CinemaLatest

ಕನ್ನಡ ಚಿತ್ರರಂಗದರಲ್ಲಿ ಮಿನುಗಿ ಮರೆಯಾದ ನಕ್ಷತ್ರ  ಸಿ.ವಿ. ಶಿವಶಂಕರ್….  ಇವರ ಕೊಡುಗೆ ಏನು?

ಚಂದನವನ ಇವತ್ತು ಬೃಹತ್ ಮರವಾಗಿ ಬೆಳೆದಿದ್ದರೆ ಅದಕ್ಕೆ ನೀರೆರೆದು ಬೆಳೆಸಿದ ಹಿರಿಯ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ಗೀತೆ ರಚನೆಕಾರರು ಹೀಗೆ ಲಕ್ಷಾಂತರ ಮಂದಿಯಿದ್ದಾರೆ.  ಮತ್ತು ಅವರೆಲ್ಲರೂ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವರನ್ನು ಸದಾ ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಗತಿಸಿ ಹೋದ ಕಾಲದಲ್ಲಿ ತಮ್ಮ ಹೆಸರನ್ನು ಮುಂದಿನ ತಲೆಮಾರಿಗೂ ಉಳಿಸಿ ಹೋಗುವುದು ಎಲ್ಲರಿಗೂ ಸಾಧ್ಯವಿಲ್ಲ. ಕೆಲವರಿಗಷ್ಟೇ ಸಾಧ್ಯ. ಅಂತಹವರಲ್ಲಿ ಹಿರಿಯ ನಿರ್ದೇಶಕ ಸಿ.ವಿ. ಶಿವಶಂಕರ್ ಒಬ್ಬರಾಗಿದ್ದಾರೆ. ಅವರ ಕುರಿತಂತೆ ಒಂದಷ್ಟು ವಿಚಾರಗಳನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಹಂಚಿಕೊಂಡಿದ್ದಾರೆ.

ನಾಡಪ್ರಭು ಕೆಂಪೇಗೌಡರಿಂದ ಕಟ್ಟಲ್ಪಟ್ಟ ಬೆಂದಕಾಳೂರಿನ ಭವ್ಯ ಚರಿತ್ರೆಯನ್ನು ಮತ್ತೆ, ಮತ್ತೆ ನೆನಪಿಸುವ ಮತ್ತು ಇವತ್ತಿನ ಬೃಹತ್ ಬೆಂಗಳೂರು ನಗರವು ಇವತ್ತಿನಂತೆ ಬೆಳೆಯೋಕೆ ಮುಂಚೇನೆ, 50 ವರ್ಷದ ಹಿಂದೆ ಬೆಳೆದಿದೆ ನೋಡಾ ಬೆಂಗಳೂರು ನಗರ ಎಂಬ ಚಿತ್ರಗೀತೆ ಬರೆಸಿದ್ದ ಅಪ್ಪಟ ಕನ್ನಡಿಗ!  ಇದಾದ ಕೆಲವು ವರ್ಷದ ನಂತರ ಸಂಗಮ  ಕನ್ನಡ ಚಿತ್ರದಲ್ಲಿ ಸಿರಿವಂತನಾದರೂ… ಕನ್ನಡನಾಡಲ್ಲೆ ಮೆರೆವೆ,, ಭಿಕ್ಷುಕನಾದರೂ… ಕನ್ನಡನಾಡಲ್ಲೆ ಮಡಿವೆ…..’ ಸಾಲುಗಳನ್ನು ಬರೆದು ತಾವೇ ಸಂಗೀತ ಸಂಯೋಜನೆ ಮಾಡಿದ ಮಹಾನ್ ಕನ್ನಡಪುತ್ರ. ಇಂತಹ ಧೀರಕನ್ನಡಿಗ ಹಿರಿಯ ನಿರ್ದೇಶಕ ಸಿ.ವಿ. ಶಿವಶಂಕರ್ ನಮ್ಮನ್ನೆಲ್ಲ ಅಗಲಿ ಮೂರು ವರ್ಷಗಳು ಕಳೆದು ಹೋಗಿವೆ.

