ಕನ್ನಡ ಚಿತ್ರರಂಗಕ್ಕೆ ತಮ್ಮದೆ ಆದ ಕೊಡುಗೆ ನೀಡುವ ಮೂಲಕ ಚಿತ್ರರಂಗ ಬೃಹತ್ ಆಲದ ಮರವಾಗಿ ಬೆಳೆಯಲು ಮಹನೀಯರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರ ಕೊಡುಗೆ ಹಲವು ರೀತಿಯಲ್ಲಿದ್ದು ಅಂತಹ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳಲ್ಲಿ ಬಿ.ಎಂ.ವೆಂಕಟೇಶ್ ಒಬ್ಬರು… ಅವರು ನಮ್ಮನ್ನಗಲಿ ಸುಮಾರು 15 ವರ್ಷಗಳೇ ಕಳೆದು ಹೋಗಿವೆ. ಆದರೆ ಅವರು ಮಾಡಿದ ಸಾಧನೆ ಹಸಿರಾಗಿದೆ. ಅವರ ಬಗ್ಗೆ ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಅಕ್ಷರಗಳ ಮೂಲಕ ಪರಿಚಯಿಸಿದ್ದಾರೆ.
ಆಚಂದ್ರಾರ್ಕ ಅಜರಾಮರವಾದ ನಿತ್ಯ ನಿರಂತರ ಅತ್ಯಂತ ಜನಪ್ರಿಯವಾದ “ಆಕಾಶವೆ.. ಬೀಳಲಿ..ಮೇಲೆ…” ಚಿತ್ರಗೀತೆ ಇರುವ ನ್ಯಾಯವೇ ದೇವರು ಸಿನಿಮಾ ನೀಡಿದಂಥ ಮಹಾರಾಜ ಮೂವೀಸ್ ಸಂಸ್ಥೆಯ ಮಾಲೀಕ. ತನ್ನದೇ ಸ್ವಂತ ಚಿತ್ರನಿರ್ಮಾಣ ಸಂಸ್ಥೆಯ ಮೂಲಕ ಹದಿನೆಂಟು ಶ್ರೇಷ್ಠ ಚಲನಚಿತ್ರಗಳನ್ನು ಕನ್ನಡ ಕುಲಕೋಟಿಗೆ ನೀಡಿ ಚಂದನವನ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಖ್ಯಾತ ಚಿತ್ರೋದ್ಯಮಿ ಹಾಗೂ ಜನಪ್ರಿಯ ನಾಯಕನಟ-ಕಂ-ಪೋಷಕನಟ ಬಿ.ಎಂ. ವೆಂಕಟೇಶ್!

1960 ಮತ್ತು 1970ರ ದಶಕದಲ್ಲಿ ಬೇಡಿಕೆಯಲ್ಲಿದ್ದ ಹೀರೋ ಗಳಲ್ಲಿ ಪ್ರಮುಖ ನಾಯಕನಟರಾದ ಬಿ.ಎಂ.ವೆಂಕಟೇಶ್ 1964ರಲ್ಲಿ ತೆರೆಕಂಡ ಹುಣಸೂರು ಕೃಷ್ಣಮೂರ್ತಿಯವರ ನಿರ್ದೇಶನದ ವೀರಸಂಕಲ್ಪ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ನಂತರ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಾದ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲೂ ನಟಿಸುವ ಅದೃಷ್ಟ ಅವಕಾಶ ದೊರಕಿತು. ಮೊದಲನೇದು “ಅಣ್ಣಾ.. ನಿನ್ನ.. ಸೋದರಿಯನ್ನ….” ಎಂದು ಹಾಡುತ್ತ ಖ್ಯಾತನಟಿ ಚಂದ್ರಕಲಾ ಅಭಿನಯಿಸಿದ ಒಂದೇ ಬಳ್ಳಿಯ ಹೂಗಳು ಮತ್ತು ಎರಡನೇದು “ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ….” ಗೀತೆಯುಳ್ಳ, ಖ್ಯಾತನಟಿ ವಾಣಿಶ್ರೀ ನಟಿಸಿದ ಪಾತಾಳಮೋಹಿನಿ ಚಿತ್ರಗಳಲ್ಲಿ ಭರ್ಜರಿ ಪಾತ್ರದಲ್ಲಿ ಅಭಿನಯಿಸಿ ಅತ್ಯಂತ ಜನಪ್ರಿಯ ನಟರಾದರು.
