ಷಿತವಾಗಿ ಖ್ಯಾತ ತೆಲುಗು ಚಿತ್ರ ನಿರ್ಮಾಪಕರ ಪರಿಚಯವಾಗಿ ಇವರಪಾಲಿಗೆ ದಿಢೀರನೆ ಒದಗಿ ಬಂದ ನರ್ತಕಿ ಪಾತ್ರವನ್ನು“ಪಾತಾಳಭೈರವಿ”-1951 ತೆಲುಗು, ತಮಿಳು ಬ್ಲಾಕ್‍ ಬಸ್ಟರ್ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದೇ ವರ್ಷ ಬಿಡುಗಡೆಯಾದ, ಮುಖ್ಯ ಪಾತ್ರದಲ್ಲಿ ನಟಿಸಿದ ಚೊಚ್ಚಲ ಚಿತ್ರ ‘ರೂಪವತಿ’ ತೆಲುಗು ಫಿಲಂ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು. ನಂತರ ತೆಲುಗು ಮೂಲದ “ಮಾಯಾಬಜಾರ್” ಚಿತ್ರವು ಕನ್ನಡ, ತಮಿಳು ಭಾಷೆಗೆ ಡಬ್ಬಾಗಿ ದಕ್ಷಿಣ ಭಾರತದಾದ್ಯಂತ ಧೂಳೆಬ್ಬಿಸಿತು! ಅತ್ಯಂತ ಕಡಿಮೆ ಕಾಲದಲ್ಲಿ ಕನಸು ಮನಸಲ್ಲು ಊಹಿಸದಷ್ಟು ಎತ್ತರಕ್ಕೆ ತಲುಪಿದರು. ತಾವು ಬೆಳೆಯುತ್ತಾ ಇತರರನ್ನೂ ಬೆಳೆಸಿದರು. ವಿಭಿನ್ನ ನಟಿ ಹಿನ್ನೆಲೆಗಾಯಕಿ ನಿರ್ಮಾಪಕಿ ನಿರ್ದೇಶಕಿ ಬಹುಮುಖ ಪ್ರತಿಭೆಯ ವಿಶಿಷ್ಟ ಚಿತ್ರೋದ್ಯಮಿ ಎಂಬ ಖ್ಯಾತಿ ಪಡೆದು ಇಡೀ ದೇಶದಲ್ಲಿ ತಮ್ಮದೆ ವಿಶೇಷ ಛಾಪು ಮೂಡಿಸಿದರು.

ಇದನ್ನೂ ಓದಿ:  ಕನ್ನಡದ ಪ್ರಪ್ರಥಮ ವಾಕ್ ಚಿತ್ರದ ಹೀರೋಯಿನ್  ತ್ರಿಪುರಾಂಭ…

ತಮ್ಮ ಜೀವನದಲ್ಲಿ ಗೆಲುವಿಗಿಂತ ಸೋಲನ್ನೆ ಹೆಚ್ಚು ಕಂಡುಂಡರು. ಹೊರ-ಒಳಗಿನವರಿಂದ ಒದಗಿಬಂದ ಪ್ರತಿಯೊಂದು ಕಷ್ಟನಷ್ಟ ನೋವು ನಲಿವುಗಳನ್ನ ಸಮಾನವಾಗಿ ಸ್ವೀಕರಿಸಿದರು. ಹೊಗಳಿಕೆ, ತೆಗಳಿಕೆ, ಟೀಕೆ, ಟಿಪ್ಪಣಿ ಎಲ್ಲವನ್ನು ಸಮನಾಗಿ ಸ್ವಾಗತಿಸಿದರು. ವೈಯಕ್ತಿಕ ಮತ್ತು ಕಲಾಸೇವೆ ಎರಡನ್ನೂ ಧೈರ್ಯದಿಂದ ಎದುರಿಸಿದರು. ಇಂತಹ ಸರಳ ಸಜ್ಜನಿಕೆಯ ಸಹನಾಶೀಲ ನಟಿಯು ಕೋಮಾ ಕಾಯಿಲೆಗೆ ತುತ್ತಾಗಿ 26.12.1981ರಂದು ಮದ್ರಾಸ್ ನಲ್ಲಿ ಸ್ವರ್ಗಸ್ಥರಾದರು.

