LatestMysore

ನಾವು ಸುರಕ್ಷಿತವಾಗಿದ್ದೇವಾ…?   ಇದು ಹುಣಸೂರು ಚಿನ್ನದಂಗಡಿ ದರೋಡೆ ಬಳಿಕ ಕೇಳಿ ಬರುತ್ತಿರುವ ಪ್ರಶ್ನೆ… !

ದರೋಡೆಕೋರರು ದೊಡ್ಡ ನಗರದಿಂದ ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡುತ್ತಿರುವುದು ಆತಂಕಕಾರಿಯಾಗಿದೆ. ಆದ್ದರಿಂದ ಇದಕ್ಕೊಂದು ಇತಿಶ್ರೀ ಹಾಡಬೇಕಾಗಿದೆ.

ಹುಣಸೂರು: ದೊಡ್ಡ ದೊಡ್ಡ ನಗರಗಳಲ್ಲಿ ಚಿನ್ನಾಭರಣ ಅಂಗಡಿಗೆ ನುಗ್ಗಿ ದರೋಡೆ ನಡೆಸಿದ ಸುದ್ದಿಗಳನ್ನು ಓದಿ, ನೋಡಿ ತಿಳಿದುಕೊಂಡಿದ್ದ ಹುಣಸೂರಿನ ಜನರು ಇದೀಗ ತಮ್ಮ ನಗರದಲ್ಲಿಯೇ ಚಿನ್ನದಂಗಡಿ ನುಗ್ಗಿ ಪಿಸ್ತೂಲ್ ತೋರಿಸಿ ಹೆದರಿಸಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ನಾವೆಷ್ಟು ಸುರಕ್ಷಿತರಾಗಿದ್ದೇವೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಡಹಗಲೇ ಚಿನ್ನಾಭರಣದ ಅಂಗಡಿಗೆ ನುಗ್ಗಿ ದರೋಡೆಕೋರರು  ಉದ್ಯೋಗಿಗಳು ಮತ್ತು ಗ್ರಾಹಕರ ತಲೆಗೆ ಪಿಸ್ತೂಲ್ ಇಟ್ಟು ಹೆದರಿಸಿ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗುತ್ತಾರೆ ಎನ್ನುವುದಾದರೆ ನಮ್ಮ ವ್ಯವಸ್ಥೆ ಎಷ್ಟು ಹದಗೆಟ್ಟು ಹೋಗಿದೆ ಎಂಬುದು ಅರ್ಥವಾಗಿ ಬಿಡುತ್ತದೆ. ಈಗಾಗಲೇ ಹಲವು ಕಡೆ ಇಂತಹದ್ದೇ ದರೋಡೆಗಳು ನಡೆದಿದ್ದರೂ ಸರ್ಕಾರ ಎಚ್ಚೆತ್ತುಕೊಂಡು ಕಾನೂನು ಕ್ರಮಗಳನ್ನು ಗಟ್ಟಿಗೊಳಿಸಬೇಕಲ್ಲದೆ, ಪೊಲೀಸ್ ಬಂದೋಬಸ್ತ್ ಕೂಡ ಬಿಗಿಯಾಗಿರಬೇಕು.

ಇಬ್ಬರು ರಾಜಾರೋಷವಾಗಿ ನುಗ್ಗಿ ಚಿನ್ನಾಭರಣ ದೋಚಿಕೊಂಡು ಹೋಗುತ್ತಾರೆ ಎನ್ನುವುದಾದರೆ ಅವರಿಗೆ ಎಷ್ಟು ಧೈರ್ಯವಿರಲಬಹುದು ಎನ್ನುವುದಕ್ಕಿಂತಲೂ ನಮ್ಮ ವ್ಯವಸ್ಥೆಯ ದುರ್ಬಲತೆ ಅವರಿಗೆ ಅರಿವಾಗಿದೆ ಎಂದರ್ಥ. ಇನ್ನು ಚಿನ್ನದಂಗಡಿ ಮಾಲೀಕರು ಕೂಡ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇನ್ನು ದರೋಡೆಕೋರರು ಒಂದಷ್ಟು ಸುಳಿವುಗಳನ್ನು ಬಿಟ್ಟು ಹೋಗಿರುವುದರಿಂದ ಸಿಕ್ಕಿಯೇ ಸಿಗುತ್ತಾರೆ. ಆದರೆ ನಗರದಲ್ಲಿ ಸೃಷ್ಟಿಯಾಗಿರುವ ಆತಂಕ ದೂರವಾಗುತ್ತಾ?