ಈ ಚಿತ್ರದಲ್ಲಿ ಮೋಹಿನಿಯು ಮೋಡಗಳ ಮಧ್ಯೆ ತೇಲುತ್ತ ಹಾಡುವ “ಹಗಲೋ.. ಇರುಳೋ…” ಎಂಬ ಗೀತೆಯು ಕನ್ನಡ ಚಿತ್ರರಂಗದ ಮೊಟ್ಟಮೊದಲ ದೆವ್ವದ ಹಾಡು ಎಂಬ ಕೀರ್ತಿಗೆ ಹೆಸರಾಗಿದೆ. ಮೇಲ್ಕಂಡ ಮೂರೂ ಚಿತ್ರಗೀತೆಗಳು ಇವತ್ತಿಗೂ ಸಿನಿಪ್ರಿಯರ, ಚಿತ್ರರಸಿಕರ ಆಪ್ಯಾಯಮಾನ ಫಿಲಂ ಹಿಟ್ ಸಾಂಗ್ಸ್….?!
ಹಲವಾರು ಹೊಸ ನಟ-ನಟಿಯರನ್ನು ಪರಿಚಯಿಸುವ ಮೂಲಕ ಅನೇಕ ಉತ್ತಮ ಚಿತ್ರಗಳನ್ನು ತಯಾರಿಸಿದರು. ಇವೆಲ್ಲವೂ ಒಂದು ಸ್ಮರಣೀಯ ಇತಿಹಾಸ. ಧನಪಿಶಾಚಿ, ಅಡ್ಡದಾರಿ, ಪಾತಾಳಮೋಹಿನಿ, ಮೇಯರ್ ಮುತ್ತಣ್ಣ, ಭೂತಯ್ಯನ ಮಗ ಅಯ್ಯು, ಮುಂತಾದ ಹಲವಾರು ಸಿನಿಮಾಗಳಲ್ಲಿ ಇವರ ಮನೋಜ್ಞ ಅಭಿನಯ ಶ್ಲಾಘನೀಯ. ಆರಂಭದಿಂದಲೂ ತಮಗೆ ದೊರೆತ ಯಾವುದೇ ಪಾತ್ರವನ್ನು ಕಡೆಗಣಿಸದೇ ಉತ್ತಮವಾಗಿ ನಟಿಸಿ ನಾಯಕ- ಪೋಷಕ ನಟರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಲ್ಲದೇ ಹಲವಾರು ಪ್ರಶಸ್ತಿ, ಬಹುಮಾನವನ್ನೂ ಗಳಿಸಿದರು.

ದಿನಾಂಕ 1.1.1934 ರಂದು ಇಮ್ಮಡಿ ಹಳ್ಳಿಯಲ್ಲಿ ಜನಿಸಿದ ಬಿ.ಎಂ.ವೆಂಕಟೇಶ್ 1960ರ ದಶಕದಲ್ಲಿ ಸ್ಯಾಂಡಲ್‌ವುಡ್‌ನ ಹೀರೋಗಳಲ್ಲಿ ಒಬ್ಬರಾಗಿದ್ದರು. ನಟ, ನಿರ್ಮಾಪಕ, ನಿರ್ದೇಶಕ, ಕಥೆ-ಚಿತ್ರಕಥೆ ರಚನೆಕಾರ ಹಾಗೂ ಕಂಠದಾನ ಕಲಾವಿದನಾಗಿ ಖ್ಯಾತಿ ಗಳಿಸಿದ್ದರು. ಮಹಾರಾಜ ಮೂವೀಸ್ ಮತ್ತು ಮಮತಾ ಮೂವೀಸ್ ಎಂಬ ಎರಡು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಸಂಸ್ಥಾಪಕ- ಮಾಲೀಕರಾಗಿ ಅನೇಕರಿಗೆ ಉದ್ಯೋಗ ನೀಡುವ ಮೂಲಕ ಬದುಕು ಕಟ್ಟಿಕೊಂಡವರ ಅನ್ನದಾತ ಎನಿಸಿದ್ದರು. ದುಡಿಯುವ ಶ್ರಮಜೀವಿಗಳ ಜೀವನೋಪಾಯಕ್ಕೆ ನಿಸ್ವಾರ್ಥ ಧಣಿಯಾಗಿ ಬಡವರ ದಾರಿದೀಪವಾಗಿದ್ದರು. ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಮೇರುನಟ ಮತ್ತು ಸಾರ್ಥಕ ನಿರ್ಮಾಪಕ.
