Latest

ಶಾಸಕ ಜಿ.ಡಿ.ಹರೀಶ್ ಗೌಡರ ಹುಟ್ಟುಹಬ್ಬ ಅದ್ಧೂರಿ ಆಚರಣೆ.. ವಿವಿಧೆಡೆ ಸೇವಾ ಕಾರ್ಯಕ್ರಮ

ಪತ್ನಿ ವರ್ಷಹರೀಶ್‌ಗೌಡರಿಂದ ಕಾರ್ಯಕರ್ತನಿಗೆ ಆಟೋ ವಿತರಣೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಶಾಸಕ ಜಿ.ಡಿ.ಹರೀಶ್‌ಗೌಡ ಅವರ 39ನೇ ಜನ್ಮದಿನದ ಅಂಗವಾಗಿ ಜೆಡಿಎಸ್ ತಾಲ್ಲೂಕು ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇವಾಕಾರ್ಯ ಕೈಗೊಂಡರಲ್ಲದೆ, ಕೆಂಡಗಣ್ಣಸ್ವಾಮಿ ಗದ್ದಿಗೆ ಮೊದಲಾದ ದೇವಾಲಯಗಳಲ್ಲಿ ವಿಶೇಷ ಪೂಜೆಸಲ್ಲಿಸಿದರು.

ಅಭಿಮಾನಿಗಳು ಹೂಟಗಳ್ಳಿ, ಇಲವಾಲ, ಮನುಗನಹಳ್ಳಿ, ಹಂದನಹಳ್ಳಿ, ಬಿಳಿಕೆರೆ, ಬನ್ನಿಕುಪ್ಪೆ, ಕಾಡನಕೊಪ್ಪಲು, ಮೂಕ-ನಹಳ್ಳಿಯಲ್ಲಿ ಬರುತ್ತಿದ್ದ ಹರೀಶ್ ಗೌಡ ಅವರಿಗೆ ಪಕ್ಷದ ಕಾರ್ಯಕರ್ತರು ಪುಷ್ಪ-ಮಳೆಗರೆದು, ಸಿಹಿ ತಿನ್ನಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ಬಿಳಿಕೆರೆಯಲ್ಲಿ ಮುಖಂಡ ಮಧು ನೇತೃತ್ವದಲ್ಲಿ ತಲಾ 10 ಮಂದಿಗೆ ತಳ್ಳುವ ಗಾಡಿ, ಹೊಲಿಗೆ ಯಂತ್ರ ವಿತರಿಸಲಾಯಿತು. ಬಿಳಿಕೆರೆಯ ಸರ್ಕಾರಿ ಪದವಿ ಕಾಲೇಜಿನ ವಿದ್ಯಾ-ರ್ಥಿಗಳಿಗೆ 3 ತಿಂಗಳು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವುದಾಗಿ ಮಧು ತಿಳಿಸಿದರು. ಬಿಳಿಕೆರೆಯಲ್ಲಿ ಮಗುವಿನ ಕೈ ಆಪರೇಷನ್‌ಗೆ ತಗಲುವ ವೆಚ್ಚ ಭರಿಸುವುದಾಗಿ ಹರೀಶ್‌ ಗೌಡ ತಿಳಿಸಿದರು.

ಹರೀಶ್‌ಗೌಡರ ಹುಣಸೂರು ಮನೆ బళి ಜೆಡಿಎಸ್ ಮುಖಂಡ ಹರವೆ ಶ್ರೀಧರ್, ಸತೀಶ್ ಪಾಪಣ್ಣ ಮತ್ತವರ ಸ್ನೇಹಿತರು ತಂದಿದ್ದ ದೊಡ್ಡ ಕೇಕ್ ಅನ್ನು ಶಾಸಕರು ಪತ್ನಿ ವರ್ಷಾ ಜೊತೆ ಕತ್ತರಿಸಿದರು. ಅಧಿಕಾರಿಗಳು, ಸಂಘ ಸಂಸ್ಥೆಗಳವರು, ಮುಖಂಡರು, ಅಭಿಮಾನಿಗಳು ಶುಭಹಾರೈಸಿದರು.

ನಂಜನಗೂಡು ತಗಡೂರಿನ ಅಂಕನಾಥೇಶ್ವರ ದೇಗುಲ ದಲ್ಲಿ ಹರೀಶ್‌ಗೌಡರು ಪತ್ನಿ ಜೊತೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಚಾಮುಂಡಿಬೆಟ್ಟದಲ್ಲಿ ವಿಶೇಷಪೂಜೆ ಸಲ್ಲಿಸಿದರು. ತಾಲ್ಲೂಕು ಬೋಗಾದಿಯ ನಾಗಲಿಂಗಸ್ವಾಮಿ ದೇವಾಲಯದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಪೂಜೆಯಲ್ಲಿ ಭಾಗಿಯಾದರು. ಚಾಮುಂಡೇಶ್ವರಿ ಕ್ಷೇತ್ರದ ಅಂಗನವಾಡಿ ಕೇಂದ್ರಗಳಿಗೆ ಸವಲತ್ತು ವಿತರಿಸಿದರು. ಇದೇ ವೇಳೆ ಮುಖಂಡರಾದ ಕೋಟೆಹುಂಡಿ ಮಹದೇವ್, ಚಂದ್ರಶೇಖರ್, ರವಿ ಅವರು ನೀಡಿದ ತಳ್ಳುಗಾಡಿಗಳನ್ನು 20 ಮಂದಿಗೆ, 30 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದರು.

