Latest

ಹಿರಿಯ ನಟಿ ಆದವಾನಿ ಲಕ್ಷ್ಮಿದೇವಿ ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟಿದ್ದು ಹೇಗೆ? ಸಿನಿಮಾ ಬದುಕು ಹೇಗಿತ್ತು?

1954ರಲ್ಲಿ ಆಕಸ್ಮಿಕವಾಗಿ ಅನಿವಾರ್ಯವಾಗಿ ನಾಟಕ ಕಂಪನಿ ಸೇರಿದ ಆದವಾನಿ ಲಕ್ಷ್ಮಿದೇವಿ ಅವರು ಅದೇ ವರ್ಷ ತೆಲುಗು ಚಿತ್ರರಂಗದ ಮೂಲಕ ಸಿನಿಮಾ ಜಗತ್ತಿಗೆ ಎಂಟ್ರಿ ನೀಡಿದರು.

 ಹಳೆಯ ಸಿನಿಮಾಗಳನ್ನು ನೋಡುತ್ತಾ ಬೆಳೆದವರಿಗೆ ಆದವಾನಿ ಲಕ್ಷ್ಮಿದೇವಿ ಅವರ ಮುಖ ಪರಿಚಯ ಇದ್ದೇ ಇರುತ್ತದೆ. ಆದರೆ ಇವತ್ತಿನ ತಲೆಮಾರಿಗೆ ಅವರ ಬಗ್ಗೆ ಗೊತ್ತಿರಲಿಕ್ಕಿಲ್ಲವೇನೋ… ಹೀಗಾಗಿ ಅದನ್ನು ತಿಳಿಸುವ ಪ್ರಯತ್ನ ಜನಮನಕನ್ನಡದ್ದಾಗಿದೆ. ಲಕ್ಷ್ಮಿದೇವಿ ಅವರ ಸಿನಿಮಾ ಬದುಕಿನ ಬಗ್ಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ತಮ್ಮದೇ ಶೈಲಿಯಲ್ಲಿ ಬರೆದಿದ್ದಾರೆ… ಒಮ್ಮೆ ಓದಿ ಬಿಡಿ…

ಸ್ವಾತಂತ್ರ್ಯಪೂರ್ವ ಭಾರತದ ಅಂದಿನ ಹೈದ್ರಾಬಾದ್ ಸಂಸ್ಥಾನದ ಅಚ್ಚ ಕನ್ನಡಿಗರೇ ಹೆಚ್ಚು ಜನಸಂಖ್ಯೆಯಿದ್ದ ದೊಡ್ಡಗ್ರಾಮ ಆದವಾನಿ (ಇಂದಿನ ತೆಲಂಗಾಣ) ಎಂಬಲ್ಲಿ ಬಡ ಕುಟುಂಬವೊಂದರ ಐವರು ಹೆಣ್ಣುಮಕ್ಕಳಲ್ಲಿ ಒಬ್ಬರಾಗಿ 1937ರ ಆಸುಪಾಸು ಜನಿಸಿದ ಲಕ್ಷ್ಮಿದೇವಿ ಭವಿಷ್ಯದಲ್ಲಿ ತಾನೊಬ್ಬ ಖ್ಯಾತ  ನಟಿಯಾಗಬಲ್ಲೆ ಎಂದು ಕನಸಲ್ಲು ಊಹಿಸಿರಲಿಲ್ಲ. 1954ರಲ್ಲಿ ಆಕಸ್ಮಿಕವಾಗಿ ಅನಿವಾರ್ಯವಾಗಿ ನಾಟಕ ಕಂಪನಿ ಸೇರಿದ ಇವರು ಅದೇ ವರ್ಷ ತೆಲುಗು ಚಿತ್ರರಂಗದ ಮೂಲಕ ಸಿನಿಮಾ ಜಗತ್ತಿಗೆ ಎಂಟ್ರಿ ನೀಡಿದರು.

