ಕರ್ನಾಟಕದಲ್ಲಿ ಬಾಂಗ್ಲಾದೇಶಿಗರು… ರಾಷ್ಟ್ರದ ಸಮಗ್ರತೆಗೆ ಮತ್ತು ಭದ್ರತೆಗೆ ದೊಡ್ಡ ಸವಾಲಾದ ಆಡಳಿತ ವೈಫಲ್ಯ

ಕರ್ನಾಟಕದ ಯಾವುದೇ ಮೂಲೆಗೆ ನಾವೀಗ ತೆರಳಿದರೂ, ಅಲ್ಲೆಲ್ಲ ನಮಗೆ ಕೇಳಿ ಬರುವ ಬಹಿರಂಗ ರಹಸ್ಯದ ಮಾತೆಂದರೆ ಅನಿಯಂತ್ರಿತ ಬಾಂಗ್ಲಾದೇಶಿ ಕಾರ್ಮಿಕ ವೇಷದ ಪ್ರಜೆಗಳು. ಅವರನ್ನು ಪ್ರಶ್ನಿಸಿದರೆ, ನಾವು ಅಸ್ಸಾಂ-ಪಶ್ಚಿಮ ಬಂಗಾಳದವರು ಎಂದು ಹರಕು ಮುರುಕು ಹಿಂದಿ ಭಾಷೆಯಲ್ಲಿ ಹೇಳುತ್ತಾರೆ. ನಮ್ಮಲ್ಲಿ ಮೊದಲೇ ಕಾರ್ಮಿಕರ ಕೊರತೆ. ಹಾಗಾಗಿ, ಕೆಲಸ ಮಾಡುವವರು ಸಿಕ್ಕಿದರೆ ಸಾಕು ಅನ್ನುವ ಮನೋಭಾವ ಇದೆ. ಆದರೆ, ವಾಸ್ತವದಲ್ಲಿ ಇದು ದೇಶಕ್ಕೆ ಮಾರಕವಾಗುವ ಎಲ್ಲಾ ಸಾಧ್ಯತೆಗಳು ಈಗ ಕಂಡು ಬರಲಾರಂಭಿಸಿದೆ.
ಕಾಂಗ್ರೆಸ್- ತೃಣ ಮೂಲ ಕಾಂಗ್ರೆಸ್ ಪಕ್ಷಗಳ ತುಷ್ಟಿಕರಣ ನೀತಿ ಅವರಿಗೆ ಬಹು ದೊಡ್ಡ ವರದಾನವಾಗಿದೆ. ಇದಕ್ಕೆ ಉದಾಹರಣೆ ಕೋಗಿಲು ಘಟನೆ ! ಈ ಅಕ್ರಮ ವಲಸಿಗರು ಹೇಗೆಂದರೆ ಕಾಂಗ್ರೆಸ್ ಗಿಡಗಳ ಹಾಗೆ. ಬೇರೂರಲು ಹಿಡಿ ಮಣ್ಣು ಸಿಕ್ಕಿದರೆ ಸಾಕು, ಇಡೀ ಊರನ್ನು ಅವು ಕಬಳಿಸುತ್ತವೆ. ವಾಸ್ತವದಲ್ಲಿ ನಮ್ಮ ರಾಜ್ಯದಲ್ಲಿಂದು ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ವಲಸೆ ಕೇವಲ ವಲಸೆ ಅಥವಾ ಕಾರ್ಮಿಕ ಸಮಸ್ಯೆಯಾಗಿ ಉಳಿದಿಲ್ಲ. ಇದು ಆಡಳಿತ ವೈಫಲ್ಯ, ಕಾನೂನು ಉಲ್ಲಂಘನೆ, ಆಂತರಿಕ ಭದ್ರತೆ, ಸಾರ್ವಜನಿಕ ವ್ಯವಸ್ಥೆ, ಪ್ರವಾಸೋದ್ಯಮ ಮತ್ತು ದೇಶದ ಸಮಗ್ರತೆಗೆ ನೇರ ಅಪಾಯವಾಗಿ ರೂಪುಗೊಂಡಿದೆ. ಇತ್ತೀಚಿನ ಕೋಗಿಲು ಪ್ರಕರಣ ಈ ಸಮಸ್ಯೆಯು ಎಷ್ಟು ಗಂಭೀರ ಹಂತ ತಲುಪಿದೆ ಎಂಬುದಕ್ಕೆ ಸ್ಪಷ್ಟ ಎಚ್ಚರಿಕೆಯ ಕರೆಗಂಟೆಯಾಗಿದೆ. ಇದು ವರ್ಷಗಳಿಂದ ಈ ಸಮಸ್ಯೆ ಬಗ್ಗೆ ಸರಕಾರ ತಾಳಿದ ನಿರ್ಲಕ್ಷ್ಯ ಮತ್ತು ಕೆಲ ದೇಶ ವಿರೋಧಿ ಶಕ್ತಿಗಳ ಮೌನ ಬೆಂಬಲದ ಪರಿಣಾಮ ಎಂದರೆ ಅತಿಶಯೋಕ್ತಿಯಾಗಲಾರದು.

ಸಾಮಾಜಿಕ ಸಂರಚನೆಯೇ ಬದಲಾವಣೆ: ಈ ನೆಲದ ಶಕ್ತಿ ಇಲ್ಲಿನ ಹಿಂದೂ ಧರ್ಮ. ಹಿಂದೂಗಳ ಸಂಖ್ಯೆ ಕಡಿಮೆಯಾದರೆ ಏನಾಗಬಹುದು ಎಂಬುದಕ್ಕೆ ಪಾಕಿಸ್ತಾನ ಹಾಗು ಬಾಂಗ್ಲಾದೇಶಗಳ ಸೃಷ್ಟಿಯೇ ಸಾಕ್ಷಿ. ಈಗ ದೊಡ್ಡ ಪ್ರಮಾಣದ ಬಾಂಗ್ಲಾ ವಲಸಿಗರು, ಈ ನೆಲದ ಸಾಮಾಜಿಕ ಸಂರಚನೆಯನ್ನೇ ಬದಲಾಯಿಸುತ್ತಿದ್ದರೆ. ಇದಕ್ಕೆ ಈ ಕೆಳಗಿನ ಅಂಕಿ ಅಂಶಗಳೇ ಸಾಕ್ಷಿ. ಬಾಂಗ್ಲಾ ದೇಶೀಯರ ವಲಸೆ ಅಕ್ರಮ. ಹೀಗಾಗಿ ಈ ನೆಲದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶೀಯರ ನಿಖರ ಸಂಖ್ಯೆಯನ್ನು ಅಂದಾಜಿಸುವುದು ಕಷ್ಟ. ಆದ್ರೆ ದೇಶದ ಉದ್ದಗಲಕ್ಕೂ ಅಕ್ರಮ ಬಾಂಗ್ಲಾದೇಶಿ ವಲಸಿಗರ ಸಂಖ್ಯೆ ಸುಮಾರು 1.2 ಕೋಟಿ ರಿಂದ 2 ಕೋಟಿ ಇರಬಹುದು ಎಂಬ ಅಂದಾಜಿದೆ. ಕೆಲವು