Mysore

ಫೆ.7, ಅದಮ್ಯ ರಂಗಶಾಲೆಯಿಂದ ‘ಕಣ್ಕಟ್ ನಗರ’ ಮಕ್ಕಳ ನಾಟಕ ಪ್ರದರ್ಶನ… ನೀವೂ ಬನ್ನಿ!

ಮೈಸೂರು : ಅದಮ್ಯ ರಂಗಶಾಲೆಯ ವತಿಯಿಂದ ‘ಕಣ್ಕಟ್ ನಗರ’ ಎಂಬ ಮಕ್ಕಳ ನಾಟಕ ಪ್ರದರ್ಶನವು ಫೆ. 7 ರಂದು ಸಂಜೆ 6 ಗಂಟೆಗೆ ನಗರದ ರಂಗಾಯಣದ ಆವರಣದಲ್ಲಿರುವ ಶ್ರೀರಂಗ ಸಭಾಂಗಣದಲ್ಲಿ ನಡೆಯಲಿದೆ ಎಂದು ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದ್ದಾರೆ.

ಮಕ್ಕಳ ನಾಟಕ ಪ್ರದರ್ಶನಕ್ಕೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ನಿವೃತ್ತ ಪೊಲೀಸ್ ಉಪಾಧೀಕ್ಷಕ (ಡಿವೈ.ಎಸ್.ಪಿ.) ಶಾಂತಮಲ್ಲಪ್ಪ ಚಾಲನೆ ನೀಡಲಿದ್ದು, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪಿ. ಪ್ರಶಾಂತ್ ಗೌಡ ಅಧ್ಯಕ್ಷತೆ ವಹಿಸುವರು. ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡುವರು. ಮುಖ್ಯ ಅತಿಥಿಯಾಗಿ ವಿ.ಪಿ. ಪಬ್ಲಿಕ್ ಸ್ಕೂಲ್ ನ  ಕಾರ್ಯದರ್ಶಿ ರವಿಕುಮಾರ್ ಬೆಕ್ಯಾ ಅವರು ಪಾಲ್ಗೊಳ್ಳುವರು.

ಬಳಿಕ ರಂಗಕರ್ಮಿ ಉಮಾಶ್ರೀ ಜಿ. ಕೂಡ್ಲಿಗಿ ಅವರ ನಿರ್ದೇಶನದಲ್ಲಿ ಅದಮ್ಯ ರಂಗಶಾಲೆಯ ವಾರಾಂತ್ಯ ರಂಗ ತರಬೇತಿ ಶಿಬಿರದ ಮಕ್ಕಳು ಅಭಿನಯಿಸಿರುವ ‘ಕಟ್ಕಣ್ ನಗರ’ ಎಂಬ ಮಕ್ಕಳ ನಾಟಕ ಪ್ರದರ್ಶನ ನಡೆಯಲಿದೆ. ನಾಟಕಕ್ಕೆ 100 ರೂಪಾಯಿ ಪ್ರವೇಶ ಧನವಿದೆ. ಮಕ್ಕಳು ಮತ್ತು ಅವರ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸಿ ಪ್ರೋತ್ಸಾಹ ನೀಡಬೇಕೆಂದು ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8660103141 ಸಂಪರ್ಕಿಸಬಹುದು.

ಅದಮ್ಯ ರಂಗ ಶಾಲೆಯಿಂದ ಅಭಿನಯ ಕಾರ್ಯಾಗಾರದಲ್ಲಿ ನೀವೂ ಭಾಗವಹಿಸಿ…

admin
the authoradmin

Leave a Reply

Translate to any language you want