ಕಾಲಕ್ರಮೇಣ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಆ ಹೊತ್ತಿಗಾಗಲೆ ಕನ್ನಡ ಚಿತ್ರರಂಗದಲ್ಲಿ ಮೈಸೂರು (ಎಂ.ಎನ್.) ಲಕ್ಷ್ಮೀದೇವಿ ಹೆಸರುಳ್ಳ ನಟಿ ತಳವೂರಿದ್ದರು. ಹೀಗಾಗಿ ಒಂದೇಹೆಸರಿನ ಇಬ್ಬರು ನಟಿಯರಿಂದ ಉಂಟಾಗಬಹುದಾದ ಗೊಂದಲ ಪರಿಹಾರಕ್ಕಾಗಿ ಇವರನ್ನ ಆದವಾನಿ ಊರಿನ ಹೆಸರಿನೊಂದಿಗೆ ಗುರ್ತಿಸಿ ಆದವಾನಿ ಲಕ್ಷ್ಮೀದೇವಿ ಎಂದು ಚಿತ್ರರಂಗದಲ್ಲಿ ಪುನರ್ ನಾಮಕರಣ ಗೊಳಿಸಲಾಯ್ತು. ಇವರ ತಂದೆಯ ಮಾತೃಭಾಷೆ ತೆಲುಗು ಮತ್ತು ತಾಯಿಯ ಮಾತೃಭಾಷೆ ಕನ್ನಡ. ಹೀಗಾಗಿ ಆದವಾನಿ ಲಕ್ಷ್ಮಿದೇವಿಗೆ ಕನ್ನಡ- ತೆಲುಗು ಎರಡೂ ಭಾಷೆಗಳು ಕರಗತವಾಗಿತ್ತು. 1956ರಲ್ಲಿ ಬಿಡುಗಡೆಯಾದ ಕನ್ನಡ ಫಿಲಂ ‘ಭಕ್ತವಿಜಯ’ ಮೂಲಕ ಸ್ಯಾಂಡಲ್‍ ವುಡ್‍ಗೆ ಎಂಟ್ರಿ ಕೊಟ್ಟ ಆದವಾನಿ ಲಕ್ಷ್ಮಿದೇವಿ ನೂರಕ್ಕೂ ಹೆಚ್ಚು ಕನ್ನಡ ಸಿನಿಮಾ ಸೇರಿದಂತೆ ತೆಲುಗು ತಮಿಳು ಮಲಯಾಳಂ ತುಳು ಕೊಂಕಣಿ ಭಾಷೆಯ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು.

ಪ್ರಾರಂಭದಲ್ಲಿ ಹಲವಾರು ಚಿತ್ರಗಳ ಹೀರೋಯಿನ್ನಾಗಿ ನಟಿಸಿ ನಂತರ ಪೋಷಕ ನಟಿಯಾಗಿ ತಾಯಿ ಅಕ್ಕ ಅತ್ತೆ ಮುಂತಾದ ಪ್ರಬುದ್ಧ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದರು. ಆದವಾನಿಲಕ್ಷ್ಮಿದೇವಿ ಮತ್ತು ರೂಪಾದೇವಿ ತಾಯಿ-ಮಗಳು ಡಾ.ರಾಜ್ ಜತೆ ನಾಯಕಿಯರಾಗಿ ಅಭಿನಯಿಸಿದ್ದು ಸಹ ಚಂದನವನದ ನೂತನ ದಾಖಲೆ. ಕಾಲಕ್ರಮೇಣ ರಾಜೀವನ ಅಕ್ಕನ ಪಾತ್ರದಲ್ಲಿ ನಟಿಸಿದ ಚಿತ್ರ ಬಂಗಾರದಮನುಷ್ಯ ಸತತ 2 ವರ್ಷ ಅಮೋಘ ಪ್ರದರ್ಶನ ಕಂಡರೆ, ಡಾ.ರಾಜ್ ತಾಯಿ ಪಾತ್ರದ ಗಂಧದಗುಡಿ ಗೋಲ್ಡನ್ ಜುಬ್ಲಿ ಆಚರಿಸಿತು. ಮಗಳು ರೂಪಾದೇವಿ ನಟಿಸಿದ ‘ಅವಳ ಅಂತರಂಗ’ ಚಿತ್ರ 1ವರ್ಷ ಧೀರ್ಘ ಪ್ರದರ್ಶನದ ದಾಖಲೆ ನಿರ್ಮಿಸಿತು!

