ಚಾಮರಾಜನಗರ: ಈಗಿನ ತಂತ್ರಜ್ಞಾನ ಯುಗದಲ್ಲಿ ಡಿಟಿಜಲ್ ಕಳ್ಳರು ನಿರಪರಾಧಿಗಳನ್ನು ಅಪರಾಧಾರಿಗಳನ್ನಾಗಿ, ಅಪರಾಧಿಗಳನ್ನು ನಿರಪರಾಧಿಗಳನ್ನಾಗಿ ಮಾಡಲಿಕ್ಕಾಗಿ ಲಕ್ಷ, ಲಕ್ಷ ಹಣವನ್ನು ಲೂಟಿ ಹೊಡೆಯುವುದಕ್ಕಾಗಿ ಮೊಬೈಲ್ ನೊಳಗೆ ನುಸುಳುತಿದ್ದಾರೆ. ಆದ್ದರಿಂದ ಮಾತೆಯರು ಅನವಶ್ಯಕ ಫೋನ್ ಕರೆಗಳಿಗೆ ಓಟಿಪಿ ನೀಡದಂತೆ, ಸೈಬರ್ ಕ್ರೈಂ ಪೊಲೀಸ್ ಇಲಾಖೆಯ ಎಎಸ್ಐ ರಮ್ಯ ಸಲಹೆ ನೀಡಿದರು.
ಅವರು ಸುರಕ್ಷಾ ಮತ್ತು ಸಮೃದ್ಧಿ ಫೌಂಡೇಶನ್ ಮತ್ತು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಮಾತೆಯರಿಗಾಗಿ ಏರ್ಪಡಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮಾಜದಲ್ಲಿ ನಡೆಯುವ ಸೈಬರ್ ಕ್ರೈಂ ಕೃತ್ಯಗಳ ಬಗ್ಗೆ ಮಹಿಳೆಯರಿಗೆ ಕಾನೂನು ಸಲಹೆ ನೀಡಿದರು. ಮಾತೆಯರಿಗೆ ಯಾವುದೇ ಪ್ರಕಾರದ ಸಮಸ್ಯೆ ಬಂದರೂ ತಮ್ಮಲ್ಲಿ ಬಂದು ತಿಳಿಸಿದರೆ ಸುಸೂತ್ರವಾಗಿ ಅದರಿಂದ ಹೊರಬರಲು ಉಚಿತ ಮಾಹಿತಿ ನೀಡುತ್ತೇವೆ ಎಂದು ಘೋಷಣೆ ಮಾಡಿದರು.

ರಮೇಶ್ ಕುಮಾರ್ ಮಾತನಾಡಿ ತಮ್ಮ ಮೊಬೈಲ್ ಗಳನ್ನು ಯಾರಿಗೂ ಕೊಡಬೇಡಿ ಅದರಿಂದ ಫೇಸ್ ಬುಕ್ ಗಳಿಂದ ತಮ್ಮ ನಂಬರ್ ಫೋಟೋಗಳನ್ನು ತೆಗೆದುಕೊಂಡು ಅಶ್ಲೀಲ ಚಿತ್ರಗಳಿಗೆ ಅಂಟಿಸಿ ಬ್ಲಾಕ್ ಮೇಲ್ ಮಾಡುತ್ತಾರೆ ಇದರಿಂದ ಎಚ್ಚರಿಕೆಯಿಂದ ಇರುವಂತೆ ಕರೆ ನೀಡಿದರು. ಯಾರಾದರೂ ನಿಮಗೆ ಕರೆ ಮಾಡಿ ನಿಮ್ಮ ಅಕೌಂಟ್ ಬ್ಲಾಕ್ ಆಗ್ತಾ ಇದೆ ಕೆವೈಸಿ ಮಾಡ್ತಾ ಇದ್ದೀವಿ. ಒಟಿಪಿ ಕೊಡಿ ಅಂತ ಕೇಳಿದರೆ ಬ್ಯಾಂಕ್ ಗೆ ಹೋಗ್ತಾ ಇದ್ದೇವೆ ಅಂತ ಹೇಳಿ ಆ ಕಾಲ್ ಗಳನ್ನು ಕಟ್ ಮಾಡಿ ಎಂದರು.
ರಾಜ ಯೋಗಿನಿ ಬ್ರಹ್ಮಾಕುಮಾರಿ ಧಾನೇಶ್ವರಿಜೀ ಮಾತನಾಡಿ ಹೊರಗಿನ ಸುರಕ್ಷತೆ ಜೊತೆ ಜೊತೆಗೆ ಒಳಗಿನ ಸುರಕ್ಷತೆಯು ಸಹ ಅಷ್ಟೇ ಅಗತ್ಯವಾಗಿದೆ. ಮನಸ್ಸೆಂಬ ಬೀಜ ಚೆನ್ನಾಗಿದ್ದರೆ ಜೀವನವೆಂಬ ವೃಕ್ಷ ಚೆನ್ನಾಗಿರುತ್ತದೆ. ಆದರೆ ಇಂದು ನಾವು ಬೀಜವನ್ನು ಸರಿಪಡಿಸದೇ ವೃಕ್ಷವನ್ನು ಸರಿಪಡಿಸಲು ಹೊರಟಿದ್ದೇವೆ. ಆದ್ದರಿಂದ ಸಫಲತೆ ಸಿಗುತ್ತಾ ಇಲ್ಲ ಎಂದರು.

ಕಾನೂನು ಸಲಹೆಗಾರರಾದ ರೋಹಿಣಿ, ಯೋಜನಾಧಿಕಾರಿ ರಾಜು,ಅಧ್ಯಕ್ಷರಾದ. ಮಧು, ಸಹಕಾರ ಸಹಾಯಕ ನಿಬಂಧಕರಾದ ಶೋಭಾ ಮಾತನಾಡಿದರು. ಸರಸ್ವತಿ ನಾಟ್ಯ ಕಲಾ ಸಂಸ್ಥೆಯ ಅಧ್ಯಕ್ಷರಾದ ಅಕ್ಷತಾ ಜೈನ್ ಮಾತನಾಡಿ ಪ್ಲಾಸ್ಟಿಕ್ ನಿಂದ ಆಗುವಂತಹ ಅನಾಹುತಗಳ ಬಗ್ಗೆ, ಪರಿಸರ ಸಂರಕ್ಷತೆಯ ಬಗ್ಗೆ, ದೈಹಿಕ ಆರೋಗ್ಯ, ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಬ್ಯಾಗ್ ಗಳನ್ನು ಉಪಯೋಗಿಸಿ ಎಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ನಂತರ ಎಲ್ಲರಿಗೂ ಬ್ರಹ್ಮಾ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ಹಮೀದ್ ಜೋಕಟ್ಟೆ, ಮಹಾದೇವ್, ಓಂ ಶಾಂತಿ ನ್ಯೂಸ್ ಸರ್ವಿಸ್ ನ ಬಿ ಕೆ ಆರಾಧ್ಯ, ನಾಗರಾಜ್, ಪುಟ್ಟಶೇಖರ ಮೂರ್ತಿ, ಸಿದ್ದಯ್ಯ, ಮುಂತಾದವರು ಹಾಜರಿದ್ದರು.