ಡಾ.ರಾಜ್ ಕುಮಾರ್ ಕಾಲದ ನಿರ್ದೇಶಕರೂ, ಚಿತ್ರ ಸಾಹಿತಿ, ನಿರ್ಮಾಪಕರು, ನಟ ಹೀಗೆ ಎಲ್ಲವೂ ಆಗಿದ್ದ ಮತ್ತು ಕನ್ನಡ ಚಿತ್ರರಂಗದ ಸಂಪೂರ್ಣ ಇತಿಹಾಸ ಬಲ್ಲವರಾಗಿದ್ದ ಹಳೇ ಕೊಂಡಿ ಕಳಚಿ ಕೊಂಡಂತಾಗಿದೆ. ಅವರ ಹಿರಿಯಪುತ್ರ ವೆಂಕಟಭಾರದ್ವಾಜ್ ಕೂಡ ಕನ್ನಡ ಸಿನಿಮಾ ನಿರ್ದೇಶಕನಾಗಿ ಕೀರ್ತಿ ಗಳಿಸಿದ್ದಾರೆ. ಸಿ.ವಿ.ಎಸ್.ರವರ ಕಿರಿಯಪುತ್ರ ಲಕ್ಷ್ಮಣ್ ಕೂಡ ಖ್ಯಾತ ನಟನಾಗಿ ಜನಪ್ರಿಯತೆ ಗಳಿಸಿ ನಾಡಿನಾದ್ಯಂತ ಗುರ್ತಿಸಿಕೊಂಡಿದ್ದಾರೆ ಎನ್ನುವುದೇ ಖುಷಿಪಡುವ ವಿಚಾರವಾಗಿದೆ.

ಕೇವಲ 8 ವರ್ಷದ ಹುಡುಗನಿದ್ದಾಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಾಲನಟನಾಗಿ ಹಲವಾರು ಸಿನಿಮಾಗಳಲ್ಲಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ಕನ್ನಡ ನಾಡಿನ ಮನೆಮನೆಯಲ್ಲೂ ಹೆಸರುವಾಸಿ ಆದರು. ಸಿ.ವಿ.ಎಸ್.ನಟಿಸಿದ ಅನೇಕ ಸಿನಿಮಾಗಳಲ್ಲಿ ಪ್ರಮುಖವಾದವು ಎಂದರೆ.. ಸ್ಕೂಲ್ ಮಾಸ್ಟರ್, ರತ್ನಗಿರಿರಹಸ್ಯ, ಶ್ರೀಕೃಷ್ಣ ಗಾರುಡಿ, ಧರ್ಮವಿಜಯ, ಭಕ್ತವಿಜಯ, ಆಶಾಸುಂದರಿ, ವೀರಸಂಕಲ್ಪ, ಮುಂತಾದ 50 ಕ್ಕೂ ಮಿಕ್ಕು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಹಿರಿಯ ನಿರ್ಮಾಪಕ, ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವ ಪಡೆದ ನಂತರ ಮನೆಕಟ್ಟಿನೋಡು ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಕಾರ್ಯ ಪ್ರಾರಂಭಿಸಿದರು. 1994ರಲ್ಲಿ ಕರ್ನಾಟಕ ರಾಜ್ಯದ ಪ್ರಶಸ್ತಿ ಲಭಿಸಿದೆ. ಅನೇಕ ಸಂಘ ಸಂಸ್ಥೆ ಸರ್ಕಾರಗಳಿಂದ ಪ್ರಶಸ್ತಿ ಬಿರುದು ಬಹುಮಾನ ಸನ್ಮಾನವೂ ಇವರಿಗೆ ದೊರಕಿದೆ.

ಇವರ ಬ್ಯಾನರಡಿಯಲ್ಲಿ ತಯಾರಾದ ಕನ್ನಡ ಫಿಲಂಸ್ ಗಳೆಂದರೆ, ಮನೆಕಟ್ಟಿನೋಡು, ಪದವೀಧರ,  ಐದುಬೆರಳು, ನಮ್ಮಊರು, ಮಹಡಿಮನೆ, ಸಂಗಮ, ಹೊಯ್ಸಳ, ಮಹಾತಪಸ್ವಿ, ವೀರ ಮಹಾದೇವ, ಕನ್ನಡಕುವರ, ಮುಂತಾದ 20ಕ್ಕೂ ಹೆಚ್ಚು ಚಲನಚಿತ್ರಗಳನ್ನು  ತಯಾರಿಸಿದ್ದರು. ಕೆಲವೊಮ್ಮೆ ಬೇರೆ ನಿರ್ಮಾಪಕರ ಚಿತ್ರಗಳಿಗೂ ನಿರ್ದೇಶಕರಾಗಿ ಅಮೋಘ ಸೇವೆ ಸಲ್ಲಿಸಿದ್ದರು.

