Mysore

ಎಚ್.ಡಿ.ಕೋಟೆ ಕಂದಾಯ ಇಲಾಖೆ ನೌಕರರ ಸಂಘದ 2026ರ ಕ್ಯಾಲೆಂಡರ್ ಬಿಡುಗಡೆ.. ಶಾಸಕರು ಹೇಳಿದ್ದೇನು?

ಸರಗೂರು: ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ 2026 ನೇ ನೂತನ ವರ್ಷದ ಕ್ಯಾಲೆಂಡರ್ ನ್ನು ಶಾಸಕರಾದ ಅನಿಲ್ ಚಿಕ್ಕಮಾದು  ಬಿಡುಗಡೆ ಮಾಡಿದರು.

ಈ ಸಂಬಂಧ ಎಚ್.ಡಿ.ಕೋಟೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ  ನಡೆದ ಸಭಾ ಕಾರ್ಯಕ್ರಮದಲ್ಲಿ   ಮಾತನಾಡಿ ಶಾಸಕರು ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು.  ಕಂದಾಯ ಇಲಾಖೆಯ ಕಾರ್ಯವೈಖರಿಯ ಕುರಿತು ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿರುವುದನ್ನು ಗಂಭೀರವಾಗಿ ಉಲ್ಲೇಖಿಸಿದರು. ಅಧಿಕಾರಿಗಳು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ, ಸಾರ್ವಜನಿಕರಿಗೆ ಸಣ್ಣ ಪುಟ್ಟ ಕೆಲಸಗಳಿಗೂ ತಿಂಗಳುಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೊದಲು ಅಧಿಕಾರಿಗಳು ಕಡ್ಡಾಯವಾಗಿ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು. ಯಾವುದೇ ಬೇಡಿಕೆಗಳಿಲ್ಲದೆ ಸಾರ್ವಜನಿಕರ ಕೆಲಸಗಳನ್ನು ನಿಷ್ಠೆಯಿಂದ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಇನ್ನು ಮುಂದೆಯೂ ಇಂತಹ ಸಮಸ್ಯೆಗಳು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಶ್ರೀನಿವಾಸ್, ಹೆಗ್ಗಡದೇವನಕೋಟೆ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾದ ಪಿ.ಎನ್ ಸಂಜೀವ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸುಗುಣ ಪಿ, ಖಜಾಂಚಿ ಜಾಹೇದಾಬಾನು, ಗೌರವಾಧ್ಯಕ್ಷ ಮಹೇಶ್ ವಿ, ಉಪಾಧ್ಯಕ್ಷ ವೇದಕುಮಾರ್ ಎನ್, ಸಂಘಟನಾ ಕಾರ್ಯದರ್ಶಿ ಲೋಹಿತ್ ಸಿ.ವಿ, ಜಿಲ್ಲಾ ಉಪಾಧ್ಯಕ್ಷ ಪುನೀತ್ ಹೆಚ್ ಕೆ, ಕಾನೂನು ಸಲಹೆಗಾರ ತನುರಾಜ್ ಡಿ, ಸಾಂಸ್ಕೃತಿಕ ಕಾರ್ಯದರ್ಶಿ ಗೋವಿಂದರಾಜು ಜಿ.ಎನ್, ಕ್ರೀಡಾ ಕಾರ್ಯದರ್ಶಿ ವಿಶ್ವನಾಥ್ ಸಿ ಎಸ್.

ನಿರ್ದೇಶಕರಾದ  ತಾಲೂಕು ಕಚೇರಿಯ  ಸುರೇಶ್ ಪಿ, ಕಸಬಾ ಹೋಬಳಿಯ ನಿರ್ದೇಶಕರಾದ ಸಹನ ಎಸ್, ಅಂತರ ಸಂತೆ ಹೋಬಳಿಯ ನಿರ್ದೇಶಕರಾದ ನಾಗರಾಜ್ ಜಯಪ್ರಕಾಶ್ ನಾಯಕ್,ಹಂಪಾಪುರ ಹೋಬಳಿ ನಿರ್ದೇಶಕರಾದ ತ್ರಿಶೂಲ್, ಡಿ ಗ್ರೂಪ್ ನೌಕರರ ನಿರ್ದೇಶಕ ಕುಮಾರ್ ಜಿ,  ಗ್ರಾ.ಆ.ಅ. ಸಂಘದ ಅಧ್ಯಕ್ಷ ಯೋಗೇಶ್ ಕೆ.ಬಿ, ಕ.ರಾ.ಸ.ನೌ.ಸಂ ನಿರ್ದೇಶಕರಾದ ದಿಲೀಪ್, ಕ.ರಾ.ಸ.ನೌ.ಸಂ ನಿರ್ದೇಶಕರಾದ ಹೆಚ್.ಎಮ್ ಮನೋಜ್, ಗ್ರಾಮ ಸಹಾಯಕ ಸಂಘದ ಅಧ್ಯಕ್ಷ ಸೋಮೇಶ್. ಹಾಗೂ ಕಂದಾಯ ಇಲಾಖೆಯ ನೌಕರರು, ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಶಾಸಕರ ಪಿ.ಎ ರವರು ಹಾಗೂ ಕಾಂಗ್ರೆಸ್ ಮುಖಂಡರು ಇನ್ನಿತರ ಪಕ್ಷದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

admin
the authoradmin

Leave a Reply

Translate to any language you want