ಆದವಾನಿಯವರ ಅನೇಕ ಕನ್ನಡ ಚಿತ್ರಗಳ ಪೈಕಿ ಕೆಲವು ಚಿರಸ್ಮರಣೀಯ ಫಿಲಂಸ್:- ವೀರಸಂಕಲ್ಪ, ಶರಪಂಜರ, ಕರುಳಿನಕರೆ, ಬಂಗಾರದಮನುಷ್ಯ, ನಮ್ಮಸಂಸಾರ, ಗಂಧದಗುಡಿ, ಶ್ರೀನಿವಾಸಕಲ್ಯಾಣ, ಚಲಿಸುವಮೋಡಗಳು, ಎರಡುಕನಸು, ಶ್ರಾವಣಬಂತು, ಸೀತಾರಾಮು, ಮುಂತಾದವು ಇವರ ಅಮೋಘ ಪ್ರತಿಭೆಯ ಸಾಧನಾ ಮೈಲಿಗಲ್ಲುಗಳಾಗಿವೆ. ಶ್ರೇಷ್ಠ ಅಭಿನಯಕ್ಕೆ ಹಲವಾರು ರಾಜ್ಯ ಪ್ರಶಸ್ತಿ ರಾಷ್ಟ್ರ ಪ್ರಶಸ್ತಿ ಲಭಿಸಿವೆ.

ಚಿಕ್ಕಂದಿನಿಂದಲೂ ಮೃದುಸ್ವಭಾವದ ಮಿತಭಾಷಿಯಾದ ಇವರಿಗೆ  ಓದುವಾಸೆ ಹೇರಳವಾಗಿದ್ದರೂ ಕೌಟುಂಬಿಕ ಕಾರಣದಿಂದಾಗಿ ಹೆಚ್ಚಿನ ವಿದ್ಯಾಭ್ಯಾಸ ಸಾಧ್ಯವಾಗಲಿಲ್ಲ. ಹದಿವಯಸ್ಸಲ್ಲೆ ಕಠಿಣ ಜೀವನದ ಪರಿಚಯವಾಗಿ ದುಡಿಮೆಗೆ ಹೆಚ್ಚುಒತ್ತು ಕೊಡುವಂಥ ವಾಸ್ತವಾನುಭವದ ಜತೆಗೆ ಸಾಮಾಜಿಕ ಜವಾಬ್ಧಾರಿ ಹೆಗಲಮೇಲೆ ಬಿದ್ದಾಗ ಸಹನೆ ಸಂಯಮದ ಸಹಜ ಪಾಠ ಕಲಿತರು. ಬದುಕಿನ ಉದ್ದಕ್ಕೂ ಸರಳ ಸಜ್ಜನಿಕೆಗೆ ಹೆಸರಾಗಿ ಜೀವಮಾನ ಪರ್ಯಂತ ಚಿತ್ರರಂಗದ ಒಳಗೆ-ಹೊರಗೆ ಹೊಗಳಿಸಿಕೊಂಡರು. ವಿಶೇಷವಾಗಿ ಡಾ.ರಾಜಕುಮಾರ್ರಿಂದ ಆದ್ವಾನಿಲಕ್ಷ್ಮಿಯವರೆ/ಆದ್ವಾನಿಯವರೆ ಎಂದು ಗೌರವದಿಂದ ಕರೆಸಿಕೊಳ್ಳುತ್ತಿದ್ದ ಉತ್ತಮ ಅಭಿನೇತ್ರಿ!

ನಾಟಕ ಹಾಗೂ ಚಿತ್ರರಂಗದ ಹಿರಿಯ ನಟಿಯರ ಪಂಕ್ತಿಗೆ ಸೇರಿದ  ಈ ಅಪರೂಪದ ಕಲಾವಿದೆ1965ನೇಇಸವಿ ಇರಬಹುದೇನೋ? ರಾಮಯ್ಯ ಎಂಬುವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಯ ಏಕೈಕ ಪುತ್ರಿ ರೂಪಾದೇವಿ ಸಹ ಹದಿವಯಸ್ಸಲ್ಲೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಡಾ.ರಾಜ್ ಸೇರಿದಂತೆ ಹಲವಾರು ಹೀರೋಗಳೆದುರು ಹೀರೋಯಿನ್ ಪಾತ್ರದಲ್ಲಿ ಮಿಂಚಿದರು. ಸಾವಕಾಶವಾಗಿ ದ.ಭಾರತದ ಪ್ರಮುಖ ನಾಯಕನಟರೊಡನೆ ನಟಿಸುವ ಮೂಲಕ ಜನಪ್ರಿಯತೆ ಯಶಸ್ಸು ಕೀರ್ತಿ ಗಳಿಸಿದರು.

