Mysore

ಮೈಸೂರು  ಕದಳಿ ಮಹಿಳಾ ವೇದಿಕೆಯಿಂದ ಮಕ್ಕಳಿಗೆ ವಚನ ವಾಚನ ಮತ್ತು ವ್ಯಾಖ್ಯಾನ  ಸ್ಪರ್ಧೆ

ಬದುಕಿನಲ್ಲಿ ಏನೇ ಎಡರು -ತೊಡರುಗಳು ಬಂದರೂ, ಸಹನೆ, ಸಮಾಧಾನ ಚಿತ್ತದಿಂದ ನಿವಾರಿಸಿಕೊಳ್ಳಬೇಕು:ಬಿ.ಆರ್.ನಾಗರತ್ನ

ಮೈಸೂರು: ಮೈಸೂರು  ಕದಳಿ ಮಹಿಳಾ ವೇದಿಕೆಯ ವತಿಯಿಂದ, ಮಾತೃಮಂಡಳಿ ಕಾಲೇಜಿನ ಪಿ. ಯು. ಸಿ ಮಕ್ಕಳಿಗೆ ‘ವಚನ ವಾಚನ ಮತ್ತು ವ್ಯಾಖ್ಯಾನ  ಸ್ಪರ್ಧೆ  ಹಾಗೂ  ದತ್ತೀ ಕಾರ್ಯಕ್ರಮ  ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಮಾತೃ  ಮಂಡಳಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ  ಶ್ರೀಮತಿ ವಿಜಯ ಲಕ್ಷ್ಮಿ  ಅರಸ್  ಅವರು ಮಕ್ಕಳು ವಚನಗಳ ಸಾರವನ್ನು ಅರ್ಥ ಮಾಡಿಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಬಸವಣ್ಣನವರ “ಕಳಬೇಡ ಕೊಲಬೇಡ….,” ವಚನವನ್ನು ಪ್ರಸ್ತಾಪಿಸಿ, ಸಪ್ತವ್ಯಸನಗಳು ಹೇಗೆ ಬದುಕಿನಲ್ಲಿ ದುಷ್ಪರಿಣಾಮ  ಉಂಟು ಮಾಡುತ್ತದೆ ಎಂಬುದನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಶೋಭಾರಾಣಿ ಜೈಪ್ರಕಾಶ್ ಮಾತನಾಡಿ, ಒಳ್ಳೆಯ ಮಕ್ಕಳಾಗಿ ಬಾಳಿ, ಶಾಲೆಗೆ ಪೋಷಕರಿಗೆ ಒಳ್ಳೆಯ ಹೆಸರು ಮತ್ತು ಕೀರ್ತಿಯನ್ನು ತಂದುಕೊಡಿ, ಹೆತ್ತ ತಂದೆ ತಾಯಿಗಳನ್ನು ಚೆನ್ನಾಗಿ ಪೋಷಿಸಿ, ಸಮಾಜದಲ್ಲಿ ಎಲ್ಲರೂ ಮೆಚ್ಚುವಂತೆ ಬಾಳಿ ಬದುಕಿ, ಎಲ್ಲಾ ಮಕ್ಕಳಿಗೂ ಉಜ್ವಲ ಭವಿಷ್ಯ ಸಿಗಲಿ, ದೇವರು ಆಯಸ್ಸು, ಅರೋಗ್ಯ, ಶಾಂತಿ ನೀಡಿ ಕಾಪಾಡಲಿ ಎಂದು ಹಾರೈಸಿದರು.

ಮುಖ್ಯ ಅತಿಥಿ ಬಿ. ಆರ್. ನಾಗರತ್ನರವರು ಮಾತನಾಡಿ, ವಚನಗಳು ಬದುಕಿನಲ್ಲಿ ನಿರ್ವಹಿಸುವ ಕರ್ತವ್ಯಗಳಿಗೆ ಹೇಗೆ ನೇರವಾಗುತ್ತವೆ ಎಂದು ಕೆಲವು ಕಿವಿಮಾತುಗಳನ್ನು ಹೇಳಿದರು. ಬಸವಣ್ಣನವರ ಕಾಯಕ, ದಾಸೋಹ ಪ್ರವೃತ್ತಿಯ ತಿಳುವಳಿಕೆ ನೀಡಿ, ವೈರಾಗ್ಯನಿಧಿ ಅಕ್ಕ ಮಹಾದೇವಿಯ “ಬೆಟ್ಟದಾ ಮೇಲೊಂದು ಮನೆಯ ಮಾಡಿ….” ವಚನವನ್ನು ಪ್ರಸ್ತಾಪಿಸಿ ಬದುಕಿನಲ್ಲಿ ಏನೇ ಎಡರು -ತೊಡರುಗಳು ಬಂದರೂ, ಸಹನೆ, ಸಮಾಧಾನ ಚಿತ್ತದಿಂದ ನಿವಾರಿಸಿಕೊಳ್ಳಬೇಕು ಎಂದು ತಿಳುವಳಿಕೆ ನೀಡಿದರು.

ಕಾಲೇಜು ಪ್ರಾಂಶುಪಾಲರಾದ   ಸುರೇಶ್.ಡಿ  ಉಪಸ್ಥಿತರಿದ್ದರು, ಕದಳಿ ಮಹಿಳಾ ವೇದಿಕೆಯ ಸದಸ್ಯರು, ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು, ಮಹಿಳಾ ಬಳಗಗಳ ಸದಸ್ಯರು,  ಶಾಲೆಯ ಶಿಕ್ಷಕರು 186 ಮಕ್ಕಳು ಭಾಗವಹಿಸಿದ್ದರು.         ದತ್ತಿದಾನಿಗಳಾದ ಡಾ. ನಿರ್ಮಲಾ ಮತ್ತು  ಶ್ರೀಮತಿ ಶೈಲಾ ಸಿದ್ದರಾಮಪ್ಪನವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

admin
the authoradmin

Leave a Reply

Translate to any language you want