Mysore

ಬಸ್ ನಿಲ್ದಾಣದಲ್ಲಿ ಮೈಸೂರು ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುವ ಸುಯೋಗ.. ನೀವೂ ಬನ್ನಿ..

ಮೈಸೂರು: ಭಾರತದಲ್ಲಿಯೇ ಮೊದಲ ಆಕಾಶವಾಣಿ ಎಂಬ ಕೀರ್ತಿಗೆ ಭಾಜನವಾಗಿರುವ ಮೈಸೂರು ಆಕಾಶವಾಣಿ ಈಗ 90ರ ಸಂಭ್ರಮದಲ್ಲಿದೆ. ಈಗ ಆ ಸಂಭ್ರಮವನ್ನ ಮುಗಿಸಿ 91ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಆಕಾಶವಾಣಿಯ ಕಾರ್ಯಕ್ರಮಗಳು ಮತ್ತಷ್ಟು ಜನಪ್ರಿಯದತ್ತ ಸಾಗುತ್ತಿದೆ. ಈ ಸಂದರ್ಭದಲ್ಲಿ ಒಬ್ಬ ಕೇಳುಗಾಭಿಮಾನಿ ಬಸ್ ನಿಲ್ದಾಣದಲ್ಲಿ ಹೊಸದಾಗಿ ರೇಡಿಯೋ ಸೆಟ್ ಅಳವಡಿಸುವ ಮೂಲಕ ಆಕಾಶವಾಣಿಯ ಕಾರ್ಯಕ್ರಮಗಳು ಮತ್ತಷ್ಟು ಜನರಿಗೆ ತಲುಪುವ ನಿಟ್ಟಿನಲ್ಲಿ ಶ್ರೇಷ್ಠ ಕಾರ್ಯ ಮಾಡುತ್ತಿದ್ದಾರೆ. ಅವರೇ ನಮ್ಮ ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ, ಪತ್ರಿಕಾ ಓದುಗರು ಹಾಗೂ ವಿಮರ್ಶಕರು, ಆಕಾಶವಾಣಿಯ ಕೇಳುಗರು ಆದ ಬೂಕನಕೆರೆಯ ವಿಜೇಂದ್ರ ರವರು.

ಈ ಬಗ್ಗೆ ಮತ್ತಷ್ಟು ಮಾಹಿತಿ ಹೇಳುವುದಾದರೆ… ನಮ್ಮ ಮೈಸೂರು ಆಕಾಶವಾಣಿಯ ಕೇಳುಗರ ಬಳಗ “ಸಮುದ್ಯತಾ” ಈ ಹೆಸರಿನಲ್ಲಿ ಇಡೀ ಕರ್ನಾಟಕದಲ್ಲಿ ಮೊದಲನೆಯದಾಗಿದ್ದು, ಅನೇಕ ಸೇವಾ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ಆಕಾಶವಾಣಿಯ ಜೊತೆಗೆ ಉತ್ತಮ ಕಾರ್ಯಕ್ರಮ ಬರಲು ಎಂದು ಸಂಪರ್ಕ ಸೇತುವೆಯಾಗಿದೆ. ಈ ಒಂದು ಬಳಗದ ಸದಸ್ಯರಲ್ಲಿ ಬೂಕನಕೆರೆ ವಿಜೇಂದ್ರ ರವರು ಕೂಡ ಒಬ್ಬರು. ಇವರು ಪತ್ರಿಕಾ ಓದುಗರು ಮತ್ತು ಆಕಾಶವಾಣಿಯ ಕೇಳುಗರು ಕೂಡ ಆಗಿದ್ದಾರೆ. ಇವರು ಪತ್ರಿಕೆಗಳಲ್ಲಿ ಮೈಸೂರಿನ ಅನೇಕ ಸಮಸ್ಯೆಗಳ ಬಗ್ಗೆ, ಪ್ರಚಲಿತ ವಿಷಯಗಳ ಬಗ್ಗೆ ಬರೆದು ಸಂಬಂಧ ಪಟ್ಟವರ ಗಮನ ಸೆಳೆಯುತ್ತಾರೆ.

ಅದೇ ರೀತಿ ಆಕಾಶವಾಣಿಯ ಕಾರ್ಯಕ್ರಮಗಳನ್ನ ನಿಯಮಿತವಾಗಿ ಕೇಳಿ, ಆ ಕಾರ್ಯಕ್ರಮಗಳು ಮತ್ತಷ್ಟು ಜನರಿಗೆ ತಲುಪುವ ನಿಟ್ಟಿನಲ್ಲಿ ಬಸ್ ನಿಲ್ದಾಣದಲ್ಲಿ ರೇಡಿಯೋ ಸೆಟ್ ಅಳವಡಿಸುವ ಈ ಕೆಲಸ ಮಾಡಿದ್ದಾರೆ.   ಮೈಸೂರಿನ ಕುವೆಂಪು ನಗರ ಡಿಪೋದಿಂದ ಅನತಿ ದೂರದಲ್ಲಿರುವ ಹೋರಿ ಸುಬ್ಬೇಗೌಡ ಬೂಕನಕೆರೆ ಇವರ ಸ್ಮರಣಾರ್ಥ ಇರುವ ಬಸ್ ನಿಲ್ದಾಣವು ಎನ್ ಬ್ಲಾಕ್ ಮುಖ್ಯ ರಸ್ತೆ ಕುವೆಂಪು ನಗರ, ಮೈಸೂರು ಇಲ್ಲಿ ಕಾರ್ಯಕ್ರಮ ನಡೆಯುತ್ತದೆ.

ಎದುರುಗಡೆ ಇವರ ಮನೆ ಇದೆ. ಮುಂದೆ ಇರುವ ಬಸ್ ನಿಲ್ದಾಣವನ್ನು ಅವರ ತಂದೆ ಹೋರಿ ಸುಬ್ಬೇಗೌಡ ಬೂಕನಕೆರೆ ಇವರ ಸ್ಮರಣಾರ್ಥ  ಕಟ್ಟಿಸಿರುವುದು ಒಂದು ವಿಶೇಷ!. ಈ ಬಸ್ ನಿಲ್ದಾಣ ಐದು ವರ್ಷದ ಹಿಂದೆ ಅತ್ಯಂತ ಸ್ವಚ್ಛವಾದ ಬಸ್ ನಿಲ್ದಾಣ ಎಂದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.  ಆ ಒಂದು ಬಸ್ ನಿಲ್ದಾಣದಲ್ಲಿ ಅನೇಕ ಪ್ರಯಾಣಿಕರು ಅಂದರೆ ವಯಸ್ಕರು, ವಿದ್ಯಾರ್ಥಿಗಳು ಎಲ್ಲರೂ ಕೂಡ ಅಲ್ಲಿ ಬಸ್ಸಿಗಾಗಿ ಕಾಯುವ ಸಂದರ್ಭದಲ್ಲಿ ಸುಮ್ಮನೆ ಮೊಬೈಲ್ ನೋಡೋ ಅಥವಾ ಕಾಲಹರಣ ಮಾಡುವುದರ ಬದಲು, ಅಲ್ಲಿ ರೇಡಿಯೋ ಆನ್ ಆಗಿದ್ದರೆ ಅದನ್ನು  ಬಸ್ ಬರುವವರೆಗೆ ಕೇಳಬಹುದು. ಜೊತೆಗೆ ಅಲ್ಲೇ ನಿಲ್ದಾಣದ ಹಿಂದೆ ದೊಡ್ಡ ಮೈದಾನವು ಕೂಡ ಇದೆ. ಅಲ್ಲಿಯೂ ಕೂಡ ಬೆಳಗಿನ ಸಮಯದಲ್ಲಿ, ಸಂಜೆ ಸಮಯದಲ್ಲಿ ವಾಯುವಿಹಾರಿಗಳು ಅಕ್ಕಪಕ್ಕದ ಜನರು, ಜೊತೆಗೆ ರಸ್ತೆಯಲ್ಲಿ ಸಂಚರಿಸುವವರು ಕೂಡ ಕೇಳಲಿ ಎಂದು ರೇಡಿಯೋ ಸೆಟ್ ಅಳವಡಿಸಿದ್ದಾರೆ.