ಆದವಾನಿ ಲಕ್ಷ್ಮಿದೇವಿಗೆ ಸಂದ ಪ್ರಶಸ್ತಿಗಳು : 1970- ಲಾವಣ್ಯ ಚಲನಚಿತ್ರ ಪ್ರಶಸ್ತಿ ಉತ್ತಮ ಪೋಷಕನಟಿ: ಕರುಳಿನಕರೆ ಚಿತ್ರದ ಅಭಿನಯಕ್ಕೆ, 1971=  ಮೇನಕಾ ಚಲನಚಿತ್ರ ಪ್ರಶಸ್ತಿ ಉತ್ತಮ ಪೋಷಕನಟಿ: ನಮ್ಮಸಂಸಾರ ಚಿತ್ರದ ಅಭಿನಯಕ್ಕೆ, 1972= ಚಿತ್ರರಸಿಕರ ಸಂಘದ ಉತ್ತಮ ಪೋಷಕನಟಿ ಪ್ರಶಸ್ತಿ: ಬಂಗಾರದಮನುಷ್ಯ ಚಿತ್ರದ ಅಭಿನಯಕ್ಕೆ, 1973= ಕರ್ನಾಟಕ ರಾಜ್ಯ ಸರ್ಕಾರ ಚಲನಚಿತ್ರ ಪ್ರಶಸ್ತಿ-ಅತ್ಯುತ್ತಮ ಪೋಷಕನಟಿ: ಗಂಧದಗುಡಿ ಚಿತ್ರದ ಅಭಿನಯಕ್ಕೆ . 1984= ಚಿತ್ರರಸಿಕರ ಸಂಘದ ಉತ್ತಮ ಪೋಷಕನಟಿ ಪ್ರಶಸ್ತಿ: ಶ್ರಾವಣಬಂತು ಚಿತ್ರದ ಅಭಿನಯಕ್ಕೆ, 2016= ಡಾ.ರಾಜಕುಮಾರ್ ಪ್ರಶಸ್ತಿ – ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯ ಸರ್ಕಾರದಿಂದ, 2017= ಡಾ.ಎಂ.ವಿ.ರಾಜಮ್ಮ ಪ್ರಶಸ್ತಿ – ಕರ್ನಾಟಕ ಚಲನಚಿತ್ರ ಅಕ್ಯಾಡೆಮಿ ವತಿಯಿಂದ..

ಆದವಾನಿ ಲಕ್ಷ್ಮಿದೇವಿ ನಟಿಸಿದ ಚಿತ್ರಗಳು.. ಭಕ್ತವಿಜಯ/ 1956,ಶುಕ್ರದೆಸೆ,ಮಂಗಳಸೂತ್ರ, ಮನೆತುಂಬಿದ ಹೆಣ್ಣು, ಅಬ್ಬಾ ಆ ಹುಡುಗಿ, ಜಗಜ್ಯೋತಿ ಬಸವೇಶ್ವರ, ದಶಾವತಾರ, ತೇಜಸ್ವಿನಿ, ಕರುಣೆಯೇ ಕುಟುಂಬದ ಕಣ್ಣು, ಭೂದಾನ, ಶ್ರೀರಾಮಾಂಜನೇಯ ಯುದ್ಧ, ಕಲಿತರೂ ಹೆಣ್ಣೆ, ಜೀವನತರಂಗ, ವೀರಸಂಕಲ್ಪ, ಕಲಾವತಿ, ಚಂದವಳ್ಳಿಯ ತೋಟ, ಮಂತ್ರಾಲಯ ಮಹಾತ್ಮೆ, ಭಾಗ್ಯದೇವತೆ, ನಮ್ಮಮಕ್ಕಳು, ಮುಕುಂದ ಚಂದ್ರ, ಮಲ್ಲಮ್ಮನ ಪವಾಡ, ಮಕ್ಕಳೇ ಮನೆಗೆ ಮಾಣಿಕ್ಯ, ಕಪ್ಪು ಬಿಳುಪು, ಭಾಗೀರಥಿ, ಠಕ್ಕ ಬಿಟ್ರೆ  ಸಿಕ್ಕ, ಮೃತ್ಯು ಪಂಚರದಲ್ಲಿ ಗೂಢಚಾರಿ 555, ಮೂರುಮುತ್ತುಗಳು, ಕರುಳಿನಕರೆ, ಅನಿರೀಕ್ಷಿತ, ಶರಪಂಜರ, ಪಾಪಪುಣ್ಯ, ನಮ್ಮಸಂಸಾರ, ಭಲೇಅದೃಷ್ಟವೋ ಅದೃಷ್ಟ, ನಂದಗೋಕುಲ, ಭಲೇಹುಚ್ಚ, ಬಂಗಾರದಮನುಷ್ಯ, ಸೀತೆಯಲ್ಲ ಸಾವಿತ್ರಿ.

