Mysore

ಮಹದೇವಪ್ರಸಾದ್ ಸಂಸ್ಮರಣೋತ್ಸವದಲ್ಲಿ ಪ್ರಭುಲಿಂಗ ಲೀಲೆ ಅಥವಾ ಅಲ್ಲಮ ಶರಣ ಸಂದರ್ಶನ ನಾಟಕ ಪ್ರದರ್ಶನ

ಮೈಸೂರು: ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವಪ್ರಸಾದ್  ಅವರ 9ನೇ ವರ್ಷದ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಪುತ್ರ, ಶಾಸಕ  ಎಚ್ ಎಮ್ ಗಣೇಶ್ ಪ್ರಸಾದ್  ಹಮ್ಮಿಕೊಂಡಿದ್ದು, ಈ ಪ್ರಯುಕ್ತ ಜನವರಿ 2ರಂದು ಶುಕ್ರವಾರ ರಾತ್ರಿ ಪಾಲಹಳ್ಳಿಯಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗ ಮೈಸೂರು ವತಿಯಿಂದ ಪ್ರಭುಲಿಂಗ ಲೀಲೆ ಅಥವಾ ಅಲ್ಲಮ ಶರಣ ಸಂದರ್ಶನ ಎನ್ನುವ ಐತಿಹಾಸಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಇದರ ಅಂಗವಾಗಿ ಪ್ರಚಾರ ಕರ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಜೆಎಸ್ಎಸ್ ಮಹಾ ವಿದ್ಯಾ ಪೀಠದ ಕಾರ್ಯದರ್ಶಿ  ಎಸ್ ಪಿ ಮಂಜುನಾಥ್ ರವರು ಈ ನಾಟಕ ಶರಣ ಪರಂಪರೆಯನ್ನು ಸಾರುವ ನಾಟಕವಾಗಿದ್ದು ಅಭಿನಯಿಸಿರುವ ಕಲಾವಿದರ ತಂಡ ಅತ್ಯುತ್ತಮವಾಗಿ ಅಭಿನಯಿಸಿದ್ದು,ಈಗಾಗಲೇ ಮೈಸೂರು ಶ್ರೀ ಮಠ ಮತ್ತು ಒಂದು ವಾರಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಮಳವಳ್ಳಿ ಪಟ್ಟಣದಲ್ಲಿ ಜರುಗಿದ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಭಗವತ್ಪಾದರ 1066ನೆಯ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿಯೂ ಪ್ರದರ್ಶನ ನೀಡಿದ್ದು ಅತ್ಯುತ್ತಮ ಸಾರ್ವಜನಿಕ ಪ್ರಸಂಶಗೆ ಒಳಗಾಗಿದೆ.

ಈ ನಿಟ್ಟಿನಲ್ಲಿ ಶಾಸಕರಾದ ಎಚ್ಎಂ ಗಣೇಶ್ ಪ್ರಸಾದ್ ರವರು ಶ್ರೀಮಠಕ್ಕೆ ಬಂದು ಪೂಜ್ಯರನ್ನು ಭೇಟಿ ಮಾಡಿ ಪ್ರದರ್ಶನಕ್ಕೆ ಕೃಪಾಶೀರ್ವಾದ ಕಲ್ಪಿಸುವಂತೆ ವಿನಂತಿಸಿದ್ದು ಅದರಂತೆ  ಅಂದು ಸಾಕಷ್ಟು ಸಂಖ್ಯೆಯಲ್ಲಿ ಕಲಾ ಪ್ರೋತ್ಸಾಹಕರು ಆಗಮಿಸಿ ಯಶಸ್ವಿಗೊಳಿಸಿ ಬೇಕೆಂದು ಮನವಿ ಮಾಡಿದರು

