ಸಾಲಿಗ್ರಾಮ(ಕೆ.ಟಿ.ಮೋಹನ್ ಕುಮಾರ್): ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೆ ಚನ್ನಂಗೆರೆ ಗ್ರಾಮಕ್ಕೆ ಕರೆಯಿಸಿ ಜನಸ್ಪಂದನ ಸಭೆಯನ್ನು ನಡೆಸಿ ಜನಸಾಮಾನ್ಯರ ಅಹವಾಲುಗಳನ್ನು ಆಲಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಮಾಡಲಾಗುವುದರ ಜೊತೆಗೆ ಹಂತ ಹಂತವಾಗಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಈ ಭಾಗದ ಜನರ ಋಣವನ್ನು ತೀರಿಸಲಾಗುವುದು ಎಂದು ಶಾಸಕರಾದ ಡಿ.ರವಿಶಂಕರ್ ಹೇಳಿದರು.

ಅವರು ತಾಲೂಕಿನ ಚನ್ನoಗೆರೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಚನ್ನಂಗೆರೆ ಗ್ರಾಮದ ಅಭಿವೃದ್ಧಿಗೆ ಒಂದು ಕೋಟಿ ರೂ.ಗು ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಗ್ರಾಮ ಪಂಚಾಯಿತಿಯ ಕಟ್ಟಡ ನಿರ್ಮಾಣ ಕಾಮಗಾರಿಗೆ 20 ಲಕ್ಷ ರೂ ಅನುದಾನವನ್ನು ನೀಡಲಾಗುವುದು ಎಂದರು.
ಅಂಬೇಡ್ಕರ್ ಭವನ ಸೇರಿದಂತೆ ವಿವಿಧ ಸಮುದಾಯ ಭವನಗಳ ನಿರ್ಮಾಣ ಕಾರ್ಯವನ್ನು ಮಾಡುವುದರ ಜೊತೆಗೆ ಗ್ರಾಮದಲ್ಲಿರುವ ವಿವಿಧ ದೇವಾಲಯಗಳ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ನೀಡುವುದರ ಮೂಲಕ ಅವುಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಇಓ ರವಿಕುಮಾರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಉದಯ ಶಂಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಿತಾ ದಿನೇಶ್, ಉಪಾಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ಅನಿತಾ ಕಾಂತರಾಜು, ಧನಲಕ್ಷ್ಮಿ ಶಿವರಾಜು, ಚೈತ್ರರಘು, ರತ್ನಮಣಿ, ರಾಜೇಶ್ವರಿಲೋಕೇಶ್, ಪಿಡಿಓ ಸ್ವಾಮಿನಾಯಕ, ಕಾರ್ಯದರ್ಶಿ ಕೆ.ಟಿ.ಪ್ರಕಾಶ್, ಮಾಜಿ ಅಧ್ಯಕ್ಷ ಹರೀಶ್, ಮುಖಂಡರುಗಳಾದ ಕಾಂತರಾಜು, ಎಂ.ರಂಗಸ್ವಾಮಿ, ಮಲ್ಲಿಕಾರ್ಜುನ, ಶಂಕರನಾಯಕ, ಅಸ್ಲಮ್, ಶಂಕರಣ್ಣ, ಪ್ರಕಾಶ್, ಬೋರೇಗೌಡ, ರಾಜು ಸೇರಿದಂತೆ ಹಲವರು ಇದ್ದರು.








