News

ಬೆಂಗಳೂರು ಬಿ.ಎಸ್.ಎಫ್ ತರಬೇತಿ ಕೇಂದ್ರದಲ್ಲಿ ಪಾಸಿಂಗ್ ಔಟ್ ಪರೇಡ್… ಡಿಜಿ ಪ್ರವೀಣ್ ಕುಮಾರ್ ಹೇಳಿದ್ದೇನು?

ಬೆಂಗಳೂರು: ಬೆಂಗಳೂರಿನ ಬಿ.ಎಸ್.ಎಫ್ ಉಪ ತರಬೇತಿ ಕೇಂದ್ರವು ಐಎಸ್ ಓ (ISO) ಮಾನ್ಯತೆ ಪಡೆದಿದ್ದು, ‘ಉತ್ಕೃಷ್ಟ ಕೇಂದ್ರ’ (Centre of Excellence) ಎಂದು ಗುರುತಿಸಿಕೊಂಡಿದೆ. ಬಿ.ಎಸ್.ಎಫ್ ಸಿಬ್ಬಂದಿ ಮಾತ್ರವಲ್ಲದೆ ವಿವಿಧ ರಾಜ್ಯಗಳ ಪೆÇಲೀಸ್ ಪಡೆಗಳಿಗೂ ಇಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಬೆಂಗಳೂರು ಬಿ.ಎಸ್.ಎಫ್ ಡಿ.ಜಿ ಪ್ರವೀಣ್ ಕುಮಾರ್, ಐ.ಪಿ.ಎಸ್ ಅವರು ಹರ್ಷ ವ್ಯಕ್ತಪಡಿಸಿದರು.

ಬಿ.ಎಸ್.ಎಫ್ ಬೆಂಗಳೂರು ಉಪ ತರಬೇತಿ ಕೇಂದ್ರದಲ್ಲಿ  ಹಮ್ಮಿಕೊಳ್ಳಲಾಗಿದ್ದ ಪ್ರಶಿಕ್ಷಣಾರ್ಥಿಗಳ ಪಾಸಿಂಗ್ ಔಟ್ ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪಥಸಂಚಲನದ ಗೌರವ ವಂದನೆ ಸ್ವೀಕರಿಸಿ ಮಾತನಾಡಿ ಇತ್ತೀಚಿನ ಆಪರೇಷನ್ ಸಿಂಧೂರ್‍ನಲ್ಲಿ (ಮೇ 2025) ಭಯೋತ್ಪಾದನಾ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ನಡೆಸಿದ ಈ ಕಾರ್ಯಾಚರಣೆಯಲ್ಲಿ ಬಿ.ಎಸ್.ಎಫ್ 118 ಕ್ಕೂ ಹೆಚ್ಚು ಪಾಕಿಸ್ತಾನಿ ಪೋಸ್ಟ್‍ಗಳನ್ನು ಧ್ವಂಸಗೊಳಿಸಿತ್ತು ಎಂದು ಹೇಳಿದರು.

ಪ್ರಸ್ತುತ ಬಿ.ಎಸ್.ಎಫ್ 2.63 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿದ್ದು, ವಿಶ್ವದ ಅತಿದೊಡ್ಡ ಗಡಿ ರಕ್ಷಣಾ ಪಡೆಯಾಗಿದೆ. ದೇಶದ ಆಂತರಿಕ ಮತ್ತು ಬಾಹ್ಯವಾಗಿ ಕಾಣಿಸಿಕೊಳ್ಳುವ ಸಂದಿಗ್ಧ ಸಂದರ್ಭಗಳಲ್ಲಿ ಹೋರಾಡಿ ಮರಣ ಹೊಂದಿದ ಯೋಧರಿಗೆ ಮರಣೋತ್ತರವಾಗಿ ‘ವೀರ ಚಕ್ರ’ ನೀಡಿ ಗೌರವಿಸಲಾಗಿದೆ.