ಬಿ.ಎಂ.ವೆಂಕಟೇಶ್ ಕೇವಲ ನಟ- ನಿರ್ಮಾಪಕ ಮಾತ್ರ ಆಗಿರಲಿಲ್ಲ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ ಕೆಲವು ಕನ್ನಡೇತರ ನಟರಿಗೆ ಕಂಠದಾನ ಕಲಾವಿದನಾಗಿಯೂ ಅಮೋಘ ಸೇವೆ ಸಲ್ಲಿಸಿದ್ದರು. ಇಂತಹ ಪ್ರತಿಭಾವಂತ ಕಲಾವಿದನಿಗೆ ಹತ್ತಾರು ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರ ಪ್ರಶಸ್ತಿ ದೊರಕಿತ್ತು. ಬಹುಮುಖ ಪ್ರತಿಭೆಯ ನಟ 17 ಮೇ 2011ರಂದು ಬೆಂಗಳೂರಲ್ಲಿ ಸ್ವರ್ಗಸ್ಥರಾದರು. ಓರ್ವ ಸಮರ್ಥ ಚಿತ್ರೋದ್ಯಮಿ ಹಾಗೂ ಉತ್ತಮ ನಟ-ನಿರ್ಮಾಪಕ ನಿರ್ದೇಶಕ ಬಿ.ಎಂ.ವೆಂಕಟೇಶ್, ಸೂರ್ಯ ಚಂದ್ರ ಇರೋವರೆಗೂ ಚಂದನವನ ಚರಿತ್ರೆಯಲ್ಲಿ ಅಮರ!

ಬಿ.ಎಂ.ವೆಂಕಟೇಶ್ ನಟಿಸಿದ ಫಿಲಂಸ್‍ಗಳನ್ನು ನೋಡಿದ್ದೇ ಆದರೆ, ವೀರಸಂಕಲ್ಪ, ಪೋಸ್ಟ್ ಮಾಸ್ಟರ್, ಪಾತಾಳಮೋಹಿನಿ, ಮಯೂರ, ಭೂತಯ್ಯನಮಗಅಯ್ಯು, ಮಣ್ಣಿನಮಗಳು, ಕನ್ಯಕಾಪರಮೇಶ್ವರಿಕಥೆ, ಇದುನಮ್ಮದೇಶ, ಒಂದೇ ಬಳ್ಳಿಯ ಹೂಗಳು, ಮಮತೆಯ ಬಂಧನ, ತಬ್ಬಲಿಯುನೀನಾದೆಮಗನೆ, ಶ್ರೀಪುರಂದರದಾಸರು, ತಪ್ಪಿದತಾಳ, ಮಲ್ಲಿಗೆ ಸಂಪಿಗೆ, ಗಣೇಶನಮಹಿಮೆ, ಧನಪಿಶಾಚಿ, ರಾಜಶೇಖರ, ಗಂಡುಗಲಿರಾಮ, ಚಕ್ರತೀರ್ಥ, ಮಹಾಪುರುಷ, ಮಾತೆಯೇಮಹಾಮಂದಿರ, ವಿಜಯಖಡ್ಗ, ನ್ಯಾಯವೇದೇವರು, ಶ್ರೀವೆಂಕಟೇಶ್ವರಮಹಿಮೆ, ಅಡ್ಡದಾರಿ, ಗಂಡಮನೆ ಮಕ್ಕಳು, ಮೇಯರ್ ಮುತ್ತಣ್ಣ, ಮದುವೆ ಮದುವೆ ಮದುವೆ, ವೀರಪ್ಪನ್, ನಾಡಿನಭಾಗ್ಯ, ಹರಕೆಯಕುರಿ, ಕಣ್ಣೀರು, ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ, ಗಂಧದಗುಡಿ-2, ಜಾಜಿಮಲ್ಲಿಗೆ, ಸೇಡಿನಕಿಡಿ, ಸೂಪರ್, ವಾಯುಪುತ್ರ, ಜ್ವಾಲಾಮೋಹಿನಿ, ಶ್ರೀಕ್ಷೇತ್ರ ಆದಿಚುಂಚನಗಿರಿ










