Mysore

ಮೈಸೂರು ವಿವಿಯಿಂದ ಆರು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಗೆ ಚಿನ್ನದ ಉಂಗುರದ ಉಡುಗೊರೆ…

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಮೈಸೂರು ವಿಶ್ವವಿದ್ಯಾನಿಲಯದ 106 ವಾರ್ಷಿಕ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಸಾಧಕಿ ವಿದ್ಯಾರ್ಥಿನಿಗೆ ಹುಣಸೂರು ಕ್ಷೇತ್ರದ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಚಿನ್ನದ ಉಂಗುರ ನೀಡಿ ಸನ್ಮಾನಿಸಿದರು.

ಹುಣಸೂರು ತಾಲೂಕಿನ ಗಾವಡಗೆರೆ  ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದ ಕೆಎಸ್ಆರ್ ಟಿ ಸಿ ನಿರ್ವಾಹಕ ತಯಾಬ್ ಅಹಮದ್ ಶಿಕ್ಷಕಿ ರುಕ್ಷನಾ ದಂಪತಿಗಳ ಪುತ್ರಿ ಹಮೈನಾ ಆರು ಚಿನ್ನದ ಪದಕ ಐದು ನಗದು ಬಹುಮಾನ ಪಡೆದ ಸಾಧಕಿ ಯನ್ನು ಮರೂರು ಗ್ರಾಮದಲ್ಲಿ ಸನ್ಮಾನಿಸಿ ಮಾತನಾಡುತ್ತಾ ಗ್ರಾಮೀಣ ವಿದ್ಯಾರ್ಥಿನಿಯ ಸಾಧನೆ ತಾಲೂಕಿಗೆ ಹೆಮ್ಮೆ ತಂದಿದೆ ಶಾಂತಿಯ ಹೆಣ್ಣು ಮಗಳು ಸಾಧನೆ ಮಾಡಿದ್ದಾಳೆ ತಾಲೂಕಿಗೆ ವಿದ್ಯಾರ್ಥಿಗಳಿಗೆ ಇವರು ಮಾದರಿಯಾಗಿದ್ದಾರೆ

ಕಳೆದ 16 ವರ್ಷಗಳಿಂದ ನನ್ನ ತಾಯಿಯ ಹೆಸರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ರೀತಿ ಪ್ರೋತ್ಸಾಹ ಮಾಡುತ್ತಾ ಬಂದಿದ್ದೇನೆ ಮುಂದೆಯೂ ಮಾಡುತ್ತೇನೆ ಶಿಕ್ಷಕರ ಮೇಲೆ ನನಗೆ ಅಪಾರ ಗೌರವವಿದೆ ಗ್ರಾಮಸ್ಥರು ಸೇರಿದಂತೆ ಎಲ್ಲರೂ ಗೌರವಿಸಿದ್ದೀರಿ ಸಾಧಕಿ ಗುರಿ ಕನಸು ನನಸಾಗಲಿ ಎಂದರು.

ಸಾಧಕಿ ಹಮೈನಾ ಸನ್ಮಾನ ಸ್ವೀಕರಿಸಿ ಮಾತನಾಡಿ ಮನಸಿದ್ದರೆ ಮಾರ್ಗ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ತಮ್ಮ ನಿರ್ಧಾರವನ್ನು ತಿಳಿದುಕೊಂಡು ಗುರಿ ಇಟ್ಟುಕೊಳ್ಳಬೇಕು ನಿರ್ಧಾರದ ನಡೆಯಲ್ಲಿ ಕಷ್ಟಪಟ್ಟರೆ ಸಾಧನೆ ಮಾಡಲು ಸಾಧ್ಯ.

ನನಗೆ ಆಸಕ್ತಿಯಿಂದ ಬಂದಿರುವ ಪದಕಗಳಲ್ಲ ಕಾಲೇಜಿಗೆ ಸೇರಿದ ಮೊದಲ ದಿನವೇ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಚಿನ್ನದ ಪದಕ ಪಡೆಯಬೇಕು ಅಂತ ನಿರ್ಧಾರ ಮಾಡಿ ಮೂರು ವರ್ಷಗಳ ಕಾಲ ನೂರಕ್ಕೆ ನೂರರಷ್ಟು ಎಲ್ಲಾ ವಿಷಯಗಳಲ್ಲೂ ಅಂಕ ಪಡೆಯಲು ಸಾಧ್ಯವಾಯಿತು. ಇದಕ್ಕೆ ನನ್ನ ತಂದೆ ತಾಯಿ ನನಗೆ ಬೆನ್ನೆಲುಬಾಗಿ ನಿಂತು ನನ್ನ ಕಷ್ಟ ಸುಖಗಳಿಗೆ ಏನಾದರೂ ಮಾಡಿ ಸಾಧನೆ ಮಾಡಿ ಉನ್ನತ ಹುದ್ದೆಗೆ ಏರಿ ಬಡವರ ಕಷ್ಟ ಸುಖಗಳಿಗೆ ಸ್ಪಂದಿಸುವಂತಹ ಆಗಬೇಕು ಎಂದು ಪ್ರತಿನಿತ್ಯ ನನ್ನ ತಂದೆ ನನಗೆ ಹೇಳುತ್ತಿದ್ದರು ಎಂದು ತಮ್ಮ ಮನದಾಳದ ಮಾತನ್ನು ಹೇಳಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಲ್ಕುಣಿಕೆ ರಾಘು, ಪಕ್ಷದ ಮುಖಂಡ ಅಮೀನ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಬ್ದುಲ್ ಸುಭಾನ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸದಾಶಿವ, ಉಪಾಧ್ಯಕ್ಷ ಶಿವರಾಜು, ಮುಖಂಡರುಗಳಾದ ಶಂಶುದ್ದೀನ್, ಸನಾವುಲ್ಲಾ, ನಿಂಗೇಗೌಡ ಸ್ವಾಮಿಗೌಡ, ಚಂದ್ರನಾಯಕ, ಜಯರಾಮ, ನಾಗರಾಜು, ಕಾಂತರಾಜು,ಕೋಳಿ ಪುಟ್ಟರಾಜು, ಹರೀಶ್ ಕಾವಲ್, ಸೇರಿದಂತೆ ಸಾಧಕೀಯ ಪೋಷಕರು ಹಾಜರಿದ್ದರು.

admin
the authoradmin

Leave a Reply

Translate to any language you want