ಮೂಲಗಳ ಪ್ರಕಾರ ಕರ್ನಾಟಕ ಒಂದರಲ್ಲೇ 25 ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರು ಇರಬಹುದೆಂಬ ಅಂದಾಜು ಇದೆ. ಸದ್ಯಕ್ಕೆ ಆಗಬೇಕಿರುವುದು ಈ ನೆಲದ ಅಕ್ರಮವಾಸಿಗಳ ಗಣತಿ
ಸದ್ಯಕ್ಕೆ ನಮ್ಮ ಮುಂದಿರುವ ಬಹು ದೊಡ್ಡ ಸವಾಲು ಕರ್ನಾಟಕ ಎರಡನೇ ಪಶ್ಚಿಮ ಬಂಗಾಳ ಆಗದಂತೆ ತಡೆಯುವುದು. ಅಲ್ಲಿ ರಾಜ್ಯ ಸರಕಾರವೇ ತನ್ನ ಅಧಿಕಾರ ಲಾಲಸೆಗೆ ಅಕ್ರಮ ವಲಸೆಯನ್ನು ಬೆಂಬಲಿಸಿದೆ. ಅಲ್ಲಿನ ಬಿಜೆಪಿ ವಿರೋಧಿ ಶಕ್ತಿಗಳ ಬಹುದೊಡ್ಡ ವೋಟ್ ಬ್ಯಾಂಕ್ ಈ ಅಕ್ರಮ ವಲಸಿಗರು. ಅವರ ಕೃಪೆಯಿಂದ ವಲಸಿಗರು ಗಟ್ಟಿಯಾಗಿ ಬೇರು ಬಿಟ್ಟಿದ್ದಾರೆ. ನಮ್ಮ ಕನ್ನಡ ನೆಲದಲ್ಲೂ ಈಗ ಇದೆ ಪ್ರಯತ್ಬ ಜಾರಿಯಲ್ಲಿದೆಯೇನೋ ಅನ್ನುವ ಭೀತಿ ಇದೆ. ಈ ಅಕ್ರಮ ವಲಸಿಗರ ಪಾಲಿನ ಬಹುದೊಡ್ಡ ಆಯುಧ ಭ್ರಷ್ಟ ಸರಕಾರೀ ವ್ಯವಸ್ಥೆ. ಮೊದಲಿಗೆ ಅವರು ಆಧಾರ್ ಪಡೆಯುತ್ತಾರೆ. ಯು ಐ ಡಿ ಎ ಐ ಸ್ಪಷ್ಟವಾಗಿ ಹೇಳಿರುವಂತೆ, ಆಧಾರ್ ಪೌರತ್ವ ಸಾಬೀತು ಪಡಿಸುವುದಿಲ್ಲ. ಆದರೆ, ಒಮ್ಮೆ ಆಧಾರ್ ಪಡೆದು ಆ ಬಳಿಕ ಸುಲಭವಾಗಿ ರೇಷನ್ ಕಾರ್ಡ್ ಬಳಿಕ ಮತದಾರರ ಗುರುತಿನ ಚೀಟಿ ಪಡೆಯಲಾಗುತ್ತದೆ. ಇವೆಲ್ಲರ ಜೊತೆಗೆ ಬಿಪಿಎಲ್ ಕಾರ್ಡ್ ಕೂಡ ಇವರಿಗೆ ದೊರೆಯುತ್ತದೆ. ಬಳಿಕ ಅನ್ನ ಕೊಟ್ಟವರಿಗೆ ಅವರು ದ್ರೋಹ ಬಗೆಯುತ್ತಾರೆ.