ಸಿಎಂ ತವರು ಜಿಲ್ಲೆಯಲ್ಲಿಯೇ ಇಂತಹದೊಂದು ‍ಘಟನೆ ನಡೆದಿದೆ ಎಂದರೆ ಅದು ಅವರಿಗೂ ಪ್ರತಿಷ್ಠೆಯ ಪ್ರಶ್ನೆಯೇ ಆದ್ದರಿಂದ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ದರೋಡೆಕೋರರು ದೊಡ್ಡ ನಗರದಿಂದ ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡುತ್ತಿರುವುದು ಆತಂಕಕಾರಿಯಾಗಿದೆ. ಆದ್ದರಿಂದ ಇದಕ್ಕೊಂದು ಇತಿಶ್ರೀ ಹಾಡಬೇಕಾಗಿದೆ. ಇಷ್ಟಕ್ಕೂ ಹುಣಸೂರಿನಲ್ಲಿ ಚಿನ್ನದ ಅಂಗಡಿಯನ್ನು ದರೋಡೆ ಮಾಡಿದ್ದೇಗೆ ಎಂದು ನೋಡಿದ್ದೇ ಆದರೆ. ನಗರದ ಬಸ್ ನಿಲ್ದಾಣದ  ಹಿಂಭಾಗದ ಬೈಪಾಸ್‌ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ʼ ಚಿನ್ನಂಗಡಿಯಲ್ಲಿ ದರೋಡೆ ನಡೆದಿದೆ. ದರೋಡೆಕೋರರು ಗನ್‌ ತೋರಿಸಿ ಸುಮಾರು 4 ರಿಂದ 5 ಕೋಟಿ ಮೌಲ್ಯದಷ್ಟು ಚಿನ್ನ-ವಜ್ರಾಭರಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಭಾನುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ತಲೆಗೆ ಹೆಲ್ಮೆಟ್, ಮಾಸ್ಕ್ ಧರಿಸಿದ ಖದೀಮರು. ಏಕಾಏಕಿ ಚಿನ್ನದಂಗಡಿ. ಪ್ರವೇಸಿಶಿ. ಅಂಗಡಿಯಲ್ಲಿದ್ದವರಿಗೆ ಗನ್ ತೋರಿಸಿ. ಅಂಗಡಿಯಲ್ಲಿದ್ದ ಐದಾರು ಕೋಟಿ ಚಿನ್ನವನ್ನು ಹೊತ್ತು ಬೈಕ್ ನಲ್ಲಿ ಹೋಗಿದ್ದಾರೆ. ಇದು ನಗರದಲ್ಲಿ ಪ್ರಥಮ ಬಾರಿಗೆ ಇಂತಹ ಘಟನೆ ನಡೆದುದ್ದು, ಇಡೀ ಹುಣಸೂರು ನಾಗರಿಕರು ಬೆಚ್ಚಿಬಿದ್ದಿದ್ದಾರೆ. ಅದರಲ್ಲೂ ಹಾಡು ಹಗಲೇ ಮುಖ್ಯರಸ್ತೆಯ ಬದಿಯಲ್ಲೆ ನಡೆದಿರುವ ಘಟನೆ  ಜನತೆಯನ್ನ ಭಯಬೀಳಿಸಿದೆ ಎಂದರೆ ತಪ್ಪಾಗಲಾರದು. ನಗರದ ಎಸ್ಪಿ ವಿಷ್ಣುವರ್ಧನ್ ತಂಡದ ಪೊಲೀಸರು ಅಂಗಡಿಗೆ ಬೇಟಿ ನೀಡಜ. ಪರೀಶೀನೆಯ ನಂತರ. ಚಿನ್ನವನ್ನು ಎಗರಿಸಿ ಬೈಕಿನಲ್ಲಿ ಪರಾರಿಯಾದ, ಐದು ಜನ ಖದೀಮರ ಪತ್ತೆಗೆ‌ ಬಲೆ ಬೀಸಿದ್ದಾರೆ.

ದರೋಡೆಕೋರರು ಸಿಕ್ಕಿ ಬೀಳಬಹುದು ಆದರೆ ಇಂತಹದ್ದೇ ಪ್ರಕರಣ ರಾಜ್ಯದ ಬೇರೆ ಭಾಗಗಳಲ್ಲಿ ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಾ? ಜನ ನೆಮ್ಮದಿಯಾಗಿ ಇರುವಂತಹ ವಾತಾವರಣ ನಿರ್ಮಿಸಿಕೊಡುತ್ತಾ? ಕಾದು ನೋಡೋಣ…

admin
the authoradmin

Leave a Reply

Translate to any language you want