ಸಾವಿತ್ರಿಯವರ ಅಮೋಘ ಸಾಧನೆ ಮತ್ತು ಅಧ್ಬುತ ಯಶಸ್ಸು ಕಂಡ ದುರ್ವಿಧಿ, ಕೇವಲ 45ನೇ ವಯಸ್ಸಿಗೆ ಇವರ ಉಸಿರು ನಿಲ್ಲಿಸಿತು!  ತಮ್ಮ ಅಲ್ಪಾಯುಷ್ಯದಲ್ಲಿ ದೊರೆತ ಸುವರ್ಣ ಅವಕಾಶ ಸದುಪಯೋಗ ಪಡಿಸಿಕೊಂಡ ಸಾವಿತ್ರಿಯು ಕನ್ನಡ ಹಿಂದಿ ತಮಿಳು ತೆಲುಗು ಮಲಯಾಳಂನ ಒಟ್ಟು 200ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಪಂಚಭಾಷಾ ತಾರೆಯರಲ್ಲಿ ಅಗ್ರಸ್ಥಾನ ಪಡೆದ ಅಪರೂಪದ ಅಭಿನೇತ್ರಿ. 

ಇದನ್ನೂ ಓದಿಇದು ಮೈಸೂರಿನ ನಟಿಯಾಗಿದ್ದ ಎಂ. ಜಯಶ್ರೀರವರ ಬಣ್ಣದ ಬದುಕಿನಾಚೆಗಿನ ಕಥೆ…

ಮೇರುನಟಿ ಸಾವಿತ್ರಿಯು ಡಾ.ರಾಜಕುಮಾರ್, ಜೆಮಿನಿಗಣೇಶನ್, ಶಿವಾಜಿಗಣೇಶನ್, ಎಂಜಿಆರ್, ಎನ್‍ಟಿಆರ್, ಎ.ನಾಗೇಶ್ವರರಾವ್, ಅಶೋಕ್‍ಕುಮಾರ್, ರತನ್‍ಕುಮಾರ್, ಮುಂತಾದ ದಿಗ್ಗಜರೊಡನೆ ನಟಿಸಿದ ಅಪ್ರತಿಮ ಹೀರೋಯಿನ್! 18ವರ್ಷ ಅವಧಿಯೊಳಗೆ 3 ಭಾಷೆಯ ಒಟ್ಟು150 ಫಿಲಂಸ್ ನಟಿಸಿ ದಾಖಲೆ ನಿರ್ಮಿಸಿದ ಕಲಾವಿದೆ. ಬಹುಶಃ ಇನ್ನಷ್ಟು ವರ್ಷ ಬದುಕಿದ್ದರೆ ಮತ್ತಷ್ಟು ನೂತನ ದಾಖಲೆ ಸೃಷ್ಟಿಸುತ್ತಿದ್ದರೇನೊ?!

1956ರಲ್ಲಿ ಖ್ಯಾತನಟ ಜೆಮಿನಿಗಣೇಶನ್‍ರನ್ನು ವಿವಾಹವಾದರು. ಇಬ್ಬರು ಮಕ್ಕಳು ವಿಜಯಚಾಮುಂಡೇಶ್ವರಿ ಮತ್ತು ಸತೀಶಕುಮಾರಗಣೇಶನ್. ಇವರ ಜೀವನ ಚರಿತ್ರೆ ಆಧಾರಿತ ನಿರ್ಮಾಣಗೊಂಡ ತೆಲುಗು ಫಿಲಂ “ಮಹಾನಟಿ” 2018ರಲ್ಲಿ ತೆರೆಕಂಡು ರಾಷ್ಟ್ರಪ್ರಶಸ್ತಿ ಗಳಿಸಿತು. ಪ್ರಪಂಚ ಚಿತ್ರರಂಗದ ಚರಿತ್ರೆಯಲ್ಲಿ, ನಟಿ ನಿಧನರಾದ 37 ವರ್ಷದ ನಂತರ ಆಕೆಯ ಜೀವನದ ಬಗ್ಗೆ ನಿರ್ಮಿಸಿದ ಚಿತ್ರವು ಅತ್ಯಂತ ಯಶಸ್ಸು ಕೀರ್ತಿ ಗಳಿಸಿದ್ದು ಒಂದು ಅದ್ಭುತ ಸಾಧನೆ! ದಕ್ಷಿಣಭಾರತದ ಪ್ರಥಮ ಲೇಡಿ ಸೂಪರ್ ಸ್ಟಾರ್ ಸಾವಿತ್ರಿ ಸುಮಾರು 18 ವರ್ಷ ಪರ್ಯಂತ ದ.ಭಾರತದ ಅತಿಹೆಚ್ಚು ಸಂಭಾವನೆ ಪಡೆದ, ಭಾರತದಲ್ಲೆ 3ನೆ ಅತಿಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು! ಸಾವಿತ್ರಿ ನಟಿಸಿದ ಕಟ್ಟಕಡೆಯ ಕನ್ನಡ ಚಿತ್ರ “ರವಿಚಂದ್ರ”.