ಬಿ.ಎಸ್.ಎಫ್ ಸಂಸ್ಥೆಯ ಹಿರಿಮೆ ಮತ್ತು ಕಾರ್ಯಾಚರಣೆಗಳ ಕುರಿತು ತಮ್ಮ ಭಾಷಣದಲ್ಲಿ ಬಿ.ಎಸ್.ಎಫ್ ನ ಇತಿಹಾಸ ಮತ್ತು ಸಾಧನೆಗಳನ್ನು ಸ್ಮರಿಸಿದ ಅವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಗಳನ್ನು ರಕ್ಷಿಸಲು 1965 ರಲ್ಲಿ ಬಿ.ಎಸ್.ಎಫ್ ಸ್ಥಾಪಿಸಲಾಯಿತು. 1971 ರ ಯುದ್ಧದಲ್ಲಿ ಬಾಂಗ್ಲಾದೇಶದ ವಿಮೋಚನೆಯಲ್ಲಿ ಈ ಪಡೆ ನಿರ್ಣಾಯಕ ಪಾತ್ರ ವಹಿಸಿದೆ. ಪ್ರಸ್ತುತ ಒಡಿಶಾ ಮತ್ತು ಛತ್ತೀಸ್‍ ಗಢದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 16 ಬೆಟಾಲಿಯನ್‍ಗಳನ್ನು ನಿಯೋಜಿಸಲಾಗಿದೆ ಎಂದರು.

ಬೆಂಗಳೂರಿನ ಯಲಹಂಕದಲ್ಲಿರುವ ಬಿ.ಎಸ್.ಎಫ್ ಉಪ ತರಬೇತಿ ಕೇಂದ್ರದಲ್ಲಿ (STC)  ಇಂದು ಶನಿವಾರ ಬ್ಯಾಚ್ ಸಂಖ್ಯೆ 608 ಮತ್ತು 609 ರ ಒಟ್ಟು 383 ಕಾನ್ಸ್‍ಟೇಬಲ್ (ಜನರಲ್ ಡ್ಯೂಟಿ) ಪ್ರಶಿಕ್ಷಣಾರ್ಥಿಗಳ ಪಾಸಿಂಗ್ ಔಟ್ ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು.

ತರಬೇತಿಯ ವಿವಿಧ ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಪದಕಗಳನ್ನು ನೀಡಿ ಗೌರವಿಸಲಾಯಿತು. ಬ್ಯಾಚ್ ಸಂಖ್ಯೆ 608 ರ ಗ್ರೂಪ್ ಎ ನಲ್ಲಿ ಪ್ರಥಮ ಸ್ಥಾನ ನರೇಂದರ್ ಕುಮಾರ್, ದ್ವಿತೀಯ ಸ್ಥಾನ ಸರೋಜ ಭುಕ್ತ, ಅತ್ಯುತ್ತಮ ಶೂಟರ್ ರನ್ಸಿಂಗ್ ಬೋರೋ, ಅತ್ಯುತ್ತಮ ಸಹಿಷ್ಣುತೆ ಸುರೇಶ್ ಶರ್ಮಾ ಸೇರಿದಂತೆ ಅತ್ಯುತ್ತಮ ಪಥಸಂಚಲನಕ್ಕಾಗಿ ಯೋಗೇಶ್ ಕುಮಾರ್ ಅವರು ಪ್ರಶಸ್ತಿಗೆ ಭಾಜನರಾದರು.

ಬ್ಯಾಚ್ ಸಂಖ್ಯೆ 609 ಗ್ರೂಪ್ ಬಿ ನಲ್ಲಿ ಪ್ರಥಮ  ಮನೀಶ್ ಕುಮಾರ್, ದ್ವಿತೀಯ ನಿರಂಜನ್, ಅತ್ಯುತ್ತಮ ಶೂಟರ್ ಸೋನು ಕುಮಾರ್, ಅತ್ಯುತ್ತಮ ಸಹಿಷ್ಣುತೆ ಮುಖೇಶ್ ಹಾಗೂ ಅತ್ಯುತ್ತಮ ಪಥಸಂಚಲನ  ಪಂಕಜ್ ಕುಮಾರ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಮಾರಂಭದಲ್ಲಿ ಪ್ರಶಿಕ್ಷಣಾರ್ಥಿಗಳ ಕುಟುಂಬ ಸದಸ್ಯರು, ಗಣ್ಯರು ಮತ್ತು ನಾಗರಿಕ ಸಂಘಟನೆಗಳ ಅತಿಥಿಗಳು ಪಾಲ್ಗೊಂಡಿದ್ದರು.

admin
the authoradmin

Leave a Reply

Translate to any language you want