ಆ ಒಂದು ಉದ್ಘಾಟನಾ ಕಾರ್ಯಕ್ರಮವನ್ನು ಇದೇ ಭಾನುವಾರ ಅಂದರೆ 04.01.2026 ರ ಬೆಳಿಗ್ಗೆ 11 ಗಂಟೆಗೆ ಆಯೋಜನೆ ಮಾಡಿದ್ದಾರೆ. ಈ ಒಂದು ಸರಳ ಸುಂದರ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಕೆ ಆರ್ ಕ್ಷೇತ್ರದ ಜನಪ್ರಿಯ ಶಾಸಕರಾದ ಟಿ ಎಸ್ ಶ್ರೀವತ್ಸರವರು ಹಾಜರಾಗುವರು.

ಮುಖ್ಯ ಅತಿಥಿಗಳಾಗಿ ಮೈಸೂರು ನಗರ ಪಾಲಿಕೆ ಆಯುಕ್ತರಾದ ಷೇಕ್ ತನ್ವೀರ್ ಆಸಿಫ್, ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಕೇಶವಮೂರ್ತಿ, ಆಕಾಶವಾಣಿಯ ತಾಂತ್ರಿಕ ವಿಭಾಗದ ಸಿ ರಂಜಿತ್, ಕುವೆಂಪು ನಗರ  ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ದ ಮೆನೇಜರ್ ಚೇತನ್, ಜೊತೆಗೆ ಎಫ್ಎಂ 100.6 ಮೈಸೂರು ಆಕಾಶವಾಣಿಯ ರೇಡಿಯೋ ಸೆಟ್ ಅಳವಡಿಕೆ ರೂವಾರಿ ಬೂಕನಕೆರೆ ವಿಜಯೇಂದ್ರ, ಮೈಸೂರು ಆಕಾಶವಾಣಿಯ ಕೇಳುಗರ ಬಳಗ ಸಮುದ್ಯತಾ ದ ಅಧ್ಯಕ್ಷರಾದ ಕಣ್ಣೂರು ವಿ ಗೋವಿಂದಾಚಾರ್ಯ, ಮತ್ತು ಬಳಗದ ಸದಸ್ಯರು, ಸಾರ್ವಜನಿಕರು ಭಾಗವಹಿಸುವರು.

ಈ ಒಂದು ಅಪರೂಪದ ಕಾರ್ಯಕ್ರಮಕ್ಕೆ ಎಲ್ಲರೂ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ನಾನೂ ಕೋರಿಕೊಳ್ಳುತ್ತೇನೆ. ಇಂತಹ ಒಂದು ಸದಭಿರುಚಿಯ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಾ, ಎಲ್ಲರಿಗೂ ಸ್ಪೂರ್ತಿಯಾಗಿರುವ ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿಯಾಗಿರುವ ಬೂಕನಕೆರೆ ವಿಜಯೇಂದ್ರ ರವರಿಗೆ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇವರ ಸಮಾಜಮುಖಿ ಕೆಲಸಗಳು ಮತ್ತಷ್ಟು ಹೆಚ್ಚಲಿ ಎಂದು ಆಶಿಸುತ್ತೇನೆ. ಕೇಳುಗರೂ ಕೂಡ ಆಕಾಶವಾಣಿಯ ಕಾರ್ಯಕ್ರಮಗಳನ್ನು ಆಲಿಸಿ ಅದರ ಉಪಯೋಗವನ್ನು ಪಡೆದುಕೊಳ್ಳಲು ಕೂಡ ನಾನು ಕೋರಿಕೊಳ್ಳುತ್ತೇನೆ. ಬೂಕನಕೆರೆ ವಿಜೇಂದ್ರ ರವರ ಸಂಪರ್ಕ ಸಂಖ್ಯೆ 9448026186. ಮತ್ತು 8088802206.

 

admin
the authoradmin

Leave a Reply

Translate to any language you want