ಹುಣಸೂರು ನಗರಸಭೆಯ 250 ಪೌರಕಾರ್ಮಿಕರಿಗೆ ಸಮವಸ್ತ್ರ, 25 ಮಂದಿಗೆ ತಳ್ಳುಗಾಡಿ, 10 ಮಹಿಳೆಯರಿಗೆ ಹೊಲಿಗೆಯಂತ್ರ ವಿತರಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷ ಶರವಣ, ಸದಸ್ಯ ಕೃಷ್ಣರಾಜಗುಪ್ತ ಮತ್ತವರ ಸ್ನೇಹಿತರು ಊಟದ ವ್ಯವಸ್ಥೆ ಮಾಡಿದ್ದರು.

ಹುಣಸೂರಿಗೆ ಬರುವ ಮಾರ್ಗದ  ವಿವಿಧ ಗ್ರಾಮಗಳಲ್ಲಿ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಪುಷ್ಪಾರ್ಚನೆಗೈದು, ಸಿಹಿ ತಿನ್ನಿಸಿ, ಕೇಕ್‌ಕಟ್ ಮಾಡಿ ಸಂಭ್ರಮಿಸಿದರು. ಬಿಳಿಕೆರೆಯಲ್ಲಿ ಮುಖಂಡ ಮಧು 10ಮಂದಿಗೆ ತಳ್ಳುವ ಗಾಡಿ, 10ಮಂದಿಗೆ ಹೊಲಿಗೆ ಯಂತ್ರವಿತರಿಸಿದರು, ಬಿಳಿಕೆರೆಯ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮೂರು ತಿಂಗಳ ಕಾಲ ಮಧ್ಯಾಹ್ನದ ಊಟದ ವ್ಯವಸ್ಥೆ,  ಬಿಳಿಕೆರೆಯ ಅನಾರೋಗ್ಯದಿಂದ ಬಳಲುತ್ತಿರುವ ಮಗುವಿನ  ಆಪರೇಷನ್ ತಾವೇ ಭರಿಸುವುದಾಗಿ ಶಾಸಕರು ತಿಳಿಸಿದರು.

39 ಕೆ.ಜಿ.ಕೇಕ್ ನೊಂದಿಗೆ ಸಂಭ್ರಮ; ಶಾಸಕ ಹರೀಶ್‌ಗೌಡರ ಹುಣಸೂರು ಮನೆ ಬಳಿಯ ವೇದಿಕೆಯಲ್ಲಿ  ಸಂಜೆ 39ನೇಹುಟ್ಟುಹಬ್ಬದ ಪ್ರಯುಕ್ತ ಬೃಹತ್ ಕೇಕ್‌ನ್ನು ಶಾಸಕರು ಪತ್ನಿ ವರ್ಷರೊಂದಿಗೆ ಕಟ್‌ಮಾಡಿ, ತಿನ್ನಿಸಿ ಸಂಭ್ರಮಿಸಿದರು .ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಸಂಘಸಂಸ್ಥೆಗಳವರು, ಮುಖಂಡರು, ಅಭಿಮಾನಿಗಳು ಶಾಸಕರಿಗೆ ಹಾರ, ತುರಾಯಿ, ಪೇಟ ಹಾಕಿ ಶುಭ ಕೋರಿದರು.

ಜೆಡಿಎಸ್ ಮುಖಂಡರಾದ ಅಧ್ಯಕ್ಷ ಹರವೆ ಶ್ರೀಧರ್, ಸತೀಶ್ ಪಾಪಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವ ರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಪ್ರೇಮಕುಮಾರ್,  ಉಪಾಧ್ಯಕ್ಷ ಹೊನ್ನಪ್ಪರಾವ್ ಕಾಳಿಂಗೆ, ಸದಸ್ಯರಾದ ಗೋವಿಂದರಾಜು, ಬಾಬು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ತಟ್ಟೆಕೆರೆ ಶ್ರೀನಿವಾಸ್, ಹನಗೋಡು ರಮೇಶ್, ಮುಖಂಡರಾದ  ದೊಡ್ಡ ಹೆಜ್ಜೂರು ರಮೇಶ್‌, ಮುದುಗನೂರು ಸುಬ್ರಹ್ಮಣ್ಯ, ನಟರಾಜ್, ದಾಸನಪುರ ಶಿವರಾಜ್,ಹಬ್ಬನಕುಪ್ಪೆ ಜಗದೀಶ್, ನಾಗಮಂಗಲ ಸತೀಶ್.

ಬೃಂದಾವನ ಸೇವಾಟ್ರಸ್‌ನ ಅಧ್ಯಕ್ಷ ಹರವೆಶ್ರೀಧರ್, ಜೆಡಿಎಸ್ ಮುಖಂಡರಾದ ರಮೇಶ್‌ಹೆಜ್ಜೂರು, ಸತೀಶ್‌ಪಾಪಣ್ಣ, ಬಿಳಿಕೆರೆಶಿವಶಂಕರ್(ಮಧು), ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರುಬಸವರಾಜು,  ಬಸವಲಿಂಗಯ್ಯ, ಗೋವಿಂದರಾಜು, ಬಾಬು, ಹನಗೋಡುರಮೇಶ್, ಮುದುಗನೂರುಸುಬ್ರಹ್ಮಣ್ಯ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಮುಖಂಡರು ಭಾಗವಹಿಸಿದ್ದರು. ತಾಲೂಕಿನ ವಿವಿಧ ಗ್ರಾಮದ ಪಕ್ಷದ ಕಾರ್ಯಕರ್ತರು ಭಾಗವಹಿಸಿ ಶಾಸಕರಿಗೆ ಶುಭಾಶಯ ಕೋರಿದರು.

admin
the authoradmin

Leave a Reply

Translate to any language you want