ಇವರ ಸ್ವಂತ ನಿರ್ಮಾಣ ನಿರ್ದೇಶನದ “ಕನ್ನಡ ಕುವರ” ಮತ್ತು “ಸಂಗಮ” ಎಂಬ ಚಿತ್ರಗಳು ಸಿದ್ಧವಾಗಿ ದಶಕಗಳೇ ಉರುಳಿದ್ದರೂ ಈವರೆಗೂ  ಬಿಡುಗಡೆಯಾಗದೇ ಉಳಿದುಬಿಟ್ಟಿದೆ..?! ಆಡು ಮುಟ್ಟದ ಸೊಪ್ಪಿಲ್ಲ ನಾಣ್ಣುಡಿಯಂತೆ ಸಿ.ವಿ.ಶಿವಶಂಕರ್ ನಿರ್ವಹಿಸದ ಚಲನಚಿತ್ರದ ಕಾರ್ಯಕ್ಷೇತ್ರವೇ ಇಲ್ಲ..! ಇದು ಆಶ್ಚರ್ಯ ವಾದರೂ ಕಟುಸತ್ಯ. ಕನ್ನಡ ಚಲನಚಿತ್ರ ಮತ್ತು ರಂಗಭೂಮಿಯ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ, ಛಾಯಾಗ್ರಹಣ ಮಾರ್ಗದರ್ಶಿ, ಸಂಕಲನ ತಜ್ಞ, ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳ ಸಾಹಿತಿ. ಇದೆಲ್ಲದರ ಜತೆಗೆ ದಿಗ್ಗಜ ಸಂಗೀತ ನಿರ್ದೇಶಕನೂ ಹೌದು.

ಹಲವೊಮ್ಮೆ ಪ್ರೊಡಕ್ಷನ್ ಮೇನೇಜರ್, ಪಬ್ಲಿಸಿಟಿ ಇನ್ಚಾರಜ್ ಮುಂತಾದ ಎಲ್ಲ ವಿಭಾಗದಲ್ಲೂ ಕೈ ಆಡಿಸಿದ ಸಕಲ ಕಲಾವಲ್ಲಭರಾಗಿದ್ದ ಅವರು ಮಂಗಳವಾರ ದಿನಾಂಕ 27.6.2023 ರಂದು ವಯೋಸಹಜವಾಗಿ ವಕ್ಕರಿಸಿದ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಇವರ ಪವಿತ್ರ ಆತ್ಮವು ಪರಮಾತ್ಮನನ್ನು ಸೇರಿತು.  ಶರೀರವು ಪಂಚಭೂತಗಳಲ್ಲಿ ಲೀನವಾಯಿತು. 92 ವಯಸ್ಸಿನ ಹಿರಿಯ ಮುತ್ಸದ್ಧಿ ದೈಹಿಕವಾಗಿ ಇಹಲೋಕ ತ್ಯಜಿಸಿದರೂ ಮಾನಸಿಕವಾಗಿ ಚಂದನವನದಲ್ಲಿ ಚಿರಂಜೀವ. ಇವರ ಸಾಧನೆ ಹಾಗೂ ನೆನಪು ಆಚಂದ್ರಾರ್ಕ ಅಜರಾಮರ..!

admin
the authoradmin

18 Comments

  • ಕನ್ನಡ ಚಿತ್ರರಂಗದ ಆಚಾರ್ಯಶ್ರೇಷ್ಠ ಸಕಲಕಲಾವಲ್ಲಭ ಧೀರ್ಘಕಾಲ ಚಂದನವನದ ವಿವಿಧ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಂಡು ಪರಿಪೂರ್ಣ ಬದುಕಿನ ಸಾರ್ಥಕ ಜೀವನ ಸಾಗಿಸಿ ತೆರಳಿದ ಸ್ವಚ್ಛ ಮನಸ್ಸಿನ ಅಚ್ಚ ಕನ್ನಡಿಗ
    ಸಿವಿ ಶಿವಶಂಕರ್ ರವರ ಲೇಖನವು ಬಹಳ ಸೊಗಸಾಗಿ ಮೂಡಿಬಂದಿದೆ. ಬರೆದಿರುವ ಖ್ಯಾತ ಲೇಖಕ ಕುಮಾರಕವಿಯವರಿಗೆ ಮತ್ತು ವೇಗವಾಗಿ ಬೆಳೆಯುತ್ತಿರುವ ಕನ್ನಡಿಗರ ನೆಚ್ಚಿನ ಜನಮನ ಪತ್ರಿಕೆಯವರಿಗೆ ನಮ್ಮ ಹೃದಯಪೂರ್ವಕ ಅಭಿನಂದನೆ ಮತ್ತು ಧನ್ಯವಾದಗಳು
    ಸತ್ಯನಾರಾಯಣ, ಕೃಷ್ಣಮೂರ್ತಿಪುರಂ, ಮೈಸೂರು

