ಮೈಸೂರು: ಶ್ರೀ ಶಿವಶರಣ ಮಾದರ ಚನ್ನಯ್ಯ ರವರ ಜಯಂತೋತ್ಸವ ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆಯು ನಡೆದು ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಅಲ್ಲದೆ ಶಿವಶರಣ ಮಾದರ ಚನ್ನಯ್ಯ ಸ್ವಾಮಿಗೆ ಪುಷ್ಪ ಹಾರ ಹಾಕಿ ನಮಿಸಲಾಯಿತು.
ಮಾದರ ಚನ್ನಯ್ಯ ಸೇವಾ ಸಮಿತಿ ವತಿಯಿಂದ ಜಿಲ್ಲಾ ಕಾರ್ಯಕಾರಿ ಸಭೆ ಹಾಗೂ ಮೈಸೂರಿನ ಶ್ರೀ ಶಿವಶರಣ ಮಾದರಿ ಚೆನ್ನಯ್ಯ ಸೇವಾ ಅಧ್ಯಕ್ಷರಾದ ಸ್ವಾಮಿ ತಿಲಕ್ ನಗರ ಇವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಶಿವಶರಣ ಮಾದರ ಚನ್ನಯ್ಯ ರವರ ಜಯಂತೋತ್ಸವ ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಪದಾಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಡಾ. ಆನಂದ್ ಕುಮಾರ್. ಪ್ರಧಾನ ಕಾರ್ಯದರ್ಶಿ ದ ಮಧುರಾಜ್. ವೆಂಕಟರಾಮ. ಜಿಲ್ಲಾ ಉಪಾಧ್ಯಕ್ಷರುಗಳಾದ ನರಸಿಂಹಮೂರ್ತಿ. ಬಿ ಎಸ್ ಸುಬ್ರಹ್ಮಣ್ಯ. ಮೂಗೂರು ಸಿದ್ದರಾಜು. ಕಾರ್ಯದರ್ಶಿಗಳಾದ ದೇವು ನಂಜನಗೂಡು. ಕಾರ್ಯದರ್ಶಿ ಎಂ. ಕೆ. ಮಹದೇವ ಮತ್ತು ಮುಖಂಡರಾದ ಸುಬ್ರಮಣ್ಯ ಜ್ಯೋತಿನಗರ. ಕುಮಾರ್ ಪಿರಿಯಾಪಟ್ಟಣ. ಶಿವಣ್ಣ ಹುಳುಮಾವು . ಮಹದೇವ. ಕೆ ಆರ್ ಕ್ಷೇತ್ರ. ಹರೀಶ್ ಹೆಚ್ ಡಿ ಕೋಟೆ. ಪ್ರಸನ್ನ ಕುಮಾರ್ ನಂಜನಗೂಡು. ಕೆ ಆರ್ ನಗರದ ರಾಜೇಶ್ ಮತ್ತು ಮಂಜು. ದುದ್ಗೆರೆ ಅರುಣ್ ಕುಮಾರ್. ಮನು, ಶಿವರಾಜ್ ಹುಣಸೂರು. ರಾಹುಲ್ ಮಾದೇವಯ್ಯ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು








