LatestMysore

ಸಮಥ೯  ಸಾಹಿತ್ಯ ಪ್ರತಿಷ್ಟಾನದ  ಪತ್ರಿಕೋದ್ಯಮ ಪ್ರಶಸ್ತಿಗೆ ಕೊಡಗಿನ  ಅನಿಲ್ ಎಚ್.ಟಿ. ಆಯ್ಕೆ

ಬೆಂಗಳೂರು: ಬೆಂಗಳೂರಿನ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೖತಿಕ ಪ್ರತಿಷ್ಠಾನವು ನೀಡುವ ವಾರ್ಷಿಕ ಪ್ರಶಸ್ತಿಗೆ ಪತ್ರಿಕೋಧ್ಯಮ ಕ್ಷೇತ್ರದಿಂದ ಹಿರಿಯ ಪತ್ರಕರ್ತ ಕೊಡಗಿನ ಅನಿಲ್ ಎಚ್.ಟಿ. ಆಯ್ಕೆಯಾಗಿದ್ದಾರೆ.

ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೖತಿಕ ಪ್ರತಿಷ್ಟಾನವು ವಾಷಿ೯ಕವಾಗಿ ಪತ್ರಿಕೋದ್ಯಮ, ಸಮಾಜಸೇವೆ, ಆರೋಗ್ಯ, ಶಿಕ್ಷಣ, ಸಾಹಿತ್ಯ, ಉದ್ಯಮ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು  ಗುರುತಿಸಿ ಗಾಂಧಿ ಪ್ರಿಯ ಹೆಸರಿನ ಪ್ರಶಸ್ತಿ ನೀಡುತ್ತಿದೆ. ಈ ವಷ೯ದ ಗಾಂಧಿ ಪ್ರಿಯ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದಿಂದ ಅನಿಲ್ ಹೆಚ್.ಟಿ. ಆಯ್ಕೆಯಾಗಿದ್ದಾರೆ.  ಪತ್ರಿಕೋದ್ಯಮ, ವಿದ್ಯುನ್ಮಾನ, ಬಾನುಲಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಸೇವೆಗಳಲ್ಲಿ  ಅನಿಲ್ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರತಿಷ್ಟಾನದ ಅಧ್ಯಕ್ಷ ಎಸ್.ಆರ್. ವಿಜಯಸಮಥ್೯ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಪತ್ರಕತ೯ರಾಗಿರುವ ಅನಿಲ್ ಹೆಚ್ ಟಿ  ಆಕಾಶವಾಣಿಯ ಕೊಡಗು ಜಿಲ್ಲಾ ವರದಿಗಾರರಾಗಿ ವಿಶ್ವವಾಣಿ ಪತ್ರಿಕೆಯ ಹಿರಿಯ ವರದಿಗಾರರು, ಪ್ರವಾಸಿ ಪ್ರಪಂಚ ವಾರಪತ್ರಿಕೆಯ ವಿಶೇಷ ಪ್ರತಿನಿಧಿಯಾಗಿದ್ದಾರೆ. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಹಾಲಿ ಅಧ್ಯಕ್ಷರಾಗಿದ್ದಾರೆ. ಕೊಡಗು ಜಿಲ್ಲಾ ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿ, ಐತಿಹಾಸಿಕ ಮಡಿಕೇರಿ ದಸರಾದ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾಗಿ, ರೋಟರಿ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ, ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ  ಅನಿಲ್ ಅವರಿಗೆ  ಪತ್ರಿಕೋದ್ಯಮ ಕ್ಷೇತ್ರದಲ್ಲಿ ದಾಖಲೆಯ 64 ನೇ ಪ್ರಶಸ್ತಿ ಇದಾಗಿದೆ.

admin
the authoradmin

Leave a Reply

Translate to any language you want