ಶ್ರೇಷ್ಠ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವಜ್ಙಾನಿ… ಅಂಬೇಡ್ಕರ್ ಭವನ ಕಾಮಗಾರಿಗೆ ಚಾಲನೆ

ಕೆ.ಆರ್.ನಗರ(ಜಿಟೆಕ್ ಶಂಕರ್): ದೇಶದ ಸರ್ವ ಜನಾಂಗದವರಿಗೂ ಶಕ್ತಿ ಮತ್ತು ದ್ವನಿ ನೀಡುವಂತಹ ಶ್ರೇಷ್ಠ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವಜ್ಙಾನಿ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನವ ಭಾರತ ನಿರ್ಮಾಣಕ್ಕೆ ಸಂವಿದಾನ ಶಿಲ್ಪಿಯ ಕೊಡುಗೆ ಅಪಾರ ಎಂದ ಅವರು, ಶಿಕ್ಷಣದಿಂದ ಸರ್ವವನ್ನು ಸಾಧಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಜ್ಙಾನ ಸೂರ್ಯನ ತತ್ವ ಸಿದ್ದಾಂತ ಮತ್ತು ಆದರ್ಶಗಳನ್ನು ನಾವೆಲ್ಲಾ ಪಾಲಿಸಬೇಕು ಎಂದು ತಿಳಿಸಿದರು.
ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಮುಂದಿನ ದಿನಗಳಲ್ಲಿ ಜ್ಙಾನ ಕೇಂದ್ರವಾಗಲಿ ಎಂದು ಆಶಿಸಿದ ಶಾಸಕರು 75 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಭವನಕ್ಕೆ ಈಗಾಗಲೇ 18 ಲಕ್ಷ ಹಣ ಬಿಡುಗಡೆಯಾಗಿದ್ದು ತ್ವರಿತವಾಗಿ ಕಾಮಗಾರಿ ಮುಗಿಸಬೇಕೆಂದು ಸೂಚಿಸಿದರು.

ಕಳೆದ 30 ತಿಂಗಳ ಅವಧಿಯಲ್ಲಿ ನಾನು ಕ್ಷೇತ್ರದ ಅಭಿವೃದ್ದಿಗೆ 600 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು ಮುಂದೆ ಮತ್ತಷ್ಠು ಹಣ ತಂದು ಸಮಗ್ರ ಅಭಿವೃದ್ದಿ ಮಾಡುವುದಾಗಿ ಘೋಷಿಸಿದ ಡಿ.ರವಿಶಂಕರ್ ಎಲ್ಲಾ ವರ್ಗದ ಸಮುದಾಯ ಭವನಗಳಲ್ಲಿ ಗ್ರಂಥಾಲಯ ಆರಂಬಿಸುವುದಾಗಿ ಘೋಷಿಸಿದರು.
ಕೆ.ಆರ್.ನಗರ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿಗೆ ಶಾಸಕರ ನಿಧಿಯಿಂದ 1 ಕೋಟಿ ಹಣ ನೀಡುವುದರೊಂದಿಗೆ ಬಾಬಾ ಸಾಹೇಬರ ಹೊಸ ಪ್ರತಿಮೆಯನ್ನು ತಿಂಗಳಾಂತ್ಯದ ವೇಳೆಗೆ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಪ್ರಕಟಿಸಿದರು.
ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಬೌದ್ದಬಂತೇಜಿ, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ, ಎಸ್.ಸಿ.ಘಟಕದ ಅಧ್ಯಕ್ಷರುಗಳಾದ ನಂದೀಶ್, ಕಂಠಿಕುಮಾರ್, ಎಸ್.ಟಿ.ಘಟಕದ ಅಧ್ಯಕ್ಷ ತಿಪ್ಪೂರು ಮಹದೇವನಾಯಕ, ವಕ್ತಾರ ಸೈಯದ್ ಜಾಬೀರ್, ತಂಬಾಕು ಮಂಡಳಿಯ ನಿವೃತ್ತ ಅಧೀಕ್ಷಕ ಬಿ.ಮಂಜುರಾಜು, ಮುಖಂಡರಾದ ಜಿ.ಎಸ್.ವೆಂಕಟೇಶ್, ನಾಗರಾಜು, ಪುಟ್ಟಣ್ಣಯ್ಯ, ರಾಜಯ್ಯ, ಕಗ್ಗೆರೆಬಸವೇಶ್, ರಾಮಕೃಷ್ಣ, ದೊಡ್ಡಯ್ಯ, ನಾಡಗೌಡ, ನಂಜಪ್ಪ, ಮಹದೇವನಾಯಕ ಮತ್ತಿತರರು ಹಾಜರಿದ್ದರು.







