Mysore

ಉಪ್ಪಾರ ಸಮುದಾಯ ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ರಾಜಕೀಯ ಸ್ಥಾನಮಾನ ಪಡೆಯಲು ಸಾಧ್ಯ

ಕೆ ಆರ್ ನಗರ(ಜಿಟೆಕ್ ಶಂಕರ್): ಸೂಕ್ಷ್ಮತೆ ಸೂಕ್ತ ಸಮಾಜದ ಬಂಧುಗಳು ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ರಾಜಕೀಯ ಸ್ಥಾನಮಾನ ಸೇರಿದಂತೆ ವಿವಿಧ ಸೌಲತ್ತುಗಳನ್ನು ಪಡೆಯಲು ಸಾಧ್ಯ ಎಂದು ಉದ್ಯಮಿ ಮತ್ತು ಮಾಜಿ ಮೂಡ ಅಧ್ಯಕ್ಷ ಹೆಚ್ ಎನ್ ವಿಜಯ್ ಹೇಳಿದರು.

ಪಟ್ಟಣದ ಶ್ರೀರಾಮ ಮಂದಿರದಲ್ಲಿ ತಾಲ್ಲೂಕು ಉಪ್ಪಾರ ಸಮುದಾಯದ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ನಮ್ಮ ಸಮುದಾಯದ ಬಂಧುಗಳು ರಾಜಕೀಯ ಮಾಡುವಾಗ ಮತ್ತು ರಾಜಕೀಯ ವ್ಯಕ್ತಿಗಳನ್ನು ಆಯ್ಕೆ ಮಾಡುವಾಗ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದ ಅಭ್ಯರ್ಥಿಗಳನ್ನು ನಿಮ್ಮ ಇಚ್ಛೆಗ ಅನುಸಾರವಾಗಿ ಆಯ್ಕೆಮಾಡಿಕೊಳ್ಳಿ ಆದರೆ ಸಮುದಾಯದ ಹೆಸರೇಳಿದಾಗ ಸಮುದಾಯದ ಕಾರ್ಯಕ್ರಮಗಳಿಗೆ ರಾಜಕೀಯ ಬೆರೆಸದೆ ಎಲ್ಲರೂ ಒಂದಾಗಿ ಎಂದು ಕರೆ ನೀಡಿದರು.

ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ನಮ್ಮ ಸಮುದಾಯದ ಮತ ಪಡೆಯಲು ಆಸೆ ಆಕಾಂಕ್ಷೆಗಳನ್ನು ನೀಡಿ ಕಾಲ ಕಳೆಯುತ್ತಿವೆ ಆದರೆ ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ನಮ್ಮ ಸಮುದಾಯಕ್ಕಾಗಿ ಒಂದು ನಿವೇಶನವನ್ನು ಪಡೆಯಲು ಸಾಧ್ಯವಾಗದೇ ಇರುವುದು ನಮ್ಮ ಒಗ್ಗಟ್ಟಿನ ಕೊರತೆ ಆದರೆ ನಾನು ಅಧಿಕಾರಕ್ಕಾಗಿ ಹಣಕ್ಕಾಗಿ ಯಾವುದೇ ವ್ಯಕ್ತಿ ಮತ್ತು ಪಕ್ಷವನ್ನು ಬೆಂಬಲಿಸಿಲ್ಲ ನಾನು ನನ್ನ ಸ್ವಂತ ಉದ್ಯೋಗದಿಂದ ಮೇಲ್ ಮಟ್ಟಕ್ಕೆ ಬಂದಿದ್ದು ಸಮುದಾಯಕ್ಕಾಗಿ ನನಗೆ ನೀವು ನೀಡುವ ಯಾವುದೇ ಜವಾಬ್ದಾರಿಯನ್ನು ಹೊರಲು ಸಿದ್ಧನಿದ್ದೇನೆ ಆದ್ದರಿಂದ ನೀವೆಲ್ಲರೂ ಒಗ್ಗಟ್ಟಾಗಿ ಹೋರಾಡುವಂತೆ ತಿಳಿಸಿದರು.

