News

ಮುಳ್ಳೂರು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್  ನಿಂದ ಗ್ರಾ.ಪಂ ಮಾಜಿ ಉಪಾಧ್ಯಕ್ಷರ ಮನೆ  ಸಂಪೂರ್ಣ ನಾಶ

ಚಾಮರಾಜನಗರ:ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಗ್ರಾ.ಪಂ ಮಾಜಿ ಉಪಾಧ್ಯಕ್ಷರ ಮನೆ ಸಂಪೂರ್ಣ ಭಸ್ಮವಾಗಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಗ್ರಾಮದ ನಿವಾಸಿ ಮುಳ್ಳೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಮಹೇಶ್ ಅವರ ಮನೆಯೇ ವಿದ್ಯುತ್ ಶಾರ್ಟ್ ಸರ್ಕ್ಯೂಟ್  ನಿಂದ ಭಸ್ಮವಾಗಿದೆ. ಈ ಘಟನೆಯಲ್ಲಿ ಮನೆ ಸಂಪೂರ್ಣ ಸುಟ್ಟುಹೋಗಿದ್ದು, ಚಿನ್ನಾಭರಣ ಹಾಗೂ ನಗದು ಸೇರಿದಂತೆ  ಮನೆ ಸುಟ್ಟು ಹೋಗಿದೆ. ಘಟನೆಯಲ್ಲಿ 40 ಗ್ರಾಂ ಚಿನ್ನಾಭರಣ(ಓಲೆ, ಉಂಗುರ, ಸರ) 2 ಲಕ್ಷ ನಗದು, ಟಿ.ವಿ, ಫ್ಯಾನ್, ಮನೆ ಹಾಗೂ ಇತರೆ ದಾಖಲಾತಿ ಸೇರಿದಂತೆ ಎಲೆಕ್ಟ್ರಿಕ್ ಸಾಮಾಗ್ರಿಗಳು ಸುಟ್ಟು ಕರಕಲಾಗಿದೆ.

ಮಹೇಶ್ ಅವರ ಮನೆಯಲ್ಲಿದ್ದವರು ಹೊರಗಡೆ ಹೋಗಿದ್ದಾಗ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ವುಂಟಾಗಿ ಬೆಂಕಿ ಹೊತ್ತಿ ಉರಿಯಲು ಆರಂಭಿಸಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಗ್ಯಾಸ್ ಹೊತ್ತಿದೆ ಎಂದು ದೂರದಿಂದ ಬೆಂಕಿ ನಂದಿಸಲು ಪ್ರಯತ್ನ ಮಾಡಿ ನಂತರ ಅಗ್ನಿಶಾಮಕ ದಳದವರನ್ನು ಕರೆಯಿಸಿ ಬೆಂಕಿ ನಂದಿಸುವಷ್ಟರಲ್ಲಿ ಮನೆ ಕಟ್ಟಲು ಸಂಗ್ರಹಿಸಿಟ್ಟಿದ್ದ 2 ಲಕ್ಷ ನಗದು ಹಾಗೂ ಚಿನ್ನಾಭರಣ, ಇತರೆ ಸಾಮಾಗ್ರಿಗಳು, ದಾಖಲಾತಿಗಳು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.

ಬಳಿಕ ಸ್ಥಳಕ್ಕೆ ಆಗಮಿಸಿದ್ದ ಗ್ರಾ.ಪಂ ಅಧ್ಯಕ್ಷ, ಸದಸ್ಯರು ಹಾಗೂ ಮುಖಂಡರು ಭೇಟಿ ನೀಡಿ ನೋಡಿ, ವಿದ್ಯುತ್ ಸರ್ಕ್ಯೂಟ್ ನಿಂದಾಗಿ ನಷ್ಟವಾದ ಕುಟುಂಬಕ್ಕೆ ಸೂಕ್ತ ಪರಿಹಾರ ಅವರ ಕುಟುಂಬ ಚಂದ್ರಮ್ಮ ನಾಗರಾಜು ಹಾಗೂ ಗ್ರಾ.ಪಂ ಸದಸ್ಯ ಮಹೇಶ್ ಉಳಿದುಕೊಳ್ಳಲು ಸೂಕ್ತ  ವ್ಯವಸ್ಥೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಮುಳ್ಳೂರು ಗ್ರಾ.ಪಂಅಧ್ಯಕ್ಷರು ಕಮಲಮ್ಮ, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರು ನಂಜುಂಡಸ್ವಾಮಿ, ಮಹದೇವಮ್ಮ, ಮುಖಂಡರು ಮುಳ್ಳೂರು ಮಂಜು ಹಾಗೂ ಇತರರು ಇದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

admin
the authoradmin

Leave a Reply

Translate to any language you want