ವಿದೇಶಿಗರ ಕಾಯ್ದೆ – 1946, ಪೌರತ್ವ ಕಾಯ್ದೆ – 1955, ಪಾಸ್ಪೋರ್ಟ್ (ಭಾರತ ಪ್ರವೇಶ) ಕಾಯ್ದೆ – 1920, ಆಧಾರ್ ಕಾಯ್ದೆ – 2016, ಮತ್ತು ಪ್ರತಿನಿಧಿ ಜನ ಕಾಯ್ದೆ – 1950 ಇವೆಲ್ಲನ್ನು ಉಲ್ಲಂಘಿಸಿ, ಈ ಅಕ್ರಮ ವಲಸಿಗರಿಗೆ ಇಲ್ಲಿ ಮಣೆ ಹಾಕಲಾಗುತ್ತಿದೆ. ಇದು ಕೇವಲ ಆಡಳಿತದ ತಪ್ಪಲ್ಲ. ಬದಲಿಗೆ ಸಂವಿಧಾನಾತ್ಮಕ ವ್ಯವಸ್ಥೆಯ ಮೇಲಿನ ದಾಳಿ ಎಂದರೆ ತಪ್ಪಾಗಲಾರದು. .ವಿದೇಶಿ ವಲಸಿಗರ ಪ್ರಾದೇಶಿಕ ನೋಂದಣೆ ವ್ಯವಸ್ಥೆಗೆ ವಿರುದ್ಧವಾಗಿ, ಹೀಗೆ ಭಾರತದ ಭದ್ರತೆಗೆ ಇವರೆಲ್ಲಾ ಸವಾಲಾಗುತ್ತಿದ್ದರೆ. ಭ್ರಷ್ಟ ಆಡಳಿತ ವ್ಯವಸ್ಥೆ ಇವರ ಪಾಲಿಗೆ ವರದಾನವಾಗಿದೆ.

ಕರ್ನಾಟಕದಲ್ಲಿ ರಾಜ್ಯಮಟ್ಟದ ವಲಸೆ ಪರಿಶೀಲನೆ ಮತ್ತು ಟ್ರ್ಯಾಕಿಂಗ್ ನೀತಿ ಇಲ್ಲದಿರುವುದು ದೊಡ್ಡ ಆಡಳಿತಾತ್ಮಕ ದೌರ್ಬಲ್ಯ. ಕೆಲವು ಸ್ಥಳೀಯ ಪ್ಲಾಂಟರ್ಗಳು ಮತ್ತು ಎಸ್ಟೇಟ್ ಮಾಲೀಕರು, ಗುತ್ತಿಗೆದಾರರು ಹಾಗೂ ಉದ್ಯೋಗದಾತರು ಕಡಿಮೆ ಕೂಲಿಗಾಗಿ ಅಕ್ರಮ ಬಾಂಗ್ಲಾದೇಶಿ ಕಾರ್ಮಿಕರನ್ನು ತಿಳಿದುಕೊಂಡೇ ರಕ್ಷಣೆ ನೀಡುತ್ತಿದ್ದಾರೆ. ಗಡಿ ಜಿಲ್ಲೆಗಳು, ಮಲೆನಾಡು ಪ್ರದೇಶಗಳು, ತೋಟಗಳು, ಎಸ್ಟೇಟ್ಗಳು, ನಿರ್ಮಾಣ ಕ್ಷೇತ್ರ, ಇಟ್ಟಿಗೆ ಭಟ್ಟಿಗಳಲ್ಲಿ ಇಂದು ಇವರದ್ದೇ ಸಾಮ್ರಾಜ್ಯ ಅನ್ನುವಂತಾಗಿದೆ. ಪ್ರಶ್ನಿಸಿದರೆ ಅವರ ಬಳಿ ಆಧಾರ್ ಕಾರ್ಡ್ ಇರುತ್ತದೆ.
ರಾಜ್ಯದ ಎಲ್ಲೆಡೆ ಈಗ ಆಕ್ರಮ ವಲಸಿಗರಿಂದ ಈಗಾಗಲೇ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗ ನಷ್ಟ, ಕೂಲಿ ದರ ಕುಸಿತ ಹಾಗು ಪರಿಸರ ಹಾಗೂ ಸಾಮಾಜಿಕ ಒತ್ತಡ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇವರು ಅಕ್ರಮ ವಲಸೆಯ ಜಾಲಗಳು ಮಾದಕ ದ್ರವ್ಯ ಸಾಗಣೆ, ಕಳ್ಳಸಾಗಣೆ, ಸಂಘಟಿತ ಅಪರಾಧ ಹಾಗು ಉಗ್ರ ಚಟುವಟಿಕೆಗಳಿಗೆ ಲಾಜಿಸ್ಟಿಕ್ ಬೆಂಬಲ ನೀಡಬಹುದಾದ ಅಪಾಯವಿದೆ. ಈ ವಲಸಿಗರು ಅಂತ್ಯಂತ ನಿಗೂಢ ರೀತಿಯ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಅವರ ಮನೆ ಎಲ್ಲಿದೆ ಎನ್ನುವುದು ಹುಡುಕುವುದೇ ಕಷ್ಟ. ಅವರ ಅನಿಯಂತ್ರಿತ ವಸತಿಗಳು ಮುಂದೆ ಡ್ರಗ್ ಹಬ್ಗಳು, ಅಪರಾಧ ಚಟುವಟಿಕೆಗಳಿಗೆ ಸ್ವರ್ಗವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ.