ಚಾಮರಾಜ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶ್ರೀ ನಂಜುಂಡ ಪ್ರಸಾದ್  ಮಾತನಾಡಿ,  ಸಾವಿರಾರು ಜನರಿಗೆ ಈ ನಾಟಕ ವೀಕ್ಷಿಸಲು ಅನುಕೂಲ ಕಲ್ಪಿಸಿದ್ದು ಅಂದು ಸುಮಾರು ಮೂರು ಸಾವಿರ ಜನಕ್ಕೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ತಾಲೂಕಿನ ಎಲ್ಲಾ ಹಾಲಿ ಮಾಜಿ ಜನಪ್ರತಿನಿಧಿಗಳು ಸಂಘ-ಸಂಸ್ಥೆಯ ಪದಾಧಿಕಾರಿಗಳು ಕ್ಷೇತ್ರದ ಎಲ್ಲ ಗ್ರಾಮಗಳಿಂದಲೂ ಆಗಮಿಸಿ ನಾಟಕ ವೀಕ್ಷಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕಲಾ ಬಲಗದ ಸಂಸ್ಥಾಪಕರಾದ  ಕಲ್ಮಳ್ಳಿನಟರಾಜು  ಮಾತನಾಡಿ, ಇದು ನಮ್ಮ ಕಲಾತಂಡದ ಪುಣ್ಯವಿಶೇಷವಾಗಿದ್ದು ಪರಮಪೂಜ್ಯ ಜಗದ್ಗುರು ಡಾ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರಿಗೆ ಚಾಮರಾಜನಗರ ಜಿಲ್ಲೆ ಅದರಲ್ಲೂ ವಿಶೇಷವಾಗಿ ಗುಂಡ್ಲುಪೇಟೆ ಎಂದರೆ ಬಹಳ ಅಚ್ಚುಮೆಚ್ಚು ಆ ನಿಟ್ಟಿನಲ್ಲಿ ಜಿಲ್ಲೆಗೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಸೇರಿದಂತೆ ಕೊಳ್ಳೇಗಾಲ ಯಳಂದೂರು ಹನೂರು ಗುಂಡ್ಲುಪೇಟೆ ತಾಲೂಕಿನಲ್ಲಿ ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಡು ಕಷ್ಟದ ನಡುವೆಯೂ ಕೇವಲ ಪ್ರೌಢಶಾಲೆಗಳನ್ನು ಅಷ್ಟೇ ತೆರೆಯದೆ ಉಚಿತ ಪ್ರಸಾದ ನಿಲಯಗಳನ್ನು ತೆರೆದಿದ್ದಾರೆ.

ಕಾಲೇಜು ಶಿಕ್ಷಣಕ್ಕೂ ಪೂರಕವಾದ ಪಿಯುಸಿ ಮತ್ತು ಪದವಿ ಕಾಲೇಜುಗಳನ್ನು ತೆರೆಯುವುದರ ಮೂಲಕ ಲಕ್ಷಾಂತರ ಜನರ ಬಾಳಿಗೆ ದಾರಿದೀವಿಗೆ ಪರಂಜೋತಿಯಾಗಿದ್ದಾರೆ. ಅಕ್ಷರಶಃ  ಜಾತಿ ಮತ ಧರ್ಮ  ಯಾವುದನ್ನು ಪರಿಗಣಿಸದೆ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಒಬ್ಬ ಘನ ಶರಣ ಎಂದರೆ ತಪ್ಪಾಗಲಾರದು.

ವಿಶೇಷವಾಗಿ ಶರಣರ ಜೀವನ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದ ಅಡಿಯಲ್ಲಿ ಅವರು ಸ್ಥಾಪಿಸಿರುವ ಶರಣ ಸಾಹಿತ್ಯ ಪರಿಷತ್ ವಿಶ್ವದಾದ್ಯಂತ ಶರಣರ ವಚನಗಳನ್ನು ಸಾರುವ ಪವಿತ್ರ ಕಾರ್ಯಕ್ರಮವನ್ನು ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಈ ಕಲಾಬಳಗದ ಅಡಿಯಲ್ಲಿ ಪರಮಪೂಜ್ಯರ ಕೃಪಾಶೀರ್ವಾದ ಪಡೆದು ಈ ನೆಲದ ಮಹಾತ್ಮರಾದ ಮಲೆ ಮಹದೇಶ್ವರ ಮಲೆ ಮಹದೇಶ್ವರರು ನಿಜಗುಣ ಶಿವಯೋಗಿಗಳು ಮಂಟೇಸ್ವಾಮಿ ಮುಂತಾದ ಐತಿಹಾಸಿಕ ವ್ಯಕ್ತಿಗಳ ಜೀವನ ಚರಿತ್ರೆಯನ್ನು ನಾಟಕ ರೂಪದಲ್ಲಿ ಅಭಿನಯಿಸುವ ನಿಟ್ಟಿನಲ್ಲಿ ರಾಜೇಂದ್ರ ಕಲಾ ಬಳಗ ಕಾರ್ಯೋನ್ಮುಖವಾಗಲಿದೆ ಎಂದರು

ಈ ಸಂದರ್ಭದಲ್ಲಿ  ಪದಾಧಿಕಾರಿ ಸಮಿತಿ ಸದಸ್ಯರಾದ ಮಾಲಂಗಿ ಸುರೇಶ್, ಬಿಎಮ್ ಪರಮೇಶ್ ಮಾಸ್ಟರ್, ಸುರೇಶ್ ಉಮ್ಮತ್ತೂರು, ಸಂಚಾಲಕ ಡಾ ಮಲ್ಲು ಚೆನ್ನಂಜಯನ ಹುಂಡಿ, ಮೈಸೂರು ಜಿಲ್ಲಾ ವೀರಶೈವ ನೌಕರರ ಸಂಘದ ಅಧ್ಯಕ್ಷ ಬೆಳಚಲವಾಡಿ ಶಿವಕುಮಾರ್, ಹಿರಿಯ ಕಲಾವಿದರಾದ ಕೆರೆಹಳ್ಳಿ ಲೋಹಿತ್, ಸಂತೋಷ ಬಾನಹಳ್ಳಿ, ಮಹೇಶ್ ಬಿಳಿಗೆರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want