  • ಕನ್ನಡ ಚಿತ್ರರಂಗದ ಆಚಾರ್ಯಶ್ರೇಷ್ಠ ಸಕಲಕಲಾವಲ್ಲಭ ಧೀರ್ಘಕಾಲ ಚಂದನವನದ ವಿವಿಧ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಂಡು ಪರಿಪೂರ್ಣ ಬದುಕಿನ ಸಾರ್ಥಕ ಜೀವನ ಸಾಗಿಸಿ ತೆರಳಿದ ಸ್ವಚ್ಛ ಮನಸ್ಸಿನ ಅಚ್ಚ ಕನ್ನಡಿಗ
    ಸಿವಿ ಶಿವಶಂಕರ್ ರವರ ಲೇಖನವು ಬಹಳ ಸೊಗಸಾಗಿ ಮೂಡಿಬಂದಿದೆ. ಬರೆದಿರುವ ಖ್ಯಾತ ಲೇಖಕ ಕುಮಾರಕವಿಯವರಿಗೆ ಮತ್ತು ವೇಗವಾಗಿ ಬೆಳೆಯುತ್ತಿರುವ ಕನ್ನಡಿಗರ ನೆಚ್ಚಿನ ಜನಮನ ಪತ್ರಿಕೆಯವರಿಗೆ ನಮ್ಮ ಹೃದಯಪೂರ್ವಕ ಅಭಿನಂದನೆ ಮತ್ತು ಧನ್ಯವಾದಗಳು, ಮೈವಿವಿ ನಿವೃತ್ತ ಅಧೀಕ್ಷಕ ಸತ್ಯನಾರಾಯಣ, ಕೃಷ್ಣಮೂರ್ತಿಪುರಂ, ಮೈಸೂರು

  • ಶಿವಶಂಕರ್ ಸಿವಿ, ಎಂಬುವ ನಿಸ್ವಾರ್ಥ ಚಿತ್ರೋದ್ಯಮಿಯು ಇದ್ದ ಬಗ್ಗೆ ಮತ್ತು ಇವರೂ ಸಹ ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರೆಂದು ನನಗೆ ಮತ್ತು ನನ್ನ ಗೆಳೆಯರಿಗೆ ಗೊತ್ತೇ ಇರಲಿಲ್ಲ. ಇಂಥವರಬಗ್ಗೆ ಅರಿವು ಮೂಡಿಸುವ ಲೇಖನ ಪ್ರಶಂಸಾರ್ಹ. ನಟರಾಜ ಕವಿಗೂ ಜನಮನ ಪತ್ರಿಕೆಗೂ ಧನ್ಯವಾದ ಸರ್
    ಚಂದ್ರಚೂಡ್, ಕೆ.ಹೆಚ್.ಬಿ.ಮಾಡಲ್ ಹೌಸ್, ಹಾಸನ.

  • ಶಿವಶಂಕರ್ ಸಿವಿ, ಎಂಬುವ ನಿಸ್ವಾರ್ಥ ಚಿತ್ರೋದ್ಯಮಿಯು ಇದ್ದ ಬಗ್ಗೆ ಮತ್ತು ಇವರೂ ಸಹ ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರೆಂದು ನನಗೆ ಮತ್ತು ನನ್ನ ಗೆಳೆಯರಿಗೆ ಗೊತ್ತೇ ಇರಲಿಲ್ಲ. ಇಂಥವರಬಗ್ಗೆ ಅರಿವು ಮೂಡಿಸುವ ಲೇಖನ ಪ್ರಶಂಸಾರ್ಹ. ನಟರಾಜ ಕವಿಗೂ ಜನಮನ ಪತ್ರಿಕೆಗೂ ಧನ್ಯವಾದ ಸರ್
    ಚಂದ್ರಚೂಡ್, ಪತ್ರಕರ್ತ, ಕೆ.ಹೆಚ್.ಬಿ.ಮಾಡಲ್ ಹೌಸ್, ಹಾಸನ ಟೌನ್

