LatestMysore

ಶರಣು ವಿಶ್ವವಚನ ಫೌಂಡೇಷನ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿವಿಧ ಕಾರ್ಯಕ್ರಮ… ನೀವೂ ಬನ್ನಿ..!

ಮೈಸೂರು: ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಮತ್ತು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ 2026ರ ಶರಣು ದಿನಚರಿ, ಬಸವಭಾನು ಸಂಚಿಕೆ ಮತ್ತು ಮಂಗಳ ಮುದ್ದುಮಾದಪ್ಪರವರ ವಚನ ಗುಮ್ಮಟ ಡಾ. ಫ.ಗು ಹಳಕಟ್ಟಿ ಕೃತಿ ಬಿಡುಗಡೆ, ರಾಜ್ಯ ಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿ ಹಾಗೂ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು 28 ಡಿಸೆಂಬರ್ 2025 ಭಾನುವಾರ ಬೆಳಗ್ಗೆ 10 ಗಂಟೆಗೆ ಮೈಸೂರಿನ ವಿಜಯನಗರದ 1ನೇ ಹಂತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪಕುಮಾರಸ್ವಾಮಿ ಮಾಹಿತಿ ನೀಡಿದ್ದು,  ವಚನ ಗುಮ್ಮಟ ಡಾ.ಫ.ಗು. ಹಳಕಟ್ಟಿ ಕೃತಿಯನ್ನು ಕರ್ನಾಟಕ ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜಗಂಗಾವತಿ, ಶರಣು ದಿನಚರಿಯನ್ನು ಬೆಂಗಳೂರು ಬಸವಸಮಿತಿ ಅಧ್ಯಕ್ಷ ಡಾ. ಅರವಿಂದಜತ್ತಿ,  ಬಸವಭಾನು ಸಂಚಿಕೆಯನ್ನು ಕನ್ನಡಪ್ರಭ ದಿನಪತ್ರಿಕೆ ಕಾರ್ಯ ನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್ ಬಿಡುಗಡೆ ಮಾಡುವರು. ಕಾಯಕಯೋಗಿ ಪ್ರಶಸ್ತಿಯನ್ನು ಮೈಸೂರು ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಚನ ಭಂಡಾರಿ ಶಾಂತರಸ ಪ್ರಶಸ್ತಿಯನ್ನು ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಐತಿಚಂಡ ರಮೇಶ್‌ಉತ್ತಪ್ಪ, ಆದರ್ಶ ಶರಣ ದಂಪತಿ ಪ್ರಶಸ್ತಿಯನ್ನು  ಶಾರದಾ ಜತ್ತಿ ಮತ್ತು ಡಾ.ಅರವಿಂದಜತ್ತಿಯವರಿಗೆ ಅವರಿಗೆ ನೀಡಲಾಗುತ್ತದೆ.

ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿಯನ್ನು ಎಂ.ಎನ್‌ಕುಮಾರಸ್ವಾಮಿ,  ಪ್ರಾಧ್ಯಾಪಕರು, ಸ.ಪ್ರ.ದರ್ಜೆಕಾಲೇಜು, ಕಡೂರು, ಚಿಕ್ಕಮಗಳೂರು ಜಿಲ್ಲೆ. ಸಂತೋಷ್ ಜೆ.ವಿ ಸಹಪ್ರಾಧ್ಯಾಪಕರು, ಶೇಷಾದ್ರಿಪುರಂ ಸಂಜೆ ಕಾಲೇಜು, ಬೆಂಗಳೂರು. ನಾರಾಯಣ ರಾಘವೇಂದ್ರ ಕುಲಕರ್ಣಿ, ಪ್ರಭಾರಿ ಮುಖ್ಯ ಶಿಕ್ಷಕರು. ಎಂಪಿಎಸ್ ನಂ 1 ಜಮಖಂಡಿ, ವನಜಾಕ್ಷಿ, ಸ.ಶಿ ಎಂ.ಪಿ.ಎಸ್ ಹುಳ್ಯಾಳ, ಜಮಖಂಡಿ ತಾ. ಬಾಗಲಕೋಟೆ ಜಿಲ್ಲೆ. ಆನಂದ ಅಣ್ಣಾಜಿ ದೇಶಮುಖ, ಮುಖ್ಯ ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಚಿಪ್ಪಾಡಿತೋಟ, ಸವದಿ, ಬೆಳಗಾವಿ ಜಿಲ್ಲೆರೇಣುಕಾಸ್ವಾಮಿ, ಮುಖ್ಯಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಆವರ್ತಿ, ಪಿರಿಯಾಪಟ್ಟಣ ತಾ. ಮೈಸೂರು ಜಿಲ್ಲೆ. ಕಲಾವತಿ, ಶಿಕ್ಷಕರು, ಸ.ಕಿ.ಪ್ರಾ.ಶಾಲೆ, ಗುಡ್ಡೇನಹಳ್ಳಿ, ಪಿರಿಯಾಪಟ್ಟಣ ತಾ. ಕೆ.ಎನ್‌ಅನ್ನಪೂರ್ಣ, ಮುಖ್ಯಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಗೋಕುಲಂ, ಮೈಸೂರು ಉತ್ತರ. ವಿರೂಪಾಕ್ಷಪ್ಪ, ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಮಲ್ಲೇಶ್ವರ, ಕಡೂರು ತಾ. ಚಿಕ್ಕಮಗಳೂರು ಜಿಲ್ಲೆ.

ಎಂ.ಆರ್‌ ಅನಿತಾ, ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಮಲ್ಲಿದೇವಿಹಳ್ಳಿ, ಕಡೂರು ತಾ. ಚಿಕ್ಕಮಗಳೂರು ಜಿಲ್ಲೆ, ವಿರೂಪಾಕ್ಷಯ್ಯ ಎಸ್.ಎಸ್. ಶಿಕ್ಷಕರು, ಎಸ್.ಜೆ.ಎಂ ಪ್ರೌಢಶಾಲೆ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ. ಹೇಮಲತಾ ಬಿ.ಬಿ ಶಿಕ್ಷಕರು, ಸ.ಪ.ಪೂ ಕಾಲೇಜು, ಪ್ರೌಢಶಾಲಾ ವಿಭಾಗ, ಕುಶಾಲನಗರ, ಕೊಡಗುಜಿಲ್ಲೆ. ರಾಜೇಶ್ವರಿ, ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಅಂಚೇಪಾಳ್ಯ, ದಕ್ಷಿಣ ವಲಯ, ಬೆಂಗಳೂರು. ಶಬರಿಕುಮಾರ್ ಆರ್. ಮುಖ್ಯಶಿಕ್ಷಕರು, ಓಂ ಶಿವ ವಿದ್ಯಾಸಂಸ್ಥೆ, ಅಂತರಸಂತೆ, ಎಚ್.ಡಿ.ಕೋಟೆ ತಾ. ಮೊದಲಾದ ಸಾಧಕ ಶಿಕ್ಷಕರಿಗೆ ಪ್ರದಾನ ಮಾಡಲಾಗುತ್ತಿದೆ.