ಜನಮನ ಕನ್ನಡ ಪತ್ರಿಕೆಯ ಎಲ್ಲರಿಗೂ ನಮಸ್ಕಾರ. ಕಳೆದ 2/3 ತಿಂಗಳಿಂದ ನಾನೂ ನನ್ನ ಮಿತ್ರರೂ ನಿಮ್ಮ e-newsletter ಪತ್ರಿಕೆಯನ್ನು ಓದುತ್ತಾ ಬಂದಿದ್ದೇವೆ. ಇದರಲ್ಲಿ ಕಂಡುಬಂದ ವಿಶೇಷತೆ ಎಂದರೆ ನಮ್ಮ ದೇಶದ/ರಾಜ್ಯದ ಸಂಸ್ಕೃತಿ ನಾಗರಿಕತೆ ಪರಂಪರೆ ಸಂಬಂಧದ ಮಾನವನ ಸಂಪ್ರದಾಯದ ಹಾಗೂ ನಡವಳಿಕೆ ಬಗ್ಗೆಲ್ಲ ಜತೆಗೆ ಕನ್ನಡ/ಭಾರತೀಯ ಚಿತ್ರರಂಗದ ಹಾಗೂ ಸಮಾಜದ ಬಗ್ಗೆಯೂ ಹಳೇತಲೆಮಾರಿನ ಮತ್ತ ಹೊಸ ಪೀಳಿಗೆಯ ಎಲ್ಲ ಥರದ ಓದುಗರಿಗೂ ಇಷ್ಟವಾಗುವಂತೆ ಮತ್ತು ಆಕರ್ಶಕ ರೀತಿ ಓದುವಂತೆ ಬರೆಯುವ ಹಿರಿಯ ಕುಮಾರಕವಿಯವರ ಪ್ರತಿಯೊಂದು ಲೇಖನವೂ excellent and exciting and useful. ಧನ್ಯವಾದಗಳು ಸರ್.
ಜನಮನ ಕನ್ನಡ ಪತ್ರಿಕೆಯ ಎಲ್ಲರಿಗೂ ನಮಸ್ಕಾರ. ಕಳೆದ 2/3 ತಿಂಗಳಿಂದ ನಾನೂ ನನ್ನ ಮಿತ್ರರೂ ನಿಮ್ಮ e-newsletter ಪತ್ರಿಕೆಯನ್ನು ಓದುತ್ತಾ ಬಂದಿದ್ದೇವೆ. ಇದರಲ್ಲಿ ಕಂಡುಬಂದ ವಿಶೇಷತೆ ಎಂದರೆ ನಮ್ಮ ದೇಶದ/ರಾಜ್ಯದ ಸಂಸ್ಕೃತಿ ನಾಗರಿಕತೆ ಪರಂಪರೆ ಸಂಬಂಧದ ಮಾನವನ ಸಂಪ್ರದಾಯದ ಹಾಗೂ ನಡವಳಿಕೆ ಬಗ್ಗೆಲ್ಲ ಜತೆಗೆ ಕನ್ನಡ/ಭಾರತೀಯ ಚಿತ್ರರಂಗದ ಹಾಗೂ ಸಮಾಜದ ಬಗ್ಗೆಯೂ ಹಳೇತಲೆಮಾರಿನ ಮತ್ತ ಹೊಸ ಪೀಳಿಗೆಯ ಎಲ್ಲ ಥರದ ಓದುಗರಿಗೂ ಇಷ್ಟವಾಗುವಂತೆ ಮತ್ತು ಆಕರ್ಶಕ ರೀತಿ ಓದುವಂತೆ ಬರೆಯುವ ಹಿರಿಯ ಕುಮಾರಕವಿಯವರ ಪ್ರತಿಯೊಂದು ಲೇಖನವೂ ಅನಂತ ಉಪಯುಕ್ತ ಸಂಗ್ರಹಯೋಗ್ಯ, ಧನ್ಯವಾದಗಳು ಸರ್.