ಸಾವಿತ್ರಿಗೆ ಸಂದ ಪ್ರಶಸ್ತಿ, ಬಹುಮಾನ: 1953:ಅತ್ಯುತ್ತಮ ನಟಿ, ದೇವದಾಸು(ತೆ)  1957:ಅತ್ಯುತ್ತಮ ನಟಿ,ಮಾಯಾಬಜಾರ್(ತೆ) 1960:ಅತ್ಯುತ್ತಮ ನಟಿ, ರಾಷ್ಟ್ರ ಪ್ರಶಸ್ತಿ, ಚಿವರಕುಮಿಗಿಲೇದಿ(ತೆ)  1962: ಅತ್ಯುತ್ತಮ ನಟಿ ಪ್ರಶಸ್ತಿ, ಆರಾಧನಾ (ತೆ) 1968:ನಂದಿಪ್ರಶಸ್ತಿ, ಚಿನ್ನಾರಿಪಾಪಲು(ತೆ) 1970:ಅತ್ಯುತ್ತಮ ನಟಿ ಪ್ರಶಸ್ತಿ: ಮರೋ ಪ್ರಪಂಚಂ(ತೆ) 2011:ಭಾರತಸರ್ಕಾರ ಅಂಚೆಚೀಟಿ ಬಿಡುಗಡೆ 2018: ಜೀವನ ಚರಿತ್ರೆ ಆಧಾರಿತ ತೆಲುಗು ಚಿತ್ರ ಮಹಾನಟಿ,  ಸಾವಿತ್ರಿ ನಟಿಸಿದ ಕನ್ನಡ ಚಿತ್ರಗಳು: ಭಕ್ತಮಾರ್ಕಂಡೇಯ, ಮನಸ್ಸಾಕ್ಷಿ, ದೇವರು ಕೊಟ್ಟ ವರ, ತಾಯಿಗೆ ತಕ್ಕಮಗ, ಅಶ್ವತ್ಥಾಮ, ಪ್ರೇಮಪಾಶ, ಚಂದನದಗೊಂಬೆ, ರವಿಚಂದ್ರ.

 

ಚಿತ್ರಗಳನ್ನು ಊಹಿಸಿ…. ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ನಾಲ್ಕು ಸಿನಿಮಾಗಳನ್ನು ಹೆಸರಿಸಿ….

admin
the authoradmin

12 Comments

  • ನನ್ನ ಫೇವರೆಟ್ ನಟಿ ಮಹಾನ್ ಕಲಾವಿದೆ ಸಾವಿತ್ರಿ ಅವರ ಬಗ್ಗೆ ಬರೆದಂಥ ಕುಮಾರಕವಿಯವರ ಲೇಖನ ಸತ್ಯವಾಗಿಯೂ ಅಮೋಘವಾಗಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ನನ್ನ ಮತ್ತು ನನ್ನ ಕುಟುಂಬದವರ ಮನಂಪೂರ್ವಕ ಅಭಿನಂದನೆ, ಪಿ.ಸಾವಿತ್ರಿಬಾಯಿ, ನಿವೃತ್ತ ಪ್ರಾಂಶುಪಾಲ, ಮಲ್ಲೇಶ್ವರಂ, ಬೆಂಗಳೂರು

  • ನನ್ನ ಫೇವರೆಟ್ ನಟಿ ಮಹಾನ್ ಕಲಾವಿದೆ ಸಾವಿತ್ರಿ ಅವರ ಬಗ್ಗೆ ಬರೆದಂಥ ಕುಮಾರಕವಿಯವರ ಲೇಖನ ಸತ್ಯವಾಗಿಯೂ ಅಮೋಘವಾಗಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ನನ್ನ ಮತ್ತು ನನ್ನ ಕುಟುಂಬದವರ ಮನಂಪೂರ್ವಕ ಅಭಿನಂದನೆ, ಪಿ.ಸಾವಿತ್ರಿಬಾಯಿ, ನಿವೃತ್ತ ಪ್ರಾಂಶುಪಾಲ, ಮಲ್ಲೇಶ್ವರಂ, ಬೆಂಗಳೂರು city