  • ಸಿರಿವಂತನಾದರೂ…. ಮತ್ತು ಬೆಳೆದಿದೆ ನೋಡಾ … ಎಂಬ ಹಾಡುಗಳನ್ನು ನಾನು ಎರಡನೇ ಕ್ಲಾಸ್ ಓದುವಾಗ ನಂಜನಗೂಡಿನ ಛತ್ರದ ಮದುವೆ ಮನೆಗೆ ಹೋಗಿದ್ದಾಗ ಗ್ರಾಮಫೋನ್ ಲೌಡ್ ಸ್ಪೀಕರ್ ಮೂಲಕ 30-35 ವರ್ಷದ ಹಿಂದೆ ಕೇಳಿದ್ದ ನೆನಪು. ಆದರೆ ಅದು ಮಹಾಪುರುಷ ಶಿವಶಂಕರ್ ಪುಣ್ಯಾತ್ಮ ಅವರದ್ದು ಎಂಬ ಸತ್ಯದ ಸಂಗತಿ ಈಗಲೇ ಗೊತ್ತಾಗಿದ್ದು. ಇಂತಹ ಧೀರಕನ್ನಡಿಗ ಹಿರಿಯ ನಿರ್ದೇಶಕ ನಿರ್ಮಾಪಕರ ಬಗ್ಗೆ ನೆನಪಿಸುವ ಉತ್ತಮ ಮತ್ತು ಸಾರ್ಥಕ ಲೇಖನ ಗಳನ್ನು ಸದಾ ಬರೆಯುವ ಮಹಾನ್ ಲೇಖಕ ಕುಮಾರಕವಿ ನಟರಾಜಣ್ಣ ಅವರಿಗೆ ಸಾವಿರ ಸಾವಿರ ಧನ್ಯವಾದಗಳು. ಶಾಂತಕುಮಾರ್, ಮಂಡಕಳ್ಳಿ ಮಾದರಿ ರೈತ, ಮೈಸೂರು.

  • ಸಿರಿವಂತನಾದರೂ…. ಮತ್ತು ಬೆಳೆದಿದೆ ನೋಡಾ … ಎಂಬ ಹಾಡುಗಳನ್ನು ನಾನು ಎರಡನೇ ಕ್ಲಾಸ್ ಓದುವಾಗ ನಂಜನಗೂಡಿನ ಛತ್ರದ ಮದುವೆ ಮನೆಗೆ ಹೋಗಿದ್ದಾಗ ಗ್ರಾಮಫೋನ್ ಲೌಡ್ ಸ್ಪೀಕರ್ ಮೂಲಕ 30-35 ವರ್ಷದ ಹಿಂದೆ ಕೇಳಿದ್ದ ನೆನಪು. ಆದರೆ ಅದು ಮಹಾಪುರುಷ ಶಿವಶಂಕರ್ ಪುಣ್ಯಾತ್ಮ ಅವರದ್ದು ಎಂಬ ಸತ್ಯದ ಸಂಗತಿ ಈಗಲೇ ಗೊತ್ತಾಗಿದ್ದು. ಇಂತಹ ಧೀರಕನ್ನಡಿಗ ಹಿರಿಯ ನಿರ್ದೇಶಕ ನಿರ್ಮಾಪಕರ ಬಗ್ಗೆ ನೆನಪಿಸುವ ಉತ್ತಮ ಮತ್ತು ಸಾರ್ಥಕ ಲೇಖನ ಗಳನ್ನೇ ಯಾವಾಗಲೂ ಬರೆಯುವ ಮಹಾನ್ ಲೇಖಕ ಶ್ರೀಯುತ ಕುಮಾರಕವಿ ನಟರಾಜಣ್ಣ ಅವರಿಗೆ ಸಾವಿರಾರು ನಮಸ್ಕಾರ ಮತ್ತು ಅನೇಕ ಧನ್ಯವಾದಗಳು. ಶಾಂತಕುಮಾರ್, ಮಂಡಕಳ್ಳಿ ಮಾದರಿ ರೈತ, ಮೈಸೂರು.