ಮಧ್ಯಾಹ್ನ 2ಗಂಟೆಗೆ ಶರಣು ದಿನದರ್ಶಿಕೆ, ವಚನಗ್ರಾಮ, ವೀಣಾ ನಂದೀಶ್ ಅವರ ಶಿವಶರಣರ ಪ್ರಶ್ನೋತ್ತರ ದೀವಿಗೆ ಕೃತಿ ಬಿಡುಗಡೆ, ವಿವಿಧ ಪ್ರಶಸ್ತಿಗಳ ಪ್ರದಾನ, ಸಂಸ್ಥೆಯ ದತ್ತಿದಾಸೋಹಿಗಳು, ಆಜೀವ ಸದಸ್ಯರು, ಪ್ರೋತ್ಸಾಹದಾಯಕರಿಗೆ ಅಭಿನಂದನಾ ಸಮಾರಂಭ ನಡೆಯಲಿದ್ದು, ಚಿಕ್ಕಮಗಳೂರು ವಿಶ್ವಧರ್ಮಪೀಠದ ಡಾ. ಶ್ರೀ ಜಯಬಸವಾನಂದಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ದೇವಲಾಪುರಶ್ರೀ ಗುರುಮಲ್ಲೇಶ್ವರದಾಸೋಹ ಮಠದ ಶ್ರೀ ಜಡೇಸ್ವಾಮಿಗಳು ಶರಣು ದಿನದರ್ಶಿಕೆಯನ್ನು,  ವಚನಗ್ರಾಮ ಕೃತಿಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ. ಕೆ.ಆರ್ ಮಲ್ಲಿಕಾರ್ಜುನಪ್ಪ, ಶಿವಶರಣರ ಪ್ರಶ್ನೋತ್ತರ ದೀವಿಗೆಯನ್ನು ನವದೆಹಲಿ ಪಾರ್ಲಿಮೆಂಟ್ ಜಂಟಿ ನಿರ್ದೇಶಕ ಚಂದ್ರಶೇಖರ್ ಬಿಡುಗಡೆ ಮಾಡುವರು.

ಶಿಕ್ಷಕರ ಕಣ್ಮಣಿ ಪ್ರಶಸ್ತಿಯನ್ನು ಯೋಗಾಚಾರ್ಯ ಡಾ.ಸಿ.ವಿರುದ್ರಾರಾಧ್ಯ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕರು, ಶಿವಮೊಗ್ಗ, ವಚನ ಸೇವಾರತ್ನ ಪ್ರಶಸ್ತಿಯನ್ನು ಎಂ. ಚಂದ್ರಶೇಖರ್, ಸಂಸಾಪ್ಥಕರು, ಕನ್ನಡ ಸಾಹಿತ್ಯ ಕಲಾ ಕೂಟ, ಮೈಸೂರು, ವಚನ ಕೋಗಿಲೆ ಪ್ರಶಸ್ತಿಯನ್ನು ಅನುರಾಗ್ ಗದ್ದಿ, ಹೆಸರಾಂತ ಗಾಯಕರು, ಬೆಂಗಳೂರು ಅವರಿಗೆ ಪ್ರದಾನ ಮಾಡಲಾಗುವುದು.

ಕಾರ್ಯಕ್ರಮದಲ್ಲಿ ಮಂಗಳ ಮುದ್ದುಮಾದಪ್ಪ,  ಗೌರವಾಧ್ಯಕ್ಷರು, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್, ಅನಿಲ್ ಕುಮಾರ್ ವಾಜಂತ್ರಿ, ಅಧ್ಯಕ್ಷರು, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್, ಪಂಚಾಕ್ಷರಯ್ಯ, ನಿವೃತ್ತ ಶಾಖಾ ಅಧೀಕ್ಷಕರು, ಪೊಲೀಸ್ ಇಲಾಖೆ, ನೊಣವಿನಕೆರೆ, ತಿಪಟೂರು ತಾ. ವೀಣಾ ನಂದೀಶ್, ಅಧ್ಯಕ್ಷರು, ಶ್ರೀ ರಾಜರಾಜೇಶ್ವರಿ ಅಕ್ಕನ ಬಳಗ, ಮೈಸೂರು. ಎ.ಆರ್ ನಾಗೇಂದ್ರಸ್ವಾಮಿ, ಅಗಸನಪುರ, ಮಳವಳ್ಳಿ ತಾ. ಮಂಡ್ಯ ಜಿಲ್ಲೆ ಇವರು ಉಪಸ್ಥಿತರಿರುವರು.

 

 

 

 

 

 

admin
the authoradmin

Leave a Reply

Translate to any language you want