ಹುಣಸೂರು: ಹಬ್ಬಳ್ಳಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವ ಘಟನೆಯ ಬಗ್ಗೆ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಡಾ .ಪ್ರಫುಲ್ಲ ಮಲ್ಲಾಡಿ ಗಂಭೀರವಾಗಿ ಕಳವಳ ವ್ಯಕ್ತಪಡಿಸಿದ್ದಾರೆ.
ಹುಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಘಟನೆ ಅತ್ಯಂತ ಆತಂಕಕಾರಿ ಹಾಗೂ ಖಂಡನೀಯವಾಗಿದ್ದು. ಯಾವುದೇ ಹುದ್ದೆ, ಅಧಿಕಾರ ಅಥವಾ ಯೂನಿಫಾರ್ಮ್ ಮಹಿಳೆಯರ ಗೌರವವನ್ನು ತುಳಿಯುವ ಹಕ್ಕು ನೀಡುವುದಿಲ್ಲ. ಕಾನೂನು ಮತ್ತು ಶಿಸ್ತು ಕಾಪಾಡುವ ಜವಾಬ್ದಾರಿ ಹೊಂದಿರುವ ವ್ಯವಸ್ಥೆಯೊಳಗೇ ಮಹಿಳೆಯರ ಮೇಲಿನ ದೌರ್ಜನ್ಯ ಆರೋಪಗಳು ಕೇಳಿಬರುವುದು ಸಂಪೂರ್ಣ ರಾಜ್ಯ ಸರ್ಕಾರದ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಮಹಿಳೆಯರ ಗೌರವ, ಭದ್ರತೆ ಮತ್ತು ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟುಮಾಡುವ ಯಾವುದೇ ಘಟನೆಗಳನ್ನು ಸಮಾಜ ಹಾಗೂ ರಾಜ್ಯ ಗಂಭೀರವಾಗಿ ಪರಿಗಣಿಸಲೇಬೇಕು.

ಹುಬಳ್ಳಿಯ ಕೇಶ್ವಪುರದಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತರನ್ನು ಬಂದಿಸುವ ನೆಪದಲ್ಲಿ ಅವರನ್ನ ವಿವಸ್ತ್ರಗೊಳಿಸಿ ಅಮಾನುಷವಾಗಿ ಥಳಿಸಿದ್ದು, ಇದಕ್ಕೆ ಕಾಂಗ್ರೆಸ್ ಮಹಿಳಾ ಕಾರ್ಪೊರೇಟರ್ ಸುವರ್ಣ ಹೆಸರು ತಾಗಳುಹಾಕಿಕೊಂಡಿದ್ದು ಈ ದುಷ್ಕೃತ್ಯ ದ ವಿರುದ್ಧ ತಟಸ್ಥ ಮತ್ತು ಪಾರದರ್ಶಕ ತನಿಖೆ,ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,
ಈ ಪ್ರಕರಣದಲ್ಲಿ ಕೇವಲ ಒಂದು ಪ್ರಕರಣವಲ್ಲ — ರಾಜ್ಯದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆ ಎಂಬ ಪ್ರಶ್ನೆಯನ್ನು ಇದು ಎತ್ತಿ ತೋರಿಸುತ್ತದೆ. ಮಹಿಳೆಯರ ಸುರಕ್ಷತೆ ಬರಿ ಘೋಷಣೆ ಮಾತ್ರವಾಗಿರಬಾರದು; ಅದು ಆಡಳಿತದ ಮೊದಲ ಆದ್ಯತೆಯಾಗಬೇಕು ಎಂದು ಡಾ.ಪ್ರಫುಲ್ಲ ಮಲ್ಲಾಡಿ ರವರು ಅಭಿಪ್ರಾಯ ವ್ಯಕ್ತಪಡಿಸಿದರು.








