LatestMysore

ಮಹಿಳಾ ರಕ್ಷಣಾ ಪಡೆಯಿಂದ ಕನ್ನಡ ರಾಜ್ಯೋತ್ಸವ… ಕಾಯಕದೊಂದಿಗೆ ಕನ್ನಡ ಬೆಳೆಸಿ: ಡಾ. ಅಬ್ದುಲ್ ಶುಕುರ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಪಟ್ಟಣಗಳಲ್ಲಿ ವಾಸಿಸುವ ಜನರಲ್ಲಿ ಜೀವನ ನಿರ್ವಹಣೆಯ ಜವಾಬ್ದಾರಿ ಒತ್ತಡ ಹೆಚ್ಚು ಇರುತ್ತದೆ. ಹಾಗಾಗಿ ಕರ್ತವ್ಯದ ಜೊತೆ ಜೊತೆಗೆ ಕನ್ನಡವನ್ನು ಹಾಗೂ ನಾಡಿನ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಮಿತಿ ಪರ್ವದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ಶುಕುರ್ ಹೇಳಿದರು.

ನಗರದ ಜೆ. ಎಲ್. ಬಿ ರಸ್ತೆಯಲ್ಲಿರುವ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಮೈಸೂರಿನ ಮಹಿಳಾ ರಕ್ಷಣಾ ಪಡೆಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಮಹಿಳಾ ರಕ್ಷಣಾ ಪಡೆಯ ಸಂಸ್ಥಾಪಕಿ  ಹಾಗೂ ರಾಜ್ಯಾಧ್ಯಕ್ಷೇ ಲತಾ ಗೌಡ , ಗೌರವಾಧ್ಯಕ್ಷೇ ಕಮಲ ನಟರಾಜು, ಉದ್ಘಾಟಕರಾದ ಶೈವಾಗಮ ಪ್ರವೀಣ ಸೌಪರ್ಣಿಕ ರಾಜ್ಯ ಪ್ರಶಸ್ತಿ ವಿಜೇತ ರವಿಶಾಸ್ತ್ರಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಯೋಗಾ ಶ್ರೀನಿವಾಸ್, ಜಂಗಲ್ ರೆಸಾರ್ಟ್ ಮಾಲಿಕ ಪ್ರಸಾದ್, ಸಾಲುಂಡಿ ಗ್ರಾಮ ಪಂಚಾಯಿತಿ ಸದಸ್ಯ ಎಂ.ಚಂದ್ರು ಕಾಂಗ್ರೆಸ್ ಡಿಸಿಸಿ ಕಾರ್ಯದರ್ಶಿ ಹಾಗೂ ಕಲಾವಿದ ಮೆಲ್ಲಹಳ್ಳಿ ರಾಜೇಶ್ ಗೌಡ, ಉಪಸ್ಥಿತರಿದ್ದರು.

ಕನ್ನಡ ಕಣ್ಮಣಿ ಪ್ರಶಸ್ತಿಯನ್ನು ಸಮಾಜ ಸೇವಕಿ ಮೇಘನಾ ಗೌಡ, ಚುಟುಕು ಸಿರಿ ಡಾ.ರತ್ನ ಹಾಲಪ್ಪ ಗೌಡ, ಅಂಬೇಡ್ಕರ್ ದಲಿತ ಮಹಿಳಾ ಸಂಘಟನೆಯ ಬಬಿತ, ರಾಜ್ಯ ಮಾನವ ರಕ್ಷಣಾ ಹಕ್ಕು ಸಮಿತಿಯ ಸುಶೀಲ, ತುಳಸಿ ಸ್ವಯಂ ಸೇವಾ ಸಂಘದ ಮಹದೇವಮ್ಮ, ಸಮಾಜ ಸೇವಕ ನಾಗೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಭಿಮಾನಿ ಬಳಗದ ಲಿಂಗರಾಜು, ಪತ್ರಕರ್ತ ಪ್ರದೀಪ್ ಕುಮಾರ್, ಕನ್ನಡ ಸೇನೆಯ ಶೈಲಜಾ, ಕರ್ನಾಟಕ ರಕ್ಷಣಾ ವೇದಿಕೆಯ ಬಾಲಕೃಷ್ಣ, ಚಲನಚಿತ್ರ ನಿರ್ಮಾಪಕ ಪುಟ್ಟಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರು ಹಾಗೂ ಕನ್ನಡ ಅಭಿಮಾನಿ ಆಟೋ ಚಾಲಕರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಕೊಪ್ಪಲೂರು ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ , ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಕನ್ನಡ ಬೆಳವಣಿಗೆಗೆ ಶ್ರಮಿಸುತ್ತಿರುವ ಹಲವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮಹಿಳಾ ರಕ್ಷಣಾ ಪಡೆಯ ಪದಾಧಿಕಾರಿಗಳಾದ ಮೇಘನ, ಅಶ್ವಿನಿ ಗೌಡ, ಸೌಮ್ಯ ,ಸೌಭಾಗ್ಯ, ಶಶಿರೇಖಾ, ಪ್ರಭಾಮಣಿ, ಲೊಕೇಶ,  ಸೌಭಾಗ್ಯ, ಪದ್ಮಕುಮಾರ್, ಪವಿತ್ರ ಸೇರಿದಂತೆ ಹಲವರು ಹಾಜರಿದ್ದರು.

admin
the authoradmin

Leave a Reply

Translate to any language you want