News

ಜ್ಞಾನ ಎಂದರೆ ಮನಸ್ಸಿನ ಮೇಲೆ ನಿಯಂತ್ರಣ… ರಾಜ ಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅಭಿಮತ

 ಚಾಮರಾಜನಗರ:  ಮನಸ್ಸಿನ ಮೇಲೆ ನಿಯಂತ್ರಣವಿಲ್ಲದೆ ನಿನ್ನ ಬಳಿ ಎಷ್ಟೇ ಜ್ಞಾನವಿದ್ದರೂ ಅದು ವ್ಯರ್ಥವಾಗಿರುತ್ತದೆ ಜ್ಞಾನ ಎಂದರೆ ಮನಸ್ಸಿನ ಮೇಲೆ ನಿಯಂತ್ರಣ ಎಂದು ಅರ್ಥ ಎಂದು ರಾಜ ಯೋಗ ಶಿಕ್ಷಣ ತಜ್ಞೆ  ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅಭಿಪ್ರಾಯಪಟ್ಟರು.

ಅವರು ಹಸಿರು ಪಡೆ ವತಿಯಿಂದ ಪ್ರಕಾಶಭವನದಲ್ಲಿ ಏರ್ಪಡಿಸಲಾಗಿದ್ದ ಹಸಿರುಪಡೆ ದಿನದರ್ಶಿನಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಹೊಸ ವರುಷವು ಹರುಷವನ್ನು ತರಲಿ, ಇದಕ್ಕಾಗಿ ಜೀವನದ ಕಹಿಯನ್ನು ಮರೆತು ಸಿಹಿಯನ್ನು ನೆನೆಯೋಣ. ಪಾಪ ಕರ್ಮಗಳ ಹೊರೆಯನ್ನು ಇಳಿಸಿ ಪುಣ್ಯಕರ್ಮಗಳ ನಿಧಿಯನ್ನು ಪಡೆಯೋಣ. ಸಂಕುಚಿತ ಮನೋಭಾವನೆಯನ್ನು ತ್ಯಜಿಸಿ, ವಿಶಾಲ ಭಾವನೆಗಳನ್ನು ಬೆಳೆಸಿಕೊಂಡು ವಿಶ್ವಕಲ್ಯಾಣಿಯಾಗೋಣ, ಮುಖದಲ್ಲಿ ಮಂದಹಾಸವನ್ನು ಪಡೆದು ಅನ್ಯರ ಮುಖದಲ್ಲಿಯೂ ನಗುವನ್ನು ತರೋಣ. ಮಗುವಿನಂತೆ ಕೆಟ್ಟದ್ದರಿಂದ ಮುಗ್ದರಿದ್ದು, ಒಳ್ಳೆಯದಕ್ಕೆ ಅಂಟಿಕೊಳ್ಳೋಣ. ಹೆಜ್ಜೆ ಹೆಜ್ಜೆಗೂ ಪರಮಾತ್ಮನನ್ನು ನೆನೆಯುತ್ತಾ ಮುಂದೆ ಸಾಗೋಣ ಎಂದರು.

ಹಸಿರು ಪಡೆಯವರು ಬಿಡುಗಡೆ ಮಾಡಿರುವ, ಪರಿಸರದಿಂದ ನಾವು ಪರಿಸರಕ್ಕಾಗಿ ನಾವು, ಸಕಲ ಜೀವಿಗಳ ಉಳಿವಿಗಾಗಿ ಪ್ರತಿ ಹನಿ ನೀರು ಅತ್ಯಮೂಲ, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸೋಣ, ಗಿಡ ನಕ್ಕರೆ ಜಗ ನಗುವುದು ಗಿಡ ಅಳಿದರೆ ಜಗ ಅಳಿಯುವುದು, ಗಿಡ ನೆಟ್ಟು ಬೆಳೆಸುವುದೆಂದರೆ ಅತಿ ದೊಡ್ಡ ಸಮಾಜ ಸೇವೆ, ಪ್ರಕೃತಿ ಇದ್ದರೆ ನಾವು,ಪ್ರಕೃತಿ ಮುನಿದರೆ ಸಾವು, ಪ್ಲಾಸ್ಟಿಕ್ ಬ್ಯಾಕ್ ತ್ಯಜಿಸಿ ಬಟ್ಟೆ ಬ್ಯಾಗ್ ಗಳನ್ನು ಉಪಯೋಗಿಸಿ.ಈ ಘೋಷವಾಕ್ಯಗಳು ಇಂದಿನ ಸಮಾಜಕ್ಕೆ ಬಹಳ ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್ ನ ಬ್ರಹ್ಮಾ ಕುಮಾರ ಆರಾಧ್ಯ, ಸಂಜೀವಿನಿ ಟ್ರಸ್ಟ್ ನ ಕಾರ್ಯದರ್ಶಿ ಬಿಕೆ ಸತೀಶ್, ಆರೋಗ್ಯ ಇಲಾಖೆಯ, ಗೀತಾ ಪುಷ್ಪ, ನ್ಯಾಯಾಂಗ ಇಲಾಖೆಯ ಶ್ರೀನಿವಾಸ್, ಶಿಕ್ಷಣ ಇಲಾಖೆಯ ನಾಗರಾಜು ಪ್ರಮಿಳ ಊದುಗಡ್ಡಿ, ಸುಂದರ್, ಅರಣ್ಯ ಇಲಾಖೆಯ ಪುಟ್ಟಶೇಖರ ಮೂರ್ತಿ ಪೊಲೀಸ್ ಇಲಾಖೆಯ ಸಿದ್ದಯ್ಯ, ಲಕ್ಷ್ಮೀನರಸಿಂಹ ಪ್ರಸಾದ್, ಸುನೀತಾ, ರಂಗನಾಥ್, ಅಕ್ಷತಾ ಜೈನ್, ಪಾರ್ವತಿ ಮುಂತಾದವರು ಹಾಜರಿದ್ದರು

admin
the authoradmin

Leave a Reply

Translate to any language you want