LatestMysore

ಪ್ರತಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ಥಾಪನೆಯಿಂದ ಶ್ರಮಿಕ ರೈತರಿಗೆ ಅನುಕೂಲ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಪ್ರತಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಪ್ರಾರಂಭವಾದಾಗ ಕಷ್ಟಪಡುವ ರೈತರಿಗೆ ಅನುಕೂಲವಾಗಲಿದೆ ಎಂದು ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಕೆರೆಯೂರು ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ ಸ್ವಗ್ರಾಮದಿಂದ ಮತ್ತೊಂದು ಹಳ್ಳಿಯ ಡೈರಿಗೆ ಹಾಲು ಹಾಕಲು ರೈತರು ನಡೆದುಕೊಂಡು ಹೋಗಿ ಹಾಲು ಹಾಕುವುದನ್ನು ತಪ್ಪಿಸಲು  ರೈತರ ಕಷ್ಟವನ್ನು ತಪ್ಪಿಸಲು ಪ್ರತಿ ಹಳ್ಳಿಗಳಲ್ಲೂ ಡೈರಿ ತೆರೆಯಲಾಗುತ್ತದೆ. ಹುಣಸೂರು ತಾಲೂಕಿನಲ್ಲಿ 8 ವರ್ಷಗಳ ಹಿಂದೆ ಕೇವಲ 47 ಹಾಲು ಉತ್ಪಾದಕರ ಸಹಕಾರ ಸಂಘಗಳು ಇದ್ದವು ಈಗ 215 ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ಥಾಪನೆಯಾಗಿವೆ ಎಂದರು.

ಕೆರೆಯೂರು ಗ್ರಾಮಕ್ಕೆ ಪ್ರಗತಿಪಥ ಯೋಜನೆಯಲ್ಲಿ 35 ಲಕ್ಷ ರೂ ವೆಚ್ಚದಲ್ಲಿ ಮುಖ್ಯರಸ್ತೆ ಕಾಮಗಾರಿಗೆ ಅನುದಾನ ನೀಡಲಾಗಿದೆ ಜೊತೆಗೆ ಈ ಗ್ರಾಮದಲ್ಲಿ ವೆಂಕಟೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನನ್ನ ವೈಯಕ್ತಿಕ ಹಾಗೂ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆಂಪನಹಳ್ಳಿ ಕುಮಾರ್, ಡೈರಿ ಅಧ್ಯಕ್ಷ ಕೆಂಪರಾಜು ಉಪಾಧ್ಯಕ್ಷ ಬಸವಲಿಂಗಪ್ಪ, ನಿರ್ದೇಶಕರುಗಳಾದ ಗಿರೀಶ್,ವಸಂತ್, ಕುಮಾರ್ ಬಸವರಾಜು ಸತೀಶ್ ಮಹದೇವ ಶೆಟ್ಟಿ,ಪುಟ್ಟರಾಜು, ಶಿಲ್ಪ, ಶ್ವೇತ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಮನೋಹರ

ಟಿಎಪಿಸಿಎಂಎಸ್  ಅಧ್ಯಕ್ಷ ಹಬ್ಬನಕುಪ್ಪೆ ಪ್ರೇಮ್ ಕುಮಾರ್ ,ಉಪಾಧ್ಯಕ್ಷ ಹೊನ್ನಪ್ಪರಾವ್ ಕಾಳಿಂಗೆ, ನಿರ್ದೇಶಕರುಗಳಾದ ಬಸವಲಿಂಗಯ್ಯ, ಪಾಪು. ಬಾಬು. ಗ್ರಾಮದ ಯಜಮಾನ ರಾದ ರವೀಶ್, ಚಲುವಯ್ಯ, ದೇವಯ್ಯ, ಶ್ವೇತ ಸಿದ್ದರಾಜು, ತಾಲೂಕು ಜೆಡಿಎಸ್ ಮುಖಂಡರಾದ ಹರವೆ ಶ್ರೀಧರ್, ಸತೀಶ್ ಪಾಪಣ್ಣ ಫಜಲುಲ್ಲಾ, ಸುರೇಂದ್ರ ತಟ್ಟೆಕೆರೆ ಶ್ರೀನಿವಾಸ್ ಬಿಳಿಗೆರೆ ನಾಗರಾಜು, ಜಾಬಗೆರೆ ಹರೀಶ್, ವೀರಶೈವ ಮುಖಂಡ ಪುಟ್ಟಲಿಂಗಪ್ಪ, ಡೈರಿ ವಿಸ್ತರಣಾಧಿಕಾರಿಗಳಾದ ಗೌತಮ್, ವಸಂತ, ಸುಮಂತ್, ಹಾಗೂ ಇನ್ನೂ ಹಲವು ಮುಖಂಡರು ಹಾಜರಿದ್ದರು.

admin
the authoradmin

Leave a Reply

Translate to any language you want