janamanakannada > Blog > Articles > ಹೊಸ ವರುಷ 2026 ಕಾಲದ ಬಾಗಿಲು ತೆರೆದು ನುಗ್ಗಿದಾಗ…. ಮನದ ಮಸುಕು ಕರಗಲಿ
ಹೊಸವರುಷವನ್ನು ಹರುಷದಿಂದ ಸ್ವಾಗತಿಸಿದ ನಾವು ಸಂಭ್ರಮದಲ್ಲಿ ತೇಲಾಡಿದ್ದೇವೆ.. ಆದರೆ ವರುಷದುದ್ದಕ್ಕೂ ಅದೇ ಸಂಭ್ರಮವನ್ನು ಉಳಿಸಿ ಖುಷಿ ಖುಷಿಯಾಗಿ ಬದುಕುವ ಜವಬ್ದಾರಿ ನಮ್ಮದಾಗಿದೆ… ಇದು ಹೊಸವರುಷದ ಕುರಿತ ಕವನ ಓದಿ ಬಿಡಿ…

ಕಾಲದ ಬಾಗಿಲು ತೆರೆದು ಹೊಸ ವರುಷ ನುಗ್ಗಿದಾಗ,
ಅಹಂಕಾರದ ಹೊರೆ ಇಳಿಸಿ ಹೃದಯ ಹಗುರಗೊಳ್ಳಲಿ.
ವಚನದ ನಾದದಲ್ಲಿ ಮನದ ಮಸುಕು ಕರಗಲಿ,
ಸತ್ಯವೇ ಸೌರಭವಾಗಿ ಉಸಿರೊಳಗೆ ಹರಡಲಿ.
ಕಾಯಕದ ಬೆವರಲ್ಲಿ ಕನಸಿನ ಬೀಜ ಮೊಳಕೆಯೊಡೆಯಲಿ,
ಕರುಣೆಯ ಕೈಚಾಚುವಲ್ಲಿ ಮಾನವತೆ ಮೆರೆಯಲಿ.
ಭೇದಗಳ ಗೋಡೆ ಕುಸಿದು ಸಮಾನತೆಯ ದಾರಿ ತೆರೆಯಲಿ,
“ನಾನೇನು–ನೀನೇನು” ಎನ್ನುವ ಅಂತರ ಮರೆಯಾಗಲಿ.
ಹೊಸ ವರುಷ ಹೊಸ ದೃಷ್ಟಿ, ಹೊಸ ನಡೆ ಹೊಸ ನೆಲೆ,
ಶಿವತ್ವವೇ ಬದುಕಾಗಿ ಕಂಡುಕೊಳ್ಳುವ ಶುಭಕಾಲವಾಗಿ ರೂಪುಗೊಳ್ಳಲಿ
ಹೊಸ ವರುಷ ನಿಮ್ಮ ಬಾಳಿನಲ್ಲಿ ಹರುಷ ತರಲಿ..

Tags:kavana
admin