ಈ ಸಮಸ್ಯೆಗೆ ಏಕೈಕ ಪರಿಹಾರ ರಾಜಕೀಯ ಇಚ್ಚಾ ಶಕ್ತಿ. ಇದನ್ನು ರಾಜಕೀಯದ ಕನ್ನಡಕದಿಂದ ನೋಡದೆ ರಾಷ್ಟ್ರದ ಸಮಗ್ರತೆಯ ವಿಷಯವಾಗಿ ಪರಿಗಣಿಸಬೇಕು. ಇದು ಯಾವುದೇ ಧರ್ಮ ಅಥವಾ ಜಾತಿಯ ವಿಷಯವಲ್ಲ. ಬದಲಿಗೆ ಕಾನೂನು, ಸಂವಿಧಾನ ಮತ್ತು ಭಾರತದ ಸಮಗ್ರತೆಯ ಪ್ರಶ್ನೆ. ಕರ್ನಾಟಕ ಸರಕಾರ ಈಗ ಅಸ್ಸಾಂ, ತ್ರಿಪುರಾ ಮತ್ತು ಇತರ ಅಕ್ರಮ ವಲಸೆಯಿಂದ ತೀವ್ರವಾಗಿ ಬಾಧಿತಗೊಂಡ ಇತರ ರಾಜ್ಯಗಳಿಂದ ಪಾಠ ಕಲಿಯಬೇಕು.
ಈ ರಾಜ್ಯಗಳ ಸಲಹೆ ಪಡೆದು ಈ ಆಕ್ರಮಿಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ರಾಜ್ಯವ್ಯಾಪಿ ವಲಸೆ ಪರಿಶೀಲನೆ, ಗುರುತಿಸಲಾದ ಅಕ್ರಮ ವಿದೇಶಿಗರಿಗೆ ಸರ್ಕಾರಿ ಮೇಲ್ವಿಚಾರಣೆಯ ಶಿಬಿರಗಳು, ಅಕ್ರಮವಾಗಿ ಪಡೆದ ಆಧಾರ್, ಮತದಾರರ ಗುರುತು, ರೇಷನ್ ಕಾರ್ಡ್ಗಳ ತಕ್ಷಣದ ರದ್ದು, ನಕಲಿ ದಾಖಲೆ ಜಾಲಗಳ ಮೇಲೆ ಕಠಿಣ ಕಾನೂನು ಕ್ರಮ, ಅಕ್ರಮ ಕಾರ್ಮಿಕರನ್ನು ಬಳಸುವ ಪ್ಲಾಂಟರ್ಗಳು, ಎಸ್ಟೇಟ್ ಮಾಲೀಕರು ಹಾಗು ಇತರ ಉದ್ಯೋಗದಾತರ ಮೇಲೆ ದಂಡ ಮತ್ತು ಕ್ರಿಮಿನಲ್ ಪ್ರಕರಣ ಹೀಗೆ ದೇಶದ ಹಿತಕ್ಕಾಗಿ ಕಠಿಣ ಕ್ರಮ ಕೈಗೊಳ್ಳಬೇಕಿದೆ.