ಬಿಎಂ ವೆಂಕಟೇಶ್ ಎಂಬ ಈ ಹಳೇಕಾಲದ ನಟನ ಬಗ್ಗೆ ಮತ್ತು ಇವರ ಸಾಧನೆ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ನಮಂಥ ಯುವಜನ ಪೀಳಿಗೆಯವರಿಗೆ ತಿಳಿಸಿ ಕೊಡುವಂತಹ ಈ ರೀತಿಯ ಲೇಖನ ಸ್ವಾಗತಾರ್ಹ. ನಿಮಗೂ ಮತ್ತು ಖ್ಯಾತ ಲೇಖಕ ನಟರಾಜ ಕವಿಯವರಿಗೂ ಎಲ್ಲ ಯುವಜನತೆ ಪರವಾಗಿ ನಮ್ಮ ಕೃತಜ್ಞತೆ ಪೂರಕ ಧನ್ಯವಾದಗಳು,,ಸರ್.. ನಮಸ್ಕಾರ
ಬಿಎಂ ವೆಂಕಟೇಶ್ ಎಂಬ ಈ ಹಳೇಕಾಲದ ನಟನ ಬಗ್ಗೆ ಮತ್ತು ಇವರ ಸಾಧನೆ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ನಮಂಥ ಯುವಜನ ಪೀಳಿಗೆಯವರಿಗೆ ತಿಳಿಸಿ ಕೊಡುವಂತಹ ಈ ರೀತಿಯ ಲೇಖನ ಸ್ವಾಗತಾರ್ಹ. ನಿಮಗೂ ಮತ್ತು ಖ್ಯಾತ ಲೇಖಕ ನಟರಾಜ ಕವಿಯವರಿಗೂ ಎಲ್ಲ ಯುವಜನತೆ ಪರವಾಗಿ ಕೃತಜ್ಞತಾ ಪೂರ್ವಕ ಧನ್ಯವಾದಗಳು ಸರ್..
ಬಿಎಂ ವೆಂಕಟೇಶ್ ರವರನ್ನು ಮರೆಯಲಾದೀತೆ. ನ್ಯಾಯವೇ ದೇವರು, ಭೂತಯ್ಯನ ಮಗ ಅಯ್ಯು, ನಾಡಿನಭಾಗ್ಯ, ಪಾತಾಳಮೋಹಿನಿ …
ನಟರಾಜ ರವರ ಲೇಖನ ಸಮಂಜಸ ಮತ್ತು ಸಮಯೋಚಿತ. ಆಗಾಗ್ಗೆ ಕುಮಾರಕವಿ ಅಂಥವರು ಇಂಥ ಹಳೇ ಮಹನೀಯರ ಲೇಖನ ಬರೆಯದೇ ಹೋದಾಗ ನಮಂಥವರು ಹಳೇ ಕಲಾವಿದರನ್ನು ಮರೆತೆ ಹೋಗುತ್ತೇವೆ ಅಂತ ನನ್ನ ಅನಿಸಿಕೆ. ಹಾಗಾಗಿ ಎಲ್ಲರಿಗೂ ನನ್ನ ಮನಪೂರ್ವಕ ಧನ್ಯವಾದಗಳು.