  • CV SHIVASHANKAR ravara bagge kumarakavi B.N.Nataraj bareda JANAMANA KANNADA e-newsletter published Lekhana, superb 👌 👏 👍 😀……

  • First class article written by NATRAJ sir about kannada film industry’s Sandalwood legend C.V.SHIVASHANKAR SIR.
    Thank you one and all of JANAMANA KANNADA.
    Preethu 🙏

  • First class article written by KUMARA KAVI NATRAJ sir about kannada film industry’s legend C.V.SHIVASHANKAR .
    Thank you all, JANAMANA KANNADA. Preethu S.Vinay 🙏

  • Aagina kaalada Sandalwood pitamaha CV. Shivshankar avara kuritu Natraj sir avara article is superb and just bombastic, thank you very much sir 🙏 👍 😀 👏 PRUTHVI, SHIRKE, BENGALURU

  • Aagina kaalada Sandalwood pitamaha CV. Shivshankar avara kuritu Natraj sir avara article is superb & bombastic, thank you very much sir 🙏 👍 😀 👏 PRUTHVI, SHIRKE, BENGALURU 560072

  • Ee kaalada nammanta yuva janatege hindina kaalada actors and filmy people bagge uttama mahitiyulla useful article sir, thanks. Rajkumar Singh & Raghu Iyengar, Balepete, Bengaluru

  • KUMARA KAVI NATARAJA sir ravara C.V.SHIVASHANKAR lekana Ee kaalada nammanta yuva janatege hindina kaalada actors and filmy people bagge uttama mahitiyulla useful article sir, thanks. Rajkumar Singh & Raghu Iyengar, Balepete, Bengaluru

  • ಕುಮಾರಕವಿಯವರ ಬರಹ-ಸಾಹಿತ್ಯ ಅಮೋಘ. ಇದೇ ಕಾರಣಕ್ಕೇ ಕನ್ನಡ ಸಿನಿಮಾರಂಗದ ದಿಗ್ಗಜರಾದ ಸಿ.ವಿ.ಶಿವಶಂಕರ್ ರವರ ಲೇಖನವೂ ಅಮೋಘ. ನಾನಂತೂ ಮೆಚ್ಚಿಕೊಂಡ ಇವರ ಲೇಖನಗಳಲ್ಲಿ ಇದೂ ಸಹ ಒಂದು. ಓದಿದ ನಂತರ ಬಹಳ ಖುಷಿಯಾಗಿದೆ….
    ಪ್ರಭಾಕರ್, ನಿವೃತ್ತ ಆಪ್ತ ಸಹಾಯಕ, ಪರೀಕ್ಷಾಂಗ ಕುಲಸಚಿವರು, ಮೈವಿವಿ
    ಮೈಸೂರು.

  • ಕುಮಾರಕವಿಯವರ ಬರಹ-ಸಾಹಿತ್ಯ ಅಮೋಘ. ಇದೇ ಕಾರಣಕ್ಕೇ ಕನ್ನಡ ಸಿನಿಮಾರಂಗದ ದಿಗ್ಗಜರಾದ ಸಿ.ವಿ.ಶಿವಶಂಕರ್ ರವರ ಲೇಖನವೂ ಅಮೋಘ. ನಾನಂತೂ ಮೆಚ್ಚಿಕೊಂಡ ಇವರ ಲೇಖನಗಳಲ್ಲಿ ಇದೂ ಸಹ ಒಂದು. ಓದಿದ ನಂತರ ಬಹಳ ಖುಷಿಯಾಗಿದೆ. ಪ್ರಭಾಕರ್, (ನಿವೃತ್ತ) ಆಪ್ತ ಸಹಾಯಕ, ಕುಲಸಚಿವರು(ಪರೀಕ್ಷಾಂಗ) ಮೈವಿವಿ, ಮೈಸೂರು.

  • Kumarakavi B.N.Nataraja sir ravara ella lekhanagalante maanya divaganta CV Shivashankar ravara article kooda thumba chennagide, dhanyavadagalu sir.
    Mohan, P.A. to V.C.(rtd), UOM, MYSORE.

  • Kumarakavi B.N.Nataraja sir ravara ella lekhanagalante maanya divaganta CV Shivashankar ravara article kooda thumba chennagide, dhanyavadagalu sir.
    (Nivrutta) Kulapatiyavara Apthasahayaka, my.vi.vi. Mysuru.

Leave a Reply

Translate to any language you want