janamanakannada > Blog > Latest > Mysore > ಭವ್ಯ ಮೆರವಣಿಗೆಯಲ್ಲಿ ಗಾವಡಗೆರೆ ಗ್ರಾಮದಿಂದ ಚುಂಚನಕಟ್ಟೆ ಜಾತ್ರೆಗೆ ಹೊರಟ ರಾಸುಗಳು…
ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾಗಿರುವ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಗೆ ಹುಣಸೂರು ತಾಲೂಕಿನ ಗಾವಡಗೆರೆ ಗ್ರಾಮದಿಂದ ಸುಮಾರು ಎರಡೂವರೆ ಲಕ್ಷ ಬೆಲೆಬಾಳುವ ರಾಸುಗಳನ್ನು ಇಡೀ ಗ್ರಾಮದಲ್ಲಿ ಡೊಳ್ಳು ಕುಣಿತ ಪಟಾಕಿ ಸಿಡಿಸಿ ಮೆರವಣಿಗೆಯ ಮಾಡುವುದರ ಕರೆದೊಯ್ಯಲಾಯಿತು.

ರಾಸುಗಳ ಮಾಲೀಕ ಮಹದೇವ ಶೆಟ್ಟಿ ಅವರ ಪುತ್ರ ಪ್ರಶಾಂತ್ ಶೆಟ್ಟಿ ತಮ್ಮ ರಾಸುಗಳನ್ನು ಅದ್ಭುತವಾಗಿ ಅಲಂಕಾರಗೊಳಿಸಿ ಮೆರವಣಿಗೆಯ ಮೂಲಕ ಚುಂಚನಕಟ್ಟೆ ಜಾತ್ರೆಗೆ ತೆರಳಿದರು. ಭಾರಿ ಮೊತ್ತದ ಈ ರಾಸುಗಳನ್ನು ನೋಡಲು ಜನರು ಕಿಕ್ಕಿರಿದು ತುಂಬಿದ್ದರು.

ಈ ಸಂದರ್ಭದಲ್ಲಿ ಗಾವಡಗೆರೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕುಬೇರ ಟಿ ಎ ಪಿ ಸಿ ಎಂ ಎಸ್ ಉಪಾಧ್ಯಕ್ಷ ಹೊನ್ನಪ್ಪರಾವ್ ಕಾಳಿಂಗೆ. ಮುಖಂಡರಾದ ಪುಟ್ಟಲಿಂಗಪ್ಪ, ಹರೀಶ್ ಜಾಬಗೆರೆ, ಪ್ರವೀಣ್, ಮೋನಿಶ್ ಕುಮಾರ್ ಸೇರಿದಂತೆ ನೂರಾರು ಜನರು ಹಾಜರಿದ್ದರು.
Tags:hunsuru news
admin








