ಚಾಮರಾಜನಗರ: ಇಂದು ಜಗತ್ತು ನೈತಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ, ಆಡಳಿತಾತ್ಮಕವಾಗಿ, ವೈದ್ಯಕೀಯವಾಗಿ, ಅಧಃಪತನ ಹೊಂದುತ್ತಿರುವ ಸಂದಿಗ್ದ ಸಮಯದಲ್ಲಿ ಹೊಸ ಜಗತ್ತಿಗೆ ಪವಿತ್ರತೆಯ ಬುನಾದಿಯನ್ನ ಹಾಕಿದ ನೂತನ ಮನು ದಾದಾ ಲೇಖರಾಜ್ ಎಂದು ಮನೋಬಲ ತಜ್ಞೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅಭಿಪ್ರಾಯಪಟ್ಟರು.
ಅವರು ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಇಂದು ಏರ್ಪಡಿಸಲಾಗಿದ್ದ ಅವ್ಯಕ್ತ ಪಿತಾಶ್ರೀ ಬ್ರಹ್ಮಾ ಬಾಬಾರವರ 57ನೇ ಸ್ಮೃತಿ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
1,876ರಲ್ಲಿ ಸಿಂದ್ ಹೈದರಾಬಾದ್ ಕರಾಚಿಯಲ್ಲಿ ಕೃಪಾ ಲಾನಿ ವಂಶದ ಮುಖ್ಯೋಪಾಧ್ಯಾಯರ ಮಗನಾಗಿ ಜನಿಸಿದ ದಾದಾ ಲೇಖರಾಜ್,ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಳ್ಳುತ್ತಾರೆ ಚಿಕ್ಕಪ್ಪನ ಆಶ್ರಯದಲ್ಲಿ ಗೋದಿ ವ್ಯಾಪಾರದಲ್ಲಿ ತೊಡಗುತ್ತಾರೆ ನಂತರ ದೊಡ್ಡ ವಜ್ರದ ವ್ಯಾಪಾರಿಯಾಗಿ ರಾಜ ಮಹಾರಾಜರ ಸಂಪರ್ಕದಲ್ಲಿಯೂ ಸಹ ಇರುತ್ತಾರೆ. ಒಮ್ಮೆ ಮೈಸೂರಿಗೆ ಬಂದಿದ್ದರು ಧಾರ್ಮಿಕವಾಗಿ ಆಧ್ಯಾತ್ಮಿಕವಾಗಿ 12 ಜನರ ಗುರುಗಳನ್ನು ಮಾಡಿಕೊಂಡಿದ್ದರು ಅವರ 60ನೇ ವಯಸ್ಸಿನಲ್ಲಿ ಈ ಜಗತ್ತಿನ ಪರಿವರ್ತನೆ ಹಾಗೂ ಹೊಸ ಪ್ರಪಂಚದ ಸ್ಥಾಪನೆಯ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ.
ವಿಶ್ವದ ಶಕ್ತಿ ಪರಮಾತ್ಮನ ಆದೇಶದಂತೆ ಅವರ ತನುವನ್ನು ಸಾಕಾರ ಮಾಧ್ಯಮವಾಗಿ ಮಾಡಿಕೊಳ್ಳುತ್ತಾರೆ. ಹೊಸ ಜಗತ್ತಿನ ಸ್ಥಾಪನೆಯಾಗಿ ಸಿಂದ್ ಹೈದರಾಬಾದ್ ಕರಾಚಿಯಲ್ಲಿ 500 ಜನ ಮಾತೆಯರು ಕನ್ಯೆಯರ ನೇತೃತ್ವದಲ್ಲಿ ಓಂ ಮಂಡಳಿ ಎಂಬ ಆಧ್ಯಾತ್ಮಿಕ ಸಂಸ್ಥೆಯನ್ನು ಹುಟ್ಟು ಹಾಕಿ ತಮದೆಲ್ಲವನ್ನ ಸರ್ವಸ್ವವನ್ನು ಅವರಿಗೆ ಅರ್ಪಣೆ ಮಾಡುತ್ತಾರೆ. 1950 ರಲ್ಲಿ ಭಾರತ ಪಾಕಿಸ್ತಾನ ವಿಭಜನೆ ಆದಾಗ ತಮ್ಮ ತಪಸ್ಸಿನ ಸ್ಥಾನವನ್ನು ಮಾಡಿಕೊಂಡು ಭಾರತದ ಮೌಂಟ್ ಅಬುವಿಗೆ ಸ್ಥಳಾಂತರ ಗೊಳ್ಳುತ್ತಾರೆ.

