ದುಬೈ: ಭಾರತದಿಂದ ತೆರಳಿ ದುಬೈನಲ್ಲಿ ಬದುಕು ಕಟ್ಟಿಕೊಂಡಿರುವ ಕಾರ್ಮಿಕರ ಹಿತದೃಷ್ಟಿಯಿಂದ ದುಬೈನ್ ಕಾನ್ಸ್ ಲೇಟ್ ಜನರಲ್ ಆಫ್ ಇಂಡಿಯಾ ವತಿಯಿಂದ ದುಬೈನ ಅಲ್ ಲುಲು ಅಲ್ಫುಜಿ ಕಾಂಟ್ರಾಕ್ಟಿಂಗ್ ಎಲ್ ಎಲ್ಸಿ ಕ್ಯಾಂಪ್ ನಲ್ಲಿ ಕಾರ್ಮಿಕರಿಗೆ ಆರೋಗ್ಯ ಮತ್ತು ಹಣಕಾಸಿನ ಕುರಿತ ಜಾಗೃತಿ ಶಿಬಿರವನ್ನು ನಡೆಸಲಾಯಿತು.

ಈ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ವಲಸೆ ಕಾರ್ಮಿಕರು ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಶಿಬಿರದಲ್ಲಿ ಕಾರ್ಮಿಕರ ಕುಂದುಕೊರತೆ ಕಲ್ಯಾಣ ಕಾರ್ಯಕ್ರಮಗಳು, ಸಮಸ್ಯೆಗಳ ಕುರಿತ ಪರಿಹಾರದ ಕಾರ್ಯ ವಿಧಾನ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಸಲಹೆ ಸೂಚನೆಗಳನ್ನು ಮುಖ್ಯಸ್ಥರು ನೀಡಿದರು.

ಇದೇ ವೇಳೆ ಕಾರ್ಮಿಕರು ಹಲವು ವಿಚಾರಗಳಲ್ಲಿ ಮೋಸ, ವಂಚನೆ ಒಳಗಾಗುವ ಸಾಧ್ಯತೆ ಇರುವುದರಿಂದ ಅಲ್ಲದೆ ಹಣಕಾಸಿನ ವಿಚಾರದಲ್ಲಿಯೂ ತೊಂದರೆಗೊಳಗಾಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಎಲ್ಲ ವಿಚಾರಗಳ ಕುರಿತಂತೆ ಅವರಿಗೆ ಉಪಯುಕ್ತ ಮಾಹಿತಿಗಳನ್ನು ನೀಡಲಾಯಿತು.

ಇನ್ನು ಕಾರ್ಮಿಕರ ಆರೋಗ್ಯ ರಕ್ಷಣೆ, ಹೃದಯಾಘಾತದ ಸಂದರ್ಭ ಪ್ರಥಮ ಚಿಕಿತ್ಸೆಯಾಗಿ ಸಿಪಿಆರ್ ನೀಡುವ ಕುರಿತಂತೆ ಮಾಹಿತಿ ನೀಡಿದ್ದಲ್ಲದೆ ಕಾರ್ಮಿಕರಿಗೆ ಪ್ರಾತ್ಯಕ್ಷಿಕೆ ಮೂಲಕವೂ ತೋರಿಸಲಾಯಿತು. ಒಟ್ಟಾರೆ ಕಾರ್ಮಿಕರಿಗೆ ಉಪಯುಕ್ತ ಕಾರ್ಯಕ್ರಮ ಇದಾಗಿತ್ತು.








