Mysore

ಅದಮ್ಯ ರಂಗ ಶಾಲೆಯಿಂದ ಅಭಿನಯ ಕಾರ್ಯಾಗಾರದಲ್ಲಿ ನೀವೂ ಭಾಗವಹಿಸಿ…

ಮೈಸೂರು: ನಗರದ ರಂಗಭೂಮಿ‌ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಅದಮ್ಯ ರಂಗ ಶಾಲೆಯು ಒಂದು ತಿಂಗಳ  ಅವಧಿಯ ಅಭಿನಯ ಕಾರ್ಯಾಗಾರ ಆಯೋಜಿಸಿದ್ದು, ಅಭಿನಯ ಕಲಿಯಲು ಇಚ್ಛಿಸುವ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ ಎಂದು ಅದಮ್ಯ ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದ್ದಾರೆ.

ಅಭಿನಯ ಕಾರ್ಯಾಗಾರ ಮೈಸೂರಿನ ವಿಜಯನಗರ ದಲ್ಲಿರುವ ವಿ. ಕೆ. ಪಬ್ಲಿಕ್ ಸ್ಕೂಲ್ ನಲ್ಲಿ ಫೆಬ್ರವರಿ 16 ರಿಂದ ಮಾರ್ಚ್ 14 ರವರೆಗೆ   ಪ್ರತಿದಿನ ಸಂಜೆ 6 ರಿಂದ ರಾತ್ರಿ 9 ಗಂಟೆಯ ವರೆಗೆ ಶಿಸ್ತುಬದ್ಧವಾಗಿ ನಡೆಯಲಿದೆ.  ‘ಅಭಿನಯ ಕಲೆ’ಗೆ ಒತ್ತು ನೀಡಿ ಕಲಿಸುವ ಪರಮಧ್ಯೇಯ ಹೊಂದಿರುವ ಅಭಿನಯ ಕಾರ್ಯಾಗಾರದಲ್ಲಿ ಹಿರಿಯರೊಟ್ಟಿಗೆ ಕಿರಿಯರೂ ಕಲೆತು ಅಭಿನಯಕ್ಕೆ ಸಂಬಂಧಿಸಿದ ಬಹುಮುಖಿ ಮಜಲುಗಳನ್ನು ಅರಿಯಲು ಅವಕಾಶವಿದೆ. ಕನ್ನಡ ಮತ್ತು ಜಾಗತಿಕ ರಂಗಭೂಮಿ, ವಿವಿಧ ನಾಟಕಗಳು, ಅಭಿನಯ ಕಲೆ, ತೆರೆಯ ಹಿಂದಿನ ರಂಗತಾಂತ್ರಿಕ ವಿಷಯಗಳ ಬಗ್ಗೆ ನುರಿತ ರಂಗತಜ್ಞರು ಶಿಬಿರಾರ್ಥಿಗಳಿಗೆ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುವರು.

18 ವರ್ಷ ಮೀರಿದ ಎಲ್ಲಾ ವಯೋಮಿತಿಯೊಳಗಿನ ಮಹಿಳೆಯರು ಮತ್ತು ಪುರುಷರು ಈ ಅಭಿನಯ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ. ಕಾರ್ಯಗಾರದ ಅವಧಿಯಲ್ಲಿ ನಾಟಕವೊಂದನ್ನು ಆಯ್ಕೆ ಮಾಡಿಕೊಂಡು, ಶಿಬಿರಾರ್ಥಿಗಳಿಂದಲೇ ಅಭಿನಯ ಮಾಡಿಸಿ ಸಮಾರೋಪದಲ್ಲಿ ಪ್ರದರ್ಶನ ಮಾಡಲಾಗುವುದು. ಕಾರ್ಯಾಗಾರ ಪೂರ್ಣಗೊಳಿಸಿದ ಎಲ್ಲರಿಗೂ ಅಧಿಕೃತ ಪ್ರಮಾಣ ಪತ್ರವನ್ನೂ ನೀಡಲಾಗುವುದು.

ಅಭಿನಯ ಕಲಿಕೆಯಲ್ಲಿ ಆಸಕ್ತಿ ಇರುವವರು ಫೆಬ್ರವರಿ 15ರೊಳಗೆ  ಅದಮ್ಯ ರಂಗಶಾಲೆಯ ಕಾರ್ಯದರ್ಶಿಯಾದ ಚಂದ್ರು ಮಂಡ್ಯ ಅವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಗರಿಷ್ಠ 30 ಮಂದಿಗೆ ಮಾತ್ರ ಅವಕಾಶವಿರುತ್ತದೆ. ಮೊದಲು ಬಂದವರಿಗೆ ಮೊದಲ ಆದ್ಯತೆ. ಕಡ್ಡಾಯವಾಗಿ ಸಮಯ ಬದ್ಧತೆ ಹಾಗೂ ಕಲಿಕೆಯಲ್ಲಿ ಆಸಕ್ತಿ ಇರುವವರಿಗೆ ಹೆಚ್ಚಿನ ಒತ್ತು ನೀಡಲಾಗುವುದು. ವಿವರವಾದ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8660103141 ಸಂಪರ್ಕಿಸಬಹುದು.

admin
the authoradmin

Leave a Reply

Translate to any language you want