ಸಾಧು ಸಂತ ಸನ್ಯಾಸಿಗಳು ಮಾಡುವುದಕ್ಕಾಗದ ಅಸಂಭವ ಕಾರ್ಯವನ್ನು ಗ್ರಹಸ್ಥದಲ್ಲಿದ್ದು ಪವಿತ್ರ ಜೀವನ ನಡೆಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು. ಮಹಿಳೆಯರಿಗೆ ಇದ್ದ ಅಂಧ ವಿಶ್ವಾಸ ಕಂದಾಚಾರಗಳನ್ನು ತೊಡೆದು ಹಾಕಿ ಅವರನ್ನು ವಿಶ್ವದ ಮಾತೆರನ್ನಾಗಿ ಮಾಡಿದರು. ಮಹಿಳೆಯರು ನರಕಕ್ಕೆ ಹೆದ್ದಾರಿ ಎಂಬುದನ್ನು ಅಳಿಸಿ ಸ್ವರ್ಗಕ್ಕೆ ಹೆದ್ದಾರಿ ಎಂಬುದನ್ನು ಸಾಕಾರಗೊಳಿಸಿದರು. ಮಾತೆಯರು ತೊಟ್ಟಿಲು ಹಿಡಿಯುವ ಕೈಯನ್ನು ಇಡೀ ವಿಶ್ವವನ್ನೇ ತೂಗಬಲ್ಲದು ಎಂಬುದನ್ನು ಸಾಕಾರಗೊಳಿಸಿದರು ಎಂದು ತಿಳಿಸಿದರು. ಇದರಿಂದ ದಾದಾ ಲೇಖರಾಜ್ ರವರು ಪಿತಾಶ್ರೀ ಬ್ರಹ್ಮ ಬಾಬಾ ಎಂಬ ಹೆಸರಿನಿಂದ ಅಂಕಿತರಾದರು. ಹೊಸ ಸೃಷ್ಟಿಗೆ ಮಹಿಳೆಯರೇ ಆಧಾರ ಎಂದರು.
ಸೇವಾ ಕೇಂದ್ರದಲ್ಲಿ ಚಾರ್ ದಾಮ್ ಮಾಡಲಾಗಿತ್ತು ಮೌಂಟ್ಅಬುವಿನಲ್ಲಿರುವ ಶಾಂತಿ ಸ್ತಂಭ, ಬಾಬಾ ಕಾ ಕಮರಾ, ಬಾಬಾ ಕಾ ಜೂಲಾ, ಬಾಬಾರವರ ಕುಟೀರ, ಹಿಸ್ಟರಿಹಾಲ್, ತದ್ರೂಪ ನಿರ್ಮಾಣ ಮಾಡಲಾಗಿತ್ತು. ರಾಜ ವಿದ್ಯಾರ್ಥಿಗಳು ಬ್ರಹ್ಮಾಬಾಬಾರವರ ಭಾವ ಚಿತ್ರಕ್ಕೆ ಶ್ರದ್ಧಾ ನಮನಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್ ಬಿಕೆ ಆರಾಧ್ಯ, ಸತೀಶ್, ಶ್ರೀನಿವಾಸ್,ಶಶಿ, ಗೀತಾ, ಪುಷ್ಪ, ರಾಮಶೆಟ್ಟಿ, ಸುಂದರ್, ನಾಗರಾಜ್, ಪುಟ್ಟಶೇಖರ ಮೂರ್ತಿ, ಶಿವಕುಮಾರ, ಆಶಾ ಮಹೇಶ, ನಿರ್ಮಲ, ಲಲಿತಾ, ಮಾಣಿಕ್ಯ, ರಾಧಾ, ರಘು, ಲಕ್ಷ್ಮಿ, ಗುರು ಸಿದ್ದಯ್ಯ, ನಿರಂಜನ್ ಮುಂತಾದವರು ಹಾಜರಿದ್ದರು.