ನಟ ಬಿಎಂ ವೆಂಕಟೇಶ್ ರನ್ನು ಮರೆಯಲಾದೀತೆ. ನ್ಯಾಯವೇ ದೇವರು, ಭೂತಯ್ಯನ ಮಗ ಅಯ್ಯು, ನಾಡಿನಭಾಗ್ಯ, ಪಾತಾಳಮೋಹಿನಿ, ಮುಂತಾದ ಸಿನಿಮಾದ ನಟನೆ ಸೂಪರ್… ಇಂಥವರ ಕುರಿತು ಕವಿ ನಟರಾಜರವರ ಲೇಖನ ಸಮಂಜಸ ಮತ್ತು ಸಮಯೋಚಿತ. ಆಗಾಗ್ಗೆ ಕುಮಾರಕವಿ ಅಂಥವರು ಇಂಥ ಹಳೇ ಮಹನೀಯರ ಲೇಖನ ಬರೆಯದೇ ಹೋದಾಗ ನಮ್ಮಂಥವರು ಹಳೇ ಕಲಾವಿದರನ್ನು ಮರೆತೆ ಹೋಗುತ್ತೇವೆ ಅಂತ ನನ್ನ ಅನಿಸಿಕೆ. ಹಾಗಾಗಿ ಎಲ್ಲರಿಗೂ ನನ್ನ ಮನಪೂರ್ವಕ ಧನ್ಯವಾದಗಳು.
ಧನ್ಯವಾದ ಲವ ಸರ್
Excellent and extraordinary article written by senior writer Mr BN NATARAJ sir on one of the SANDALWOOD’s senior film industrialists as well as actors BM VENKATESH. Thanks for you all. Keep publishing this type of useful and entertaining articles forever….. once again thank you so much sir 🙏 ☺ ❤
Excellent and extraordinary article written by senior writer Mr BN NATARAJ sir on one of the SANDALWOOD’s senior film industrialists as well as actors BM VENKATESH. Thanks for you all. Keep publishing this type of useful and entertaining articles forever….. once again thank you so much sir 🙏 ☺ ❤ SRIKANTH SHETTY UDUPI,
Excellent and extraordinary article written by senior writer Mr BN NATARAJ sir on one of the SANDALWOOD’s senior film industrialists as well as actors BM VENKATESH. Thanks for you all. Keep publishing this type of useful and entertaining articles forever….. once again thank you so much sir 🙏 ☺ ❤ SRIKANTH SHETTY UDUPI/BENGALURU
BM VENKATESH ravara article is superb… thank you very much to you all, especially KUMARA KAVI NATARAJA sir
BM VENKATESH ravara article is superb… thank you very much to you all, especially KUMARA KAVI NATARAJA sir kannada typing script illade iddudarinda kannadavannu English letters moolaka type maadiddene, sorry…
BM VENKATESH ravara article is superb… thank you very much to you all, especially KUMARA KAVI NATARAJA sir kannada typing script illade iddudarinda kannadavannu English letters moolaka type maadiddene, OK 😞 sorry…
nata nirmapaka BM VENKATESH ravara article tumba chennagide. Namaskara NATARAJ sir. Mysurige yaavaga barteera sir, angadige banni, nodabeku nimmannu, namaskara sir. RAMESH, Ramakrishna Nagar, Mysore
nata nirmapaka BM VENKATESH ravara article tumba chennagide. Namaskara NATARAJ sir. Mysurige yaavaga barteera sir, angadige banni, nodabeku nimmannu, namaskara sir. RAMESH CYCLES, R.K.Nagar, Mysuru.
1960 ರ ದಶಕದ ಚೆಲುವನಟ ಬಿಎಂ ವೆಂಕಟೇಶ್ ಬಗ್ಗೆ ಕುಮಾರಕವಿಯವರು ಉತ್ತಮ ಲೇಖನ ಬರೆದಿದ್ದಾರೆ, ನಾನೂ ನಮ್ಮ ಕುಟುಂಬದವರೂ ಓದಿ ಸಂತಸ ಪಟ್ಟೆವು, ಧನ್ಯವಾದ ಸರ್
BM VENKATESH article tumba chennagide, abhinandane galu kumarakavigale, mattu dhanyavada publisher JANAMANA KANNADA.
BM VENKATESH article tumba chennagide, abhinandane galu kumarakavigale, mattu dhanyavada publisher JA
Janamana Kannada, -MAMATA SHENOY.
ನಮಸ್ಕಾರ ಸರ್, ಹಿರಿಯ ನಟ ಬಿಎಂ ವೆಂಕಟೇಶ್ ರವರ ಲೇಖನ ಬಹಳ ಸೊಗಸಾಗಿದೆ. ನನಗೆ ತುಂಬ ಇಷ್ಟವಾಯಿತು, ಧನ್ಯವಾದ