Latest

ಮಾರಿಷಸ್  ನಲ್ಲಿ ಕಲಾರತ್ನ ಸಮ್ಮಾನ್ ಪ್ರಶಸ್ತಿ ಪಡೆದ  ಮೈಸೂರಿನ ಯಾಲಿನಿ  ಕೃಷಾ

ಮೈಸೂರು: ಮಾರಿಷಸ್ ನಲ್ಲಿ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿ ಜನಪದ ಶೈಲಿಯ ನೃತ್ಯವನ್ನು ಪ್ರದರ್ಶಿಸಿ ಅಲ್ಲಿನವರ ಮೆಚ್ಚುಗೆಗೆ ಪಾತ್ರರಾಗುವುದಲ್ಲದೆ, ದೇಶ, ರಾಜ್ಯ, ಜಿಲ್ಲೆ ಮತ್ತು ಶಾಲೆಗೆ ಹೆಮ್ಮೆ ತರುವಲ್ಲಿ ಮೈಸೂರಿನ ಸೆಂಟ್ ಅರ್ನಾಲ್ಡ್ ಸೆಂಟ್ರಲ್ ಶಾಲೆ ವಿದ್ಯಾರ್ಥಿನಿ ಯಾಲಿನಿ  ಕೃಷಾ.ಪಿ ಯಶಸ್ವಿಯಾಗಿದ್ದಾರೆ.

ಮೈಸೂರಿನ ಸೆಂಟ್ ಅರ್ನಾಲ್ಡ್ ಸೆಂಟ್ರಲ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಯಾಲಿನಿ  ಕೃಷಾ.ಪಿ ಅವರು ಜನವರಿ ತಿಂಗಳಲ್ಲಿ ಮಾರಿಷಸ್ ಬೋಯಿಸ್ ಮಾರ್ಚಾಂಡ್‌ ನಲ್ಲಿರುವ ಗುರುಕುಲ್ ಶಿಕ್ಷಣ ಕೇಂದ್ರದಲ್ಲಿ ವಿಶ್ವ ಹಿಂದಿ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಕಾರ್ಯಕ್ರಮದಲ್ಲಿ ಜನಪದ ಶೈಲಿಯ ನೃತ್ಯದಲ್ಲಿ ಭಾಗವಹಿಸಿ ಅಲ್ಲಿನ ಆರೋಗ್ಯ ಸಚಿವರಾದ ರಂಜಿವ್‌ ವೂಜಿತ್ ಅವರಿಂದ ಕಲಾರತ್ನ ಸಮ್ಮಾನ್ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳಾದ ಧರ್ಮಬೀರ್‌ ಗೋಕೂಲ್ ಉಪಸ್ಥಿತರಿದ್ದರು. ಯಾಲಿನಿ ಕೃಷಾ.ಪಿ ಅವರ ತಂದೆ ಪ್ರಶಾಂತ, ತಾಯಿ ಸುಶ್ಮಿತಾ ಪ್ರಶಾಂತ್ ಅವರುಗಳು ಇದ್ದರು.

admin
the authoradmin

Leave a Reply

Translate to any language you want