ಉಪಾಸನೆ, ಗಂಧದಗುಡಿ, ಶ್ರೀನಿವಾಸಕಲ್ಯಾಣ, ಎರಡುಕನಸು, ಮಯೂರ, ನಿರೀಕ್ಷೆ, ಮುಗಿಯದಕಥೆ, ಬಯಲುದಾರಿ, ಬಹದ್ದೂರ್ ಗಂಡು, ಲಕ್ಷ್ಮೀನಿವಾಸ, ಮಧುರ ಸಂಗಮ, ಚಂದನದಗೊಂಬೆ, ಬೆಂಕಿಯಬಲೆ, ಕಪ್ಪುಕೊಳ, ರುಸ್ತುಂ ಜೋಡಿ, ರಾಮಪರಶುರಾಮ, ಮೂಗನಸೇಡು, ಸೀತಾರಾಮು, ಕನಸುನನಸು, ಜನ್ಮಜನ್ಮದ ಅನುಬಂಧ, ಚಲಿಸುವ ಮೋಡಗಳು, ಬಾಡದ ಹೂ,  ನವತಾರೆ, ಬೆಳ್ಳಿಯಪ್ಪಬಂಗಾರಪ್ಪ, ಅಶ್ವಮೇಧ, ಮುದುಡಿದ ತಾವರೆ ಅರಳಿತು, ಶ್ರಾವಣ ಬಂತು, ಜ್ವಾಲಾಮುಖಿ, ಗಂಧದಗುಡಿ-2

 

ಅನಂತ್ ನಾಗ್ ನಟನೆಯ ನಾಲ್ಕು ಸಿನಿಮಾಗಳನ್ನು ಚಿತ್ರಗಳ ಮೂಲಕ ಊಹೆ ಮಾಡುವಿರಾ?

admin
the authoradmin

9 Comments

  • ಧನ್ಯವಾದ ಲವ ಸರ್….
    2026 ಹೊಸ ಕ್ರೈಸ್ತವರ್ಷದ ಶುಭಾಶಯಗಳು🤝🙏💗⚘🌹🌾🦚🎉

  • ಹಿರಿಯ ಕಲಾವಿದೆ ಆದವಾನಿ ಲಕ್ಷ್ಮಿದೇವಿ ಅವರ ಲೇಖನವು ನನಗೂ ಮತ್ತು ನನ್ನ ಗೆಳೆಯ ಧೀರೇಂದ್ರನಿಗೂ ತುಂಬ ಇಷ್ಟವಾದ ಲೇಖನ, ಧನ್ಯವಾದ

  • ಹಿರಿಯ ಕಲಾವಿದೆ ಆದವಾನಿ ಲಕ್ಷ್ಮಿದೇವಿ ಅವರ ಲೇಖನವು ನನಗೂ ಮತ್ತು ನನ್ನ ಗೆಳೆಯ ಧೀರೇಂದ್ರನಿಗೂ ತುಂಬ ಇಷ್ಟವಾದ ಲೇಖನ, ಧನ್ಯವಾದ ಸರ್

  • ಆದವಾನಿ ಲಕ್ಷ್ಮೀದೇವಿಯವರ ಲೇಖನ ತುಂಬ ಅರ್ಥಪೂರ್ಣವಾಗಿದೆ. ಧನ್ಯವಾದ

  • ಆದವಾನಿ ಲಕ್ಷ್ಮೀದೇವಿಯವರ ಲೇಖನ ತುಂಬ ಅರ್ಥಪೂರ್ಣವಾಗಿದೆ. ನಮ್ಮ ತಂದೆತಾಯಿಗೆ ಬಹಳ ಇಷ್ಟವಾಯಿತು, ಲೇಖಕರಿಗೂ ಮತ್ತು ಪತ್ರಿಕೆಯವರಿಗೂ ಧನ್ಯವಾದ, ನಮಸ್ಕಾರ ಸರ್