ನಮ್ಮ ಸಮುದಾಯದ ಬಂಧುಗಳು ವೃತ್ತಿ ಪರವಾಗಿ ಅವಲಂಬಿಸಿರುವ ತಮ್ಮ ವೃತ್ತಿಗೆ ತಮ್ಮ ಮಕ್ಕಳನ್ನು ಕಳಿಸದೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಒಬ್ಬ ವ್ಯಕ್ತಿಯಾಗಿ ಬೆಳೆಯಲು ಪ್ರೋತ್ಸಾಹಿಸಿ ಸಹಕರಿಸಿ ಯಾವುದೇ ಒಬ್ಬ ನಮ್ಮ ಸಮುದಾಯದ ವಿದ್ಯಾರ್ಥಿ ಉನ್ನತ ಮಟ್ಟದ ವೃತ್ತಿಪರ ಸೇರಿದಂತೆ ಇನ್ನಿತರ ವಿದ್ಯಾಭ್ಯಾಸಕ್ಕೆ ನನ್ನಿಂದಾಗುವ ಆರ್ಥಿಕ ಸಹಾಯವನ್ನು ನೀಡುತ್ತೇನೆ ಎಂದು ತಿಳಿಸಿದರು.

ಕೆ ಆರ್ ನಗರ ತಾಲ್ಲೂಕು ಉಪ್ಪಾರ ಸಮುದಾಯದ ಅಧ್ಯಕ್ಷ ಕಾಟ್ನಾಳ್ ಮಹದೇವ್ ಮಾತನಾಡಿ ಸುಮಾರು ದಶಕಗಳೇ ಕಳೆದರೂ ನಮ್ಮ ಸಮುದಾಯವನ್ನು ಗುರುತಿಸುವ ಕೆಲಸವನ್ನು ಯಾವುದೇ ಮುಖಂಡರು ಯಾವುದೇ ಪಕ್ಷ ಮಾಡಿಲ್ಲ ಆದರೆ ನಮ್ಮ ಸಮುದಾಯದ ಕಲಿಯುಗದ ಭಗಿರಥನೆಂಬ ಹೆಸರಿಂದ ಕರೆಯಲ್ಪಡುವ ಹೆಚ್ ಎನ್ ವಿಜಯ್ ಅವರ ನೇತೃತ್ವದಲ್ಲಿ ಎರಡು ತಾಲೂಕಿನಲ್ಲಿ ಸಮುದಾಯವನ್ನು ಸಂಘಟಿಸುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಮುಂದೆ ನಡೆಯುವ ಸಮುದಾಯದ ಯಾವುದೇ ಕಾರ್ಯಕ್ರಮ ಹೆಚ್ಎನ್ ವಿಜಯ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತದೆ ಅವರ ಮಾರ್ಗದರ್ಶನದಲ್ಲಿ ಅವರು ತೋರುವ ದಾರಿಯಲ್ಲಿ ನಾವು ನಡೆಯಲಿದ್ದು ಅವರಿಗೆ ನಾವೆಲ್ಲರೂ ಬೆನ್ನೆಲುವಾಗಿ ನಿಂತು ಅವರಿಗೆ ಶಕ್ತಿ ನೀಡುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರ ಬರಹಗಾರ ರಾಜೀವ್. ಸಂಘದ  ಉಪಾಧ್ಯಕ್ಷ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಹರದನಹಳ್ಳಿ ಸಂದೀಪ್, ಖಜಾಂಚಿ ರವಿಕುಮಾರ್, ಭೇರ್ಯ ಬೆಟ್ಟಪ್ಪ, ಪತ್ರಿಕಾ ಕಾರ್ಯದರ್ಶಿ ಯೋಗಾನಂದ, ಪ್ರದೀಪ, ಮುದುಗುಪ್ಪೆ ಕುಮಾರ್,  ಕೆ ಆರ್ ನಗರ ಟೌನ್ ಉಪ್ಪಾರ ಸಮಾಜದ ಅಧ್ಯಕ್ಷ ಕೆ ಟಿ ಕೃಷ್ಣ, ಯಜಮಾನ್ರದ ಕೇಶವ್ ಮೂರ್ತಿ, ರಂಗರಾಜ್, ಹರದನಹಳ್ಳಿ ರಘು, ವೈ ಕೆ ದಯಾನಂದ್, ಮಂಜುನಾಥ್ ಇದ್ದರು.

admin
the authoradmin

Leave a Reply

Translate to any language you want