  • ಭಾರತದ ಖ್ಯಾತ ಹಿರಿಯ ಅಭಿನೇತ್ರಿ ದಿವಂಗತ ಸಾವಿತ್ರಿಯವರ ಲೇಖನ ನನ್ನ ಮನಸ್ಸಿಗೆ ಮುದ ನೀಡಿತು. ಲೇಖಕ ಮತ್ತು ಪ್ರಕಾಶಕ ಇಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದ

  • ಭಾರತದ ಖ್ಯಾತ ಹಿರಿಯ ಅಭಿನೇತ್ರಿ ದಿವಂಗತ ಸಾವಿತ್ರಿಯವರ ಲೇಖನ ನನ್ನ ಮನಸ್ಸಿಗೆ ಮುದ ನೀಡಿತು. ಲೇಖಕ ಮತ್ತು ಪ್ರಕಾಶಕ ಇಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದ, ನಮಸ್ಕಾರ

  • ನನಗೀಗ 73 ವರ್ಷ ವಯಸ್ಸು ನನ್ನ ಅಣ್ಣನಿಗೆ 78 ವಯಸ್ಸು, ನಮ್ಮ ಕಾಲದ ಸೌಂದರ್ಯವತಿ ಮತ್ತು ಅಮೋಘ ಅಭಿನಯದ ನಟಿ ಸಾವಿತ್ರಿ. ಇವರ ಬಗ್ಗೆ ಲೇಖನ ಓದಿದ ನಮಗೆ ಆನಂದವಾಯಿತು. ಇವರು ನಟಿಸಿದ ತೆಲುಗು-ಕನ್ನಡ ಆ ಕಾಲದ ಸಿನಿಮಾಗಳನ್ನು ನಾವಿಬ್ಬರು ತಪ್ಪದೇ ನೋಡುತ್ತಿದ್ದೆವು. ಅದರಲ್ಲೂ ವಿಶೇಷವಾಗಿ ಮಾಯಾ ಬಜಾರ್ ಸಿನಿಮಾದ ಇವರ ಅಭಿನಯ ಸ್ಮರಣೀಯ. ಇಂಥವರ ಬಗ್ಗೆ ಪ್ರಕಟಿಸಿದ ಜನಮನ ಕನ್ನಡ ಪತ್ರಿಕೆಯ ಎಲ್ಲರಿಗೂ ನಮ್ಮ ಆಶೀರ್ವಾದ ಅಭಿನಂದನೆ, ಪಿ.ಪುಟ್ಟಸ್ವಾಮಿ, ಪಿ.ನಾರಾಯಣಸ್ವಾಮಿ, ಕೋಲಾರ

  • ಹಿರಿಯ ನಟಿ ಸಾವಿತ್ರಿ ರವರ ಲೇಖನ ತುಂಬ ಸೊಗಸಾಗಿದೆ, ಧನ್ಯವಾದ

  • ಹಿರಿಯ ನಟಿ ಸಾವಿತ್ರಿ ರವರ ಲೇಖನ ತುಂಬ ಸೊಗಸಾಗಿದೆ, ಧನ್ಯವಾದ, ನಮಸ್ಕಾರ

  • ತಾಯಿಗೆತಕ್ಕಮಗ ಚಿತ್ರದಲ್ಲಿ ಡಾ.ರಾಜ್ ರವರ ತಾಯಿ ಪಾತ್ರದ ಇವರ ಮನೋಜ್ಞ ಅಭಿನಯ ಮರೆಯಲಾಗದ ಅನುಭವ

  • ತಾಯಿಗೆತಕ್ಕಮಗ ಚಿತ್ರದಲ್ಲಿ ಡಾ.ರಾಜ್ ರವರ ತಾಯಿ ಪಾತ್ರದ ಇವರ ಮನೋಜ್ಞ ಅಭಿನಯ ಮರೆಯಲಾಗದ ನಟನೆ ಎಂಬುದು ನಿತ್ಯಸತ್ಯ

Leave a Reply

Translate to any language you want