Mysore

ವಿಶ್ವಮಾನವತೆಯ ಚಿಂತನೆಗೆ  ರಾಷ್ಟ್ರಕವಿ ಕುವೆಂಪು ನೀಡಿದ ಕೊಡುಗೆ ಅನನ್ಯ: ನಾಗರಾಜಯ್ಯ

ಮೈಸೂರು: ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲದೆ ಮಾನವೀಯ ಮೌಲ್ಯಗಳು, ಸಮಾನತೆ ಮತ್ತು ವಿಶ್ವಮಾನವತೆಯ ಚಿಂತನೆಗೆ ನೀಡಿದ ಕೊಡುಗೆ ಅನನ್ಯವಾದದ್ದು ಎಂದು ಡಯಟ್ ಪ್ರಾಂಶುಪಾಲರಾದ ನಾಗರಾಜಯ್ಯ ಹೇಳಿದರು.

ನಗರದ ಡಯಟ್ (ವಸಂತ ಮಹಲ್)ಆವರಣದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಯಟ್ ಪ್ರಾಂಶುಪಾಲರಾದ ನಾಗರಾಜಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪು ಅವರ ಸಾಹಿತ್ಯವು ವ್ಯಕ್ತಿಯನ್ನು ಒಳಗಿನಿಂದ ಶುದ್ಧಗೊಳಿಸಿ ಸಮಾಜಮುಖಿಯಾಗಿ ರೂಪಿಸುವ ಶಕ್ತಿಯಿದೆ.  ವಿಶ್ವಮಾನವ ಎಂಬ ಅವರ ಪರಿಕಲ್ಪನೆ ಇಂದಿನ ಸಮಾಜಕ್ಕೆ ಅತ್ಯಂತ ಪ್ರಾಸಂಗಿಕವಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕುವೆಂಪು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು

ಇದೇ ವೇಳೆ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ  ಮರುಸಿಂಚನ ತರಬೇತಿಯಲ್ಲಿ ಭಾಗವಹಿಸಿದ್ದ ಶಿಕ್ಷಕರು ಗೌರವ ನಮನ ಸಲ್ಲಿಸಲಾಯಿತು. ಬಿ.ಐ.ಇ.ಆರ್.ಟಿ ಸುಮ, ಸಿ.ಆರ್.ಪಿ ಲಲಿತ, ಶಿಕ್ಷಕರುಗಳಾದ ವಚನ ಕುಮಾರಸ್ವಾಮಿ, ಶ್ರೀಧರ್, ರಾಜಶೇಖರ್, ರಘು, ವೆಂಕಟೇಶ್, ಇತರರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want