  • ನಾನು ಮತ್ತು ನಮ್ಮ ಕುಟುಂಬದ ಎಲ್ಲರು 1970 ರಿಂದ 2000ನೇ ಇಸವಿವರೆಗೆ ಆದವಾನಿ ಲಕ್ಷ್ಮೀದೇವಿಯವರ ಬಹುತೇಕ ಎಲ್ಲ ಕನ್ನಡ ತೆಲುಗು ಸಿನಿಮಾಗಳನ್ನು ನೋಡಿ ಸಂತೋಷ ಪಟ್ಟಿದ್ದೇವೆ. ಈಗ ನೆನಪಿಸುವ ಹಾಗಿದೆ ಕುಮಾರಕವಿಯವರ ಉತ್ತಮ ಬರವಣಿಗೆಯ ಶೈಲಿ. ಇಂಥ ಲೇಖನ ಪ್ರಕಟಿಸಿದ ಜನಮನ ಪತ್ರಿಕೆಗೆ ಅನೇಕ ಧನ್ಯವಾದಗಳು ಸರ್

  • ನಾನು ಮತ್ತು ನಮ್ಮ ಕುಟುಂಬದ ಎಲ್ಲರು 1970 ರಿಂದ 2000ನೇ ಇಸವಿವರೆಗೆ ಆದವಾನಿ ಲಕ್ಷ್ಮೀದೇವಿಯವರ ಬಹುತೇಕ ಎಲ್ಲ ಕನ್ನಡ ತೆಲುಗು ಸಿನಿಮಾಗಳನ್ನು ನೋಡಿ ಸಂತೋಷ ಪಟ್ಟಿದ್ದೇವೆ. ಈಗ ನೆನಪಿಸುವ ಹಾಗಿದೆ ಕುಮಾರಕವಿಯವರ ಉತ್ತಮ ಬರವಣಿಗೆಯ ಶೈಲಿ. ಇಂಥ ಲೇಖನ ಪ್ರಕಟಿಸಿದ ಜನಮನ ಪತ್ರಿಕೆಗೆ ಅನೇಕ ಧನ್ಯವಾದ ಹಾಗೂ ನಮಸ್ಕಾರಗಳು ಸರ್

  • ಇವತ್ತಿನ ಕಾಲದಲ್ಲಿ ಯಾರೂ ಸಹ ಹಳೇ ಕಾಲದ ನಟನಟಿಯರ ಬಗ್ಗೆ ಬರೆಯುವುದೂ ಕಡಿಮೆ, ಓದುವವರಂತೂ ಬಹುಶಃ ಇಲ್ಲವೇಇಲ್ಲ ಎನಿಸುವ ಕಾಲದಲ್ಲಿ ಈ ಥರದ ಹಳೇ ನೆನಪು ಮಾಡಿಕೊಳ್ಳುವ ಲೇಖನ ಸ್ವಾಗತಾರ್ಹ, ಅಭಿನಂದನೆಗಳು. ಇದೇರೀತಿ ಎಲ್ಲಹಳೇ ಕಲಾವಿದರ ಲೇಖನವು ಹೆಚ್ಚಾಗಿ ತಾವು ತಮ್ಮ ಪತ್ರಿಕೆಯ ಮೂಲಕ ಪ್ರಕಟಿಸಿರಿ, ನಮಂಥವರಿಗೆ ಇಷ್ಟವಾಗುತ್ತದೆ, ಧನ್ಯವಾದಗಳು ಸರ್

  • ಇವತ್ತಿನ ಕಾಲದಲ್ಲಿ ಯಾರೂ ಸಹ ಹಳೇ ಕಾಲದ ನಟನಟಿಯರ ಬಗ್ಗೆ ಬರೆಯುವುದೂ ಕಡಿಮೆ, ಓದುವವರಂತೂ ಬಹುಶಃ ಇಲ್ಲವೇಇಲ್ಲ ಎನಿಸುವ ಕಾಲದಲ್ಲಿ ಈ ಥರದ ಹಳೇ ನೆನಪು ಮಾಡಿಕೊಳ್ಳುವ ಲೇಖನ ಸ್ವಾಗತಾರ್ಹ, ಅಭಿನಂದನೆಗಳು. ಇದೇರೀತಿ ಎಲ್ಲ ಹಳೇ ಕಲಾವಿದರ ಲೇಖನಗಳನ್ನೂ ಸಹ ತಾವು ಆಗಾಗ್ಗೆ ಜನಮನ ಪತ್ರಿಕೆ ಮೂಲಕ ಪ್ರಕಟಿಸಿರಿ, ನಮ್ಮಂಥವರಿಗೆ ಇಷ್ಟವಾಗುತ್ತದೆ, ಧನ್ಯವಾದಗಳು ಸರ್

Leave a Reply

Translate to any language you want